ನಮಸ್ತೆ ಪ್ರಿಯ ಓದುಗರೇ, ಜಾ ಪತ್ರೆ ಕ್ಷೀರ – ಜಾ ಪತ್ರೆ ಇದನ್ನು ಎಷ್ಟೋ ಜನಕ್ಕೆ ಮನೆಗೆ ತರುವ ಪದ್ಧತಿ ಕೂಡ ಇರೋದಿಲ್ಲ. ಅಕಸ್ಮಾತ್ ತಂದ್ರೆ ಈ ಅಡಿಕೆ ಪುಡಿ ಹಾಕಿಕೊಳ್ಳುವ ಅಭ್ಯಾಸ ಇರುವವರು ಮಾತ್ರ ಇದನ್ನು ಬಹುಶಃ ತಂದೆ ತರುತ್ತಾರೆ. ಇದನ್ನು ಹೊರತು ಪಡಿಸಿದರೆ ಇದನ್ನು ತುಂಬಾ ಕಡಿಮೆ ಬಳಕೆ ಮಾಡುತ್ತಾರೆ. ಅಥವಾ ಕೆಲವರು ಕೆಲವು ಅಡುಗೆಗಳನ್ನು ಮಾಡುವಾಗ ಮಸಾಲೆ ಗೋಸ್ಕರ ಮಿಶ್ರಣಕ್ಕೆ ಇದನ್ನು ಅಲ್ಪ ಸ್ವಲ್ಪ ತರುವ ಪದ್ಧತಿ ಇದೆ. ಆದರೆ ಈ ಜಾ ಪತ್ರೆ ಯಲ್ಲಿ ಇರುವಂತಹ ಔಷಧಿ ಗುಣಗಳನ್ನು ಸರಿಯಾಗಿ ತಿಳಿದು ಕೊಂಡಿದ್ದೇ ಆದರೆ ಅನೇಕ ಸಮಸ್ಯೆಗಳಿಗೆ ಇದರಲ್ಲಿ ಚಿಕಿತ್ಸೆಯನ್ನು ಮಾಡಬಹುದು. ಆದರೆ ಎಷ್ಟು ಪ್ರಮಾಣದಲ್ಲಿ ಬಳಕೆ ಮಾಡಬೇಕು ಎನ್ನುವುದು ತುಂಬಾ ಮುಖ್ಯ. ತುಂಬಾ ಒಳ್ಳೆಯದು ಅಂತ ತಿಳಿದು ಇದನ್ನು ಜಾಸ್ತಿ ಸೇವನೆ ಮಾಡೋ ಹಾಗಿಲ್ಲ. ಒಂದು ದಿನಕ್ಕೆ ಕೇವಲ ಒಂದು ಚಿಟಿಕೆ ಅಷ್ಟು ಮಾತ್ರ ನಮ್ಮ ದೇಹ ಸೇರಬೇಕು ಅಷ್ಟೇ. ಇದು ಪ್ರತಿನಿತ್ಯ ಸೇವನೆ ಮಾಡುವಂಥದ್ದು ಅಲ್ಲ. ಹಾಗಾಗಿ ಇದನ್ನು ಸರಿಯಾದ ಪ್ರಮಾಣದಲ್ಲಿ ಮಾತ್ರವೇ ಇದನ್ನು ಬಳಕೆಯನ್ನು ಮಾಡಬೇಕು. ನಾವು ಇಂದಿನ ಲೇಖನದಲ್ಲಿ ಒಂದು ತುಣುಕಿನಷ್ಟು ಜಾ ಪತ್ರೆ ಯನ್ನ ತೇದರೆ ಎರೆಡು ಲೋಟ ಕ್ಷೀರ ತಯಾರಿಸಲು ಸಾಕಾಗುತ್ತದೆ. ಅಂದರೆ ಅಷ್ಟು ಕಡಿಮೆ ಪ್ರಮಾಣ ದಲ್ಲಿ ಇದನ್ನು ಬಳಕೆ ಮಾಡುವಂಥದ್ದು.

ಕೆಲವೊಂದು ಪದಾರ್ಥಗಳ ವಿಪರೀತ ಸೇವನೆ ಇಂದ ಬೇರೆ ಬೇರೆ ಸಮಸ್ಯೆಗಳು ಆಗುವ ಸಾಧ್ಯತೆಗಳು ಇರುತ್ತವೆ ಹಾಗಾಗಿ ತುಂಬಾ ಅಂದ್ರೆ ತುಂಬಾ ಕಡಿಮೆ ಪ್ರಮಾಣದಲ್ಲಿ ಇದನ್ನು ಸೇವಿಸಬೇಕು. ಜಾ ಪತ್ರೆ ಒಳ್ಳೆಯ ಸುವಾಸನೆ ಇರುವಂತಹ ಪದಾರ್ಥ. ಇದರಲ್ಲಿ ವಾಜೀಕರಣ ಶಕ್ತಿ ಇರುವುದರಿಂದ ಲೈಂಗಿಕ ಸಮಸ್ಯೆಗಳಿಗೆ ಅತ್ಯಂತ ಶ್ರೇಷ್ಠವಾದಂತ ಪದಾರ್ಥ ಇದಾಗಿದೆ. ಹಾಗಾಗಿ ಹಿಂದೆಯೆಲ್ಲಾ ಮನೆಯಲ್ಲಿ ವೀಳ್ಯದೆಲೆ ಹಾಕುವಂಥ ಅಭ್ಯಾಸ ಇದ್ದೆ ಇರುತ್ತಿತ್ತು ಸ್ವಲ್ಪ ಪ್ರಮಾಣದಲ್ಲಿ ಅಡಿಕೆಗೆ ಮಿಶ್ರಣ ಮಾಡಿರುತ್ತದೆತ್ತಿದ್ದರು ಪ್ರತಿನಿತ್ಯ ಸ್ವಲ್ಪ ಪ್ರಮಾಣದಲ್ಲಿ ಹೊಟ್ಟೆಗೆ ಸೇರುತ್ತಿದ್ದರಿಂದ ಈ ರೀತಿ ಸಮಸ್ಯೆಗಳು ಉದ್ಭವಿಸುತ್ತ ಇರಲ್ಲಿಲ್ಲ. ಆದರೆ ಈಗ ಇದರ ಬಳಕೆ ಹೊರಟು ಹೋಗಿದೆ ಹಾಗಾಗಿ ಇತ್ತೀಚೆಗೆ ಈ ಸಮಸ್ಯೆಗಳು ಜಾಸ್ತಿ ಆಗುತ್ತಿವೆ. ಹಾಗಾಗಿ ಸುಲಭವಾಗಿ ಸರಳವಾಗಿ ಮನೆಯಲ್ಲೇ ಈ ಸಮಸ್ಯೆಯನ್ನು ಸರಿಪಡಿಸಿಕೊಳ್ಳಲು ಸಾಧ್ಯತೆ ಇದೆ. ಇನ್ನೂ ಹೊಟ್ಟೆಯ ಭಾಗದಲ್ಲಿ ಬರುವಂತಹ ಸಮಸ್ಯೆಗಳು ಅಂದರೆ ಪ್ರಮುಖವಾಗಿ ಅಸಿಡಿಟಿ, ಆಸಿಡ್ ರೆಫ್ಲೆಕ್ಸ್ ಹಾಗೂ ಏನು ತಿಂದರೂ ಹಾಗೆ ಹೊರಗೆ ವಾಂತಿ ಬರುವುದು ಈ ತರಹದ ಸಮಸ್ಯೆಗಳಿಗೆ ಇದೊಂದು ಅದ್ಭುತವಾದ ಚಿಕಿತ್ಸೆ. ಹಾಗಾಗಿ ಇದನ್ನು ಹಾಲಿನಲ್ಲಿ ಬೆರೆಸಿ ಕುಡಿಯುವುದರಿಂದ ಯಾವುದೇ ತೊಂದರೆ ಇಲ್ಲ. ಅಥವಾ ಅಡಿಕೆ ಪುಡಿ ರೂಪದಲ್ಲಿ ಸೇವನೆ ಮಾಡಬಹುದು. ಹೊಟ್ಟೆಯ ಭಾಗದಲ್ಲಿ ಬರುವಂತಹ ಹುಣ್ಣುಗಳು. ಅಂದರೆ ಅಸಿಡಿಟಿಯ ಮುಂದಿನ ಹಂತವೇ ಅಲ್ಸರ್ ಈ ತರಹದ ಸಮಸ್ಯೆಗಳನ್ನು ನಿವಾರಿಸಲು ಈ ಜಾ ಪತ್ರೆ ಸಹಾಯ ಮಾಡುತ್ತದೆ. ಹೊಟ್ಟೆಗೆ ಸಂಬಂದಿಸಿದ ಗ್ಯಾಸ್ಟ್ರಿಕ್, ಅಲ್ಸರ್, ಅಸಿಡಿಟಿ ಅಂತಹ ಸಮಸ್ಯೆಗಳು ಹಾಗೂ ಜಟರಗ್ನಿ ಸರಿಯಾಗಿ ಉತ್ಪತ್ತಿ ಆಗುತ್ತಿಲ್ಲ ಎಂದರೆ ಅದಕ್ಕೂ ಕೂಡ ಜಾ ಪತ್ರೆಯಲ್ಲಿ ಉತ್ತಮವಾದ ಔಷಧ ಇದೆ.

ಇನ್ನೂ ಮಳೆಗಾಲ ಮತ್ತು ಚಳಿಗಾಲದಲ್ಲಿ ಈ ಕಫದ ಸಮಸ್ಯೆ ತುಂಬಾನೇ ಕಾಡುತ್ತದೆ. ಈ ಕಫ ವೃದ್ಧಿ ಆಗುತ್ತಿರುವಾಗಲೆ ಈ ಚಿಕಿತ್ಸೆಯನ್ನು ಆಹಾರದ ರೂಪದಲ್ಲಿ ಮಾಡುತ್ತಾ ಬಂದರೆ ಅದು ಉಲ್ಬಣ ಆಗೋದಿಲ್ಲ. ಹಾಗಾಗಿ ಈ ಕಫ ವನ್ನ ಕರಗಿಸುವ ಶಕ್ತಿ ಈ ಜಾ ಪತ್ರೆ ಗಿದೆ. ಅತಿಯಾದ ಕಫ ವನ್ನ ಕರಗಿಸುವ ಗುಣ ಇದ್ದು ಇದರ ಬಳಕೆ ಮಾಡುವುದು ಒಳ್ಳೆಯದು. ಇನ್ನೂ ಸೌಂದರ್ಯ ವರ್ಧಕವಾಗಿ ಇದೊಂದು ಅ್ಭುತವಾದ ಶಕ್ತಿ ಹೊಂದಿರುವ ಮದ್ದು. ನಮ್ಮ ಹಳೆಯ ಚರ್ಮವನ್ನು ಕಿತ್ತು ಆಚೆ ಹಾಕಿ ಹೊಸ ಚರ್ಮ ತಂದು ಕೊಡುವಂಥ ಶಕ್ತಿ ಇದೆ. ಕೇವಲ ನಿಂಬೆ ಹಣ್ಣಿನ ರಸದಲ್ಲಿ ಇದನ್ನು ತೇದು ಮುಖಕ್ಕೆ ತೆಳುವಾಗಿ ಲೇಪನ ಮಾಡಿದರೆ 8 ದಿನಗಳಲ್ಲಿ ನಿಮ್ಮ ಹಳೇ ಚರ್ಮದ ಮೇಲಿರುವ ಕಲೆಗಳು ತಾನಾಗೇ ಕಿತ್ತುಕೊಂಡು ಬರುತ್ತವೆ. ಕೆಲವರು ಚರ್ಮ ಸುಲಿಯುತ್ತಿದೆ ಎಂದು ಹೆದರುವುದೂ ಉಂಟು ಆದರೆ ಇದರ ಕೆಲಸವೇ ಇದು. ಮೇಲ್ಪದರದ ಚರ್ಮವನ್ನು ತೆಗೆದು ಹಾಕಿ ಒಳ ಪದರದ ಶುದ್ಧವಾದ ಚರ್ಮ ಬರುತ್ತದೆ. ಇನ್ನೂ ಬಾಯಿಯಲ್ಲಿ ಬರುವ ದುರ್ಗಂಧದ ಸಮಸ್ಯೆಗೆ ಅಡಿಕೆ ಪುಡಿ ಜೊತೆ ಬೆರೆಸಿ ತುಪ್ಪದಲ್ಲಿ ಹುರಿದು ಅದನ್ನು ಬಾಯಲ್ಲಿ ಹಾಕಿ ಜಗಿಯುವುದರಿಂದ ಬಯಲ್ಲಿರುವ ದುರ್ಗಂಧ ನಾಶವಾಗುವುದು. ಆದರೆ ಗಮನಿಸಬೇಕಾದ ಅಂಶ ಎಂದರೆ ಇದನ್ನು ಅತೀ ಕಡಿಮೆ ಪ್ರಮಾಣದಲ್ಲಿ ಬಳಸಿ. ಇನ್ನೂ ಜಾ ಪತ್ರೆ ಕ್ಷೀರ ಮಾಡುವ ವಿಧಾನ. ಮೊದಲು ಅರ್ಧ ಇಂಚು ಜಾ ಪತ್ರೆ ಯನ್ನ ಎರೆಡು ಹನಿ ಹಾಲಿನಲ್ಲಿ ತೆಯಬೇಕು, ನಂತರ ಅದನ್ನು 2 ಲೋಟ ಹಾಲಿಗೆ ಬೆರೆಸಿ ಜೇನುತುಪ್ಪ ಹಾಗೂ ಏಲಕ್ಕಿ ಪುಡಿ ಸೇರಿಸಿದರೆ ಜಾ ಪತ್ರೆ ಕ್ಷೀರ ಸವಿಯಲು ಸಿದ್ಧ. ಶುಭದಿನ.

Leave a Reply

Your email address will not be published. Required fields are marked *