ಕೆಲವರಿಗೆ ಕೆಲಸದ ಒತ್ತಡ, ಇನ್ನೂ ಕೆಲವರಿಗೆ ಸೋಮಾರಿತನ. ಮಾಡಿದ್ದನ್ನು ತಿನ್ನಲೂ ಆಗದಷ್ಟು ಕೆಲಸ ಕೆಲಸ ಕೆಲಸ. ಹೀಗೆ ಅನೇಕ ಕಾರಣಗಳಿಂದ ಮಹಿಳೆಯರು ಬೆಳಗಿನ ಉಪಹಾರ ಸ್ಕಿಪ್ ಮಾಡುವುದೂ ಉಂಟು. ಇನ್ನೇನು ಮನೆ ಕೆಲಸವನ್ನು ಮುಗಿಸುವುದೊರೊಳಗೆ ಮಧ್ಯನವಾಗುತ್ತದೆ. ಏರೆಡನ್ನೋ ಒಂದೇ ಬಾರಿ ಮಾಡಿದರಾಯಿತು ಎಂದುಕೊಂಡು ಸುಮ್ಮನಾಗುತ್ತಾರೆ. ಆದರೆ ಇದು ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದನ್ನು ಒಮ್ಮೆ ಯೋಚಿಸಿದ್ದೀರಾ? ಪ್ರತಿಯೊಬ್ಬರಿಗೂ ಬೆಳಗಿನ ಉಪಹಾರ ಅತಿಮುಖ್ಯ. ಬೆಳಿಗ್ಗೆ ತಿಂಡಿ ಮಿಸ್ ಮಾಡಿದರೆ ಮುಂದೆ ನೀವೇ ಬೆಲೆ ತೆರಬೇಕಾದೀತು.
ಬೆಳಗಿನ ಉಪಹಾರ ಮಾಡುವುದರಿಂದ ಹಲವಾರು ಪ್ರಯೋಜನಗಳು ಇದ್ದು ಇದರಿಂದ ದೇಹ ಮತ್ತು ಮೆದುಳಿಗೆ ಅಗತ್ಯ ಪೋಷಕಾಂಶ ದೊರೆಯುತ್ತದೆ. ಇದು ಹಸಿವು ನಿಯಂತ್ರಿಸಲು ಸಹಾಯ ಮಾಡುತ್ತದೆ. ದಿನವಿಡೀ ಪದೇ ಪದೇ ತಿನ್ನುವ ಹಂಬಲ ಕಡಿಮೆ ಮಾಡುತ್ತದೆ. ಮತ್ತು ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

ಬೆಳಗಿನ ಉಪಹಾರದಲ್ಲಿ ಹಣ್ಣು, ತರಕಾರಿ, ಲಿಂಬೆ, ನೀರು ಸಾಕಷ್ಟು ನಾರು ಇರುವ ಆಹಾರ, ಹಾಲು, ಮೊಸರು ಸೇವಿಸಿದರೆ ರೋಗ ನಿರೋಧಕ ಶಕ್ತಿ ಅತ್ಯುತ್ತಮ ಆಗುತ್ತದೆ. ಉಪಾಹಾರ ಸೇವನೆಯಿಂದ ಮಕ್ಕಳಲ್ಲಿ ಉತ್ತಮ ಬೆಳೆವಣಿಗೆ ಯೊಂದಿಗೆ, ಏಕಾಗ್ರತೆ ಹೆಚ್ಚಿಸುತ್ತದೆ. ಹಾಗೂ ಶೈಕ್ಷಣಿಕ ಕಾರ್ಯಕ್ಷಮತೆ ವೃದ್ಧಿಯಾಗಿ, ದೈಹಿಕ ಚಟವಟಿಕೆಗಳಲ್ಲಿ ಭಾಗವಹಿಸುವಿಕೆ ಹೆಚ್ಚಾಗಿ, ಸ್ಥೂಲಕಾಯದ ಅಪಾಯ ಕಡಿಮೆ ಮಾಡುತ್ತದೆ. ಮತ್ತು ಸಂಪೂರ್ಣ ದಿನ ಲವಲವಿಕೆ ಇಂದ ಇರಲು ಸಹಾಯ ಮಾಡುತ್ತದೆ.ತಿಂಡಿ ಎನಿದ್ದರೆ ಒಳ್ಳೆಯದು? – ಬೀಳಗಿನ ತಿಂಡಿ ಆರೋಗ್ಯಕರವಾಗಿ ಇರಲಿ, ತಿಂಡಿಯಲ್ಲಿ ಹೆಚ್ಚು ಪ್ರೊಟೀನ್ ಭರಿತ ಆಹಾರಕ್ಕೆ ಆದ್ಯತೆ ಇರಲಿ. ಮೊಳಕೆ ಭರಿತ ಕಾಳು, ಬೇಳೆ ಕಾಳು ಸೇರಿ ತಯಾರಿಸಿದ ತಿಂಡಿಗಳಾದ ಇಡ್ಲಿ, ದೋಸೆ ಮತ್ತು ಪೊಂಗಲ್ ಒಳ್ಳೆಯದು. ಬೆಳಗಿನ ಉಪಹಾರದಲ್ಲಿ ಪೋಷಕಾಂಶಗಳು ಹೆಚ್ಚಾಗುವಂತೆ ನೋಡಿಕೊಳ್ಳಬೇಕು. ಹಸಿ ತರಕಾರಿ ಹಾಗೂ ಹಣ್ಣುಗಳನ್ನು ತಿನ್ನುವುದು ಹೆಚ್ಚು ಉಪಯುಕ್ತ. ಇದರಿಂದ ದೇಹಕ್ಕೆ ಬೇಕಾಗಿರುವ ಎಲ್ಲಾ ರೀತಿಯ ವಿಟಮಿನ್, ಲವಣಾಂಶ ಮತ್ತು ನಾರಿನಂಶ ದೊರಕುತ್ತದೆ. ಚಪಾತಿ, ಅವಲಕ್ಕಿ ಮೊಳಕೆ ಕಾಳು, ಹಣ್ಣುಗಳ ಸಲಾಡ್, ಹಾಲು, ಮೊಸರು, ಇಡ್ಲಿ, ದೋಸೆ, ಪೊಂಗಲ್ ಇತ್ಯಾದಿ ಸೇವಿಸುವುದು ಉತ್ತಮ. ಪ್ರತಿದಿನದ ಆಹಾರದಲ್ಲಿ ಬದಲಾವಣೆ ಮಾಡುವುದರಿಂದ ವೈವಿಧ್ಯಮಯ ಪೋಷಕಾಂಶಗಳು ಲಭ್ಯತೆ ಆಗುತ್ತದೆ.

ತಿಂಡಿಯಲ್ಲಿ ಕರಿದ ಪದಾರ್ಥ,ಮೈದಾ ಹಿಟ್ಟು ಬಳಸಿ ತಯಾರಿಸಿದ ಪದಾರ್ಥ ವರ್ಜಿಸುವುದು ಒಳ್ಳೆಯದು. ಉಪಾಹಾರ ದೇಹದ ಸಂಪೂರ್ಣ ಆರೋಗ್ಯಕ್ಕೆ ತಳಹದಿ ಎನ್ನಬಹುದು. ಹಾಗೆಯೇ ಅಗತ್ಯ ಪೋಷಕಾಂಶ ಒದಗಿಸುವಂತೆ ಇದ್ದರೆ ಮಾತ್ರ ಆರೋಗ್ಯಕ್ಕೆ ಸಹಕಾರಿ. ತಯಾರಿಸುವ ಆಹಾರವು ಶುಚಿ ರುಚಿಯೊಂದಿಗೆ ಹಿತ ಮಿತವಾಗಿ ಇದ್ದರೆ ಉತ್ತಮ ಆರೋಗ್ಯ ಪಡೆಯಬಹುದು. ಉಪಹಾರ ಯಾವಾಗ ಮಾಡಬೇಕು – ಉಪಹಾರ ಯಾವಾಗ ಹೇಗೆ ಮಾಡಬೇಕು ಎಂದು ತಿಳಿಯುವುದು ತುಂಬಾ ಮುಖ್ಯ ಬೆಳಿಗ್ಗೆ ಎದ್ದ ಎರೆಡು ತಾಸಿನೊಳಗೆ ತಿಂಡಿ ತಿನ್ನಬೇಕು. ಈ ತಿಂಡಿ ಸಸಾರಜನಕ ಮತ್ತು ಪೋಷಕಾಂಶಗಳು ಇರಬೇಕು. ಬೆಳಗಿನ ಸಮಯದಲ್ಲಿ ನಮ್ಮ ದೇಹಕ್ಕೆ ಶಕ್ತಿಯ ಅವಶ್ಯಕತೆ ತುಂಬಾ ಇರುತ್ತದೆ. ಮತ್ತು ಎಷ್ಟೇ ತಿಂದರೂ ಜೀರ್ಣಿಸಿಕೊಳ್ಳುವ ಶಕ್ತಿ ಇರುತ್ತದೆ. ತಿಂಡಿಯ ಜೊತೆ ಒಂದು ಬಟ್ಟಲು ಹಸಿ ತರಕಾರಿ, ಹಣ್ಣುಗಳು ಇದ್ದರೆ ಇನ್ನೂ ಉತ್ತಮ.

Leave a Reply

Your email address will not be published. Required fields are marked *