ನಮಸ್ತೆ ಪ್ರಿಯ ಓದುಗರೇ, ಮುಖದಲ್ಲಿ ಕಾಣಿಸಿಕೊಳ್ಳುವ ಈ ಭಂಗು ಬಂದ ತಕ್ಷಣ ತುಂಬಾ ಜನರು ಅಂದುಕೊಳ್ಳುವುದು ಏನೆಂದರೆ ಇದು ಬಂದ ತಕ್ಷಣ ನಮಗೆ ಶನಿ ಕಾಟ ಶುರು ಆಯ್ತು ಅಂತ. ಇದು ಬಂದ ನಂತರ ನಂಗೆ ಬರೀ ಕಷ್ಟಗಳೇ ಬರುತ್ತಿದೆ. ಕೆಲವರು ಈ ಭಂಗು ಬರುವಾಗ ಕಷ್ಟ ಬರುತ್ತದೆ ಹೋಗುವಾಗ ಎಲ್ಲಾ ಕಷ್ಟಗಳು ಮಾಯ ಆಗುತ್ತವೆ ಎಂದೂ ಹೇಳುವುದುಂಟು. ಇನ್ನೂ ಕೆಲವರು ಬರುವಾಗ ತುಂಬಾ ಒಳ್ಳೆಯದಾಗುತ್ತೆ ಹೋಗುವಾಗ ಕಷ್ಟ ಬಿಟ್ಟು ಹೋಗುತ್ತದೆ ಎಂದು ಹೇಳುತ್ತಾರೆ. ಈ ರೀತಿಯಾದ ಮೂದ ನಂಬಿಕೆಗಳು ನಮ್ಮ ಜನಗಳಲ್ಲಿ ಬಂದಿದೆ. ಆದರೆ ಈ ಮುಖದ ಭಂಗು ಬರುವುದು ನಮಗೆ ಶನಿ ಕಾಟ ಕೊಡಲು ಅಲ್ಲ. ಹಿಂದೆಯೆಲ್ಲ ನಮ್ಮ ಪೂರ್ವಜರಿಗೆ 50 ವರ್ಷಗಳ ನಂತರ ಬರುತ್ತಿತ್ತು ಆದರೆ ಈಗಿನ ದಿನಗಳಲ್ಲಿ 35-40 ಪ್ರಾರಂಭ ಆಗುವ ಮುಂಚೆಯೇ ಈ ಭಂಗು ಕಾಣಲು ಶುರು ಆಗುತ್ತಿದೆ. ಇದು ಯಾರಿಗೆ ಬರುತ್ತೆ? ಯಾರಿಗೆ ಹಾರ್ಮೋನುಗಳ ವ್ಯತ್ಯಯ ಆಗುತ್ತೆ ಆಗ ಇದು ಕೆಲವು ಹಾರ್ಮೋನುಗಳ ವ್ಯತ್ಯಾಸದಿಂದ ಬರುತ್ತದೆ. ಹಾಗಾಗಿ ಇದಕ್ಕೆ ಹೊಟ್ಟೆಗೆ ಚಿಕಿತ್ಸೆ ಮಾಡುವುದು ತುಂಬಾ ಒಳ್ಳೆಯದು ಆದರೆ ಸಾಧಾರಣವಾಗಿ ನಾವು ಅಂದರೆ ಮನುಷ್ಯರೆಲ್ಲರಿಗೆ ಏನಾದರೂ ಹಚ್ಚಿಕೊಂಡರೆ ಬೇಗ ಹಿಗಬಹುದೇನೂ ಎನ್ನುವ ಕಲ್ಪನೆ, ಅದಕ್ಕಾಗಿ ನಾವಿಂದು ಈ ಅಕಾಲಿಕ ಭಂಗಿನ ನಿವಾರಣೆಗೆ ಒಂದು ಲೇಪನವನ್ನು ತಯಾರಿಸಿ ಅದನ್ನು ಹಚ್ಚಿಕೊಂಡು ಸುಲಭವಾಗಿ ಚಿಕಿತ್ಸೆ ಪಡಯೋಣ.
ನಾವು ಈ ಲೇಪನವನ್ನು ತಯಾರಿಸಲು ಇಂದು ಆಲೂಗೆಡ್ಡೆಯನ್ನು ಬಳಸುತ್ತಿದ್ದೇವೆ. ಅಲಿಗೆಡ್ಡೆಯಲ್ಲಿ ಬ್ಲೇಮಿಷಿಂಗ್ ಅನ್ನುವ ಒಂದು ಗುಣ ಇದೆ. ಅಂದ್ರೆ ಬಣ್ಣವನ್ನು ತಿಳಿಗೊಳಿಸು ವಂಥದ್ದು ಅಂದ್ರೆ ಬ್ಲೀಚಿಂಗ್ ಏಜೆಂಟ್ ಇದ್ದ ಹಾಗೆ. ಬಣ್ಣವನ್ನು ಬದಲಾಯಿಸುವ ಶಕ್ತಿ ಈ ಆಲೂಗೆಡ್ಡೆಗೆ ಇದೆ. ಹಾಗಾಗಿ ಆಲೂಗೆಡ್ಡೆಯ ರಸವನ್ನು ನಾವಿಂದು ಲೇಪನದಲ್ಲಿ ಬಳಸುತ್ತಿದ್ದೇವೆ. ಮತ್ತೊಂದು ಕಸ್ತೂರಿ ಅರಿಶಿನ ಪುಡಿಯನ್ನ ನಾವಿಂದು ಬಳಸುತ್ತಿದ್ದೇವೆ. ಕಸ್ತೂರಿ ಅರಿಶಿನ ಅನ್ನುವುದು ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಇದೊಂದು ವರ. ಯಾಕಂದ್ರೆ ಮುಖದಲ್ಲಿ ಬರುವ ಮೊಡವೆ, ಗುಳ್ಳೆ, ಕಲೆಗಳಿಗೆ ಹಾಗೂ ಮುಖದಲ್ಲಿ ಬರುವ ಸುಕ್ಕು ಗಳ ನಿವಾರಣೆಗೆ ಈ ಕಸ್ತೂರಿ ಅರಿಶಿನ ಸಹಾಯಕಾರಿ. ಚರ್ಮದ ಮೃದುತ್ವವನ್ನ ಕಾಪಾಡಿಕೊಳ್ಳಲು ಸಹಕಾರಿ. ಇನ್ನೊಂದು ಕಡ್ಲೆ ಹಿಟ್ಟು. ಕಡ್ಲೆ ಹಿಟ್ಟಿಗೆ ಮುಖದ ಬಣ್ಣವನ್ನು ಬದಲಾಯಿಸುವ ಶಕ್ತಿ ಇದೆ. ಮುಖದ ಚರ್ಮಕ್ಕೆ ಕಾಂತಿ ಕೊಡಲು ನೆರವಾಗುತ್ತದೆ.
ಈ ಎಲ್ಲಾ ವಸ್ತುಗಳನ್ನು ಬಳಸಿ ಲೇಪವನ್ನು ಮಾಡಿ ಹಚ್ಚಿ ಅರ್ಧ ಗಂಟೆಯ ಬಳಿಕ ಉಗುರು ಬೆಚ್ಚನೆಯ ನೀರಿನಲ್ಲಿ ಮುಖ ತೊಳೆಯಿರಿ. ಈ ಲೇಪವನ್ನು ಜಾಸ್ತಿ ಪ್ರಮಾಣದಲ್ಲಿ ತಯಾರಿಸಿ ಫ್ರಿಡ್ಜ್ ಅಲ್ಲಿಟ್ಟು ದಿನಪ್ರತೀ ಹಚ್ಚುತ್ತಾ ಬಂದಿದ್ದೆ ಆದರೆ ಮುಖದ ಮೇಲಿನ ಭಂಗಿನ ಬಣ್ಣ ದಿನೇ ದಿನೇ ತಿಳಿಯಾಗುತ್ತದೆ. ಇದು ದೀರ್ಘ ಕಾಲದ ಚಿಕಿತ್ಸೆ ಆಗಿದ್ದು ಬಹಳ ತಾಳ್ಮೆ ಇಂದ ಮಾಡಿದರೆ ಖಂಡಿತ ಪರಿಹಾರ ಪಡೆಯಬಹುದು. ಇದನ್ನು ನಿರಂತರವಾಗಿ ಹಚ್ಚುತ್ತಾ ಬಂದರೆ ಮುಖದ ಚರ್ಮದ ಇನ್ನೂ ಹಲವಾರು ಸಮಸ್ಯೆಗಳಿಗೆ ಒಳ್ಳೆಯ ಪರಿಹಾರ ಸಿಗುತ್ತದೆ. ಈ ಲೇಪನ ಮಾಡುವ ವಿಧಾನ ನೋಡೋಣ- ಮೊದಲು ಅಳೆಗೆದೆಯನ್ನು ಹಸಿಯಾಗಿಯೇ ತುರಿದು ರಸವನ್ನು ಹಿಂಡಿ ಇಟ್ಟುಕೊಳ್ಳಿ, ಆ ರಸಕ್ಕೆ ಕಸ್ತೂರಿ ಅರಿಶಿನ ಅರ್ಧ ಚಮಚ, ಒಂದು ಚಮಚ ಕಡ್ಲೆ ಹಿಟ್ಟು ಹಾಗೂ ಇದನ್ನು ಮಿಶ್ರಣ ಮಾಡಲು ರೋಸ್ ವಾಟರ್ ಬಳಸಿ ಪೇಸ್ಟ್ ರೀತಿ ತಯಾರಿಸಿ. ಇದನ್ನು ಪೂರ್ತಿ ಮುಖಕ್ಕೆ ಹಚ್ಚುತ್ತಾ ,ಕಲೆಗಳು ಭಂಗು ಆದ ಜಾಗಕ್ಕೆ ದಪ್ಪ ಲೇಪನ ಹ ಹೋಗುತ್ತಾ ಬಂದರೆ ಕ್ರಮೇಣ ಕಲೆಗಳೆಲ್ಲ ತಿಳಿ ಆಗಿ ಮಾಯ ಆಗುವುವು. ಶುಭದಿನ.