ನಮಸ್ತೆ ಪ್ರಿಯ ಓದುಗರೇ, ನಿದ್ದೆ ಮಾಡುವುದು ಅಂದ್ರೆ ಯಾರಿಗೆ ತಾನೆ ಇಷ್ಟ ಆಗುವುದಿಲ್ಲ ಹೇಳಿ? ನಿದ್ರೆ ಮಾಡುವುದು ಅಂದ್ರೆ ಎಲ್ಲರಿಗು ಪಂಚಪ್ರಾಣ. ಕಷ್ಟ ಪಟ್ಟು ದುಡಿದ ವ್ಯಕ್ತಿ ತುಂಬಿದ ಸಂತೆಯಲ್ಲಿ ಕೂಡ ನಿದ್ದೆ ಮಾಡಬಲ್ಲನು. ನಿಜವಾದ ನಿದ್ರೆ ಅಂದ್ರೆ ಮನುಷ್ಯನು ಕಷ್ಟ ಪಟ್ಟು ದುಡಿದು ರಾತ್ರಿಗೆ ಬಂದು ಮಲಗಿದ ತಕ್ಷಣವೇ ನಿದ್ದೆ ಬರುತ್ತದೇವೋ ಅವನು ನಿಜವಾದ ಶ್ರಮಜೀವಿ. ಆದ್ರೆ ಶ್ರೀಮಂತರನ್ನು ಉದಾಹರಣೆಗೆ ತೆಗೆದುಕೊಳ್ಳಿ ಅವರಿಗೆ ಬಂಗಾರದ ಮಂಚ ಮಾಡಿ ಕೊಟ್ಟರು ನಿದ್ದೆ ಬರುವುದಿಲ್ಲ ಕಾರಣ ಒತ್ತಡ ಜೀವನದಲ್ಲಿ ಬೇಸರ ಕೆಲಸದ ಒತ್ತಡ ಹೆಂಡತಿಯ ಕಾಟ ಹೀಗೆ ಒಬ್ಬ ಮನುಷ್ಯನಿಗೆ ನಿದ್ದೆ ಬರದೆ ಇರುವುದಕ್ಕೆ ಕಾರಣಗಳು ಹಲವಾರು ಇವೆ. ಆದ್ರೆ ಮನುಷ್ಯನಿಗೆ ನಿದ್ದೆ ಅನ್ನುವುದು ಸರಿಯಾಗಿ ಮಾಡಲಿಲ್ಲ ಅಂದ್ರೆ ಆತನು ತುಂಬಾನೇ ಆರೋಗ್ಯದ ತೊಂದರೆಯನ್ನು ಅನುಭವಿಸಬೇಕಾಗುತ್ತದೆ.
ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಎಂಬ ಗಾದೆ ಮಾತು ಎಲ್ಲರಿಗೂ ಗೊತ್ತೇ ಇದೆ ಅಲ್ವಾ. ಮನುಷ್ಯನಿಗೆ ಚಿಂತೆಗಳು ಒತ್ತಡ ಟೆನ್ಷನ್ ಜಾಸ್ತಿಯಾದರೆ ಆತನ ಮನಸ್ಸಿನ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಮಾನಸಿಕ ನೆಮ್ಮದಿಯ ಜೊತೆಗೆ ದೈಹಿಕ ನೆಮ್ಮದಿ ಕೂಡ ಹಾಳಾಗುತ್ತದೆ. ಹೀಗಾಗಿ ನಾವು ಶ್ರೀಮಂತರಿಗೆ ಹೋಲಿಕೆ ಮಾಡಿದರೆ ಬಡವರೇ ಎಷ್ಟೋ ಮೇಲು ಅಂತ ಅನ್ನಿಸಿ ಬಿಡುತ್ತದೆ. ಏಕೆಂದರೆ ಅವರು ಆ ದಿನ ಎಷ್ಟು ಬೇಕು ಅಷ್ಟು ದುಡಿದು ಚೆನ್ನಾಗಿ ಊಟವನ್ನು ಮಾಡಿ ದೇಹವನ್ನು ಗಟ್ಟಿ ಮುಟ್ಟಾಗಿ ಇಟ್ಟುಕೊಂಡು ನೆಮ್ಮದಿಯ ಜೀವನ ಮಾಡುತ್ತಿದ್ದಾರೆ.ಅಲ್ವಾ ಆದ್ರೆ ಶ್ರೀಮಂತರಿಗೇ ಅವರ ಹತ್ತಿರ ಎಷ್ಟು ದುಡ್ಡು ಇದ್ದರೂ ಕೂಡ ಸಾಲದು. ಅವರಲ್ಲಿ ಹೇಗೆ ಹಣ ಸಂಪಾದನೆ ಹೆಚ್ಚುತ್ತದೆ ಹಾಗೆ ಅವರ ನೆಮ್ಮದಿ ಮಾನಸಿಕ ಸಮತೋಲನ ಏರುಪೇರು ಆಗುತ್ತಿರುತ್ತದೆ. ಆದ್ದರಿಂದ ನಾವು ಚೆನ್ನಾಗಿ ನಿದ್ದೆ ಮಾಡಿ ನಮ್ಮ ಆರೋಗ್ಯವನ್ನು ನಾವು ಕಾಪಾಡಿ ಕೊಳ್ಳುವುದು ನಮ್ಮ ಕೈಯಲ್ಲಿ ಇದೆ ಅನ್ನುವುದು ನಾವು ಮರೆಯಬಾರದು. ಹಾಗಾದ್ರೆ ಬನ್ನಿ ಸ್ನೇಹಿತರೇ ಇಂದಿನ ಲೇಖನದಲ್ಲಿ ಒಂದು ಅದ್ಭುತವಾದ ಮನೆಮದ್ದು ತಿಳಿಸಿ ಕೊಡುತ್ತೇವೆ ಬನ್ನಿ. ಈ ಉಪಯುಕ್ತ ಮಾಹಿತಿಯನ್ನು ನೀವು ಓದುವುದಲ್ಲದೆ ಮತ್ತೆ ನಿಮ್ಮ ಸ್ನೇಹಿತರಿಗೇ ಶೇರ ಮಾಡಿ. ನಿದ್ರಾ ಹೀನತೆ ಸಮಸ್ಯೆಗೆ ಮನೆಮದ್ದು ಬನ್ನಿ ಮನೆಮದ್ದು ಶುರು ಮಾಡೋಣ.
ಮೊದಲಿಗೆ ಗಸಗಸೆ ತೆಗೆದುಕೊಳ್ಳಬೇಕು. ಇದನ್ನು ಚೆನ್ನಾಗಿ ತವೆಯ ಮೇಲೆ ಹುರಿದು ಕೊಳ್ಳಿ. ನಂತ್ರ 5-6 ಬಾದಾಮಿ ತೆಗೆದುಕೊಂಡು ಚೆನ್ನಾಗಿ ಕುಟ್ಟಿಕೊಳ್ಳಿ ನಂತ್ರ ಒಂದು ಮಿಕ್ಸಿ ಜಾರಿಗೆ ತೆಗೆದುಕೊಂಡು ಹುರಿದ ಗಸಗಸೆ ಹಾಕಿಕೊಳ್ಳಿ ಅದರ ಜೊತೆಗೆ ಬಾದಾಮಿ ಕೂಡ ಹಾಕಿಕೊಳ್ಳಿ ಆಮೇಲೆ ರುಚಿಗೆ ನೀವು ಕೆಂಪು ಸಕ್ಕರೆಯನ್ನು ಬಳಕೆ ಮಾಡಿ. ಆಮೇಲೆ ಒಂದು ಏಲಕ್ಕಿ ಹಾಕಿ ಈ ಎಲ್ಲ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ ಪುಡಿಯಾಗಿ ಸಿದ್ದ ಮಾಡಿಕೊಳ್ಳಿ. ನಂತ್ರ ಒಂದು ಲೋಟ ತೆಗೆದುಕೊಳ್ಳಿ ಅದರಲ್ಲಿ ಎರಡು ಚಮಚ ಈ ಪುಡಿಯನ್ನು ಹಾಕಿಕೊಳ್ಳಿ. ನಂತ್ರ ಒಂದು ಲೋಟ ಬಿಸಿ ಹಾಲನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯಿರಿ. ನಿತ್ಯವೂ ಊಟವಾದ ಮೇಲೆ ಮಲಗುವ ಮುನ್ನ ಹೀಗೆ ಮಾಡಿ ಕುಡಿಯಿರಿ. ಇದರಿಂದ ನಿಮ್ಮ ನಿದ್ರಾಹೀನತೆ ಸಮಸ್ಯೆ ಮಂಗಮಾಯ ಆಗುತ್ತದೆ. ಈ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಶುಭದಿನ.