ನಮಸ್ತೆ ಪ್ರಿಯ ಓದುಗರೇ, ನಮಗೆ ಭಯವಾಗುತ್ತಿದೆ, ನಮಗೆ ಭಯವಾಗುತ್ತೆ ಎಂದು ಹೇಳುತ್ತೇವೆ ಮುಂದೆ ಈ ಭಯವೇ ಒಂದು ರೀತಿಯ ಮಾನಸಿಕ ಸಮಸ್ಯೆಯಾಗಿ ಕಾಡುತ್ತಾ ಇರುತ್ತದೆ, ನಾವು ಯಾಕೇ ಭಯ ಪಡುತ್ತಾ ಇದ್ದೇವೆ? ನಮಗೆ ಯಾಕೆ ಇಷ್ಟೋಂದು ಭಯ ಎಂದು ಪ್ರಶ್ನೇ ಹಾಕಿಕೊಂಡರೆ ತಕ್ಷಣ ನಮಗೆ ಉತ್ತರ ಸಿಗುವುದಿಲ್ಲ! ಭಯದ ಬಗ್ಗೆ ನಾವು ವಿಚಾರಧಾರೆಯನ್ನು ತಿಳಿದಾಗ ಭಯ ಎನ್ನುವುದು ನಾವು ಬಾಲ್ಯದಿಂದ ರೂಢಿ ಮಾಡಿಕೊಂಡಿರುವುದಾಗಿದೆ, ಆದರೆ ನಾವು ಇಲ್ಲಿ ಭಯ ಎನ್ನುವುದನ್ನು ಗುರ್ತಿಸಿಕೊಂಡು ಆ ಭಯವನ್ನು ನಾವು ಯಾವತ್ತು ಖಾಲಿ ಮಾಡಿರುವುದಿಲ್ಲ. ನಮ್ಮ ಮನಸ್ಸಿನಲ್ಲಿ ಹಲವಾರು ರೀತಿಯ ಭಯಗಳು ಇರುತ್ತವೆ. ಉದಾಹರಣೆಗೆ:- 1)ನಮಗೆ ಮತ್ತು ನಮ್ಮ ಪ್ರೀತಿ ಪಾತ್ರರಿಗೆ ಸಾವು ಬರುತ್ತದೆ ಎಂಬ ಭಯ. 2)ರೋಗ ರುಜಿನಗಳಿಂದ ಸಾವಿನ ಭಯ. 3)ಪ್ರಾಣಿಗಳು ಮತ್ತು ಕ್ರಿಮಿ ಕೀಟಗಳ ಬಗ್ಗೆ ಭಯ. 4)ಕೊಲೆಗಡುಕರು, ಕಳ್ಳ ಕಾಕರು ,ದರೋಡೆಕೊರರ ಬಗ್ಗೆ ಭಯ. 5)ನೀರು, ಬೆಂಕಿ, ಎತ್ತರದ ಪ್ರದೇಶದ ಬಗ್ಗೆ ಭಯ. 6)ದೆವ್ವ, ಭೂತ, ಮಾಟ ಮಂತ್ರ, ಮೂಢನಂಬಿಕೆಗಳ ಬಗ್ಗೆ ಭಯ. 7) ಸರಿಯಾದ ವಿಧಿ ವಿಧಾನಗಳಲ್ಲಿ ದೇವರು ದೇವತಾರ್ಚನೆ ಆಚರಣೆ ಮಾಡುತ್ತಿದ್ದೀವೋ ಇಲ್ಲವೋ ಎಂಬ ಬಗ್ಗೆ ಭಯ. 8) ನಾವು ತಪ್ಪು ಮಾಡಿದಾಗ ಬೇರೆಯವರು ನಮ್ಮನ್ನು ಶಿಕ್ಷಿಸುವರು ಎಂಬುದರ ಬಗ್ಗೆ ಭಯ. 9)ವಸ್ತುಗಳನ್ನು, ವ್ಯಕ್ತಿಗಳನ್ನು ಪ್ರೀತಿ ಪಾತ್ರರನ್ನು ಕಳೆದುಕೊಳ್ಳುವ ಭಯ. ಹೀಗೆ ಇತ್ಯಾದಿ ಹಲವು ಭಯಗಳು ನಮ್ಮನ್ನು ಚಿಕ್ಕ ವಯಸ್ಸಿನಿಂದ ಕಾಡುತ್ತಿರುತ್ತವೆ. ಆ ಭಯಗಳನ್ನು ನಮ್ಮ ಮನಸ್ಸಿನಲ್ಲಿ ಸದಾ ಇಟ್ಟುಕೊಂಡಿದ್ದೇವೆ. ಆದರೆ ಆ ಭಯಗಳನ್ನು ಗುರ್ತಿಸಿಕೊಂಡಿರುವುದಿಲ್ಲ, ಅಥವ ಖಾಲಿ ಮಾಡಿರುವುದಿಲ್ಲ. ಹಾಗಾಗಿಯೇ ಈಗ ಭಯವು ನಮ್ಮ ಮನಸ್ಸಿನ ರೋಗಗಳಾಗಿ ನಮ್ಮನ್ನು ಕಾಡುತ್ತಿದೆ. ನಾವು ಇಲ್ಲಿ ನಮ್ಮ ಭಯವನ್ನು ಕಡಿಮೆ ಮಾಡಿಕೊಳ್ಳಲು ಕೆಲವು ಸಲಹೆ ಅಥವಾ ಸುಲಭ ಆಚರಣೆಗಳನ್ನು ನಾವು ಅನುಸರಿಸಬೇಕಾಗುತ್ತದೆ.
ನಮಗೆ ಭಯವಾಗುತ್ತಿದೆ ಎಂದರೆ. 1)ಮೊದಲಿಗೆ ನಮ್ಮ ಶ್ವಾಸದ ಕಡೆ ಗಮನ:- ಅ) ಉಸಿರನ್ನು ನಿಧಾನವಾಗಿ ತೆಗೆದುಕೊಳ್ಳುವುದು (ಪೂರಕ)ಆ)ಉಸಿರನ್ನು ಹಿಡಿದಿಟ್ಟುಕೊಳ್ಳುವುದು (ಕುಂಭಕ) ಇ) ಉಸಿರನ್ನು ನಿಧಾನವಾಗಿ ಹೊರಹಾಕುವುದು(ರೇಚಕ) ಈ) ಉಸಿರನ್ನು ತೆಗೆದುಕೊಳ್ಳದೆ ಹಾಗೆ ಇರುವುದು(ಶೂನ್ಯಕ)
ಹೀಗೆ ಇದನ್ನು 10-20 ಸರಿ ಸುಮಾರು 5-6 ನಿಮಿಷ ಮಾಡುವುದು. 2) ಪಂಚೇಂದ್ರಿಯಗಳ ಕಡೆ ಗಮನ:-ಅ) ಕಿವಿ-3-4 ವಿಚಾರದ ಶಬ್ದವನ್ನು ಕೇಳಿಸಿಕೊಳ್ಳುವುದು. ಆ)ಮೂಗು- 3-4 ಯಾವುದಾದರು ಮನಸಿಗೆ ಮುದನೀಡುವ ವಸ್ತುಗಳ ವಾಸನೆ ನೋಡುವುದು. ಇ)ನಾಲಿಗೆ- 3-4 ಆಹಾರ, ಧಾನ್ಯಗಳು, ಅಥವಾ ವಸ್ತುಗಳ ರುಚಿನೋಡುವುದು. ಈ)ಕಣ್ಣು-3-4 ವಸ್ತುಗಳನ್ನು ಕಣ್ಣಿನಿಂದ ಪ್ರಜ್ಞಾಪೂರ್ವಕವಾಗಿ ನೋಡುವುದು ಉ)ಚರ್ಮ- 3-4 ವಸ್ತುಗಳನ್ನು ಪ್ರಜ್ಞಾಪೂರ್ವಕವಾಗಿ ಮುಟ್ಟಿ ನೋಡುವುದು. 3) 100 ರಿಂದ 01 ರ ವರೆಗೆ ಅವರೋಹಣ ಕ್ರಮದಲ್ಲಿ ಸಂಖ್ಯೆಗಳನ್ನು ಏಣಿಸುತ್ತಾ ಹೋಗುವುದು. 4)ನಂತರ ನಮ್ಮ ಗಮನವನ್ನು ಮೂಗಿನ ತುದಿಗೆ ತಂದು ನಮ್ಮಲ್ಲಿ ಬರುವ ಆಲೋಚನೆಯನ್ನು ಪಕ್ಕಕ್ಕೆ ಇಟ್ಟು ಪ್ರಜ್ಞಾಪೂರಕವಾಗಿ ಒಳಹೋಗುವ ಉಸಿರನ್ನು ಮತ್ತು ಹೊರ ಬರುವ ಉಸಿರನ್ನು ಮಾತ್ರ ಸುಮಾರು 4-5 ನಿಮಿಷ ಗಮನಿಸುವುದು. (ಸಾಧ್ಯವಾದರೆ ಕಣ್ಣು ಮುಚ್ಚಿರಲಿ) 5) ನಂತರ ನಾನು ಭಯವನ್ನು ಪಟ್ಟಿದ್ದಕ್ಕೆ ನನ್ನನ್ನು ನಾನು ಸಂಪೂರ್ಣವಾಗಿ ಕ್ಷಮಿಸಿಕೊಳ್ಳುವುದು. ಹಾಗೂ ನಮ್ಮ ಮನಸ್ಸಿನ ಸಂತೋಷಕ್ಕಾಗಿ ಅಥವ ಮನಸ್ಸಿನಿಂದ ಖಾಲಿ ಮಾಡುವುದಕ್ಕಾಗಿ ಬೇರೆಯವರಿಂದ ಆ ಘಟನೆ ನಡೆದಿದ್ದರೆ ಬೇರೆಯವರನ್ನು ಕ್ಷಮಿಸುವುದು. (ನಂತರ ನಾವು ಇಲ್ಲಿ ಮುಖ್ಯವಾಗಿ ನಮ್ಮ ಚಿಕ್ಕ ವಯಸ್ಸಿನಿಂದ ನಮಗೆ ಬಂದಿರುವ ಎಲ್ಲಾ ಭಯಗಳನ್ನು ಗುರ್ತಿಸಿಕೊಂಡು ಸಾಧ್ಯವಾದರೆ ಬರೆದು ನಮಗೆ ನಾವು ಆ ಭಯ ಪಟ್ಟಿದಕ್ಕೆ ಕ್ಷಮೆ ನೀಡುವುದು ಆನಂತರ ಬರೆದನ್ನು ಕ್ಷಮೆ ನೀಡಿ ಸುಟ್ಟು ಹಾಕುವುದು)
5) ನಂತರ ನಾವು ಮಾಡುತ್ತಿರುವ ಆಲೋಚನೆಯು ಹಿಂದೆ ಭೂತಕಾಲದಲ್ಲಿ ನಡುಹೋದ ಘಟನೆಯೇ ಅಥವ ಭವಿಷ್ಯತ್ ಕಾಲದ ಘಟನೆಯೇ ಎಂಬುದರ ಬಗ್ಗೆ ಅಥವಾ ವರ್ತಮಾನದಲ್ಲಿ ನಡೆಯುತ್ತಿರುವ ಘಟನೆಯೇ ಎಂಬುದರ ಬಗ್ಗೆ ಪ್ರಜ್ಞಾಪೂರ್ವಕವಾಗಿ ಗಮನಿಸುವುದು. ಭೂತ-ದುಃಖ, ಮತ್ತು ಭವಿಷ್ಯತ್-ಭಯ. ಈ ಜೀವನ ಇರುವುದು ವರ್ತಮಾನದ ಆನಂದದಲ್ಲಿ ಎಂಬ ನಿರ್ಧಾರಕ್ಕೆ ಬರುವುದು. 6)ನಂತರ ನಾವು ಆಲೋಚಿಸುತ್ತಿರುವ ವಿಚಾರಕ್ಕೆ ನಾನು ಯಾವುದೇ ಸರಿ ತಪ್ಪು ತರ್ಕ ಮಾಡುವುದಿಲ್ಲ, ನಡೆದ ಘಟನೆಯನ್ನು ಇದ್ದ ಹಾಗೆ ಸ್ವೀಕಾರ ಮಾಡುತ್ತೇನೆ, ಮುಖ್ಯವಾಗಿ ಯಾವುದನ್ನು ಮೌಲ್ಯ ಮಾಪನ, ಹೋಲಿಕೆ, ಮಾಡುವುದಿಲ್ಲ. ನಾನು, ನನ್ನದು, ನನ್ನವರು, ನನಗಾಗಿ, ನನಗೊಸ್ಕರ, ನನ್ನಿಂದ, ನನಗೆ ಬೇಕು, ನನಗೆ ಬೇಡ ಎಂಬ ಭಾವನೆಯ ವ್ಯಾಮೋಹವನ್ನು ಆ ಕ್ಷಣದಿಂದಲೇ ಬಿಟ್ಟು ಬಿಡುತ್ತೇನೆಂದು ನಿರ್ಧಾರ ಮಾಡುವುದು. 7) ನಂತರ ನಮಗೆ ಸಿಕ್ಕಿರುವ ಈ ದೇಹ, ಈ ಮನಸ್ಸು, ನಮ್ಮ ಆತ್ಮ, ಪರಿಸರ, ತಂದೆ ತಾಯಿ, ಸಂಬಂಧಿಕರರು, ಗುರುಗಳು, ಸ್ನೇಹಿತರು, ಸಕಲ ಮನುಕುಲ ಸಂಕುಲಕ್ಕೆ, ಸಕಲ ಜೀವ ಚರಾಚರಕ್ಕೂ, ಎಲ್ಲಾ ವಿಚಾರಳಿಗೆ ಪ್ರೇಮ ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುವುದು. 8) ಒಳ್ಳೆಯ ಸತ್ಸಂಗ, ಯೋಗ, ಧ್ಯಾನ, ಪ್ರಾಣಯಾಮ, ಆಹಾರ ಪದ್ದತಿ, ಅಭ್ಯಾಸ ಮಾಡುವುದು. ಈ ಮೇಲ್ಕಂಡ ಎಲ್ಲಾ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮತ್ತು 5-6 ಬಾರಿ ಭಯವಾದಗ ಇದನ್ನು ಅಭ್ಯಾಸ ಮಾಡಿದರೆ ಖಂಡಿತವಾಗಿಯು ನಮಗೆ ಜೀವನದಲ್ಲಿ ಭಯದಿಂದ ಮುಕ್ತರಾಗಬಹುದು. “ನಮ್ಮ ಮನಸ್ಸಿನ ಅದ್ಬುತ ಶಕ್ತಿಗೆ ತುಂಬು ಹೃದಯದ ಧನ್ಯವಾದಗಳು ”. ಶುಭದಿನ..