ನಮಸ್ತೆ ಪ್ರಿಯ ಓದುಗರೇ, ನಮ್ಮ ಭಾರತ ದೇಶವು ವೈವಿಧ್ಯತೆ ಇಂದ ಕೂಡಿದೆ ಅಷ್ಟೇ ಅಲ್ಲದೇ ಭಾರತ ದೇಶದಲ್ಲಿ ಅತ್ಯದ್ಭುತವಾದ ಪ್ರಸಿದ್ದಿಯನ್ನು ಪಡೆದಿರುವ ಕರ್ನಾಟಕವು ತುಂಬಾನೇ ವೈಶಿಷ್ಟ್ಯತೆ ಅನ್ನು ಹೊಂದಿದೆ. ಅದು ನಾವು ಸೇವಿಸುವ ಆಹಾರದಲ್ಲಿ ಇರಬಹುದು, ನಮ್ಮ ಉಡುಗೆ ತೊಡುಗೆಯಲ್ಲಿ ಇರಬಹುದು, ಅಥವಾ ನಮ್ಮ ಜೀವನ ಶೈಲಿ ಇರಬಹುದು. ಇನ್ನೂ ನಾವು ಆಹಾರ ಪದ್ಧತಿಯಲ್ಲಿ ನಮ್ಮ ಕರ್ನಾಟಕ ರಾಜ್ಯವನ್ನು ಪರಿಗಣಿಸಿದರೆ ಆಹಾರ ಪದ್ಧತಿ ತುಂಬಾನೇ ವಿಭಿನ್ನವಾಗಿ ಇರುತ್ತದೆ. ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಭಾಗದಲ್ಲಿ ಆಹಾರ ಕ್ರಮಗಳು ತುಂಬಾನೇ ವಿಭಿನ್ನವಾಗಿದೆ ಅಂತ ಹೇಳಬಹುದು. ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿ ರಾಗಿ ಮುದ್ದೆ ಅಕ್ಕಿ ರೊಟ್ಟಿ ಜೋಳದ ರೊಟ್ಟಿಯನ್ನು ಮಾಡುತ್ತಾರೆ. ಇದು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಅದರಲ್ಲಿ ಮುಖ್ಯವಾಗಿರುವ ರಾಗಿ ಮುದ್ದೆ ಅಥವಾ ರಾಗಿ ತಿನ್ನುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳನ್ನು ಇಂದಿನ ಲೇಖನದಲ್ಲಿ ತಿಳಿಯೋಣ.

ಮೊದಲಿಗೆ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ನಿತ್ಯವೂ ನೀವು ರಾಗಿಯನ್ನು ಸೇವನೆ ಮಾಡಿ. ಇದರಲ್ಲಿ ಕಡಿಮೆ ಫ್ಯಾಟ್ ಇರುತ್ತದೆ ಜೊತೆಗೆ ಫೈಬರ್ ಅಂಶ ಇರುವುದರಿಂದ ತೂಕವನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು. ಇನ್ನೂ ಮಕ್ಕಳಲ್ಲಿ ಸಾಮಾನ್ಯವಾಗಿ ಸರಿಯಾಗಿ ಊಟವನ್ನು ಮಾಡುವುದಿಲ್ಲ ಹೀಗಾಗಿ ಅವರ ಮೂಳೆಗಳು ಸ್ನಾಯುಗಳು ಬಲಹೀನಗೊಳ್ಳುತ್ತವೆ ಅದಕ್ಕಾಗಿ ನೀವು ಚಿಕ್ಕ ಮಕ್ಕಳಿಗೆ ರಾಗಿ ತಿನ್ನಿಸಿ. ಇದರಿಂದ ಮಕ್ಕಳು ದಷ್ಟಪುಷ್ಟವಾಗಿ ಇರುತ್ತಾರೆ. ಅಷ್ಟೇ ಅಲ್ಲದೆ ಇದು ಅನಿಮಿಯಾ ರೋಗವನ್ನು ಬರದಂತೆ ತಡೆಯುತ್ತದೆ. ಜೊತೆಗೆ ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ. ಟೀನೇಜರ್ ನಲ್ಲಿ ಹೆಚ್ಚಾಗಿ ಕಾಡುವ ಸಮಸ್ಯೆ ಅಂದರೆ ಅದು ಖಿನ್ನತೆ. ಈ ಖಿನ್ನತೆಯನ್ನು ದೂರ ಮಾಡುವ ಶಕ್ತಿಯನ್ನು ಹೊಂದಿದೆ ಈ ರಾಗಿ. ಆದ ಕಾರಣವೇ ದಿನನಿತ್ಯ ಸ್ವಲ್ಪವಾದರೂ ಸರಿಯೇ ರಾಗಿಯನ್ನು ಸೇವನೆ ಮಾಡಿ. ಇನ್ನೂ ರಾಗಿ ಸೇವನೆ ಮಾಡುವುದರಿಂದ ಮೇಗ್ರೆನ್ ಸಮಸ್ಯೆಯನ್ನು ಕೂಡ ಹೊಡೆದೋಡಿಸಬಹುದು. ರಾಗಿಯಲ್ಲಿ ಇರುವ ಅಮೈನೋ ಆಮ್ಲಗಳು ದೇಹದಲ್ಲಿ ಇರುವ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಕೊಲೆಸ್ಟ್ರಾಲ್ ಮಟ್ಟವು ಕಡಿಮೆ ಇದ್ದರೆ ತಕ್ಷಣವೇ ಬಿಪಿ ನಿಯಂತ್ರಣಕ್ಕೆ ಬರುತ್ತದೆ. ಅಷ್ಟೇ ಅಲ್ಲದೆ ರಾಗಿಯು ನಮ್ಮ ಜೀರ್ಣ ಕ್ರಿಯೆಯನ್ನು ಸುಗಮವಾಗಿ ನಡೆಯುವಂತೆ ಸಹಾಯ ಮಾಡುತ್ತದೆ.

ಡಯಾಬಿಟಿಸ್ ರೋಗಿಗಳಿಗೆ ಸೂಪರ್ ಫುಡ್ ಈ ರಾಗಿ ಆಗಿದೆ. ಮಧುಮೇಹಿಗಳು ಒಂದು ಲೋಟ ರಾಗಿ ಅಂಬಲಿಯನ್ನು ಕುಡಿದರೆ ನಿಮ್ಮ ಶುಗರ್ ಲೆವೆಲ್ ನಿಯಂತ್ರಣದಲ್ಲಿ ಇರುತ್ತದೆ. ಇನ್ನೂ ಚಿಕ್ಕ ಮಕ್ಕಳಿಗೆ ಅಂದರೆ ಆರು ತಿಂಗಳ ಮಕ್ಕಳಿಗೆ ಮನೆಯಲ್ಲಿ ರಾಗಿ ಸೂಪ್ ಮಾಡಿ ಕುಡಿಸುವುದರಿಂದ ಮಕ್ಕಳಿಗೆ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನು ಒದಗಿಸುತ್ತದೆ. ಇನ್ನೂ ನೀವು ತುಂಬಾನೇ ನಿಶ್ಯಕ್ತಿ ಇಂದ ಬಳಲುತ್ತಿದ್ದರೆ ನಿತ್ಯವೂ ರಾಗಿಯನ್ನು ಸೇವನೆ ಮಾಡುತ್ತಾ ಬನ್ನಿ ಇದರಿಂದ ನಿಮ್ಮ ಸುಸ್ತು ಆಯಾಸ ಎಲ್ಲವೂ ಕಡಿಮೆ ಆಗುತ್ತದೆ.ರಾಗಿ ಶೀತಕಾರಕ. ನಮ್ಮ ದೇಹವನ್ನು ಉಷ್ಣತೆ ಇಂದ ಕಾಪಾಡುತ್ತದೆ. ಇನ್ನೂ ಕಿಡ್ನಿ ಸ್ಟೋನ್ ಆಗದಂತೆ ನೋಡಿಕೊಳ್ಳುತ್ತದೆ.ಜೊತೆಗೆ ರಕ್ತ ಹೀನತೆ ಉಂಟಾಗದಂತೆ ತಡೆಯುತ್ತದೆ. ಇಷ್ಟೊಂದು ಲಾಭಗಳನ್ನು ಹೊಂದಿರುವ ರಾಗಿಯನು ಅಲಕ್ಷ್ಯ ಮಾಡಬೇಡಿ. ರಾಗಿಯನ್ನು ಹಾಗೆ ತಿನ್ನಲು ಆಗದೆ ಇದ್ದರೆ ಅದನ್ನು ರಾಗಿ ಅಂಬಲಿ, ರಾಗಿ ರೊಟ್ಟಿ ರಾಗಿ ಮುದ್ದೆ, ರಾಗಿ ದೋಸೆ ಇಡ್ಲಿ ಈ ರೀತಿಯಾಗಿ ಮಾಡಿ ಸೇವಿಸಿ ಖಂಡಿತವಾಗಿ ನಿಮಗೆ ಇದರಿಂದ ಹತ್ತಾರು ಲಾಭಗಳು ಉಂಟಾಗುತ್ತವೆ. ಈ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ.ಶುಭದಿನ.

Leave a Reply

Your email address will not be published. Required fields are marked *