ನಮಸ್ತೆ ಪ್ರಿಯ ಓದುಗರೇ ಸುಂದರವಾಗಿ ಸೌಂದರ್ಯವಾಗಿ ಕಾಣಲು ಯಾರು ತಾನೇ ಇಷ್ಟ ಪಡುವುದಿಲ್ಲ ಹೇಳಿ ಎಲ್ಲರಿಗೂ ಇಷ್ಟವಾಗುತ್ತದೆ. ಹೀಗಾಗಿ ಅವರು ಏನು ಮಾಡುತ್ತಾರೆ ಸುಂದರವಾಗಿ ಕಾಣಲು ಮಾರುಕಟ್ಟೆಯಲ್ಲಿ ಸಿಗುವ ಹಲವಾರು ಬಗೆಯ ಪ್ರೋಡಕ್ಟ್ ಗಳಿಗೆ ಮಾರು ಹೋಗುತ್ತಾರೆ. ಇದರಿಂದ ಸ್ವಲ್ಪ ಫಲಿತಾಂಶ ಸಿಕ್ಕರೂ ಕೂಡ ಶಾಶ್ವತವಾದ ಸಂತೃಪ್ತವಾದ ಪರಿಹಾರ ಸಿಗುವುದಿಲ್ಲ ಜೊತೆಗೆ ಇದು ಆರೋಗ್ಯಕ್ಕೆ ಅಡ್ಡ ಪರಿಣಾಮವಾಗಿ ಪ್ರತಿಬಿಂಬಿಸುತ್ತದೆ. ನಮ್ಮ ಆರೋಗ್ಯವನ್ನು ಮುಖ್ಯದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ನಾವು ನೈಸರ್ಗಿಕವಾದ ಸ್ವಾಭಾವಿಕವಾದ ಮನೆಮದ್ದುಗಳು ಕಡೆಗೆ ಹೆಚ್ಚಿನ ಆಸಕ್ತಿಯನ್ನು ತೋರಿಸಬೇಕು. ಆದ್ದರಿಂದ ಕೆಮಿಕಲ್ ಯುಕ್ತ ವಸ್ತುಗಳನ್ನು ಬಳಕೆ ಮಾಡುವುದನ್ನು ತಪ್ಪಿಸಬೇಕು. ಆದಷ್ಟು ಮನೆಯಲ್ಲಿ ಸಿಗುವ ನೈಸರ್ಗಿಕವಾದ ಪದಾರ್ಥಗಳನ್ನು ಬಳಕೆ ಮಾಡಿಕೊಂಡು ನಿಮ್ಮ ಮುಖದ ಹೊಳಪನ್ನು ಹೆಚ್ಚಿಸಿಕೊಳ್ಳಬಹುದು. ಹಾಗಾದ್ರೆ ಆ ಮನೆಮದ್ದು ಯಾವುದು ಅಂತ ನಿಮಗೆ ಈ ಲೇಖನದ ಮೂಲಕ ಪರಿಚಯ ಮಾಡಿ ಕೊಡುತ್ತೇವೆ ಬನ್ನಿ.

ಸಾಮಾನ್ಯವಾಗಿ ಬಿಸಿಲಿನಲ್ಲಿ ಓಡಾಡಿದರೆ ಮುಖವೂ ಬೇಗನೆ ಕಪ್ಪಾಗುತ್ತದೆ. ಅಷ್ಟೇ ಅಲ್ಲದೆ ನೀವು ಯಾವುದಾದರೂ ರಾಸಾಯನಿಕಯುಕ್ತ ಕ್ರೀಮ್ ಗಳನ್ನು ಬಳಕೆ ಮಾಡುತ್ತಾ ಬಂದಿದ್ದರೆ ನಿಮ್ಮ ಮುಖ ಬೆಳ್ಳಗೆ ಆಗುವ ಬದಲು ಕಪ್ಪಾಗುತ್ತಿದ್ದರೆ ನಾವು ತಿಳಿಸುವ ಈ ಮನೆಮದ್ದು ನಿಂದ ನಿಮ್ಮ ಮುಖವನ್ನು ಹೊಳಪಾಗಿ ಮಾಡಿಕೊಳ್ಳಬಹುದು. ತುಂಬಾನೇ ಸರಳವಾದ ಸುಲಭವಾದ ಮನೆಮದ್ದು ಇದಾಗಿದೆ. ಹಾಗಾದರೆ ಬನ್ನಿ ಶುರು ಮಾಡೋಣ. ಈ ಮನೆಮದ್ದು ತಯಾರಿಸಲು ಬೇಕಾದ ಮುಖ್ಯವಾದ ವಸ್ತು ಅಂದರೆ ಅದುವೇ ಟೀ ಪೌಡರ್. ಒಂದು ಬಟ್ಟಲನ್ನು ತೆಗೆದುಕೊಂಡು ಆ ಬಟ್ಟಲಿನಲ್ಲಿ ಒಂದು ಚಮಚ ಆಗುವಷ್ಟು ಟೀ ಪುಡಿ ಹಾಕಿಕೊಳ್ಳಿ. ನಂತ್ರ ಒಂದು ಚಮಚ ಸಕ್ಕರೆಯನ್ನು ಹಾಕಿಕೊಳ್ಳಿ. ಆಮೇಲೆ ಒಂದು ನಿಂಬೆ ಹಣ್ಣಿನ ರಸವನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಒಂದು ಪೇಸ್ಟ್ ರೀತಿಯಲ್ಲಿ ತಯಾರಿಸಿಕೊಳ್ಳಿ. ನಿಂಬೆ ಹಣ್ಣಿನ ರಸವು ಆಯಿಲ್ ಸ್ಕಿನ್ ಇರುವವರಿಗೆ ತುಂಬಾನೇ ಒಳ್ಳೆಯದು. ಇನ್ನೂ ಡ್ರೈ ಸ್ಕಿನ್ ಇರುವವರು ಇದರಲ್ಲಿ ನಿಂಬೆ ಹಣ್ಣಿನ ರಸದ ಬದಲು ಕೊಬ್ಬರಿ ಎಣ್ಣೆಯನ್ನು ಹಾಕಿ ಉಪಯೋಗಿಸಿ. ಈ ಮನೆಮದ್ದು ಮಾಡಲು ಟೀ ಪುಡಿಯನ್ನು ಬಳಕೆ ಮಾಡಿದ್ದೇವೆ. ಇದು ಚರ್ಮದಲ್ಲಿ ಅಡಗಿರುವ ಮಲೀನವನ್ನು ಹೊರಗೆ ಹಾಕುತ್ತದೆ. ಮತ್ತು ಮುಖಕ್ಕೆ ಕಾಂತಿಯನ್ನು ನೀಡುತ್ತದೆ.

ಇದನ್ನು ಹೇಗೆ ಹಚ್ಚಿಕೊಳ್ಳಬೇಕು ಅಂದರೆ ನಿಮ್ಮ ಮುಖವನ್ನು ಅಥವಾ ಕೈ ಕಾಲುಗಳಿಗೆ ಕುತ್ತಿಗೆ ಭಾಗಕ್ಕೆ ನೀವು ಹಚ್ಚಲು ಇಷ್ಟ ಪಡುವುದಾದರೆ ಮೊದಲಿಗೆ ಆ ಭಾಗವನ್ನು ಚೆನ್ನಾಗಿ ಕಾಟನ್ ಬಟ್ಟೆಯಿಂದ ಒರೆಸಿಕೊಳ್ಳಿ. ನಂತರ ನಿಂಬೆ ಹಣ್ಣಿನಲ್ಲಿ ಈ ಪೇಸ್ಟ್ ಅನ್ನು ತುಂಬಿಕೊಂಡು ನಿಧಾನವಾಗಿ ಮಸಾಜ್ ಮಾಡಿಕೊಳ್ಳಬೇಕು. ನೀವು ಮುಖಕ್ಕೆ ಹಚ್ಚುವಾಗ ತುಂಬಾನೇ ಜಾಗೃತೆ ಇಂದ ಮಸಾಜ್ ಮಾಡಿಕೊಳ್ಳಬೇಕು. ಇದರ ಅರ್ಥ ಮುಖದ ಮೇಲೆ ಗುಳ್ಳೆಗಳು ಆಗಿದ್ದರೆ ಅವುಗಳು ಕೆಂಪಗೆ ಆಗಿ ಒಡೆದು ಹೋಗುತ್ತವೆ ಆದ ಕಾರಣ ತುಂಬಾನೇ ಕಾಳಜಿ ಇಂದ ನಿಧಾನವಾಗಿ ಮಸಾಜ್ ಮಾಡಬೇಕು. ಇದರಲ್ಲಿ ಬಳಕೆ ಮಾಡಿರುವ ಟೀ ಪುಡಿ ಅಥವಾ ಕಾಫೀ ಪೌಡರ್ ಚರ್ಮಕ್ಕೆ ಹೊಳಪನ್ನು ಕೊಡುತ್ತದೆ. ಚರ್ಮದ ಬಣ್ಣವನ್ನು ಹೆಚ್ಚಿಸುತ್ತದೆ. ಹಾಗೆಯೇ ರಕ್ತ ಸಂಚಾರವನ್ನು ಸರಿಯಾಗಿ ಆಗುವಂತೆ ಮಾಡುತ್ತದೆ. ನಂತರ ನಿಂಬೆ ರಸವು ಮುಖದಲ್ಲಿ ಆಯಿಲಿನೆಸ್ ಅನ್ನು ಕಡಿಮೆ ಮಾಡಿ ಕಾಂತಿಯನ್ನು ನೀಡುತ್ತದೆ. ಇದರಲ್ಲಿ ಇರುವ ಬ್ಲೀಚಿಂಗ್ ಅಂಶ ಚರ್ಮದ ಮೇಲೆ ಆಗಿರುವ ಕಪ್ಪಾದ ಕಲೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಇನ್ನೂ ಸಕ್ಕರೆಯು ಮುಖದಲ್ಲಿ ಆಗಿರುವ ಕಪ್ಪು ಚುಕ್ಕೆಗಳು ಬಿಳಿ ಚುಕ್ಕೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ನಂತರ ಇದನ್ನು ನೀವು ಐದು ನಿಮಿಷ ಬಿಟ್ಟು ತಣ್ಣೀರಿನಲ್ಲಿ ತೊಳೆದುಕೊಳ್ಳಿ. ನಿಮ್ಮ ಮುಖವೂ ಫಲ ಫಲ ಹೊಳೆಯುತ್ತದೆ. ಒಮ್ಮೆ ಪ್ರಯತ್ನ ಮಾಡಿ ನೋಡಿ. ನೀವೇ ಇದರ ಫಲಿತಾಂಶವನ್ನು ಕಾಣುತ್ತೀರಿ.

Leave a Reply

Your email address will not be published. Required fields are marked *