WhatsApp Group Join Now

ನಮಸ್ತೆ ಪ್ರಿಯ ಓದುಗರೇ, ಡ್ರೈ ಫ್ರೂಟ್ಸ್ ಎಂದರೆ ಎಲ್ಲರಿಗೂ ಅಚ್ಚು ಮೆಚ್ಚು. ಇವುಗಳಲ್ಲಿ ವಿಶೇಷವಾದ ಪೋಷಕಾಂಶಗಳನ್ನು ಹೊಂದಿರುವುದರಿಂದ ವೈದ್ಯರೂ ಕೂಡ ಶಿಫಾರಸ್ಸು ಮಾಡುತ್ತಾರೆ. ಬಹುತೇಕರು ತಮ್ಮ ತೂಕವನ್ನು ಇಳಿಸಿಕೊಳ್ಳಲು ಈ ಡ್ರೈ ಫ್ರೂಟ್ಸ್ ನ್ನ ತಿನ್ನುತ್ತಾರೆ. ಅಸಲಿಗೆ ಡ್ರೈ ಫ್ರೂಟ್ಸ್ ತಿನ್ನುವುದರಿಂದ ದೇಹದ ತೂಕ ಇಲಿಯು ವುದೇ ? ಡ್ರೈ ಫ್ರೂಟ್ಸ್ ಗಳಲ್ಲಿ ಕ್ಯಾಲೋರಿಗಳು ಮತ್ತು ಸಕ್ಕರೆಯ ಪ್ರಮಾಣ ಸಮ್ಮಣವಾಗಿರುತ್ತವೆ. ಸಹಜವಾಗಿಯೇ ಡ್ರೈ ಫ್ರೂಟ್ಸ್ ಗಳಲ್ಲಿ ೩೮ ರಿಂದ ೬೬% ಸಕ್ಕರೆಯ ಅಂಶವನ್ನು ಹೊಂದಿರುತ್ತದೆ. ಕೆಲವರಲ್ಲಿ ಡ್ರೈ ಫ್ರೂಟ್ಸ್ ಗಳ ಸೇವನೆಯ ಬಗ್ಗೆ ಗೊಂದಲವಿದೆ. ಡ್ರೈ ಫ್ರೂಟ್ಸ್ ಗಳನ್ನು ತಿಂದರೆ ತೂಕ ಇಳಿಕೆಯಾಗುತ್ತದೆಯೇ ಅಥವಾ ತೂಕ ಹೆಚ್ಚಾಗುತ್ತದೆಯೇ? ಇದರ ಸಂಪೂರ್ಣ ಮಾಹಿತಿ ನಿಮ್ಮ ಮುಂದಿದೆ ಓದಿ.

ವಾಸ್ತವವಾಗಿ, ಡ್ರೈ ಫ್ರೂಟ್ಸ್ ಗಳು ನಿಯಮಿತವಾಗಿ ಸೇವಿಸುವುದರಿಂದ ತೂಕವನ್ನು ಪರಿಣಾಮಕಾರಿಯಾಗಿ ಇಳಿಸಿಕೊಳ್ಳಬಹುದು. ನೀವು ಡ್ರೈ ಫ್ರೂಟ್ಸ್ ಗಳನ್ನ ಎಷ್ಟು ಪ್ರಮಾಣದಲ್ಲಿ ಸೇವಿಸುತ್ತೀರ ಎಂಬುದರ ಮೇಲೆ ನಿಮ್ಮ ತೂಕ ಇಳಿಕೆ ಅಥವಾ ತೂಕ ಹೆಚ್ಚಳ ನಿರ್ಧಾರವಾಗುತ್ತದೆ. ಪ್ರತಿನಿತ್ಯ ಅಗತ್ಯಕ್ಕಿಂತ ಹೆಚ್ಚಾಗಿ ಡ್ರೈ ಫ್ರೂಟ್ಸ್ ಗಳನ್ನು ಸೇವನೆ ಮಾಡಿದಾಗ, ನೈಸರ್ಗಿಕವಾಗಿ ಡ್ರೈ ಫ್ರೂಟ್ಸ್ ಗಳಲ್ಲಿನ ಸಕ್ಕರೆಯ ಅಂಶ ತೂಕ ಹೆಚ್ಚುವಂತೆ ಮಾಡುತ್ತದೆ. ಆದರೆ ಡ್ರೈ ಫ್ರೂಟ್ಸ್ ಗಳಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು ಅದು ಹೇಗೆ ತಿಳಿಯೋಣ.

ತಾಜಾ ಹಣ್ಣುಗಳಿಗೆ ಹೋಲಿಸಿದರೆ ಒಣ ಹಣ್ಣುಗಳು ಅತಿ ಹೆಚ್ಚು ಕ್ಯಾಲೊರಿಗಳನ್ನು ಹೊಂದಿವೆ. ಒಂದು ವೇಳೆ ತೂಕ ಜಾಸ್ತಿ ಮಾಡಿಕೊಳ್ಳಬೇಕು ಅಂಡುಕೊಂಡವರು ಅತಿ ಹೆಚ್ಚು ಡ್ರೈ ಫ್ರೂಟ್ಸ್ ತಿನ್ನಬಹುದು. ಇನ್ನು ತೂಕ ಇಳಿಸಲು ಬಯಸುವವರು ನಿಯಮಿತವಾಗಿ ಡ್ರೈ ಫ್ರೂಟ್ಸ್ ತಿನ್ನುವುದು ಉತ್ತಮ. ನೆನಪಿರಲಿ, ಅಗತ್ಯಕ್ಕಿಂತ ಹೆಚ್ಚಾಗಿ ಒಣ ಹಣ್ಣುಗಳನ್ನು ತಿಂದರೆ ಹೆಚ್ಚು ಕ್ಯಾಲೋರಿ ಮೈಗೆ ಸೇರಿ ತೂಕ ಹೆಚ್ಚುತ್ತದೆ. ಸಮೀಕ್ಷೆ ಏನು ಹೇಳುತ್ತದೆ ಗೊತ್ತಾ? ಕೆಲವು ಸಮೀಕ್ಷೆ ಪ್ರಕಾರ, ನಿಮ್ಮ ತೂಕ ನಷ್ಟಕ್ಕೆ ಒಣ ಹಣ್ಣುಗಳು ಸೇವಿಸಿದರೆ ಯಾವುದೇ ರೀತಯಿಂದಲೂ ತೂಕವು ಹೆಚ್ಚಾಗುವುದಿಲ್ಲ. ಬದಲಾಗಿ ತೂಕ ನಷ್ಟವಾಗಿ, ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತವೆ ಎಂದು ಹೇಳಲಾಗುತ್ತದೆ.ಶುಭದಿನ.

WhatsApp Group Join Now

Leave a Reply

Your email address will not be published. Required fields are marked *