ನಮಸ್ತೆ ಪ್ರಿಯ ಮಿತ್ರರೇ, ಹಾಲು ಈ ಹಾಲನ್ನು ನಾವು ನಿತ್ಯವೂ ನಮ್ಮ ದಿನ ಶುರು ಆಗುವುದರಿಂದ ಜೊತೆಗೆ ದಿನವೂ ಮುಗಿಯುವವರೆಗೆ ನಾವು ಈ ಹಾಲಿನ ಬಳಕೆ ಖಂಡಿತವಾಗಿ ಮಾಡಿಯೇ ಮಾಡುತ್ತೇವೆ ಅದರಲ್ಲಿ ಚಿಕ್ಕ ಮಕ್ಕಳಿಗೆ, ಆಸ್ಪತ್ರೆಯಲ್ಲಿ, ಶಾಲೆಯಲ್ಲಿ ಮಕ್ಕಳಿಗೆ ಅಲ್ಲದೇ ಮುಖ್ಯವಾಗಿ ಟೀ ಅಂಗಡಿಯನ್ನು ಬಳಕೆ ಮಾಡುತ್ತಾರೆ. ಹಾಲನ್ನು ಬಳಕೆ ಮಾಡಿ ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ತಯಾರಿಸಿ ಸೇವನೆ ಮಾಡುತ್ತೇವೆ ಜೊತೆಗೆ ಟೀ ಕಾಫಿ ಚಹಾ ಇವುಗಳನ್ನು ಹಾಲು ಇಲ್ಲದೆ ಯಾರು ಕುಡಿಯುವುದಿಲ್ಲ. ಅಲ್ಲದೆ ಉತ್ತಮವಾದ ಆರೋಗ್ಯಕ್ಕೆ ನಾವು ಏನು ಮಾಡುತ್ತೇವೆ ಹಾಲಿನಲ್ಲಿ ಅರಿಶಿಣವನ್ನು ಹಾಕಿಕೊಂಡು ಕುಡಿಯುತ್ತೇವೆ, ತುಪ್ಪವನ್ನು, ಬೆಲ್ಲವನ್ನು, ಸಕ್ಕರೆಯನ್ನು ಹಾಕಿಕೊಂಡು ಕುಡಿಯುತ್ತೇವೆ. ಹಾಗಾದ್ರೆ ಇಂದಿನ ಲೇಖನದಲ್ಲಿ ಹಾಲಿನಲ್ಲಿ ಖರ್ಜೂರವನ್ನು ಹಾಕಿ ಕುಡಿಯುವುದರಿಂದ ಆಗುವ ಹಲವಾರು ಲಾಭವನ್ನು ನಿಮಗೆ ತಿಳಿಸಿ ಕೊಡುತ್ತೇವೆ ಬನ್ನಿ.
ನೀವು ಕೆಮ್ಮಿನಿಂದ ಬಳಲುತ್ತಿದ್ದರೆ ಅಥವಾ ದೀರ್ಘಕಾಲದ ವರೆಗೆ ನಿಮ್ಮನ್ನು ಬಿಟ್ಟು ಕೆಮ್ಮು ಓಡಿ ಹೋಗುತ್ತಿಲ್ಲ ಏನೇ ಔಷಧ ಪಾನೀಯವನ್ನು ಮಾಡಿದರು ಕೂಡ ಕೆಮ್ಮು ನಿಲ್ಲುತ್ತಿಲ್ಲ.ಅಂದ್ರೆ 5-8 ಖರ್ಜೂರವನ್ನು ಹಾಲಿನಲ್ಲಿ ಹಾಕಿ ಕುಡಿಯಿರಿ ಇದರಿಂದ ನಿಮ್ಮ ಕೆಮ್ಮು ಕ್ರಮೇಣ ಕಡಿಮೆ ಆಗುತ್ತದೆ. ಅಲ್ಲದೆ ಇದು ನಿಮ್ಮ ವೃದ್ಧಾಪ್ಯವನ್ನು ಕಡಿಮೆ ಮಾಡುತ್ತಾ ನಿಮ್ಮಲ್ಲಿ ಚೈತನ್ಯವನ್ನು ತುಂಬುತ್ತವೆ. ನೀವು ತುಂಬಾನೇ ಯೌವ್ವನವಾಗಿ ಕಾಣುತ್ತೀರಿ. ಅಲ್ಲದೇ, ಮೊಣಕಾಲಿನ ಸಮಸ್ಯೆ, ಸೊಂಟ ನೋವಿನ ಸಮಸ್ಯೆ ಹೀಗೆ ಇವೆಲ್ಲ ಸಮಸ್ಯೆಯನ್ನು ಹೊಡೆದೊಡಿಸುತ್ತದೆ ಈ ಖರ್ಜೂರದ ಹಾಲು. ಹಾಲು ಮತ್ತು ಖರ್ಜೂರವನ್ನು ಮಿಕ್ಸ್ ಮಾಡಿ ಸೇವನೆ ಮಾಡುವುದರಿಂದ ಅನೇಕ ಆರೋಗ್ಯಕರ ಲಾಭಗಳು ಆಗುತ್ತವೆ. ನಿಮ್ಮ ದೇಹವು ತುಂಬಾನೇ ಸದೃಢವಾಗಿ ಇರುತ್ತದೆ ಯಾವುದೇ ಸೋಂಕು ನಿಮ್ಮ ಹತ್ತಿರ ಸುಳಿಯುವುದಿಲ್ಲ ಅಷ್ಟೊಂದು ಲಾಭದಾಯಕ ಆಗಿದೆ ಈ ಹಾಲು. ಖರ್ಜೂರದ ಎಲ್ಲಿ ಕಬ್ಬಿನ ಅಂಶ ಮತ್ತು ಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ಪ್ರೊಟೀನ್ ಅಂಶಗಳು ದೇಹಕ್ಕೆ ಅದ್ಭುತವಾದ ಶಕ್ತಿಯನ್ನು ತುಂಬುತ್ತದೆ. ಹಾಲು ಮತ್ತು ಖರ್ಜೂರದ ಮಿಶ್ರಣವನ್ನು ಸೇವನೆ ಮಾಡುವುದರಿಂದ ನಿಮ್ಮ ಜೀರ್ಣಕ್ರಿಯೆ ತುಂಬಾನೇ ಸಲೀಸಾಗಿ ಆಗುತ್ತದೆ. ಜೊತೆಗೆ ಮಂಡಿ ನೋವಿನ ಸಮಸ್ಯೆಯನ್ನು ಹೋಗಲಾಡಿಸಲು ಸಹಕಾರಿ ಆಗಿದೆ. ಅಲ್ಲದೆ ಪ್ರಾರಂಭಿಕ ಹಂತದ ಮಲಬದ್ಧತೆಯನ್ನು ನಿವಾರಿಸುತ್ತದೆ.
ದೇಹದಲ್ಲಿ ಶಕ್ತಿ ಕಡಿಮೆ ಆಗಿದ್ದರೆ ಈ ಖರ್ಜೂರದ ಸಹಾಯದಿಂದ ಶಕ್ತಿಯು ದೇಹದಲ್ಲಿ ದುಪ್ಪಟ್ಟು ಆಗುತ್ತದೆ. ವಿಟಮಿನ್ ಏ ಮತ್ತು ವಿಟಮಿನ್ ಡಿ ನಿಮಗೆ ಈ ಎರಡು ಪದಾರ್ಥಗಳ ಮೂಲಕ ದೊರೆಯುತ್ತದೆ. ಲಿವರ್ ಸಮಸ್ಯೆಯನ್ನು ಹೋಗಲಾಡಿಸಲು ಈ ಖರ್ಜೂರದ ಹಾಲು ತುಂಬಾನೇ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ದೇಹದಲ್ಲಿ ಶೇಖರಣೆ ಆಗಿರುವ ಕಲ್ಮಶವನ್ನು ಹೊರಗೆ ಹಾಕುತ್ತದೆ. ಜೊತೆಗೆ ಲಿವರ್ ಅನ್ನು ಸ್ವಚ್ಚ ಮಾಡಲು ಸಹಕಾರಿ ಆಗಿ ಕೆಲಸವನ್ನು ಮಾಡುತ್ತದೆ. ಲಿವರ್ ಅನ್ನುವುದು ಸರಿಯಾಗಿ ಕೆಲಸವನ್ನು ಮಾಡಿದರೆ ನಮ್ಮ ಜೀರ್ಣಕ್ರಿಯೆ ಸರಿಯಾಗಿ ಆಗಿ ದೇಹವು ತುಂಬಾನೇ ಚೆನ್ನಾಗಿ ಇರುತ್ತದೆ. ಜೊತೆಗೆ ಇದು ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಹಾಗಾದ್ರೆ ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಬೇಕು ಅಂದ್ರೆ 50ಗ್ರಾಂ ಖರ್ಜೂರವನ್ನು ನೆನೆಸಿ ಒಂದು ಲೋಟ ಹಾಲಿನಲ್ಲಿ ನೆನೆಸಿ ಕುಡಿಯಬೇಕು ನಂತ್ರ ಖರ್ಜೂರವನ್ನು ಹಾಗೆಯೇ ಜಗಿದು ತಿನ್ನಬೇಕು. ಅಷ್ಟೊಂದು ಉಪಯೋಗಕಾರಿ ಆಗಿದೆ ಆದ್ದರಿಂದ ಮಿತ್ರರೇ ನೀವು ನಿತ್ಯವೂ ಸತತವಾಗಿ ಹಾಲು ಖರ್ಜೂರವನ್ನು ಸೇವನೆ ಮಾಡಿ. ಹಲವಾರು ಲಾಭವನ್ನು ಪಡೆಯಿರಿ. ಶುಭದಿನ.