WhatsApp Group Join Now

ಮಳೆಗಾಲದಲ್ಲಿ ಅತಿಯಾಗಿ ಕಾಡುವ ಸೊಳ್ಳೆಗಳಿಂದ ಬರುವಂತಹ ಅಪಾಯಕಾರಿ ಜ್ವರಗಳಲ್ಲಿ ಡೆಂಗ್ಯೂ ಜ್ವರ ಕೂಡ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಹವಾಮಾನದ ವೈಪರೀತ್ಯದಿಂದ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಅತ್ಯಂತ ವೇಗವಾಗಿ ಹರಡುತ್ತದೆ ಎಂದರೆ ತಪ್ಪಾಗಲಾರದು. ಈ ಜ್ವರ ಕಾಣಿಸಿಕೊಂಡ ತಕ್ಷಣ ವೈದ್ಯರ ಬಳಿ ಹೋಗಿ ತೋರಿಸಿಕೊಳ್ಳ ವುದು ಒಳ್ಳೆಯದು. ಈ ಜ್ವರಕ್ಕೆ ಸರಿಯಾದ ಚಿಕಿತ್ಸೆ ನೀಡದಿದ್ದರೆ ಅದು ನಮ್ಮ ಪ್ರಾಣಕ್ಕೂ ಕುತ್ತಾಗಬಹುದು. ಪ್ರತಿ ವರ್ಷ ನಮ್ಮ ದೇಶದಲ್ಲಿ ಈ ಡೆಂಗ್ಯೂ ಮಹಾಮಾರಿ ಇಂದ ಸಾಕಷ್ಟು ಜನರು ತಮ್ಮ ಪ್ರಾಣ ಕಲುದುಕೊಳ್ಳುತ್ತಿದ್ದರೆ. ದ್ದಾ ಹಾಗಾಗಿ ಮಳೆಗಾಲದಲ್ಲಿ ಬರುವ ಯಾವ ಜ್ವರವನ್ನು ನಿರ್ಲಕ್ಷ್ಯ ಮಾಡಬಾರದು. ಮಳೆಗಾಲದಲ್ಲಿ ಬರುವ ಡೆಂಗ್ಯೂ ಜ್ವರ ಕಾಣಿಸಿಕೊಂಡ 3-4 ದಿನಗಳಲ್ಲಿ ಇದರ ಲಕ್ಷಣಗಳು ಕಾಣಿಸಿಕೊಳ್ಳಲು ಶುರುವಾಗುತ್ತದೆ. ಕೆಲವರಿಗೆ ಬಿಳಿ ರಕ್ತ ಕಣಗಳು ಕಡಿಮೆ ಆಗುತ್ತವೆ.

ಆದ್ದರಿಂದ ಜ್ವರಕ್ಕೆ ತುತ್ತಾದ ಜನರು ತುಂಬಾನೇ ಅಪಾಯಕ್ಕೆ ಗುರಿ ಆಗುತ್ತಾರೆ ಎಂದು ಹೇಳಬಹುದು. ಸಾಮಾನ್ಯವಾಗಿ ಈ ಜ್ವರದ ಲಕ್ಷಣಗಳು ಯಾವ ರೀತಿ ಇರುತ್ತದೆ ಎಂದು ನೋಡುವುದಾದರೆ ಡೆಂಗ್ಯೂ ಜ್ವರವು ವೈರಸ್ ನಿಂದ ಉಂಟಾಗುವ ಸೊಂಕಾಗಿದೆ ಹಾಗಾಗಿ ಸೊಳ್ಳೆ ಗಳು ಡೆಂಗ್ಯೂ ವೈರಸ್ ಅನ್ನು ಹರಡುತ್ತವೆ. ಡೆಂಗ್ಯೂ ಜ್ವರವನ್ನು ಮೂಳೆ ಮುರಿಯುವ ಜ್ವರ ಎಂದೂ ಕರೆಯುತ್ತಾರೆ. ಹಾಗಾಗಿ ಈ ಜ್ವರ ಬಂದಾಗ ನಿಮ್ಮ ಸ್ನಾಯುಗಳು ಹಾಗೂ ಸಂಧಿ ನೋವು ಮೈ ಕೈ ನೋವು ತುಂಬಾ ಇರುತ್ತದೆ. ಮತ್ತು ದೀರ್ಘವಾಗಿ ಜ್ವರ ಏರುತ್ತದೆ ಅತಿಯಾದ ಚಳಿಯೂ ಆಗುತ್ತಿರುತ್ತದೆ. ಅತಿಯಾದ ಬೆವರು, ನಿಶ್ಯಕ್ತಿ, ಆಯಾಸ, ಕೆಲವರಿಗೆ ಹಸಿವೆ ಆಗುವುದಿಲ್ಲ, ಕೆಲವರಿಗೆ ವಸಡುಗಳ ಲ್ಲಿ ರಕ್ತ ಸ್ರಾವ ಆಗಲು ಶುರು ಆಗುತ್ತಿರುತ್ತದೆ. ವಾಂತಿ ಕೂಡ ಈ ಜ್ವರದ ಲಕ್ಷಣ ವಾಗಿದೆ. ಇಂತಹ ಲಕ್ಷಣಗಳು ಏನಾದರೂ ಕಂಡು ಬಂದರೆ ತಕ್ಷಣ ವೈದ್ಯರ ಸಲಹೆ ಪಡೆದು ತಕ್ಷಣವೇ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ. ಮತ್ತು ನಿಮ್ಮ ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಅವ್ರಿಗೆ ಇನ್ನೂ ಸರಿಯಾಗಿ ಮಾತನಾಡಲು ಬರುತ್ತಿರಲಿಲ್ಲ ಎಂದರೆ, ಅಂತಹ ಮಕ್ಕಳನ್ನು ತಕ್ಷಣ ಸೂಕ್ತ ವೈದ್ಯರನ್ನೂ ಕಾಣುವುದು ತುಂಬಾನೇ ಅಗತ್ಯ ಇರುತ್ತದೆ.

ಈ ಜ್ವರದ ಇನ್ನೂ ಬೇರೆ ಲಕ್ಷಣಗಳು ಎಂದರೆ ಕಣ್ಣು ನೋವು, ಮೈ ಕೈ ಮೇಲೆ ರಾಶಸ್ ಅಂದರೆ ಕೆಂಪು ಬಣ್ಣದ ಕಲೆಗಳು, ವಿಪರೀತವಾದ ತಲೆನೋವು. ಹಾಗಾಗಿ ಚಿಕ್ಕ ಮಕ್ಕಳಿಗೆ ಜ್ವರ ಬಂದರೆ ನಿರ್ಲಕ್ಷ್ಯ ಮಾಡಬಾರದು ಹಾಗೂ ಚಿಕ್ಕ ಮಕ್ಕಳನ್ನು ಸೊಳ್ಳೆಗಳಿಂದ ರಕ್ಷಿಸಿಡಿ ಹಾಗೂ ಸಂಜೆ ಸಮಯದಲ್ಲಿ ತುಂಬಾನೇ ಸೊಳ್ಳೆಗಳು ಮನೆ ಒಳಗೆ ಬರುತ್ತಿರುತ್ತವೆ. ಅದಕ್ಕಾಗಿ ಮನೆಯ ಕಿಟಕಿಗಳಿಗೆ ಸೊಳ್ಳೆ ಪರದೆಗಳನ್ನು ಅಳವಡಿಸಿದರೆ ಒಳ್ಳೆಯದು. ಮತ್ತು ನೀವೇನಾದರೂ ಜ್ವರಕ್ಕೆ ತುತ್ತಾಗಿದ್ದಾರೆ ಪಪ್ಪಾಯ ಮರದ ಎಲೆಗಳ ಕಷಾಯ ಅಥವಾ ಕಿವಿ ಹಣ್ಣುಗಳನ್ನು ಸೇವನೆ ಮಾಡಿ , ಇದರಿಂದ ನಮ್ಮ ದೇಹದಲ್ಲಿ ಬಿಳಿ ರಕ್ತ ಕಣಗಳು ಸಹಜವಾಗಿಯೇ ವೃದ್ಧಿಯಾಗುತ್ತವೆ. ನೋಡಿದ್ರಲ್ಲಾ ಸ್ನೇಹಿತರೆ, ಒಂದು ವೇಳೆ ನಿಮಗೇನಾದರೂ ಈ ಲಕ್ಷಣಗಳು ಕಂಡರೆ ದಯವಿಟ್ಟು ಸೂಕ್ತ ವೈದ್ಯರ ಸಲಹೆ ಪಡೆಯಿರಿ. ಈ ಮಾಹಿತಿ ಇಷ್ಟವಾಗಿದ್ದರೇ ನಿಮ್ಮ ಮನೆಯವರಿಗೆ, ಸ್ನೇಹಿತರಿಗೆ , ಆಪ್ತರಿಗೆ ತಿಳಿಸಿರಿ. ಶುಭದಿನ.

WhatsApp Group Join Now

Leave a Reply

Your email address will not be published. Required fields are marked *