ನಮಸ್ತೆ ಪ್ರಿಯ ಓದುಗರೇ, ಈರುಳ್ಳಿ ಅಂದ್ರೆ ಮೊದಲಿಗೆ ಮಾತು ನೆನಪು ಬರುವುದು ಈರುಳ್ಳಿಯನ್ನು ಕತ್ತರಿಸುವಾಗ ಕಣ್ಣೀರು ಬರುವುದು. ಇದು ಹಳೆಯ ಮಾತು ಆಗಿ ಹೋಗಿದೆ ಆದ್ರೂ ಈ ಮಾತು ಅಷ್ಟೇ ಜನಪ್ರಿಯ. ಆದ್ರೆ ಈ ಈರುಳ್ಳಿ ಅನ್ನುವುದು ಎಲ್ಲ ಆಹಾರ ಪದ್ಧತಿ ಬಳಕೆಯಲ್ಲಿ ತುಂಬಾನೇ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಅಲ್ಲದೆ ಈ ವಸ್ತುವನ್ನು ಬಳಕೆ ಮಾಡದೇ ಅಡುಗೆ ಅಪರಿಪೂರ್ಣ ಅಲ್ಲವೇ. ಅಷ್ಟೇ ಅಲ್ಲದೆ ಅಡುಗೆ ಅಪರಿಪೂರ್ಣ ಅಲ್ಲದೇ ಇದನ್ನು ಹಸಿಯಾಗಿ ಸೇವನೆ ಮಾಡದೇ ಇದ್ದರೆ ಅಥವಾ ಇನ್ನಿತರ ವಿಧದಲ್ಲಿ ಸೇವನೆ ಮಾಡದೇ ಇದ್ದರೂ ಕೂಡ ನಿಮ್ಮ ಆರೋಗ್ಯವೂ ಕೂಡ ಅಪರಿಪೂರ್ಣ. ಕೆಲವೊಂದು ಆಹಾರ ಪದಾರ್ಥವು ಇಷ್ಟೊಂದು ವಿಶೇಷತೆಯನ್ನು ಹೊಂದಿರುತ್ತದೆ ಅಂದ್ರೆ ಅವುಗಳ ಆರೋಗ್ಯಕರ ಲಾಭಗಳು ನಮಗೆ ತಿಳಿದಿರುವುದಿಲ್ಲ. ಅದರಲ್ಲಿ ಈ ಈರುಳ್ಳಿ ಕೂಡ ಒಂದಾಗಿದೆ. ನಿತ್ಯವೂ ನೀವು ಹಸಿ ಈರುಳ್ಳಿಯನ್ನು ತಿನ್ನುತ್ತಾ ಬಂದ್ರೆ ನೀವು ಲಕ್ಷಾಂತರ ಹಣವನ್ನು ಬಚಾವ್ ಮಾಡಬಹುದು. ಏಕೆಂದರೆ ಇದರಲ್ಲಿ ಹಲವಾರು ಪೋಷಕಾಂಶಗಳು ವಿಟಮಿನ್ ಗಳು ಜೀವಸತ್ವಗಳು ಈ ಎಲ್ಲ ಅಂಶವನ್ನು ಹೊಂದಿರುವ ಕಾರಣ ಈ ಈರುಳ್ಳಿಯನ್ನು ಸತತವಾಗಿ ನೀವು ಏಳು ದಿನಗಳವರೆಗೆ ಸೇವನೆ ಮಾಡಿದರೆ ನಿಮ್ಮ ಆರೋಗ್ಯದಲ್ಲಿ ಆಗುವ ಲಾಭವನ್ನು ನೀವು ಗಮನಿಸಬಹುದು.

ಈ ಈರುಳ್ಳಿಯನ್ನು ಕೆಲವರು ಹಸಿಯಾಗಿ ಸೇವಿಸುತ್ತಾರೆ ಇನ್ನೂ ಕೆಲವರು ಆಹಾರವಾಗಿ ಬಳಕೆ ಮಾಡಿ ತಿನ್ನುತ್ತಾರೆ ಇನ್ನೂ ಕೆಲವರು ಸಲಾಡ್ ರೂಪದಲ್ಲಿ ಸೇವನೆ ಮಾಡುತ್ತಾರೆ. ನೀವು ಹೇಗೆ ತಿಂದರೂ ಕೂಡ ನಿಮ್ಮ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮಗಳನ್ನೂ ಬೀರುವುದಿಲ್ಲ. ಹಾಗಾದರೆ ಇಂದಿನ ಲೇಖನದಲ್ಲಿ ನಾವು ಸತತವಾಗಿ ಏಳು ದಿನಗಳವರೆಗೆ ಹಸಿ ಈರುಳ್ಳಿಯನ್ನು ಸೇವನೆ ಮಾಡುವುದರಿಂದ ಆಗುವ ಅದ್ಭುತವಾದ ಲಾಭವನ್ನು ಎಳೆ ಎಳೆಯಾಗಿ ತಿಳಿಸಿ ಕೊಡುತ್ತೇವೆ ಬನ್ನಿ. ವೈದ್ಯರು ಹೇಳುತ್ತಾರೆ ಸಂಶೋಧನೆಗಾರರು ಹೇಳುತ್ತಾರೆ ಕೊಲೆಸ್ಟ್ರಾಲ್ ತುಂಬಿಕೊಂಡಿರುವವರು ಈ ಹಸಿ ಈರುಳ್ಳಿಯನ್ನು ಹಾಗೆ ಸೇವನೆ ಮಾಡಿದರೆ ಕೊಲೆಸ್ಟ್ರಾಲ್ ದೇಹದಲ್ಲಿ ಕ್ರಮೇಣವಾಗಿ ಕಡಿಮೆ ಆಗುತ್ತಾ ಬರುತ್ತದೆ ಅಂತ ತಿಳಿಸಿದ್ದಾರೆ. ಕ್ರೋಮಿಯಂ ಎಂಬ ಅಂಶವು ಈರುಳ್ಳಿಯಲ್ಲಿ ಅಧಿಕವಾಗಿ ಹೊಂದಿರುತ್ತದೆ. ಇದು ಸಕ್ಕರೆ ಕಾಯಿಲೆಯನ್ನು ನಿಯಂತ್ರಣಕ್ಕೆ ಬರುವಂತೆ ಮಾಡುತ್ತದೆ. ಜೊತೆಗೆ ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ಕೂಡ ಕಡಿಮೆ ಮಾಡುತ್ತದೆ. ಜೊತೆಗೆ ಸಕ್ಕರೆ ಕಾಯಿಲೆ ನಿಮ್ಮ ಹತ್ತಿರ ಸುಳಿಯದಂತೆ ಈ ಕ್ರೋಮಿಯಂ ಅಂಶ ನೋಡಿಕೊಳ್ಳುತ್ತದೆ. ಇನ್ನೂ ಮಧುಮೇಹ ರೋಗ ಇಲ್ಲದೆ ಇರುವವರು ಕೂಡ ಹಸಿ ಈರುಳ್ಳಿಯನ್ನು ಸೇವನೆ ಮಾಡುವುದರಿಂದ ಭವಿಷ್ಯದಲ್ಲಿ ನೀವು ಸಕ್ಕರೆ ಕಾಯಿಲೆಗೆ ತುತ್ತಾಗದಂತೆ ನೋಡಿಕೊಳ್ಳುತ್ತದೆ.

ಈರುಳ್ಳಿಯಲ್ಲಿ ಆಂಟಿ ಬಯೋಟಿಕ್, ಆಂಟಿ ಆಕ್ಸಿಡೆಂಟ್, ಆಂಟಿ ಮೈಕ್ರೋವಿಲ್ ಹೀಗೆ ಹಲವಾರು ವಿಭಿನ್ನ ಪೋಷಕಾಂಶವನ್ನು ಹೊಂದಿರುತ್ತದೆ ಈ ಈರುಳ್ಳಿ. ಈ ಎಲ್ಲ ಅಂಶಗಳು ಶ್ವಾಸಕೋಶಗಳು ಹಾನಿಗೊಳಗಾಗದಂತೆ ತಡೆಯುತ್ತದೆ. ಜೊತೆಗೆ ಇದರಲ್ಲಿ ವಿಟಮಿನ್ ಬಿ, ಬೀ6 ವಿಟಮಿನ್ ಕೆ, ವಿಟಮಿನ್ ಸಿ, ಪೋಲಿಕ್ ಆಸಿಡ್, ಕ್ಯಾಲ್ಸಿಯಂ ಹೇರಳವಾಗಿ ಸಮೃದ್ಧವಾಗಿ ಅಡಗಿದೆ. ಇದು ನೆಗಡಿ ಶೀತ ಕೆಮ್ಮು ಕೂಡ ಕಡಿಮೆ ಮಾಡುವಲ್ಲಿ ಪ್ರಮುಖವಾಗಿ ಸಹಕಾರಿ ಆಗಿದೆ. ಅದಕ್ಕಾಗಿ ನೀವು ಸತತವಾಗಿ ನಿತ್ಯವೂ ನಿಯಮಿತವಾಗಿ ಈ ಹಸಿ ಈರುಳ್ಳಿಯನ್ನು ಸೇವನೆ ಮಾಡಬೇಕು. ಇದು ಹೃದಯದ ಆರೋಗ್ಯವನ್ನು ಕೂಡ ಕಾಪಾಡುತ್ತದೆ. ಜೀರ್ಣಕ್ರಿಯೆಗೆ ತುಂಬಾನೇ ಸಹಾಯ ಮಾಡುತ್ತದೆ. ಆದ್ದರಿಂದ ಹಸಿ ಈರುಳ್ಳಿಯನ್ನು ಸೇವನೆ ಮಾಡಿ ಉತ್ತಮವಾದ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಿ. ಶುಭದಿನ.

Leave a Reply

Your email address will not be published. Required fields are marked *