ನಮಸ್ತೆ ಪ್ರಿಯ ಓದುಗರೇ, ಬಿಳಿ ಕೂದಲ ಸಮಸ್ಯೆ ಯಾರಲ್ಲಿ ಇರಲ್ಲ ಹೇಳಿ? ಚಿಕ್ಕ ಮ ಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಕೂಡ ಈಗ ಎಲ್ಲರಲ್ಲೂ ಈ ಸಮಸ್ಯೆ ಸಹಜ ಆಗಿದೆ. ಇದು ಅನೇಕ ರೀತಿಯ ಕಾರಣಗಳಿಂದ ಇರಬಹುದು. ನಮ್ಮ ವಾತಾವರಣ ಪರಿಸರದ ಕಾರಣದಿಂದಲೂ ಆಗಿರಬಹುದು, ಹಾಗೂ ನಾವು ಸೇವಿಸುವಂತಹ ಆಹಾರ ಪದ್ಧತಿ ನಾವು ಬಳಸುವಂತಹ ಕೆಮಿಕಲ್ ಹೆಚ್ಚಾಗಿರುವ ಶಂಪೂಗಳಿಂದ ಕೂಡ ಆಗಿರಬಹುದು. ಇವೆಲ್ಲವುಗಳಿಂದ ಹೊಟ್ಟಿನ ಸಮಸ್ಯೆ ಕೂಡ ಹೆಚ್ಚಾಗುತ್ತದೆ. ಕೂದಲು ಉದುರುವುದು ಕೂದಲು ಬೆಳೆಯದೇ ಇರುವ ಸಮಸ್ಯೆ ಹೆಚ್ಚಾಗುತ್ತಾ ಹೋಗುತ್ತದೆ. ಈ ಎಲ್ಲಾ ಕಾರಣಗಳನ್ನು ನಾವು ನೋಡಬಹುದು. ನಾವು ಇಂದಿನ ಲೇಖನದಲ್ಲಿ ತಿಳಿಸುವ ಈ ರಸವನ್ನು ನಿಮ್ಮ ಕೂದಲ ಬುಡಕ್ಕೆ ಹಚ್ಬೇಕು ಆಗ ಈ ಎಲ್ಲಾ ಸಮಸ್ಯೆಗಳಿಂದ ನೀವು ತುಂಬಾ ಬೇಗ ಪರಿಹಾರ ಮಾಡಿಕೊಳ್ಳಬಹುದು ಎಂದು ಹೇಳಬಹುದು. ನೀವು ನಿಮ್ಮ ಮನೆಯ ಅಂಗಳದಲ್ಲಿ ಅಥವಾ ಸುತ್ತ ಮುತ್ತ ಬಸವನಪಾದ, ನಿತ್ಯ ಕಣಗಿಲೆ, ಹೂವನ್ನು ನೋಡಿಯೇ ಇರ್ಥೀರಾ. ಈ ಹೂವು ವರ್ಷದ 12 ತಿಂಗಳೂ ಬಿಡುವ ವಿಶೇಷವಾದ ಹೂವಾಗಿದೆ. ಆದ್ದರಿಂದಲೇ ಇದನ್ನು ಸದಾ ಪುಷ್ಪ, ನಿತ್ಯ ಪುಷ್ಪ ಅಂತ ಕರೀತಾರೆ. ಇದು ಬೇರೆ ಬೇರೆ ಬಣ್ಣಗಳಲ್ಲಿ ನಿಮ್ಗೆ ಸಿಗುತ್ತದೆ.

ಗುಲಾಬಿ ಹಾಗೂ ಬಿಳಿ ಬಣ್ಣದ್ದು ಸಾಮಾನ್ಯವಾಗಿ ನಮ್ಮ ಸುತ್ತ ಮುತ್ತ ಸಿಗುತ್ತಲೇ ಇರುತ್ತವೆ. ಆದರೆ ಈ ಹೂವಿನ ಮತ್ತು ಎಲೆಯ ಔಷಧೀಯ ಗುಣಗಳು ಎಲ್ಲಾ ಬಣ್ಣದ ಹೂವಿನ ಗಿಡಗಳಲ್ಲಿ ಒಂದೇ ಆಗಿರುತ್ತದೆ. ಈ ಗಿಡದಲ್ಲಿ ತುಂಬಾ ಔಷಧೀಯ ಗುಣಗಳು ಇವೆ. ಇದನ್ನು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹಾಗೂ ಮಧುಮೇಹ ನಿಯಂತ್ರಣ ದಲ್ಲಿ ಇಡಲು ಬಳಸುತ್ತಾರೆ. ಹಾಗೂ ನಮ್ಮ ಚರ್ಮದ ಮೇಲೆ ಆಗಿರುವ ಕಲೆ ನಿವಾರಣೆಗೆ, ಚರ್ಮ ಸುಕ್ಕುಗಟ್ಟುವುದನ್ನು ತಡೆಯಲು ಇದನ್ನು ಬಳಸುತ್ತಾರೆ. ಇದನ್ನು ಕುಟ್ಟಿ ರಸ ತೆಗೆದು ಮುಖಕ್ಕೆ ಹಚ್ಚಿಕೊಂಡರೆ ಕಲೆಗಳು, ಸುಕ್ಕು ಮಾಯ ಆಗುತ್ತವೆ. ಇನ್ನೂ ನಮ್ಮ ಕೂದಲಿನ ಅನೇಕ ಸಮಸ್ಯೆಗಳಿಗೆ ರಾಮಬಾಣ ಅಂತಲೇ ಹೇಳಬಹುದು. ಚಿಕ್ಕ ವಯಸ್ಸಿಗೇ ಯಾರಿಗಾದರೂ ಬಿಳಿ ಕೂದಲು ಆಗುತ್ತಿದ್ದರೆ ಅಂಥವರು ಇದರ ರಸವನ್ನು ಬುಡಕ್ಕೆ ಹಚ್ಚಿದರೆ ಗಾಢವಾದ ಕಪ್ಪು ಬಣ್ಣದ ಕೂದಲು ನಿಮ್ಮವವಾಗುತ್ತವೆ. ಜೊತೆಗೆ ಹೊಟ್ಟಿನ ಸಮಸ್ಯೆ, ಕೂದಲು ಉದುರುವ ಸಮಸ್ಯೆ ಇದ್ದರೆ ಅದನ್ನೂ ಕಡಿಮೆ ಆಗಿಸುತ್ತೆ. ಇದನ್ನು ಹಚ್ಚುವುದರಿಂದ ಕೂದಲು ಉದ್ದವಾಗಿ ದಪ್ಪವಾಗಿ ದಟ್ಟವಾಗಿ ಬೆಳೆಯಲು ಈ ಸಸ್ಯ ಅವಕಾಶ ಮಾಡಿಕೊಡುತ್ತದೆ.

ಹಾಗಾದರೆ ಈ ರಸವನ್ನು ತಯಾರು ಮಾಡುವ ವಿಧಾನ ತಿಳಿಯೋಣ- ಮೊದಲು ಈ ಸಸ್ಯದ ಎಲೆಗಳನ್ನು ಹಾಗೂ ಹೂವುಗಳನ್ನು ಸಮ ಪ್ರಮಾಣದಲ್ಲಿ ಅಥವಾ ಹೂವು ಕಡಿಮೆ ಇದ್ದರೆ ಬರೀ ಎಲೆಗಳನ್ನು ಬಳಸಿ ಕೂಡ ಇದನ್ನು ತಯಾರು ಮಾಡಬಹುದು. ಇದಕ್ಕೆ ಅಲೋವೆರಾ ವನ್ನ ನೀಟ್ ಆಗಿ ತೊಳೆದು ಲೋಳೆ ಯನ್ನ ಬೇರ್ಪಡಿಸಿ ಹಾಕಬೇಕು. ನೈಸರ್ಗಿಕ ಅಲೋವೆರಾ ಜೆಲ್ ಬಳಸುವುದು ಉತ್ತಮ , ಅದು ಇಲ್ಲ ಎಂದರೆ ಮಾರ್ಕೆಟ್ ಅಲ್ಲಿ ಸಿಗುವ ಅಲೋವೆರಾ ಜೆಲ್ ಬಳಸಬಹುದು. ಅಲೋವೆರಾ ನಮ್ಮ ಚರ್ಮಕ್ಕೆ ಹಾಗೂ ಕೂದಲಿಗೆ ತುಂಬಾನೇ ಹೊಳಪು ಕೊಡುತ್ತೆ. ಈಗ ಅಲೋವೆರಾ ಜೆಲ್ ಹಾಗೂ ಸದಾ ಪುಷ್ಪದ ಎಲೆಗಳು, ಹೂವುಗಳನ್ನು ಮಿಕ್ಸಿ ಜಾರ್ ಗೆ ಹಾಕಿ ನೀರು ಹಾಕದೆ ನುಣ್ಣಗೆ ರುಬ್ಬಿ. ನಂತರ ಜಾಲರಿ ಇಂದ ಇದನ್ನು ಸೋಸಿದರೆ ಇಂದಿನ ನಮ್ಮ ಕೂದಲನ್ನು ಬುಡದಿಂದಲೇ ಕಪ್ಪಾಗಿಸುವ ಔಷಧ ಸಿದ್ಧ. ಇದನ್ನು ಒಂದು ಹತ್ತಿಯ ಉಂಡೆ ಇಂದ ಅಥವಾ ಸ್ಪ್ರೇ ಬಾಟಲ್ ಅಲ್ಲಿ ಹಾಕಿ ನಮ್ಮ ತಲೆಯ ಬುಡಕ್ಕೆ ಮುಟ್ಟುವಂತೆ ಹಚ್ಚಿ ಒಂದು ಗಂಟೆ ನಂತರ ತಲೆ ತೊಳೆದುಕೊಳ್ಳಿ. ಹೀಗೆ ಮಾಡುವುದರಿಂದ ಬಿಳಿ ಕೂದಲು ಬುಡದಿಂದಲೇ ಕಪ್ಪಾಗಿ ಬೆಳೆಯಲು ಹಾಗೂ ಈಗಾಗಲೇ ಬಿಳಿ ಆಗಿರುವ ಕೂದಲು ಕಪ್ಪಾಗಿಸುತ್ತದೇ. ಇಂದಿನ ಮಾಹಿತಿ ಇಷ್ಟ ಆಗಿದ್ದರೆ, ಲೈಕ್ ಮಾಡಿ ತಪ್ಪದೇ ಶೇರ್ ಮಾಡಿ. ಶುಭದಿನ.

Leave a Reply

Your email address will not be published. Required fields are marked *