ನಮಸ್ತೆ ಪ್ರಿಯ ಓದುಗರೇ, ಪಲಾವ್ ಎಲೆ ಎಂದ ತಕ್ಷಣ ಪಲಾವ್ ನೆನೆಪಿಗೆ ಬರುತ್ತೆ.ಇಂದಿನ ಲೇಖನದಲ್ಲಿ ಇದರಲ್ಲಿ ಒಂದು ಟೀ ಮಾಡಿ ಅದರ ಉಪಯೋಗಗಳನ್ನು ನೋಡೋಣ ಸ್ನೇಹಿತರೆ. ಪಲಾವ್ ಎಲೆಯನ್ನು ನಾವು ಪಲಾವ್ ಮಾಡಲು ಉಪಯೋಗ ಮಾಡ್ತೀವಿ. ಆದರೆ ಇದರಲ್ಲಿ ಏನು ಆರೋಗ್ಯಕರ ಔಷಧಿ ಇದೆ? ಅದನ್ನು ತಿಳಿಯೋಣ. ಪಲಾವ್ ಎಲೆ ಒಂದು ಅದ್ಭುತವಾದ ಶಕ್ತಿ ಇರುವಂಥದ್ದು. ಇದು ದಾಲ್ಚಿನ್ನಿ ಅಂದರೆ ಚಕ್ಕೆ ಮರದಲ್ಲಿ ಬಿಡುವಂತಹ ಎಲೆ. ದಾಲ್ಚಿನ್ನಿ ಚಕ್ಕೆಯಲ್ಲಿ ಎಷ್ಟೊಂದು ಔಷಧೀಯ ಗುಣಗಳಿವೆ ಎನ್ನುವುದು ನಮ್ಮೆಲ್ಲರಿಗೂ ಗೊತ್ತಿರುವ ವಿಷಯ. ಸಾಧಾರಣವಾಗಿ ಯಾವುದೇ ಮರದಲ್ಲಿ ಅದ ಮರದ ಹಣ್ಣು, ಕಾಯಿ, ಹೂವು ಬೇರಿಗಿಂತಲೂ ಆ ಮರದ ಹಸಿರಿನಲ್ಲಿ ಅಂದರೆ ಎಲೆಗಳಲ್ಲಿ ಇರುತ್ತೆ. ಯಾಕಂದ್ರೆ ಎಲ್ಲಾ ಶಕ್ತಿ ಈ ಹಸಿರಿನಲ್ಲೆ ಅಂದ್ರೆ ಎಲೆಯಲ್ಲಿ ಸಂಗ್ರಹ ಆಗಿರುತ್ತೆ. ಸೂರ್ಯನ ಶಕ್ತಿ ಎಳೆದುಕೊಳ್ಳುವ ಎಲೆಗಳಲ್ಲಿ ಮೊದಲು ಶಕ್ತಿ ಸಂಗ್ರಹ ಆಗಿರುತ್ತೆ ಆಮೇಲೆ ಆ ಶಕ್ತಿ ಬೇರು, ಕಾಂಡಕ್ಕೆ ಎಲ್ಲಾ ಕಡೆ ತಲುಪುತ್ತದೆ. ಹಾಗಾಗಿ ಹೆಚ್ಚಿನ ಶಕ್ತಿ ಇರುವುದು ಎಳೆಗಳಲ್ಲಿಯೇ. ತಯಾರು ಮಾಡಿರುವ ಗುಳಿಗೆ ರೂಪದ ಔಷಧಿಗಿಂತ ನಾವು ತಯಾರು ಮಾಡುವ ಹಸಿರು ಎಲೆಗಳ, ಸೊಪ್ಪುಗಳಿಂದ ತಯಾರಿಸಿದ ಔಷಧಿಯಲ್ಲಿ ಜಾಸ್ತಿ ಶಕ್ತಿ, ಔಷಧಿ ಗುಣ ಇರುತ್ತೆ ಹಾಗೂ ಶೀಘ್ರವಾಗಿ ಪರಿಣಾಮವನ್ನೂ ಪಡೆಯಬಹುದು.
ತಯಾರಿಸಿದ ಗುಳಿಗೆ ಇಂದ ಒಂದು ತಿಂಗಳಲ್ಲಿ ರೋಗ ವಾಸಿ ಆದರೆ ಹಸಿರು ಸೊಪ್ಪು ಎಲೆಗಳಿಂದ ತಯಾರಿಸಿದ ಔಷಧಿಯಿಂದ ಕೇವಲ 8 ದಿನಗಳಲ್ಲೇ ರೋಗ ವಾಸಿ ಆಗುತ್ತದೆ. ಮೊಟ್ಟ ಮೊದಲನೆಯ ಸಮಸ್ಯೆ ಅಂದ್ರೆ ಈ ಕಾಲದಲ್ಲಿ ಎಲ್ಲರಿಗೂ ಅರ್ಧ ತಲೆನೋವಿನ ಬಾಧೆ. ಇದನ್ನ ಮೈಗ್ರೇನ್ ಅಥವಾ ಅರೆ ತಲೆನೋವು ಎಂತಲೂ ಕರೆಯುತ್ತಾರೆ. ಈ ರೀತಿಯ ತಲೆನೋವಿನ ಸಮಸ್ಯೆ ಇದ್ರೆ ಕೆಲವರಿಗೆ ವಾಂತಿ ಆಗುವುದು ಇನ್ನೂ ಅನೇಕ ರೀತಿ ತೊಂದರೆ ಅನುಭವಿಸುತ್ತಾರೆ. ಇಂದಿನ ದಿನಗಳಲ್ಲಿ ಮಾನಸಿಕ ಒತ್ತಡ ಅನ್ನುವುದು ಎಲ್ಲರಿಗೂ ಕಾಡುವ ಸಮಸ್ಯೆಗೆ ಈ ಪಲಾವ್ ಎಲೆಯಲ್ಲಿ ಚಿಕಿತ್ಸೆ ಇದೆ. ಈ ತರಹ ಒತ್ತಡ ಬಂದಾಗ ತಲೆಯಲ್ಲಿನ ನರಗಳು ಬಿಸಿ ಆದ ಅನುಭವ ಆಗುವುದು. ಮನಸ್ಸಿಗೆ ಸಮಸ್ಯೆಗಳು ಗುದ್ದಿದಂತೆ ಅನುಭವ. ಆ ಎಲ್ಲಾ ಒತ್ತಡವನ್ನು ನಿಯಂತ್ರಿಸಿ, ಮನಸ್ಸನ್ನು ಶಾಂತಗೊಳಿಸಿ, ಮೆದುಳಿನ ನರಗಳನ್ನು ತಂಪುಗೊಳಿಸುತ್ತದೆ ಈ ಪಲಾವ್ ಎಲೆ. ಈ ರೀತಿ ಸಮಸ್ಯೆ ಆದಾಗ ಒಂದು ಪಲಾವ್ ಎಲೆಯನ್ನು ನೀರಲ್ಲಿ ಕುದಿಸಿ ಕುಡಿದರೆ ತಕ್ಷಣ ಕಮ್ಮಿ ಆಗಲಿಲ್ಲ ಅಂದಾಗ ಇನ್ನೊಮ್ಮೆ ರಾತ್ರಿ ಮಲಗುವ ಮುನ್ನ ಮಾಡಿ ಕುಡಿಯಿರಿ ಹೀಗೆ ಮೂರು ನಾಲ್ಕು ದಿನ ಕುಡಿದರೆ, ಗುಳಿಗೆಗೆ ವಾಸಿಯಾಗದ ತಲೆನೋವು ಈ ಟೀ ಇಂದ ಶೀಘ್ರವಾಗಿ ಕಡಿಮೆ ಆಗುತ್ತದೆ.
ಇನ್ನೊಂದು ಮುಖ್ಯವಾದ ಅಂಶ ಎಂದರೆ, ಈ ಟೀ ಅನ್ನು ಕುಡಿತಾ ಇದ್ರೆ ಕೂದಲು ಉದುರುವ ಸಮಸ್ಯೆ ಕಡಿಮೆ ಆಗುತ್ತದೆ. ಕೂದಲು ಗಟ್ಟಿಯಾಗಿ ತಲೆಯಲ್ಲೆ ಉಳಿಯಲು ಕೇವಲ ಮೇಲಿಂದ ಎಣ್ಣೆಯನ್ನು ಹಚ್ಚುವುದಷ್ಟೇ ಅಲ್ಲ ಆಗಿದ್ದಾಗೆ ಈ ಟೀ ಅನ್ನು ಮಾಡಿ ಕುಡಿಯುತ್ತಾ ಇದ್ದರೆ ಬುಡಕ್ಕೆ ಶಕ್ತಿ ಬಂದು ಒಳಗಿನಿಂದಲೇ ಕೂದಲು ಉದುರುವ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಂತೆ ಆಗುತ್ತದೆ. ಪಲಾವ್ ಎಲೆಯ ಟೀ ಮಾಡುವ ವಿಧಾನ ತಿಳಿಯೋಣ – ಮೊದಲು ಒಂದು ಪಾತ್ರೆಗೆ ಒಂದು ಲೋಟ ನೀರನ್ನು ಹಾಕಿ ಅದಕ್ಕೆ ಎರೆಡು ಪೂರ್ತಿ ಎಲೆಗಳನ್ನು ಮುರಿದು ಹಾಕಿ ನಂತ್ರ ಅರಿಶಿನ ಕೊಂಬು ಪುಡಿ ಮಾಡಿ ಒಂದು ಚಮಚದಷ್ಟು ಸೇರಿಸಿ ಅವೇರೆ ಡೂ ಕುಡಿಯುವಾಗ ಬೆಲ್ಲವನ್ನು ಸೇರಿಸಿ. ಎಲ್ಲವೂ ಕುದ್ದ ನಂತ್ರ ಹಾಲು ಸೇರಿಸಿ ಶೋಧಿಸಿ ಬಿಸಿ ಇರುವಾಗಲೇ ಮನೆ ಮಂದಿಯೆಲ್ಲ ಕುಡಿದು ಅದ್ಭುತವಾದ ಆರೋಗ್ಯವನ್ನು ವೃದ್ಧಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಶುಭದಿನ.