ಈ ಚಹಗಳನ್ನು ಕುಡಿದರೆ ಅದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸುಧಾರಿಸಬಹುದು. ವಿಶ್ವದಲ್ಲಿ ಅತೀ ಹೆಚ್ಚು ಜನರನ್ನು ಕಾಡುತ್ತಿರುವ ಸಮಸ್ಯೆ ಎಂದರೆ ಅದು ಮಧುಮೇಹ. ಇಂದು ಮಧುಮೇಹಿಗಳು ಇಲ್ಲದ ಮನೆ ಇದ್ದರೆ ಅದು ದೊಡ್ಡ ಪುಣ್ಯ ಎಂದು ಹೇಳಬಹುದು .ಮಧುಮೇಹ ಬಂದರೆ ಅದರ ಬಳಿಕ ಹಲವಾರು ಬಗೆಯ ಅನಾರಗ್ಯಗಳು ಒಂದರ ಬಳಿಕ ಮತ್ತೊಂದು ಮುತ್ತಿಕೊಳ್ಳುವುದು. ಮಧುಮೇಹದಿಂದ ಹೃದಯದ ಕಾಯಿಲೆ ,ನರಗಳಿಗೆ ಹಾನಿ,ಕಿಡ್ನಿ ಸಮಸ್ಯೆ ಇತ್ಯಾದಿ ಸಮಸ್ಯೆಗಳು ಕಾಡಬಹುದು. ಇದು ಪ್ರತಿರೋಧಕ ಶಕ್ತಿಯನ್ನು ದುರ್ಬಲ ಗೊಳಿಸುತ್ತೆ ಮತ್ತು ಸೋಂಕು ಬರುವಂತೆ ಮಾಡುತ್ತದೆ. ಮಧುಮೇಹದಿಂದ ಆಗುವ ಸಮಸ್ಯೆಗಳನ್ನು ಕಡಿಮೆ ಮಾಡಲು ಅನೇಕ ಉಪಾಯಗಳಿವೆ. ಇದನ್ನು ಜೀವನ ಶೈಲಿಯ ಬದಲಾವಣೆಯ ಜೊತೆಗೆ ಸರಿಯಾಗಿ ನಿಭಾಯಿಸಿಕೊಂಡು ಹೋದರೆ ಒಳ್ಳೆಯದು .ಕೆಲವೊಂದು ಗಿಡಮೂಲಿಕೆ ಚಹಾ ಮಧುಮೇಹ ನಿವಾರಿಸಲು ಬಹು ಉಪಕಾರಿ.
1 # ಕ್ಯಮೋಮೈಲ್ ಟೀ: ಇದು ಯುರೋಪ್ ನಲ್ಲಿ ಕಂಡು ಬರುವಂತಹ ಒಂದು ರೀತಿಯ ಸಾಧ್ಯವಾಗಿದ್ದು ,ಇದರಲ್ಲಿ ಹಲವಾರು ಬಗೆಯ ಆರೋಗ್ಯ ಗುಣಗಳು ಇವೆ. ಕ್ಯಮೋಮೈಲ್ ಟೀ ಕುಡಿದರೆ ಅದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಬಹುದು. ಇದು ಮೇದೋಜೀರಕ ಗ್ರಂಥಿಗೆ ಆಗುವ ಹಾನಿಗಳನ್ನು ತಡೆಯುವುದು. ಇದು ನಿದ್ರೆಗೆ ಸಹಕಾರಿ ಹಾಗೂ ಪ್ರತಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. #2 ಶುಂಠಿ ಟೀ: ಶುಂಠಿ ಅನ್ನು ನಾವೆಲ್ಲರೂ ಅಡುಗೆಯಲ್ಲಿ ಬಳಸುತ್ತೇವೆ. ಇದರಲ್ಲಿ ಕೂಡ ಹಲವಾರು ಔಷದೀಯ ಗುಣಗಳಿವೆ. ಶುಂಠಿ ಹುಡಿಯ ಸಪ್ಲಿಮೆಂಟ್ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದಿನಕ್ಕೆ ೪ ಗ್ರಾಂ ನಷ್ಟು ಶುಂಠಿ ಅನ್ನು ಸೇವನೆ ಮಾಡಿದರೆ ಅದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕುಗ್ಗಿಸತ್ತದೆ ಮತ್ತು ಇನ್ಸುಲಿನ್ ಪ್ರತಿರೋಧಕವನ್ನು ಸಮತೋಲನದಲ್ಲಿ ಇಡುತ್ತದೆ.
# 3 ದಾಸವಾಳ ಟೀ: ದಾಸವಾಳದಹೂವಿನಲ್ಲಿ ಇರುವಂತಹ ಔಷಧೀಯ ಗುಣಗಳ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ. ಇದರಲ್ಲಿ ವೈರಲ್ ವಿರೋಧಿ ಗುಣವಿದೆ ಎದು ಆರೋಗ್ಯಕ್ಕೆ ಹಲವಾರು ಲಾಭಗಳನ್ನು ನೀಡುತ್ತದೆ. ದಾಸವಾಳ ಟೀ ಕುಡಿದರೆ ಅದರಿಂದ ಟೈಪ್ ಡಯಾಬಿಟೀಸ್ ಅನ್ನು ತಡೆಯಬಹುದು. ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಸುಧಾರಿಸುತ್ತದೆ. ಅಧಿಕ ರಕ್ತದೊತ್ತಡಕ್ಕೆ ಇದು ಒಂದು ಉತ್ತಮ ಚಹಾ 4 ಗ್ರೀನ್ ಟೀ: ಗ್ರೀನ್ ಟೀ ಮತ್ತೊಂದು ಆರೋಗ್ಯಕಾರಿ ಪಾನಿಯವಾಗಿದೆ. ಇದರಲ್ಲಿ ಆಂಟಿಆಕ್ಸಿಡೆಂಟ್ ಆಂಶಗಳಿದ್ದು, ಇದು ಆರೋಗ್ಯಕ್ಕೆ ಲಾಭಕಾರಿ. ಗ್ರೀನ್ ಟೀಯನ್ನು ನಿತ್ಯವೂ ನಿಯಮಿತವಾಗಿ ಕುಡಿದರೆ ಅದರಿಂದ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಕುಗ್ಗುವುದು. ಇದು ಟೈಪ್ -2 ಡಯಾಬಿಟೀಸ್ ತಡೆಯಲು ಉಪಯೋಗಕಾರಿ. # 5 ಊಲಾoಗ್ ಚಹಾ: ಇದು ಕೂಡ ಗ್ರೀನ್ ಟೀ, ಬ್ಲಾಕ್ ಟೀ ಜಾತಿಗೆ ಸೇರಿರುವುದು. ಈ ಚಹಾವನ್ನು ಅದರ ಎಳೆಗಳ ಉತ್ಕರ್ಷೊಳಿಸಿ ತಯಾರಿಸಲಾಗುವುದು. ಈ ಚಹಾ ಕುಡಿದರೆ ಟೈಪ್ -2 ಮಧುಮೇಹದ ಅಪಾಯವನ್ನು ತಡೆಯಬಹುದು ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟವು ತಾಗ್ಗುವುದು ಈ ಗಿಡಮೂಲಿಕೆ ಚಹಾ ಸೇವನೆಯಿಂದ ತೂಕವನ್ನು ನಿಯಂತ್ರಿಸಿಕೊಳ್ಳಬಹುದು .ಅದೇ ರೀತಿಯಾಗಿ ಹೃದಯದ ಕಾಯಿಲೆಯ ಅಪಾಯವನ್ನು ತಡೆಯಬಹುದು ಹಾಗೂ ಮೆದುಳಿನ ಆರೋಗ್ಯವನ್ನು ಸುಧಾರಣೆ ಮಾಡುವುದು . ಈ ಚಹದಿಂದ ಹೃದಯ,ಮೆದುಳು, ಮೂಳೆ ಹಾಗೂ ಹಲ್ಲಿನ ತೊಂದರೆಗಳನ್ನು ನಿವಾರಿಸಿಕಳ್ಳಬಹುದು.