ನಮಸ್ತೆ ಪ್ರಿಯ ಓದುಗರೇ, ಮರಾಟ ಮೊಗ್ಗು ಅಥವಾ ಇತರೆ ಮಸಾಲೆ ಪದಾರ್ಥಗಳನ್ನು ನಾವು ಸಾಮಾನ್ಯವಾಗಿ ಅಡುಗೆಯ ಸುವಾಸನೆ ಹೆಚ್ಚಿಸಲು ಬಳಸುತ್ತೇವೆ. ಆದರೆ ಅವುಗಳ ಆರೋಗ್ಯಕರ ಪ್ರಯೋಜನಗಳನ್ನೂ ತಿಳಿದರೆ ಅವುಗಳನ್ನು ಬರೀ ಅಡುಗೆಗೆ ಬಳಸಬೇಕಾ? ಅಥವಾ ಅದರಿಂದ ಇತರೆ ಪಾನೀಯ ಅಥವಾ ಕಷಾಯ, ಟೀ ಗಳನ್ನು ಮಾಡಿ ಕುಡಿಯಬಹುದ ಎಂದು ತಿಳಿದುಕೊಳ್ಳೋಣ. ಆದ್ದರಿಂದ ಇಂದಿನ ಲೇಖನದಲ್ಲಿ ಮರಾಟ ಮೊಗ್ಗಿನಿಂದ ಒಂದು ಟೀ ಮಾಡುವ ವಿಧಾನ ನೋಡೋಣ ಸ್ನೇಹಿತರೆ. ಮೊದಲು ಈ ಮರಾಟ ಮೊಗ್ಗಿನ ಉಪಯೋಗಗಳನ್ನು ತಿಳಿಯೋಣ. ಈ ಮರಾಟ ಮೊಗ್ಗು ಅoದ ತಕ್ಷಣ ನಮಗೆ ನೆನಪಾಗುವುದೇ ಬಿಸಿಬೇಳೆಬಾತ್. ಈ ಬಿಸಿಬೇಳೆಬಾತ್ ತಯಾರಿಸಲು ಮರಾಟ ಮೊಗ್ಗು ಬೇಕೆ ಬೇಕು. ಇದು ಕೇವಲ ನಮ್ಮ ಅಡುಗೆ ಮನೆಯ ಸಾಂಬಾರು ಪದಾರ್ಥಗಳ ಸಾಲಿಗೆ ಸೇರಿದೆ. ಆದರೆ ಇದರಲ್ಲಿ ಕೆಲವು ಅದ್ಭುತವಾದ ಔಷಧಿ ಗುಣಗಳಿವೆ. ಅದನ್ನು ತಿಳಿದುಕೊಂಡರೆ ಮನೆಯಲ್ಲಿ ಯಾವಾಗಲೂ ಸಿಗುವ ಮರಾಟ ಮೊಗ್ಗನ್ನು ನಮಗೆ ಸಮಸ್ಯೆಗಳು ಬಂದಾಗ ಬೇಗನೆ ಒಂದು ಕಷಾಯ ಅಥವಾ ಟೀ ಮಾಡಿ ಕುಡಿದರೆ ಆ ಸಮಸ್ಯೆ ಬಗೆ ಹರಿಯುತ್ತದೆ.

ಯಾರಿಗಾದರೂ ಮನೆಯಲ್ಲಿ ತುಂಬಾ ಬೇಧಿ ಆಗುತ್ತಿದ್ದರೆ ಈ ಟೀ ಮಾಡಿ ಒಂದೊಂದು ಗಂಟೆಗೆ ಎರೆಡು ಚಮಚ ಬೆಳಿಗ್ಗೆ ಇಂದ ಸಂಜೆಯ ವರೆಗೆ 5-6 ಬಾರಿ ಕುಡಿದರೆ ತಕ್ಷಣ ಹತೋಟಿಗೆ ಬರುತ್ತದೆ. ಕೆಲವೊಮ್ಮೆ ವಿಪರೀತ ಉಷ್ಣದಿಂದ ಬೇಧಿ ಆಗುತ್ತಿರುತ್ತದೆ ಆಗ ಕೂಡ ಇದನ್ನು ಕುಡಿದರೆ ಪರಿಹಾರ ಸಿಗುತ್ತದೆ. ಫುಡ್ ಪಾಯಿಸನ್ ಆಗಿ ಬೇಧಿ ಆಗುತ್ತಿದ್ದರೂ ಈ ಟೀ ನಿಮಗೆ ತಕ್ಷಣ ಶಮನ ನೀಡುತ್ತದೆ. ಈ ಟೀ ಮಾಡಿಕೊಂಡು ಕುಡಿಯುವುದರಿಂದ ಯಾವುದೇ ರೀತಿಯ ಬೇಧಿ, ಡಏರಿಯಾ, ಅತಿಸಾರ ಸಂಸ್ಯೆಗಳಿಗೆ ಪರಿಹಾರ ಸಿಕ್ಕುತ್ತದೆ. ಇದೊಂದು ಉತ್ತಮ ಜೀರ್ಣಕಾರಿ. ಸಮಾನ್ಯವಾಗಿ ನಾವು ಮಸಾಲೆ ಸಾಂಬಾರು ಪದಾರ್ಥಗಳನ್ನು ನಾವು ಅಡುಗೆಯ ಸುವಾಸನೆ ಜೊತೆಗೆ ಉತ್ತಮ ಜೀರ್ಣಕರಕಗಳು ಎಂದು. ನಾವು ಬಳಸುವ ಚಕ್ಕೆ, ಲವಂಗ, ಏಲಕ್ಕಿ, ಧನಿಯ, ಮರಾಟ ಮೊಗ್ಗು ಎಲ್ಲವೂ ಉತ್ತಮ ಜೀರ್ಣಕಾರಿಗಳು. ಹಾಗೂ ನಾವು ಈ ಟೀ ಅಲ್ಲಿ ಕೊತ್ತಂಬರಿ ಬೀಜವನ್ನು ಬಳಸುತ್ತಿರುವುದರಿಂದ ಇದರಲ್ಲಿ ಹೆಚ್ಚಿನ ನಾರಿನ ಅಂಶ ಇದ್ದು, ಮಲ ವಿಸರ್ಜನೆಗೆ ಸಹಾಯಕಾರಿ ಆಗಿದೆ. ಇನ್ನೂ ಸ್ಥೂಲಕಾಯ ಅಂದರೆ ತುಂಬಾ ದಪ್ಪಾಗಿರುವವವರು ಈ ಟೀ ಅನ್ನು ಇಂದಿನಿಂದಲೇ ಕುಡಿಯಲು ಶುರು ಮಾಡಬಹುದು. ನಿಮ್ಮ ತೂಕ ಕ್ರಮೇಣ ಕಡಿಮೆ ಆಗುತ್ತದೆ. ಇತ್ತೀಚಿನ ದಿನಗಳಲ್ಲಿ ಹಲವು ಜನರು ಹೇಳುವುದು ಒಂದೇ ನಮಗೆ ರಾತ್ರಿ ನಿದ್ದೆಯೇ ಬರುವುದಿಲ್ಲ ಎಂದು. ಹೀಗಿದ್ದಾಗ ಈ ಟೀ ಅನ್ನು ಸಂಜೆ ಮಾಡಿ ಕುಡಿದರೆ ರಾತ್ರಿ ಹೊತ್ತಿಗೆ ಒಳ್ಳೆ ನಿದ್ದೆ ಬರುತ್ತದೆ.

ಇನ್ನೂ ನಮಗೆ ನೋವುಗಳು ಸುಸ್ತು ಆಗುವುದು ಮೈಯಲ್ಲಿ ಶಕ್ತಿ ಇಲ್ಲ ಅಂದು ಅನಿಸಿದಾಗ ಈ ಟೀ ಕುಡಿಯಬಹುದು, ಇದರಲ್ಲಿ ಒಣ ಕರ್ಜೂರ ಬಳಸುತ್ತಿರುವುದರಿಂದ ನಿಮ್ಗೆ ತಕ್ಷಣ ಶಕ್ತಿ ಒದಗಿಸುತ್ತದೆ. ಒಣ ಕರ್ಜೂರದಲ್ಲಿ ಉತ್ತಮ ಪೋಷಕಾಂಶಗಳು ಇದ್ದು, ಇಡೀ ದಿನಕ್ಕೆ ಬೇಕಾದ ಶಕ್ತಿ ಚೈತನ್ಯ ಒದಗಿಸಲು ಕಾರಣವಾಗಿದೆ. ಹಾಗಾಗಿ ಮಾರಾಟ ಮೊಗ್ಗು ಕೇವಲ ಬಿಸಿಬೇಳೆಬಾತ್ ಗೆ ಸೀಮಿತ ವಾಗಿರದೇ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.ಆದ್ದರಿಂದ ಇದನ್ನು ಬರೀ ಅಡುಗೆಗೆ ಸೀಮಿತಗೊಳಿಸದೆ ಆಗಾಗ್ಗೆ ಈ ಥರ ಟೀ ಮಾಡಿ ಕುಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈಗ ಮರಾಟ ಮೊಗ್ಗಿನ ಟೀ ಮಾಡುವ ವಿಧಾನ ನೋಡೋಣ- ಮೊದಲು ಒಂದು ಪಾತ್ರೆಗೆ ಒಂದು ಲೋಟ ನೀರು ಹಾಕಿ ನಂತರ ಕುಡಿಯುವ ನೀರಿಗೆ 4 ಮರಾಟ ಮೊಗ್ಗು, 2 ಚಮಚ ಕೊತ್ತುಂಬರಿ ಬೀಜ, ಹಾಗೂ 4 ಒಣ ಖರ್ಜೂರ ತುಂಡುಗಳನ್ನು ಹಾಕಿ ಕುದಿಯಲು ಬಿಡಿ. ಅವೆಲ್ಲ ಮೆತ್ತಗಾಗುವವರೆಗೆ ಚೆನ್ನಾಗಿ ಕುದಿಸಿ. ನಂತರ ಗ್ಯಾಸ್ ಆಫ್ ಮಾಡಿ ಒಂದು ಲೋಟಕ್ಕೆ ನಿಂಬೆ ಹಣ್ಣಿನ ರಸ ಹಿಂಡಿ, ಕುದಿಸಿದ ಮಿಶ್ರಣವನ್ನು ಅದಕ್ಕೆ ಹಾಕಿ ಬಿಸಿಯಾಗಿರುವ ಗುಟುಕರಿಸಿ ಅದರ ಉತ್ತಮ ಪ್ರಯೋಜನಗಳನ್ನು ಪಡೆಯಿರಿ. ಶುಭದಿನ.

Leave a Reply

Your email address will not be published. Required fields are marked *