ನಮಸ್ತೆ ಪ್ರಿಯ ಓದುಗರೇ, ಆರೋಗ್ಯ ಭಾಗ್ಯ ಹೆಚ್ಚಿಸಿಕೊಳ್ಳಲು ವಾಸ್ತುವಿನಲ್ಲಿ ಕೆಲವು ಸರಳ ಸಲಹೆಗಳಿವೆ. ಮನೆಯ ಎಲ್ಲಾ ಸದಸ್ಯರ ಮಾನಸಿಕ ಮತ್ತು ದೈಹಿಕ ಆರೋಗ್ಯ ಸದಾ ಚೈತನ್ಯದಿಂದ ಕೂಡಿರಲು ಮನೆಯ ವಾಸ್ತು ಹೇಗಿರಬೇಕು ಗೊತ್ತಾ?! ಈ ಕರೋನ ಎಂಬ ಕಾಯಿಲೆ ಜಗತ್ತನ್ನೇ ನಡುಗಿಸಿದ ಮೇಲಂತೂ ‘ಆರೋಗ್ಯವೇ ಭಾಗ್ಯ’ ಎಂಬ ಮಾತು ಎಷ್ಟು ಸತ್ಯ ಎಂಬುದು ಪ್ರತಿಯೊಬ್ಬರಿಗೂ ಅರ್ಥವಾಗಿದೆ. ಇಡೀ ದಿನ ಕಷ್ಟ ಪಟ್ಟು ಕೆಲಸ ಮಾಡಿದ ಬಳಿಕ ಮನೆಯಲ್ಲಿ ತಲೆ ಇಟ್ಟು ಮಲಗಿದಾಗ ನೆಮ್ಮದಿಯೇ ಬೇಕಾಗಿರುವುದು. ಆ ನೆಮ್ಮದಿಗೆ ಆರೋಗ್ಯ ಬಹು ಮುಖ್ಯ. ಸಾಮಾನ್ಯವಾಗಿ ಮನೆ ಕಟ್ಟುವಾಗ ವಾಸ್ತು ಶಾಸ್ತ್ರ ದ ಸಲಹೆ ಪಡೆದಿದ್ದರೆ ಮನೆಯಲ್ಲಿ ಪಾಸಿಟಿವ್ ಎನರ್ಜಿ ತುಂಬಿ ಆರೋಗ್ಯ, ನೆಮ್ಮದಿ ತುಂಬಿರಲು ಬೇಕಾದಂತೆ ಗೈಡ್ ಮಾಡಿರುತ್ತಾರೆ. ವಾಸ್ತುವಿನ ಈ ಸಲಹೆಗಳು ಮನೆಯ ಸದಸ್ಯರನ್ನು ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯದಿಂದ ಇಡಲು ಸಹಕರಿಸುತ್ತವೆ.
೧.ಈಶಾನ್ಯ ದಿಕ್ಕಿನಲ್ಲಿ ಪ್ರತಿದಿನ ದೀಪ ಹಚ್ಚುವುದುದರಿಂದ ಆರೋಗ್ಯ ಹೆಚ್ಚುತ್ತದೆ. ೨.ನಲ್ಲಿಗಳು ಸೋರುತ್ತಿದ್ದರೆ ಅದು ನಕಾರಾತ್ಮಕತೆ ತೋರುತ್ತದೆ. ಆರೋಗ್ಯದಲ್ಲಿ ಇಳಿಕೆಯಾಗುತ್ತಿರುವ ಸೂಚನೆ ಅದು. ಹಾಗಾಗಿ ಮನೆಯಲ್ಲಿ ಯಾವುದೇ ನಲ್ಲಿಗಳೂ ಸೊರದಂತೆ ನೋಡಿಕೊಳ್ಳಿ. ೩.ಮೆಟ್ಟಿಲಿನ ಕೆಳಗಿರುವ ಜಾಗದಲ್ಲಿ ಶೌಚಾಲಯ ನಿರ್ಮಿಸುವುದು ಅಥವಾ ಸ್ಟೋರೇಜ್ ಆಗಿಯೋ, ಕಿಚನ್ ಆಗಿಯೂ ಬಳಸಬಾರದು. ಇದರಿಂದ ನರಸಂಬಂಧಿ ಕಾಯಿಲೆಗಳು ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಕಾಡುತ್ತವೆ. ೪. ಓದುವಾಗ ಅಥವಾ ಕೆಲಸ ಮಾಡುವಾಗ ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಿ. ಇದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ. ೫.ಮನೆಯ ಎದುರು ತುಳಸಿ ಗಿಡ ನೀಡುವುದರಿಂದ ಮನೆಯೊಳಗೆ ಬರುವ ಗಾಳಿ ಸ್ವಚ್ಛವಾಗುತ್ತದೆ. ರಬ್ಬರ್ ಪ್ಲಾಂಟ್,ಕ್ಯಾಕ್ಟಸ್, ಬೋನ್ಸಾಯ್ ತರದ ಗಿಡಗಳು ಮನೆಗೆ ಒತ್ತಡ ಹಾಗೂ ಅನಾರೋಗ್ಯವನ್ನು ತರುತ್ತವೆ. ಹಾಗಾಗಿ, ಅವುಗಳನ್ನು ಮನೆಯಲ್ಲಿಡಬೇಡಿ. ೬.ಮನೆಯ ಈಶಾನ್ಯ ದಿಕ್ಕಿನಲ್ಲಿ ಟಾಯ್ಲೆಟ್ ಅಥವಾ ಮೆಟ್ಟಿಲುಗಳಿರಬಾರದು. ಅವುಗಳು ಆರೋಗ್ಯ ಸಂಬಂಧಿ ಕಾಯಿಲೆಗಳನ್ನು ತರುತ್ತವೆ.
ಮಲಗುವ ಕೋಣೆ ಹೀಗಿರಲಿ – ೧. ನೈಋತ್ಯ ದಿಕ್ಕಿನಲ್ಲಿ ಮಾಸ್ಟರ್ ಬೆಡ್ರೂಮ್ ಇರುವುದರಿಂದ ದೈಹಿಕ ಹಾಗೂ ಮಾನಸಿಕ ಸ್ಥಿರತೆ ತಂದುಕೊಡುತ್ತದೆ. ಈಶಾನ್ಯ ದಿಕ್ಕಿನಲ್ಲಿ ಬೆಡ್ರೂಮ್ ಇರಕೂಡದು. ಮಲಗುವಾಗ ತಲೆಯನ್ನು ದಕ್ಷಿಣ ದಿಕ್ಕಿನಲ್ಲಿ ಇಟ್ಟು ಮಲಗಿದರೆ ಉತ್ತಮ ನಿದ್ರೆ ಮತ್ತು ಆರೋಗ್ಯ ದೊರೆಯುವುದು. ೨.ಗರ್ಭಿಣಿ ಸ್ತ್ರೀಯರು ಈಶಾನ್ಯ ದಿಕ್ಕಿನಲ್ಲಿ ತಲೆಯಿಟ್ಟು ಮಲಗಲೇ ಬಾರದು. ಅದರಿಂದ ಅಬಾರ್ಷನ್ ಆಗುವ ಸಾಧ್ಯತೆಗಳು ಹೆಚ್ಚು. ೩.ಸ್ಟೋರೇಜ್ ಇರುವ ಮಂಚ, ಮೆದುಳು ಹಾಗೂ ಹೃದಯ ಸಂಬಂಧಿ ಕಾಯಿಲೆಗಳನ್ನು ತರುತ್ತವೆ. ೪.ಕಣ್ಣಿಗೆ ರಾಚುವ ಲೈಟ್ ಕೆಳಗೆ ಮಲಗುವುದನ್ನು ಬಿಡಿ. ೫.ಫೋನ್ ಹಾಗೂ ಇತರೆ ಇಲೆಕ್ಟ್ರಾನಿಕ್ ವಸ್ತುಗಳನ್ನು ಹಾಸಿಗೆಯಿಂದ ದೂರವಿಡಿ. ಅಡುಗೆ ಕೋಣೆ – ೧.ನೈಋತ್ಯ ದಿಕ್ಕು ಅಡುಗೆ ಮನೆಗೆ ಸರಿಯಾದುದು. ೨.ಪೂರ್ವ ದಿಕ್ಕಿನಲ್ಲಿ ಅಡುಗೆ ಮಾಡುವುದು, ಊಟ ಮಾಡುವುದು ಉತ್ತಮ ಜೀರ್ಣ ಕ್ರಿಯೆಗೆ ಒಳ್ಳೆಯದು.ನಾವು ಇಂದಿನ ಲೇಖನದಲ್ಲಿ ತಿಳಿಸುವ ಈ ಮೂಲಂಗಿಯನ್ನು ಸೇವಿಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ. ಶುಭದಿನ.