ನಮಸ್ತೆ ಪ್ರಿಯ ಓದುಗರೇ, ಬಡವರ ಸೇಬು ಅಂತ ಪ್ರಖ್ಯಾತಿಯನ್ನು ಪಡೆದಿರುವ ಈ ಹಣ್ಣು ಎಲ್ಲ ಮಹಾಮಾರಿ ರೋಗಗಳಿಗೆ ಮದ್ದು ಆಗಿ ಕೆಲಸವನ್ನು ಮಾಡುತ್ತದೆ. ಆ ಹಣ್ಣು ಯಾವುದು ಅಂತ ಯೋಚಿಸುತ್ತಿದ್ದೀರಾ?ಅದುವೇ ಪೇರಲೇ ಹಣ್ಣು ಅಥವಾ ಸೀಬೆ ಹಣ್ಣು. ಸೀಬೆ ಹಣ್ಣಿನ ಆರೋಗ್ಯಕರ ಪ್ರಯೋಜನಗಳು ಒಂದೇ ಎರಡೇ ಸಾವಿರಾರು ಅಂತ ಹೇಳಿದರೆ ತಪ್ಪಾಗಲಾರದು. ಈ ಸೀಬೆ ಕಾಯಿ ಅಮೃತ ರೀತಿಯಲ್ಲಿ ಕೆಲಸವನ್ನು ಮಾಡುತ್ತದೆ ಏಕೆಂದರೆ .ಸೀಬೆ ಹಣ್ಣಿನಲ್ಲಿ ನಮ್ಮ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾದ ಪೋಷಕಾಂಶಗಳನ್ನು ಒದಗಿಸುವಲ್ಲಿ ಕಾರ್ಯ ನಿರತವಾಗಿದೆ ಕೆಲಸವನ್ನು ಮಾಡುತ್ತದೆ. ಸ್ನೇಹಿತರೇ ಕೇವಲ ಸೀಬೆ ಹಣ್ಣಿನಲ್ಲಿ ಮಾತ್ರ ಹಲವಾರು ಲಾಭಗಳು ಅಡಗಿವೆ ಅಂತ ಭಾವಿಸುವುದು ತಪ್ಪಾಗಿದೆ. ಈ ಹಣ್ಣು ಎಷ್ಟು ಆರೋಗ್ಯಕ್ಕೆ ಉತ್ತಮವೋ ಅಷ್ಟೇ ಇದರ ಎಲೆಗಳು ಕೂಡ ತುಂಬಾ ಅದ್ಭುತವಾಗಿ ಆರೋಗ್ಯಕ್ಕೆ ಲಾಭವನ್ನು ತಂದೊಗಿಸುತ್ತದೆ. ಈ ಸೀಬೆ ಗಿಡದ ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ತೊಳೆದು ಅದನ್ನು ಜಜ್ಜಿ ಪೇಸ್ಟ್ ರೀತಿಯಲ್ಲಿ ಮಾಡಿ ಅದನ್ನು ಮುಖಕ್ಕೆ ಲೇಪಿಸಿಕೊಂಡರೆ ನಿಮ್ಮ ಮುಖದ ಮೇಲೆ ಆಗಿರುವ ಎಲ್ಲ ಗುಳ್ಳೆಗಳು ಮೊಡವೆಗಳು, ಕಲೆಗಳು, ಡಾರ್ಕ್ ಸರ್ಕಲ್, ಡಾರ್ಕ್ ಸ್ಪಾಟ್ ಎಲ್ಲವೂ ಕ್ರಮೇಣ ಮಾಯವಾಗುತ್ತದೆ. ನಿಮ್ಮ ಮುಖದಲ್ಲಿ ಒಂದು ಕಾಂತಿ ಅನ್ನುವುದು ಚಿಮ್ಮುತ್ತದೆ. ಇನ್ನೂ ಈ ಲೇಪನವನ್ನು ನಿಮ್ಮ ತಲೆಗೆ ಹಚ್ಚಿದರೆ ಅಂತೂ ನಿಮಗೆ ಊಹಿಸಲಾದಷ್ಟು ಲಾಭಗಳು ಉಂಟಾಗುತ್ತವೆ.

ತಲೆ ಕೆರೆತ, ತಲೆ ಹೊಟ್ಟು, ಕೂದಲು ಉದುರುವುದು ಮುಖ್ಯವಾಗಿ ಈ ಎಲ್ಲ ಸಮಸ್ಯೆಗಳಿಗೆ ಇದು ರಾಮಬಾಣವಾಗಿ ಕೆಲಸವನ್ನು ಮಾಡುತ್ತದೆ. ಹಾಗೆಯೇ ನಿಮಗೆ ಕೀಲುಗಳಲ್ಲಿ ನೋವು ಕಾಣಿಸಿಕೊಂಡರೆ ಈ ಸೀಬೆ ಗಿಡದ ಎಲೆಗಳನ್ನು ಚೆನ್ನಾಗಿ ಕುಟ್ಟಿ ನೋವು ಇರುವ ಜಾಗಕ್ಕೆ ಹಚ್ಚಿದರೆ ನೋವು ಉಪಶಮನ ಆಗುತ್ತದೆ. ನಂತರ ಇದರ ಕಷಾಯವನ್ನು ಮಾಡಿ ಕುಡಿದರೆ ಇನ್ನಷ್ಟು ಲಾಭಗಳನ್ನು ನಾವು ಪಡೆದುಕೊಳ್ಳಬಹುದು. ಈ ಗಿಡದ ಎಲೆಗಳನ್ನು ಚೆನ್ನಾಗಿ ಜಜ್ಜಿ ಅದನ್ನು ನೀರಿನಲ್ಲಿ ಹಾಕಿ ಒಂದು ಲೋಟ ನೀರು ಅರ್ಧ ಲೋಟ ಆಗುವವರೆಗೆ ಕುದಿಸಬೇಕು ನಂತರ ಸೋಸಿಕೊಂಡು ಕುಡಿಯಬೇಕು. ಇದರಿಂದ ಕ್ಯಾನ್ಸರ್ ಮಹಾಮಾರಿ ರೋಗವನ್ನು ಇದು ನಾಶ ಮಾಡುತ್ತದೆ. ಅಷ್ಟೊಂದು ಪರಿಣಾಮಕಾರಿ ಅಂಶಗಳನ್ನು ಒಳಗೊಂಡಿದೆ ಈ ಸೀಬೆ ಗಿಡದ ಎಲೆಗಳು. ಇದು ದೇಹದಲ್ಲಿ ಉತ್ಪತ್ತಿ ಆಗುವ ಕ್ಯಾನ್ಸರ್ ಜೀವಕೋಶಗಳನ್ನು ಬೆಳೆಯದಂತೆ ತಡೆಯುತ್ತದೆ ಮತ್ತು ನಮ್ಮನ್ನು ಕ್ಯಾನ್ಸರ್ ನಿಂದ ರಕ್ಷಣೆಯನ್ನು ಮಾಡುತ್ತದೆ. ಹಾಗೆಯೇ ಇದು ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ ದೇಹದ ಬೊಜ್ಜು ಕಡಿಮೆ ಮಾಡುತ್ತದೆ. ಮತ್ತು ನಮ್ಮ ರಕ್ತವನ್ನು ಶುದ್ಧೀಕರಿಸುತ್ತದೆ. ಹುಳುಕಡ್ಡಿ, ಕಜ್ಜಿ ತುರಿಕೆ ಇನ್ನಿತರ ಚರ್ಮವ್ಯಾಧೀ ಸಮಸ್ಯೆಗೆ ಇದು ರಾಮಬಾಣ. ಇದರಲ್ಲಿ ಆಂಟಿ ಬಯೋಟಿಕ್ ಆಂಟಿ ವೈರಲ್ ಆಂಟಿ ಆಕ್ಸಿಡೆಂಟ್, ಆಂಟಿ ಇನ್ಫ್ಲಾಮೆಟರಿ ಆಗಿ ಕೆಲಸವನ್ನು ಮಾಡುತ್ತದೆ.

ಮಧುಮೇಹಿಗಳಿಗೆ ಬೇರೆ ಹಣ್ಣುಗಳಿಗೆ ಹೋಲಿಸಿದರೆ ಸೀಬೆ ಹಣ್ಣು ಆರೋಗ್ಯಕ್ಕೆ ಸಾಕಷ್ಟು ಒಳ್ಳೆಯ ಪ್ರಯೋಜನಗಳನ್ನು ಉಂಟು ಮಾಡುತ್ತದೆ. ಸೀಬೆ ಹಣ್ಣಿನಲ್ಲಿ ನಾರಿನ ಅಂಶ ಯಥೇಚ್ಛವಾಗಿದೆ. ಇದರಿಂದ ನಮ್ಮ ಕರುಳಿನ ಚಲನೆ ಉತ್ತಮಗೊಳ್ಳುತ್ತದೆ ಮತ್ತು ನಮ್ಮ ಮಧುಮೇಹ ಸಮಸ್ಯೆ ನಿವಾರಣೆ ಆಗುತ್ತದೆ. ಸೀಬೆ ಹಣ್ಣಿನಲ್ಲಿ ನಮ್ಮ ಕಣ್ಣುಗಳ ಆರೋಗ್ಯವನ್ನು ಅಭಿವೃದ್ಧಿ ಪಡಿಸಿ ಹೃದಯದ ಆರೋಗ್ಯವನ್ನು ಉತ್ತಮವಾಗಿಸಿ ನಮ್ಮ ದೇಹದ ತೂಕವನ್ನು ಕಡಿಮೆ ಮಾಡುವ ಗುಣ ಲಕ್ಷಣ ಕಂಡು ಬರುತ್ತದೆ. ಇನ್ನೂ ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಇದನ್ನು ಪೇರಲೆ ಹಣ್ಣು ಅಥವಾ ಪೇರಲೆ ಗಿಡ ಅಂತ ಕರೆಯುತ್ತಾರೆ. ಎಲ್ಲ ಬಗೆಯ ಪೋಷಕಾಂಶಗಳ ಜೊತೆಗೆ ಇದು ಔಷಧೀಯ ಗುಣಗಳನ್ನು ಹೊಂದಿದೆ. ಇದು ಪೌಷ್ಟಿಕಾಂಶಗಳ ಆಗರವಾಗಿದೆ. ಎಲ್ಲ ಪೋಷಕಾಂಶಗಳ ಮಹಾಪೂರವೇ ಆಗಿದೆ. ನೋಡಿದ್ರಲಾ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಶುಭದಿನ.

Leave a Reply

Your email address will not be published. Required fields are marked *