ನಮಸ್ತೆ ಪ್ರಿಯ ಓದುಗರೇ, ಶೀತ ಅಂದ್ರೆ ನೆಗಡಿ ಈ ನೆಗಡಿ ಅನ್ನುವುದು ಸಾಮಾನ್ಯವಾಗಿ ಮಳೆಗಾಲದಲ್ಲಿ ಬರಬೇಕು ಅಂತೇನೂ ಇಲ್ಲ ಸ್ನೇಹಿತರೇ ನೀವು ತಂಪಾಗಿ ಹೆಚ್ಚಿಗೆ ಸಮಯ ನೀರಿನಲ್ಲಿ ಇದ್ದರೂ ಕೂಡ ನೆಗಡಿ ಅನ್ನುವುದು ಬಂದೇ ಬರುತ್ತದೆ ಇನ್ನೂ ವಾತಾವರಣದಲ್ಲಿ ಏನಾದರೂ ಬದಲಾವಣೆ ಆದರೂ ಕೂಡ ಈ ಸಮಸ್ಯೆಯನ್ನು ನಾವು ಕಾಣಬಹುದು. ಇನ್ನೂ ಸಾಮಾನ್ಯವಾಗಿ ನೆಗಡಿ ಬಂದರೆ ಎದೆಯಲ್ಲಿ ಕಫ ತುಂಬಿಕೊಳ್ಳುತ್ತದೆ. ಕಫ ತುಂಬಿದರೆ ತಲೆನೋವು ಜ್ವರ ತಲೆ ಭಾರ ಆಗುವುದು ಈ ಎಲ್ಲ ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ. ಈ ಎಲ್ಲ ಸಮಸ್ಯೆಗಳಿಗೆ ನಾವು ವೈದ್ಯರ ಹತ್ತಿರ ಹೋಗಿ ಮಾತ್ರೆಗಳನ್ನು ತೆಗೆದುಕೊಂಡು ಬರುತ್ತೇವೆ. ಈ ಮಾತ್ರೆಗಳು ಕೊಂಚ ಸಮಯದವರೆಗೆ ವಿಶ್ರಾಂತಿ ನೀಡಿದರು ಕೂಡ ಮತ್ತೆ ಇದು ಬೆನ್ನು ಬಿಡದೆ ಮತ್ತೆ ಬಂದು ಒಕ್ಕರಿಸುತ್ತದೆ. ಸಾಮಾನ್ಯವಾಗಿ ನೆಗಡಿ ಅನ್ನುವ ರೋಗವನ್ನು ಎಲ್ಲರೂ ಅಲಕ್ಷ್ಯ ಮಾಡುತ್ತಾರೆ. ಇದಕ್ಕೆ ಅವರು ಆಸ್ಪತ್ರೆಗೆ ಹೋಗುವುದಿಲ್ಲ.

ನಮ್ಮ ಹಿರಿಯರು ನಮ್ಮ ಮೊದಲಿನ ಕಾಲದ ಜನರು ಅವರು ಯಾವುದೇ ಕಾರಣಕ್ಕೂ ಇಂಗ್ಲಿಷ್ ಮಾತ್ರೆಗಳಿಗೆ ಮೊರೆ ಹೋಗುತ್ತಿರಲಿಲ್ಲ. ಬದಲಾಗಿ ಮನೆಯಲ್ಲಿ ಮನೆಮದ್ದು ಮಾಡಿ ಉಪಯೋಗ ಪಡೆಯುವುದು ಅವರ ಉದ್ದೇಶ ಆಗಿತ್ತು. ಜೊತೆಗೆ ಇದರಿಂದ ಅವರು ಪರಿಹಾರವನ್ನು ಕೂಡ ಕಂಡುಕೊಳ್ಳುತ್ತಿದ್ದರು. ಹಾಗಾದ್ರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಶೀತವನ್ನು ನೆಗಡಿ ಕೆಮ್ಮು ಕಫವನ್ನು ಒಂದೇ ಕ್ಷಣದಲ್ಲಿ ಮಾಯ ಮಾಡುವ ಅದ್ಭುತವಾದ ಮನೆಮದ್ದು ತಿಳಿಸಿ ಕೊಡುತ್ತೇವೆ ಇದರಿಂದ ನಿಮಗೆ ಯಾವುದೇ ಅಡ್ಡ ಪರಿಣಾಮಗಳು ಬೀರುವುದಿಲ್ಲ. ಕೊಂಚ ಸಮಯವನ್ನು ಮಾಡಿಕೊಂಡು ಈ ಲೇಖನವನ್ನು ಓದಿ ಅದರಿಂದ ಲಾಭವನ್ನು ಕಂಡುಕೊಳ್ಳಿ.

ಮೊದಲಿಗೆ ಈ ಮನೆಮದ್ದು ತಯಾರಿಸಲು ಒಂದು ಈರುಳ್ಳಿಯನ್ನು ತೆಗೆದುಕೊಳ್ಳಿ. ಅದನ್ನು ಚೆನ್ನಾಗಿ ಜಜ್ಜಿ ಅದರ ರಸವನ್ನು ತೆಗೆದುಕೊಂಡು ಇಟ್ಟುಕೊಳ್ಳಿ. ಈ ಈರುಳ್ಳಿಯಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಗುಣಗಳು ನಮಗೆ ಬಂದಿರುವ ಶೀತ ನೆಗಡಿ ಕೆಮ್ಮು ಜ್ವರ ಕಫ ಎಲ್ಲವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಇದನ್ನು ಚಿಕ್ಕವರಿಂದ ದೊಡ್ಡವರವರೆಗೆ ಕೊಡಬಹುದು. ನಂತ್ರ ಒಂದು ಬೆರಳು ಇಂಚು ಆಗುವಷ್ಟು ಶುಂಠಿಯನ್ನು ತೆಗೆದುಕೊಂಡು ಅದನ್ನು ಕೂಡ ಚೆನ್ನಾಗಿ ಜಜ್ಜಿ ಅದರ ರಸವನ್ನು ತೆಗೆದುಕೊಳ್ಳಿ. ಇದು ಮುಖ್ಯವಾಗಿ ಕಫವನ್ನು ಮತ್ತು ಕೆಮ್ಮು ಹೋಗಲಾಡಿಸಲು ಅದ್ಭುತವಾಗಿ ಕೆಲಸವನ್ನು ಮಾಡುತ್ತದೆ. ನಂತರ ತುಳಸಿ ಎಲೆಗಳನ್ನು ತೆಗೆದುಕೊಳ್ಳಬೇಕು. ತುಳಸಿ ಎಲೆ ಎಲ್ಲರಿಗೂ ಗೊತ್ತಿರುವ ಎಲೆಯಾಗಿದೆ. ಇದರಲ್ಲಿ ರೋಗ ನಿರೋಧಕ ಶಕ್ತಿ ಇರುವುದರಿಂದ ಇದು ಕೂಡ ಶೀತ, ಕಫ ಗಂಟಲು ಕಟ್ಟುವಿಕೆಗೆ ಪರಿಹಾರವನ್ನು ಒದಗಿಸುತ್ತದೆ. ಈ ತುಳಸಿ ಎಲೆಯನ್ನು ಕೂಡ ಚೆನ್ನಾಗಿ ಜಜ್ಜಿ ಇದರ ರಸವನ್ನು ತೆಗೆದು ಈರುಳ್ಳಿ ರಸದಲ್ಲಿ ಚೆನ್ನಾಗಿ ಮಿಕ್ಸ್ ಮಾಡಿ. ತದ ನಂತರ ಇದರಲ್ಲಿ ಶುಂಠಿ ರಸವನ್ನು ಹಾಕಿ. ಸುಣ್ಣದ ರೂಪದಲ್ಲಿ ಇರುವ ಭಾಗವನ್ನು ಬಿಟ್ಟು ರಸವನ್ನು ಮಾತ್ರ ಹಾಕಿ ಮಿಕ್ಸ್ ಮಾಡಿ ಆಮೇಲೆ ಇದಕ್ಕೆ ಜೇನುತುಪ್ಪ ಬೆರೆಸಿ. ನಂತರ ಇದಕ್ಕೆ ಅರಿಶಿಣ ಪುಡಿ ಮತ್ತು ಕಾಳು ಮೆಣಸಿನ ಪುಡಿ ಹಾಕಿ. ಚೆನ್ನಾಗಿ ಮಿಕ್ಸ್ ಮಾಡಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದರಿಂದ ನಿಮಗೆ ವಾಂತಿ ಆಗಿ ಕಫ ಹೊರಗೆ ಹೋಗಿ ಎದೆಯ ಭಾಗ ಸ್ವಚ್ಛವಾಗಿ ಉಸಿರಾಡಲು ಸಹಾಯ ಆಗುತ್ತದೆ. ನೋಡಿದ್ರಲಾ ಸ್ನೇಹಿತರೇ. ತುಂಬಾನೇ ಸರಳವಾದ ಸುಲಭವಾದ ಮನೆಮದ್ದು ಇದಾಗಿದೆ. ಒಮ್ಮೆ ಪ್ರಯತ್ನ ಮಾಡಿ ನೋಡಿ.ಶುಭದಿನ.

Leave a Reply

Your email address will not be published. Required fields are marked *