WhatsApp Group Join Now

ನಮಸ್ತೆ ನಮ್ಮ ಪ್ರಿಯ ಓದುಗರೇ, ಪ್ರೋಟೀನ್‌ಗಳ ಕುರಿತು ಮಾತನಾಡುವಾಗ , ಪ್ರತಿಯೊಬ್ಬರಿಗೂ ಪ್ರಪ್ರಥಮವಾಗಿ ನೆನಪಾಗುವುದು ಅತ್ಯಧಿಕ ಪ್ರೋಟೀನ್‌ ಮೂಲವೆಂದು ಪರಿಗಣಿಸಲ್ಪಟ್ಟಿರುವ ಮೊಟ್ಟೆ. ಸ್ನಾಯು ದೃವ್ಯರಾಶಿಯನ್ನು ಹೆಚ್ಚಿಸಿಕೊಳ್ಳಲು ಬಯಸುತ್ತಿರುವವರಿಗೆ ಮತ್ತು ತೂಕದ(weight) ಬಗ್ಗೆ ಕಾಳಜಿ ವಹಿಸುವ ಮಂದಿಗೆ, ಡಯೆಟಿಶಿಯನ್‍ಗಳು ಅಥವಾ ಫಿಟ್‍ನೆಸ್ ತಜ್ಞರು ಅತೀ ಹೆಚ್ಚು ಮೊಟ್ಟೆಗಳನ್ನು ತಿನ್ನಲು ಹೇಳುತ್ತಾರೆ. ಅಂದರೆ ಪ್ರತೀ ಕಿಲೋ ಗ್ರಾಂ ದೇಹದ ತೂಕಕ್ಕೆ 1 ಗ್ರಾಂ ನಷ್ಟು ಪ್ರೋಟೀನ್‌ ತಿನ್ನುವಂತೆ ಸಲಹೆ ನೀಡುತ್ತಾರೆ. ಬೇಯಿಸಿದ 100 ಗ್ರಾಂ ನಷ್ಟು ಮೊಟ್ಟೆಗಳಲ್ಲಿ, 13 ಗ್ರಾಂ ನಷ್ಟು ಪ್ರೋಟೀನ್‌ ಇರುತ್ತದೆ ಅದು ಗಮನಾರ್ಹ ಪ್ರಮಾಣವಾಗಿದೆ. ಮೊಟ್ಟೆ ತಿನ್ನುವುದರಿಂದ ಮಾಂಸಹಾರಿಗಳಿಗೆ ಅಗತ್ಯ ಪ್ರೋಟೀನ್‌ ಸಿಗುತ್ತದೆ ಎಂಬುವುದೇನೋ ಸರಿ, ಹಾಗಂತ, ಸಸ್ಯಹಾರಿಗಳಿಗೆ ತಮ್ಮ ದೇಹಕ್ಕೆ ಅಗತ್ಯ ಇರುವ ಪ್ರೋಟೀನ್‌ ಪಡೆಯಲು ಬೇರೆ ಮಾರ್ಗಗಳೇ ಇಲ್ಲ ಅಥವಾ ಅವರು ಸಪ್ಲಿಮೆಂಟ್‍ಗಳ ಮೇಲೆ ಅವಲಂಬಿತರಾಗಿರಬೇಕು ಎಂದು ಅರ್ಥವಲ್ಲ. ವಾಸ್ತವದಲ್ಲಿ , ಕೆಲವು ಸಸ್ಯಹಾರಿ ಆಹಾರ ಪದಾರ್ಥಗಳಲ್ಲಿ ಮೊಟ್ಟೆಗಿಂತಲೂ ಹೆಚ್ಚಿನ ಪ್ರೋಟೀನ್‌ ಅನ್ನು ಪಡೆಯಬಹುದಾಗಿದೆ. ಮೊಟ್ಟೆಗಿಂತಲೂ ಅತೀ ಹೆಚ್ಚಿನ ಪ್ರೋಟೀನ್‌ ಹೊಂದಿರುವ ಸಸ್ಯಹಾರಿ ಪ್ರೋಟೀನ್‌ ಮೂಲಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.

1 ಕುಂಬಳಕಾಯಿ ಬೀಜ :ಮೊಟ್ಟೆಗಳಿಗೆ ಹೋಲಿಸಿದರೆ ಗಾಢ ಹಸಿರು ಬಣ್ಣದ ಕುಂಬಳಕಾಯಿ ಬೀಜಗಳು, ಅತ್ಯಧಿಕ ಪ್ರೋಟೀನ್‌ನ ಮೂಲವಾಗಿವೆ. 100 ಗ್ರಾಂ ಕುಂಬಳ ಕಾಯಿ ಬೀಜದಲ್ಲಿ, 19 ಗ್ರಾಂ ಪ್ರೋಟೀನ್‌ ಜೊತೆಗೆ ಫೈಬರ್, ಆರೋಗ್ಯಕರ ಕಾರ್ಬೋಹೈಡ್ರೆಟ್‍ಗಳು, ಆರೋಗ್ಯಕರ ಕೊಬ್ಬುಗಳು, ವಿಟಮಿನ್ ಕೆ, ಪ್ರೊಸ್ಫರಸ್ ಮತ್ತು ಜಿಂಕ್ ಅನ್ನು ಹೊಂದಿದೆ. 2. ಕಡಲೇ ಕಾಳು :ಕಡಲೇಕಾಳು ಭಾರತದ ಹೆಚ್ಚಿನ ಖಾದ್ಯಗಳಲ್ಲಿ ಬಳಕೆ ಆಗುತ್ತದೆ. ಕುಲ್ಛ, ಬಟೂರೆ, ಪೂರಿ, ಟಿಕ್ಕಿ, ಚಾಟ್, ಪರೋಟ ಅಥವಾ ಅನ್ನದ ಜೊತೆ ಮಸಾಲೆಯೊಂದಿಗೆ ಬೇಯಿಸಿದ ಕಡಲೇಕಾಳುಗಳು ತಿನ್ನಲು ಬಲು ರುಚಿ. 100 ಗ್ರಾಂ ಕಡಲೇ ಕಾಳಿನಲ್ಲಿ 19 ಗ್ರಾಂ ಪ್ರೋಟೀನ್‌ ಇದೆ. ಬೀದಿ ಬದಿಯ ಚಾಟ್‍ಗಳ ಜೊತೆ ಅದನ್ನು ತಿನ್ನುವ ಬದಲು, ರೋಟಿ ಅಥವಾ ಅನ್ನದ ಜೊತೆ ಸೇವಿಸುವುದು ಹೆಚ್ಚು ಆರೋಗ್ಯಕರ. 3. ಪನ್ನೀರ್ :ಸಸ್ಯಹಾರಿಗಳು ಪಲ್ಯ, ಪರೋಟ, ಬಟೂರೆ ಇತ್ಯಾದಿಗಳಲ್ಲಿ ಹೆಚ್ಚಾಗಿ ಬಳಸುವ ಜನಪ್ರಿಯ ಪದಾರ್ಥ ಬಟೂರೆ. ಪನೀರ್ ಅತ್ಯಂತ ರುಚಿಕರವಾಗಿರುತ್ತದೆ ಎಂಬುವುದು ಒಂದೆಡೆಯಾದರೆ, ಅದು ಪ್ರೋಟೀನ್‌ನ ಅತ್ಯುತ್ತಮ ಮೂಲವೂ ಹೌದು. ಅದರಲ್ಲಿ ಆರೋಗ್ಯಕರ ಕೊಬ್ಬು, ಮತ್ತು ಕ್ಯಾಲ್ಸಿಯಂ ಕೂಡ ಇದೆ. 100 ಗ್ರಾಂ ಪನೀರ್‌ನಲ್ಲಿ 23 ಗ್ರಾಂ ಪ್ರೋಟೀನ್‌ ಇದೆ.

4. ಗ್ರೀಕ್ ಯೋಗರ್ಟ್ :ಸಾಮಾನ್ಯ ಮೊಸರಿಗಿಂದ ಗ್ರೀಕ್ ಯೋಗರ್ಟ್‍ನಲ್ಲಿ ಅತ್ಯಂತ ಹೆಚ್ಚು ಪ್ರೋಟೀನ್‌ ಇರುತ್ತದೆ.ಒಂದು ಬೌಲ್‍ನಷ್ಟು ಸಿಹಿರಹಿತ ಗ್ರೀಕ್ ಮೊಸರಿನಲ್ಲಿ 23 ಗ್ರಾಂ ಪ್ರೋಟೀನ್‌ ಇರುತ್ತದೆ. ಬೆರಿಗಳು, ಬಾದಾಮಿಗಳು,ಬಾಳೆಹಣ್ಣು ಇತ್ಯಾದಿಗಳನ್ನು ಅದರೊಂದಿಗೆ ಸೇರಿಸಿ ತಿಂದರೆ, ಅತ್ಯಧಿಕ ಪ್ರೋಟೀನ್‌ ಮತ್ತು ಅಗತ್ಯ ಪೌಷ್ಟಿಕಾಂಶಗಳನ್ನು ಹೊಂದಿರುವ ಪ್ರೋಬಯಾಟಿಕ್ ಆಹಾರವನ್ನು ಸೇವಿಸಿದಂತಾಗುತ್ತದೆ. 5. ಸೋಯಾಬೀನ್ :ಸೋಯಾಬೀನ್ ಅತ್ಯುತ್ತಮ ಸಸ್ಯಜನ್ಯ ಪ್ರೋಟೀನ್‍ನ ಮೂಲವಾಗಿದೆ. ಒಂದು ಕಪ್ ಸೋಯಾಬೀನ್‍ನಲ್ಲಿ 29 ಗ್ರಾಂನಷ್ಟು ಮೈಕ್ರೋನ್ಯೂಟ್ರಿಯೆಂಟ್ ಅಂದರೆ ಪ್ರೋಟೀನ್‌ ಇರುತ್ತದೆ. ಕೆಲವರಿಗೆ ತಮ್ಮ ತೂಕ ಇಳಿಸಲು ಬೇಯಿಸಿದ ಮೊಟ್ಟೆ ತಿನ್ನುವ ಅಭ್ಯಾಸ ಇರುತ್ತದೆ. ಹೀಗೆ ತಿಂದರೆ ಕಡಿಮೆ ತಿಂದು ಹೆಚ್ಚು ಪ್ರೊಟೀನ್ ಗಳಿಸುತ್ತೇವೆ. ಬೇಗ ಹೊಟ್ಟೆ ಕೂಡ ಹಸಿಯುವುದಿಲ್ಲ ಎನ್ನುವ ಭಾವನೆ ಇರುತ್ತದೆ. ಆದರೆ ಕೆಲವು ಸಂಶೋಧನೆಯ ಪ್ರಕಾರ ಬೆಳಿಗ್ಗೆ ಎರೆಡು ಮೊಟ್ಟೆ ಮತ್ತು ಹಣ್ಣುಗಳು ಮಧ್ಯಾನ ಹೊಟ್ಟೆ ಹಸಿದರೆ ಒಂದು ಮೊಟ್ಟೆ ಹಾಗೂ ರಾತ್ರಿ ಊಟಕ್ಕೆ ತರಕಾರಿ ಸೇವಿಸುವುದು ಒಳ್ಳೆಯದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಯಾರೆಲ್ಲ ಮೊಟ್ಟೆಗಳನ್ನು 3ಕೂ ಜಾಸ್ತಿ ತಿಂತೀರಾ ಯೋಚನೆ ಮಾಡಿ ನಿಮ್ಮ ಡಯಟ್ ಮುಂದುವರೆಸಿ. ಈ ಮಾಹಿತಿ ಇಷ್ಟವಾದಲ್ಲಿ ನೀವೂ ಅನುಸರಿಸಿ ಇತರರಿಗೂ ತಿಳಿಸಿ. ಶುಭದಿನ.

WhatsApp Group Join Now

Leave a Reply

Your email address will not be published. Required fields are marked *