ನಮಸ್ತೆ ಪ್ರಿಯ ಓದುಗರೇ, ವಯಸ್ಸಾದಂತೆ ದೇಹದ ಎಲ್ಲಾ ಭಾಗಗಳು ಅವುಗಳ ಕೆಲಸವನ್ನು ಮಾಡುವ ಪರಿ ಕ್ಷೀಣಿಸುತ್ತಾ ಬರುವುದು ಸಹಜ. ಅದರಲ್ಲಿ ವಯಸ್ಸಾದಂತೆ ಈ ಕಣ್ಣಿನ ಕೆಳಗಡೆ ನೀರು ತುಂಬಿದ ರೀತಿ ಒಂದು ಗುಡ್ಡೆಯಾಕಾರ ಕಾಣಲು ಶುರು ಆಗುತ್ತದೆ. ಇದು ಇತ್ತೀಚೆಗೆ ಕೆಲವು ವಯಸ್ಕರಲ್ಲಿ ಬರುವುದೂ ಸಹಜವಾಗಿದೆ. ಇದು ವಯಸ್ಸಿನ ಕಾರಣದಿಂದಲೂ ಬರುತ್ತದೆ. ಆದರೆ ವಯಸ್ಸೇ ಆಗಿಲ್ಲ ಎಂದಾಗೂ ಬಂದಿದ್ದರೆ ಅದಕ್ಕೆ ಸರಳ ಚಿಕಿತ್ಸೆ ಪರಿಹಾರಗಳು ಇವೆ. ಇಂದಿನ ಲೇಖನದಲ್ಲಿ ಮೂರು ಔಷಧಿ ಸಸ್ಯಗಳು ಅಂದರೆ ಬೇವಿನ ಎಲೆ, ಕರಿಬೇವು, ಹಾಗೂ ಪುದೀನಾ ಸೊಪ್ಪನ್ನು ಬಳಸಿ ಕಣ್ಣಿನ ಕೆಳಗಿನ ನೀರಿನ ಕೇಳದಂತೆ ಕಾಣುವ ಸಮಸ್ಯೆಗೆ ಸರಳ ಚಿಕಿತ್ಸೆ ನೋಡೋಣ ಸ್ನೇಹಿತರೆ. ಮುಖದ ಸೌಂದರ್ಯದಲ್ಲಿ ಏನಾದರೂ ಸಣ್ಣ ವ್ಯತ್ಯಾಸ ಆದರೂ ಕೂಡ ಮನಸಿಗೆ ತುಂಬಾ ಹಿಂಸೆ ಆಗುತ್ತದೆ. ಎದೆಲ್ಲದೂ ನಮಗೆ ಮತ್ತೊಂದು ಚಿಂತೆ ಏನು ಕೊಡುತ್ತೆ ಅಂದ್ರೆ ಅಯ್ಯೋ ನಮಗೆ ವಯಸ್ಸಾಗುತ್ತಿದೆಯಲ್ಲ ಅನ್ನೋ ಚಿಂತೆ ಬರುವುದು. ಯಾಕಂದ್ರೆ ವಯಸ್ಸಿನಲ್ಲಿ ಈ ಸಮಸ್ಯೆಗಳು ಇರೋದಿಲ್ಲ ದಿನೇ ದಿನೇ ಹೋಗುತ್ತಾ ಹೋಗುತ್ತಾ ಈ ತರಹದ ಏನೇನೂ ಹೊಸ ಹೊಸ ಸಮಸ್ಯೆಗಳು ಹುಟ್ಟಲು ಶುರು ಆಗುತ್ತೆ.

ಈ ಕಣ್ಣಿನ ಕೆಳಗಡೆ ಒಂದು ರೀತಿ ಜೋತಾಡುವಂತೆ ಬರುತ್ತಕ್ಕಂತ ಈ ಐ ಬ್ಯಾಗ್ಸ್ ಅಂತ ಏನು ಹೇಳುತ್ತಿವೀ ಅದು ಒಳ್ಳೆ ನೀರು ತುಂಬಿದ ರೀತಿ ಇರುತ್ತೆ. ಮತ್ತೆ ಕೆಲವರಿಗೆ ನೆರಿಗೆಗಳು, ಸುಕ್ಕುಗಳು ತರಹ ಇರುತ್ತೆ. ಆ ರೀತಿ ಸಮಸ್ಯೆಗಳು ಬಂದಾಗ ನಮ್ಮ ಪ್ರಕೃತಿಯಲ್ಲಿ ಇಂತಹ ಸಮಸ್ಯೆಗಳಿಗೂ ಪರಿಹಾರ ಇದೆ. ಇದನ್ನು ನಾವು ಪತ್ತೆ ಹಚ್ಚಬೇಕು ಅಷ್ಟೇ. ಇದಕ್ಕೆ ನಾವು ಪ್ರಕೃತಿಯಲ್ಲಿ ಸಿಗುವ ಕೇವಲ ಮೂರು ರೀತಿಯ ಎಲೆಗಳನ್ನು ಮಾತ್ರ ಬಳಸಿದ್ದೇವೆ. ಇದರಲ್ಲಿ ಬಳಸಿದ ಬೇವಿನ ಎಲೆಯ ಅದ್ಭುತವಾದ ಶಕ್ತಿ ಇದೆ. ಕಣ್ಣಿನ ಸೌಂದರ್ಯ ಯಾವುದೇ ರೀತಿ ಹಲದರೂ ಸಹಿತ ಬೇವಿನ ಎಲೆಯಲ್ಲಿ ಚಿಕಿತ್ಸೆ ಇದೆ. ಇದರಲ್ಲಿ ಇನ್ನೂ ಕರಿಬೇವಿನ ಎಲೆಯನ್ನು ಬಳಸಿದ್ದೇವೆ. ಕರಿಬೇವಿನ ಎಲೆಗೆ ನೀರನ್ನು ಹೀರಿಕೊಳ್ಳುವ ಶಕ್ತಿ ಇದೆ. ಇನ್ನೂ ಕೊನೆಯದಾಗಿ ಈ ಚಿಕಿತ್ಸೆಯಲ್ಲಿ ನಾವು ಪುದೀನಾ ಎಲೆಗಳನ್ನು ಬಳಸಿದ್ದೇವೆ. ಪುದೀನಾ ಎಲೆಗಳು ಚರ್ಮದ ಮೇಲಿನ ಕಫ ಅಥವಾ ಕೀವು ಶೇಖರಣೆ ಆಗಿದ್ದರೆ ಅದನ್ನು ಎಳೆದುಕೊಳ್ಳುವ, ಒಣಗಿಸುವ ಶಕ್ತಿ ಇದೆ. ಹಾಗಾಗಿ ಈ ಮೂರು ಎಲೆಗಳನ್ನು ಸಮ್ಮಿಶ್ರ ಮಾಡಿದರೆ ಕಣ್ಣಿನ ಸಮಸ್ಯೆಗೆ ಪರಿಹಾರ ಸಿಕ್ಕಂತೆ.

ಈ ಸಮಸ್ಯೆ ನೀರು ತುಂಬಿ ಆದರೂ ದಪ್ಪ ಆಗಿರಲಿ ಅಥವಾ ಚರ್ಮದ ಸಮಸ್ಯೆ ಇಂದ ಊದಿಕೊಂಡಿದ್ದರೂ, ಕಫ ತುಂಬಿ ಸೈನಸ್ ಏನಾದರೂ ಶೇಖರಣೆ ಆಗಿ ದಪ್ಪ ಆಗಿರಲಿ ಯಾವುದೇ ಕಾರಣದಿಂದ ಆಗಲಿ ಈ ಭಾಗದಲ್ಲಿ ಊದಿರಲಿ ಅದಕ್ಕೆ ಪರಿಹಾರ ನಾವು ಮೇಲೆ ಹೇಳಿರುವ ಈ ಮೂರು ಎಲೆಗಳ ಪೇಸ್ಟ್ ಅಲ್ಲಿ ಇದೆ. ಹಾಗಾಗಿ ಇದನ್ನು ಬಳಕೆ ಮಾಡುವುದು ಹೇಗೆ ನೋಡೋಣ. ರಾತ್ರಿ ಮಲಗುವ ಮುಂಚೆ ಕಣ್ಣಿನ ಕೆಲ ಭಾಗಕ್ಕೆ ಇದನ್ನು ಸ್ವಲ್ಪ ಗಟ್ಟಿ ಚಟ್ನಿಯ ಹದಕ್ಕೆ ರುಬ್ಬಿಕೊಂಡು ಕಣ್ಣಿನ ಕೆಳ ಭಾಗಕ್ಕೆ ಲೇಪವನ್ನು ಹಚ್ಚಬೇಕು. ಕಣ್ಣಿನ ಮೇಲ್ಭಾಗದಲ್ಲಿ ಊದಿದ್ದರೆ ಅಲ್ಲಿಯೂ ಕಣ್ಣು ಮುಚ್ಚಿ ಹಚ್ಚಿಕೊಳ್ಳಬೇಕು, ಆಕಸ್ಮಿಕವಾಗಿ ಈ ಲೇಪನದ ರಸ ಕಣ್ಣಿನ ಒಳಗೆ ಹೋದರೂ ಏನೂ ತೊಂದರೆ ಆಗದು. ಈ ಲೇಪನವನ್ನು ದಪ್ಪಗೆ ಕಣ್ಣು ಮುಚ್ಚಿ ಕಣ್ಣಿನ ಮೇಲೆ ಕೆಳಗೆ ಹಚ್ಚಿ ಒಂದು ಅರ್ಧ ಗಂಟೆಯ ನಂತರ ಗಟ್ಟಿ ಪದಾರ್ಥವನ್ನು ತೆಗೆದು ರಸ ಹಾಗೆಯೇ ಬಿಟ್ಟು ಬೆಳಿಗ್ಗೆ ಎದ್ದ ನಂತರ ಮುಖ ತೊಳೆಯಿರಿ. ಈ ರೀತಿ ವಾರದಲ್ಲಿ ಎರೆಡು ಬಾರಿ ಮಾಡುತ್ತಿದ್ದರೆ ದಿನ ಕ್ರಮೇಣ ಅದ ಊತವೂ ಇಳಿಯುತ್ತೆ, ಒಳಗೆ ಒಂದುವೇಳೆ ಕಫ ಇದ್ದರೆ ಅದೂ ಕರಗುತ್ತೆ ಜೊತೆಗೆ ಕಣ್ಣು ಮತ್ತೆ ಮೊದಲಿನ ಸ್ಥಿತಿಗೆ ಮರಳುತ್ತದೆ. ಹಾಗಾಗಿ ಇಂತಹ ಅದ್ಭುತವಾದ ಚಮತ್ಕಾರಿ ಹಾಗೂ ಸರಳ ಚಿಕಿತ್ಸೆಯನ್ನು ಮನೆಯಲ್ಲಿಯೇ ನೀವೇ ಮಾಡಿಕೊಂಡು ನಿಮ್ಮ ಸಮಸ್ಯೆಯನ್ನು ನೀವೇ ಬಗೆ ಹರಿಸಿಕೊಳ್ಳಬಹುದು. ಇನ್ನೂ ಈ ಲೇಪನ ಮಾಡುವ ವಿಧಾನ ನೋಡೋಣ – ಮೊದಲು ಮಿಕ್ಸಿ ಜಾರಿಗೆ ತಲಾ ಒಂದು ಮುಷ್ಟಿ ಕರಿಬೇವಿನ ಸೊಪ್ಪು, ಬೇವಿನ ಎಲೆ ಹಾಗೂ ಪುದೀನಾ ಸೊಪ್ಪನ್ನು ಹಾಕಿ ಸ್ವಲ್ಪ ನೀರನ್ನು ಹಾಕಿ ಗಟ್ಟಿ ಚಟ್ನಿ ಹದಕ್ಕೆ ರುಬ್ಬಿದರೆ ಈ ಸರಳ ಚಿಕಿತ್ಸೆ ಮಾಡಲು ಲೇಪನ ಸಿದ್ಧ. ನೋಡಿದ್ರಲ್ಲಾ ಸ್ನೇಹಿತರೆ ನಮ್ಮ ಮನೆಯ ಮುಂದೆ ಬೆಳೆಯುವ ಗಿಡ ಸಸ್ಯ ಸೊಪ್ಪಿನಿಂದ ಇಂತಹ ದೊಡ್ಡ ಸಮಸ್ಯೆಗೆ ಪರಿಹಾರ ಸಿಗುತ್ತದೆ ಅಂತ. ಈ ಮಾಹಿತಿ ಇಷ್ಟ ಆಗಿದ್ದರೆ ನೀವೂ ಉಪಯೋಗ ಮಾಡಿ ಮತ್ತು ಬೇರೆಯವರಿಗೂ ಇದನ್ನು ತಿಳಿಸಿ ಎಲ್ಲರೂ ಒಳ್ಳೆ ಉತ್ತಮ ಆರೋಗ್ಯವನ್ನು ಪಡೆಯಿರಿ. ಶುಭದಿನ.

Leave a Reply

Your email address will not be published. Required fields are marked *