ನಮಸ್ತೆ ಪ್ರಿಯ ಓದುಗರೇ, ಸ್ಟಾರ್ ಅನೀಸ್ ಅಥವ ನಕ್ಷತ್ರ ಸೋಂಪು ಅಂತಲೂ ಇದನ್ನು ಕರೆಯುತ್ತಾರೆ. ಇದರ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿಲ್ಲ, ನೋಡಿಯೂ ಇರುವುದಿಲ್ಲ. ಆದರೆ ದೊಡ್ಡ ದೊಡ್ಡ ಮಸಾಲೆಯನ್ನು ತಯಾರು ಮಾಡುವವರು ಈ ಸ್ಟಾರ್ ಅನೀಸ್ ಅನ್ನು ಬಳಕೆ ಮಾಡುತ್ತಾರೆ. ಹೇಳಬೇಕೆಂದರೆ ಇದೊಂದು ಹಣ್ಣು. ಈ ಹಣ್ಣನ್ನು ಒಣಗಿಸಿ ಇದನ್ನ ನಾವು ಆಹಾರದಲ್ಲಿ ಬಳಕೆ ಮಾಡುತ್ತಿದ್ದೇವೆ. ಅದನ್ನು ಪ್ರತ್ಯಕ್ಷವಾಗಿ ನೋಡಿದಾಗ ಇದೊಂದು ಹಣ್ಣು ಎಂದು ಯಾರಿಗೂ ಅನಿಸುವುದಿಲ್ಲ. ಅಂದ್ರೆ ಹಣ್ಣುಗಳಲ್ಲಿ ಅದ್ಭುತವಾದ ಶಕ್ತಿ ಇರುತ್ತೆ ಎನ್ನುವುದಕ್ಕೆ ಇದು ಒಂದು ಉದಾಹರಣೆ. ಇದು ನಮ್ಮ ಶರೀರಕ್ಕೆ ಅತ್ಯಂತ ಪ್ರಯೋಜನಕಾರಿ. ತುಂಬಾ ರೀತಿಯ ಆರೋಗ್ಯದ ಸಮಸ್ಯೆಗಳಿಗೆ ಇದರಲ್ಲಿ ಔಷಧಿ ಇದೆ. ನಾವು ಇದನ್ನು ಗಮನದಲ್ಲಿ ಇಟ್ಟುಕೊಂಡೇ ಇರುವುದಿಲ್ಲ. ಅಥವಾ ಕನಿಷ್ಟ ಪಕ್ಷ ಯಾರೂ ಕೆಲವೊಬ್ಬರು ಕೆಲವು ಅಡುಗೆಗಳಲ್ಲಿ ಬಳಕೆ ಮಾಡುತ್ತಾ ಇರಬಹುದು ಅಷ್ಟೇ. ಆದರೆ ನಾವು ಇಂದು ತಿಳಿಸುವ ಮಾಹಿತಿಯನ್ನು ನೋಡಿದ್ದೆ ಆದರೆ ನಾಳೆಯೇ ನಿಮ್ಮ ಒಗ್ಗರಣೆ ಡಬ್ಬಿಗೆ ಇದು ಹಾಜರಾಗುತ್ತೆ. ಇದು ನಮ್ಮ ದೇಹದ ರಕ್ತ ಸಂಚಾರ ವನ್ನ ತುಂಬಾ ಉತ್ತಮಗೊಳಿಸುತ್ತದೆ.
ರಕ್ತ ಸಂಚಾರ ಯಾವ ಜಾಗದಲ್ಲಿ ಅಥವಾ ಭಾಗದಲ್ಲಿ ಸರಿಯಾಗಿ ಆಗುವುದಿಲ್ಲವೋ ಅದ ಜಾಗದಲ್ಲಿ ನೋವು ಊಟ ತಬರುತ್ತೆ, ಅಲ್ಲಿ ನೀರು ಶೇಖರಣೆ ಆಗುತ್ತೆ ಈ ರೀತಿಯ ಸಮಸ್ಯೆಗಳು ಉಂಟಾಗುತ್ತವೆ. ಮೆದುಳಿನಲ್ಲಿ ರಕ್ತ ಸಂಚಾರ ಸರಿಯಾಗಿ ಆಗುತ್ತಿದ್ದರೆ ಮೆದುಳು ಚೆನ್ನಾಗಿ ಕೆಲಸ ಮಾಡುತ್ತೆ ಹಾಗೂ ಚುರುಕಾಗಿಯೊ, ನರಮಂಡಲ ವ್ಯವಸ್ಥೆ ಚೆನ್ನಾಗಿ ಇರುತ್ತೆ. ಹಾಗಾಗಿ ರಕ್ತ ಸಂಚಾರ ಚೆನ್ನಾಗಿ ಆದರೆ ಮೆದುಳಿನ ಕ್ರಿಯಾ ಶೀಲತೆ ಹೆಚ್ಚುತ್ತದೆ. ನರಗಳೆಲ್ಲವೂ ಅದ್ಭುತವಾಗಿ ಕೆಲಸ ಮಾಡಲು ಶುರುವಾಗುತ್ತೆ. ನರಮಂಡಲ ವ್ಯವಸ್ಥೆ ಸರಿಯಾಗಿತ್ತು ಅಂದರೆ ಮನುಷ್ಯನಿಗೆ ಮುಕ್ಕಾಲು ಪಾಲು ಸಮಸ್ಯೆಗಳು ನಿವಾರಣೆ ಆಗುತ್ತವೆ. ಇದನ್ನು ಸೇವನೆ ಮಾಡಲು ಮುಖ್ಯ ಕಾರಣ ರಕ್ತ ಸಂಚಾರ ಚೆನ್ನಾಗಿ ಆಗಲು ಎಂದು ನೀವು ತಿಳಿಯಲೇಬೇಕು. ಇನ್ನೂ ಯಾರಿಗೆ ಅಸ್ತಮಾ ಇರುತ್ತದೆ ಅವರಿಗೆ ವಿಪರೀತ ಕಫ ಶೇಖರಣೆ ಆಗಿರುತ್ತದೆ. ಅಸ್ತಮಾ ರೋಗಿಗಳು ಏನು ತಿಂದರೂ ಅದು ಕಫ ಆಗಿ ಬದಲಾವಣೆ ಹೊಂದುತ್ತದೆ. ಆ ಕಫ ವನ್ನೂ ಹೋಗಿಸಿಕೊಳ್ಳಲ್ಲೋ ಕಷ್ಟ ಹಾಗೂ ಅದರಿಂದ ತೊಂದರೆ ಅನುಭವಿಸುವುದು ಇನ್ನೂ ಕಷ್ಟ. ಹಾಗಾಗಿ ಅಸ್ತಮಾ ಸಮಸ್ಯೆ ಇರುವವರಿಗೆ ಎದೆಯಲ್ಲಿ ಅಂದರೆ ಶ್ವಾಸಕೋಶದ ಭಾಗದಲ್ಲಿ ಯಾರೂ ಗುದ್ದಿದ ಹಾಗೆ ನೋವು, ರಾತ್ರಿ ಇಡೀ ಕೆಮ್ಮು, ಬೆನ್ನು ನೆಲಕ್ಕೆ ಬಿದ್ದರೆ ಸಾಕು ಕೆಮ್ಮು ಶುರು ಆಗುತ್ತದೆ. ಈ ಮಳೆಗಾಲ ಚಳಿಗಾಲ ಬಂದರೆ ಈ ಅಸ್ತಮಾ ಇರುವ ಜನರಿಗೆ ಒಂದು ತರಹ ನರಕ ಇದ್ದಂತೆ. ಇಂತಹ ಸಮಸ್ಯೆ ಇರುವವರೂ ಈ ಮಳೆಗಾಲದಲ್ಲಿ ಇಂದು ನಾವು ಹೇಳಿ ಕೊಡುವ ಈ ಸ್ಟಾರ್ ಅನೀಸ್ ಟೀ ಅನ್ನು ಮಾಡಿ ಕುಡಿಯುತ್ತಾ ಬಂದರೆ ಈ ಕಾಲದಲ್ಲಿ ಬರುವಂತಹ ನೆಗಡಿ, ಕೆಮ್ಮು, ಕಫದ ಎಲ್ಲಾ ಸಮಸ್ಯೆಗಳಿಗೆ ಈ ಟೀ ಅಲ್ಲಿ ಔಷಧಿ ಇದೆ.
ಈ ಟೀ ಅನ್ನು ಒಬ್ಬರಿಗೆ ಆದರೆ ಒಂದೇ ಸ್ಟಾರ್ ಅನೀಸ್ ಬಳಸಿದರೆ ಸಾಕು. ಅದನ್ನೇ ಬೆಳಿಗ್ಗೆ ರಾತ್ರಿ ಅರ್ಧ ಅರ್ಧ ಲೋಟ ಕುಡಿದರೆ ಸಾಕು. ಇನ್ನೂ ಇದೊಂದು ಅತ್ಯಂತ ಒಳ್ಳೆಯ ಜೀರ್ಣಕಾರಿ. ನೀವು ಏನೇ ಅಡುಗೆ ಮಾಡಲಿ ಅದರಲ್ಲಿ ಇದನ್ನು ಬಳಕೆ ಮಾಡಿ ಆಹಾರ ತಯಾರಿಸಿ ತಿಂದರೆ, ಬಹಳ ಬೇಗ ಆಹಾರವನ್ನು ಜೀರ್ಣಿಸಿಬಿಡುತ್ತೆ. ಒಂಚೂರು ತ್ಯಾಜ್ಯ ದೇಹದಲ್ಲಿ ಶೇಖರಣೆ ಆಗದೆ ಇರುವ ರೀತಿ ಸಂಪೂರ್ಣವಾಗಿ ಮಲ ವಿಸರ್ಜನೆ ಆಗಲು ಸಹಕಾರಿ ಈ ಸ್ಟಾರ್ ಅನೀಸ್. ಇನ್ನೂ ಇದು ಆಹಾರವನ್ನು ಜೀರ್ಣಿಸುವುದಲ್ಲದೆ ಮಲಬದ್ದತೆ ಇಂದ ಮುಕ್ತಿ ಸಹ ನೀಡುತ್ತೆ. ಯಾವಾಗ ಜೀರ್ಣ ಹಾಗೂ ಮಲಬದ್ದತೆ ಸಮಸ್ಯೆ ಇರುವುದಿಲ್ಲವೋ ಆಗ ಗ್ಯಾಸ್ ಟ್ರಬಲ್ ಆಗೋದೇ ಇಲ್ಲ. ಶೈತ್ಯ ಪ್ರಕೃತಿ ಇರುವವರಿಗೂ ಇದು ತುಂಬಾ ಒಳ್ಳೆಯದು. ಮತ್ತೊಂದು ಮುಖ್ಯವಾದ ಅಂಶ ಎಂದರೆ, ಇದು ವೀರ್ಯ ವರ್ಧಕವಾಗಿ ಕೆಲಸ ಮಾಡುತ್ತೆ. ಹಾಗಾಗಿ ಈ ಎಲ್ಲ ಸಮಸ್ಯೆಗಳಿಗೆ ಇಂದು ನಾವು ತಿಲಿಸುತ್ತಿರುವ ಟೀ ಅತೀ ಪ್ರಯೋಜನಕಾರಿ. ಇದನ್ನು ಕುಡಿಯುವಾಗಲೆ ನಮ್ಮ ಗಂಟಲಿನ ಹಾಗೂ ಶ್ವಾಸಕೋಶದ ಎಲ್ಲಾ ಮಲಿನತೆಯೋ ಹೋಗುತ್ತೆ, ಉಸಿರಾಟದ ಪ್ರಕ್ರಿಯೆ ತುಂಬಾ ಸುಲಭ ಆಗುತ್ತೆ. ಅದರಿಂದ ಬರುವಂತಹ ಸಮಸ್ಯೆಗಳಿಗೆ ಒಂದು ಪೂರ್ಣ ವಿರಾಮ ಸಿಕ್ಕಂತೆ ಆಗುತ್ತದೆ. ಈ ಎಲ್ಲಾ ಸಮಸ್ಯೆ ಇರುವವರೂ ಸತತವಾಗಿ ಬಳಕೆ ಮಾಡಿ, ಸಮಸ್ಯೆ ಇಲ್ಲದೆ ಇರುವವರೂ ತಿಂಗಳಿಗೊಮ್ಮೆ ಬಳಕೆ ಮಾಡಿ. ಇದರ ಉತ್ತಮ ಪ್ರಯಿಜನ ಪಡೆಯಿರಿ. ಶುಭದಿನ.