ನಮಸ್ತೆ ನಮ್ಮ ಪ್ರಿಯ ಓದುಗರೇ, ಹಳದಿ ಹಲ್ಲುಗಳು ಪ್ರಸ್ತುತ ನಾವೆಲ್ಲರೂ ಹೊಂದಿರುವ ಸಾಮಾನ್ಯ ಸಮಸ್ಯೆಯಾಗಿದೆ ಹೆಚ್ಚಿನ ಜನರು ಹಳದಿ ಹಲ್ಲುಗಳಿಂದ ಮುಕ್ತಿ ಪಡೆಯಲು ಕೆಲವು ತಂತ್ರಗಳು ಮತ್ತು ವಿಧಾನಗಳನ್ನು ಅನುಸರಿಸುತ್ತಾರೆ ಮತ್ತು ಹೆಚ್ಚಿನ ಜನರು ಕೆಲವು ಸರಳವಾದ ಮನೆಮದ್ದುಗಳನ್ನು ಬಳಕೆ ಮಾಡುವ ಮೂಲಕ ತಮ್ಮ ಹಲ್ಲುಗಳನ್ನು ಬಿಳಿಯಾಗಿಸಿಕೊಳ್ಳುತ್ತಾರೆ. ಹಾಗೆಯೇ ನಾವು ದಿನನಿತ್ಯ ಸೇವಿಸುವ ಹಣ್ಣುಗಳು ಕೂಡ ನಮ್ಮ ಹಲ್ಲುಗಳನ್ನು ಬಿಳಿಯಾಗಿಸುತ್ತದೆ. ಯಾವುದು ಗೊತ್ತಾ ಆ ಹಣ್ಣುಗಳು ಇಲ್ಲಿದೆ ನೋಡಿ. ಈ ಹಣ್ಣುಗಳು ನಿಮ್ಮ ಹಲ್ಲುಗಳನ್ನು ಹಿಂದೆಂದೂ ಕಾಣದಂತೆ ಹೊಳೆಯುವಂತೆ ಮಾಡುತ್ತದೆ. ಅದೇ ರೀತಿ ಹಣ್ಣುಗಳನ್ನು ತಿನ್ನುವುದರಿಂದ ಹಲವಾರು ಆರೋಗ್ಯ ಲಾಭಗಳು ಸಿಗುತ್ತವೆ.

1 ಬಾಳೆಹಣ್ಣು: ಬಾಳೆಹಣ್ಣು ಹಲ್ಲಿನ ಹಳದಿ ಬಣ್ಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬಾಳೆಹಣ್ಣಿನಲ್ಲಿ ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಮ್ಯಾಂಗನೀಸ್ ಇರುತ್ತದೆ. ಹಲ್ಲುಗಳಲ್ಲಿರುವ ಕೊಳೆಯನ್ನು ತೆಗೆದುಹಾಕುವಲ್ಲಿ ಅವು ಪರಿಣಾಮಕಾರಿ. ಹಲ್ಲುಗಳನ್ನು ಹೊಳೆಯುವಂತೆ ಮಾಡುತ್ತದೆ. 2 ಕಲ್ಲಂಗಡಿ: ಕಲ್ಲಂಗಡಿ ಹಲ್ಲಿನ ಹೊಳಪನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಮ್ಯಾಂಗನೀಸ್, ಸತು, ಪೊಟ್ಯಾಸಿಯಮ್, ಕಬ್ಬಿಣ, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಅಯೋಡಿನ್ ಅನ್ನು ಹೊಂದಿದೆ. ಇದು ಹಲ್ಲುಗಳ ಆರೋಗ್ಯಕ್ಕೆ ಒಳ್ಳೆಯದು. ಹಲ್ಲುಗಳ ಮೇಲೆ ಉಜ್ಜಿದರೆ ಹಳದಿ ಬಣ್ಣ ದೂರವಾಗುತ್ತದೆ. 3 ಸ್ಟ್ರಾಬೆರಿಗಳು: ಸ್ಟ್ರಾಬೆರಿಗಳು ರುಚಿಯಲ್ಲಿ ಮಾತ್ರವಲ್ಲ, ಪೋಷಕಾಂಶಗಳಲ್ಲಿಯೂ ಸಮೃದ್ಧವಾಗಿವೆ. ಸ್ಟ್ರಾಬೆರಿಯ ಒಂದು ಪ್ರಯೋಜನವೆಂದರೆ ಅದು ನಿಮ್ಮ ಹಲ್ಲುಗಳನ್ನು ಹೊಳಪು ಮರಳಿ ಪಡೆಯಲು ಸಹಾಯ ಮಾಡುತ್ತದೆ. ಈ ಹಣ್ಣಿನಲ್ಲಿ ಮಾಲಿಕ್ ಆಮ್ಲವಿದೆ. ಇದು ಹಲ್ಲುಗಳಿಂದ ಪ್ಲೇಕ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಹಲ್ಲುಗಳು ಹೊಳೆಯುವಂತೆ ಮಾಡಲು ಸ್ಟ್ರಾಬೆರಿ ಹಣ್ಣನ್ನು ಕತ್ತರಿಸಿ ಅದರ ಮೇಲೆ ಎರಡು ಚಿಟಿಕೆ ಅಡುಗೆ ಸೋಡಾವನ್ನು ಹಾಕಿ ಹಲ್ಲನ್ನು 2 ನಿಮಿಷಗಳ ಕಾಲ ಉಜ್ಜಿದರೆ ಹಳದಿ ಕಲೆ ನಿವಾರಣೆಯಾಗುತ್ತದೆ. 4 ಸೇಬು: ಸೇಬು ತಿನ್ನುವುದರಿಂದ ಹಲ್ಲುಗಳ ಕಾಂತಿಯೂ ಹೆಚ್ಚುತ್ತದೆ. ಈ ಹಣ್ಣು ಹಲ್ಲುಗಳಿಗೆ ಸ್ಕ್ರಬ್ಬರ್ ಆಗಿ ಕಾರ್ಯನಿರ್ವಹಿಸುತ್ತದೆ. ಸೇಬಿನಲ್ಲಿ ಕಂಡುಬರುವ ಮಾಲಿಕ್ ಆಮ್ಲವು ಬಹಳಷ್ಟು ಲಾಲಾರಸವನ್ನು ಉತ್ಪಾದಿಸುತ್ತದೆ. ಇದು ಹಲ್ಲುಗಳ ಹಳದಿ ಬಣ್ಣವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

5 ಕಿತ್ತಳೆ: ಕಿತ್ತಳೆ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಹಾಗೆಯೇ ಒಸಡುಗಳು ಮತ್ತು ಹಲ್ಲುಗಳಿಗೆ ಸಮಾನವಾದ ಪ್ರಯೋಜನಗಳನ್ನು ನೀಡುತ್ತದೆ. ಕಿತ್ತಳೆಯಲ್ಲಿ ವಿಟಮಿನ್ ಸಿ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇದು ಹಲ್ಲುಗಳ ಹಳದಿ ಬಣ್ಣವನ್ನು ಹೋಗಲಾಡಿಸುತ್ತದೆ ಮತ್ತು ಅವು ಹೊಳೆಯಲು ಸಹಾಯ ಮಾಡುತ್ತದೆ.
ಇವುಗಳ ಹೊರತಾಗಿ ಹಲ್ಲುಗಳ ಮೇಲಿನ ಹಳದಿ ಕಲೆಯನ್ನು ತೆಗೆದುಹಾಕಲು ಇನ್ನೂ ಕೆಲವು ಸರಳ ಮಾರ್ಗಗಳಿವೆ. ಸ್ವಲ್ಪ ಸೋಡಾ ಸಾಲ್ಟ್ ಮತ್ತು ಟೂತ್ ಪೇಸ್ಟ್ ಮಿಕ್ಸ್ ಮಾಡಿ ಅದರಿಂದ ಹಲ್ಲುಜ್ಜಿದರೆ ಹಲ್ಲು ತುಂಬಾ ಹೊಳೆಯುತ್ತದೆ. ನೀವು ಇದನ್ನು ವಾರಕ್ಕೊಮ್ಮೆ ಮಾಡಬಹುದು. ಮಾಹಿತಿ ಇಷ್ಟವಾದಲ್ಲಿ ನೀವೂ ಅನುಸರಿಸಿ ಇತರರಿಗೂ ತಿಳಿಸಿ. ಶುಭದಿನ.

Leave a Reply

Your email address will not be published. Required fields are marked *