ನಮ್ಮ ಅನುದಿನದ ಅಡುಗೆಯಲ್ಲಿ ಹಲವುಬಗೆಯ ಸೊಪ್ಪುಗಳನ್ನು ಪಲ್ಯದ ರೂಪದಲ್ಲಿ ಇಲ್ಲವೇ ಸಾರಿನ ರೂಪದಲ್ಲಿ ನಾವು ಅಹರದೊಡನೆ ಸೇವಿಸುತ್ತಲೇ ಇರುತ್ತೇವೆ. ಹೀಗೆ ದಿನನಿತ್ಯ ಸೇವಿಸುವ ಈ ಸೊಪ್ಪುಗಳಲ್ಲಿ ಏನೆಲ್ಲಾ ಪೌಷ್ಟಿಕಾಂಶಗಳು ಅಡಗಿವೆ. ಹಾಗೂ ಈ ಸೊಪ್ಪು ಗಳಿಗೆ ಯಾವ ಯಾವ ವ್ಯಾಧಿಗಳನ್ನು ದೂರ ಮಾಡುವ ಗುಣಗಳಿವೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ! ಆದರೆ ಅದು ಹೇಗೆ? ಕೂದಲು ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ತನಗೂ ಉದ್ದವಾದ, ನೀಳವಾದ, ದಪ್ಪನೆಯ ಕಪ್ಪು ಕೂದಲು ಬೇಕು ಎನ್ನುವುದು ಪ್ರತಿ ಹುಡುಗಿಯ ಬಯಕೆ. ಹೀಗಿರುವಾಗ ಕೂದಲು ಉದುರಲು ಶುರುವಾದರೆ ಅದಕ್ಕಿಂತ ಚಿಂತಾಜನಕ ಸ್ಥಿತಿ ಇನ್ನೊಂದಿಲ್ಲ. ಅಲ್ಲಿ ಇಲ್ಲಿ ನೆಲದ ಮೇಲೆ ಬೀಳುವ ಕೂದಲುಗಳನ್ನು ನೋಡಿದರೆ ಏನೋ ಯೋಚನೆ ಶುರು ಆಗುತ್ತದೆ.
ಕೂದಲು ಉದುರಲು ಸಾಕಷ್ಟು ಕಾರಣಗಳು ಇರಬಹುದು. ಕೆಲಸದ ಸ್ಟ್ರೆಸ್, ಪ್ರಧೂಷಣೆ, ನಿದ್ದೆಗೆದುವುದು, ಅತೀ ಯೋಚನೆ, ಹಾರ್ಮೋನುಗಳ ವೈಪರೀತ್ಯ, ಗಡುಸು ನೀರಿನ ಬಳಕೆ, ರಾಸಾಯನಿಕ ಶಾಂಪೂಗಳು, ಆಹಾರದಲ್ಲಿನ ಪೋಷಕಾಂಶಗಳ ಕೊರತೆ ಹೀಗೆ ಈ ಎಲ್ಲಾ ಕಾರಣಗಳಿಂದ ಕೂದಲು ಉದುರುತ್ತದೆ. ತಲೆ ಕೂದಲು ಉದ್ದ ಬೆಳೆಯಲು ಹಾಗೂ ಹೊಳಪಿನಿಂದ ಕೂಡಿರಲು ವಾರಕ್ಕೆರೆಡು ಬಾರಿ ಮೆಂತ್ಯದ ಸೊಪ್ಪನ್ನು ಎಳೇನೀರಿನಲ್ಲಿ ಅರೆದು ಅದನ್ನು ಇಡೀ ತಲೆ ಕೂದಲಿಗೆ ಚೆನ್ನಾಗಿ ಹಚ್ಚಿಕೊಂಡು ಎರೆಡು ತಾಸಿನ ನಂತರ ಸ್ನಾನ ಮಾಡಬೇಕು. ಹೀಗೆ ಮಾಡುತ್ತಾ ಬರುವುದರಿಂದ ಉದುರುವುದೂ ನಿಲ್ಲುವುದು. ಒಂದು ವೇಳೆ ಮಂತ್ಯದ ತಾಜಾ ಸೊಪ್ಪು ಸಿಕ್ಕಾದಿರುವಾಗ ಮೆಂತ್ಯದ ಕಾಳುಗಳನ್ನು ಕೊಬ್ಬರಿ ಎಣ್ಣೆಯಲ್ಲಿ ನೆನೆಹಾಕಿ ದಿನವೂ ತಲೆಕೂದಲಿಗೆ ಹಚ್ಚುತ್ತಾ ಬರುವುದರಿಂದಲೂ ಇದೇ ಫಲ ದೊರೆಯುವುದು! ಯಾವುದೇ ಸೊಪ್ಪಿನ ಪೌಷ್ಟಿಕಾಂಶಗಳು ನಷ್ಟವಾಗಿದೆ ಶರೀರದ ಬಲವನ್ನು ಹೆಚ್ಚಿಸಲು ಅವುಗಳನ್ನು ತುಂಬಾ ಬೆಯಿಸಬಾರದು.
ಮೆಂತ್ಯ ಸೊಪ್ಪಿಗೆ ಆಂಗ್ಲದಲ್ಲಿ ಫೆನುಗ್ರೀಕ್ ಲೀವ್ ಎಂತಲೂ, ತೆಲುಗಿನಲ್ಲಿ ಮೆಂತಕೊರ ಎಂತಲೂ, ತಮಿಳಿನಲ್ಲಿ ವೆಂದಿಯಕ್ಕಿರೈ ಎಂತಲೂ, ಮಲಯಾಳಂನಲ್ಲಿ ಉಲುವ ಇಲೈ ಎಂತಲೂ ಕರೆಯುವರು. ಆದರೆ ಇದರ ವೈಜ್ಞಾನಿಕ ಹೆಸರು ಟಗೋನೆಲ್ಲ ಫೆನಂಗ್ರಾಕಂ ಎಂದಾಗಿರುವುದು. ನೂರು ಗ್ರಾಂ ಮೆಂತ್ಯ ಸೊಪ್ಪಿನಲ್ಲಿ ೧.ತೇವಾಂಶ – ೮೬.೧ ಗ್ರಾಂ ೨.ಸಸಾರಜನಕ – ೪.೪ ಗ್ರಾಂ ೩.ಮೇದಸ್ಸು – ೦.೯ ಗ್ರಾಂ ೫. ಖನಿಜಾಂಶ – ೧.೫ ಗ್ರಾಂ ೬. ಕಾರ್ಬೋಹೈಡ್ರೇಟ್ಸ್ – ೬.೦ ಗ್ರಾಂ ೬.ಕ್ಯಾಲ್ಸಿಯಂ – ೩೮೫ ಮಿಲಿ ಗ್ರಾಂ ೭. ಫಾಸ್ಫರಸ್ – ೫೧ ಮಿಲಿಗ್ರಂ ೮.ಕಬ್ಬಿಣ – ೧೬.೫ ಮಿ.ಗ್ರಾಂ ೯. ಥಿಯಮಿನ್ – ೦.೦೪ ಮಿಗ್ರಾಂ ೧೦.ರಿಬೋ ಪ್ಲಾವಿನ್- ೦.೩೧ ಮಿಗ್ರಾಮ್ ೧೧.ನಿಯಾಸಿನ್ – ೦.೮ ಮೀಗ್ರಾಂ ೧೨. ಸಿ ಅನ್ನಾಂಗ – ೫೨ ಮಿಗ್ರಾo .ಈಗ ಕೂದಲು ಉದುರುವ ಸಮಸ್ಯೆಗೆ ಈಗ ಗುಡ್ ಬೈ ಹೇಳಿ, ಮಂತ್ಯ ಸೊಪ್ಪನ್ನು ಬಳಸಿ ಸುಂದರವಾದ ಕಪ್ಪು ಕೂದಲನ್ನು ನಿಮ್ಮದಾಗಿಸಿಕೊಳ್ಳಬಹುದು.ಈ ಎಲ್ಲಾ ಪೋಷಕಾಂಶವಿರುವ ಮೆಂತ್ಯ ಸೊಪ್ಪನ್ನು ನೀವೂ ಪ್ರತಿನಿತ್ಯ ನಿಮ್ಮ ಅಡುಗೆಯಲ್ಲಿ ಬಳಸಿ ಅದರ ಉತ್ತಮ ಉಪಯೋಗಗಳನ್ನು ಪಡೆಯಿರಿ.