ನಮಸ್ತೇ ಪ್ರಿಯ ಓದುಗರೇ, ನಮ್ಮ ದೇಹಕ್ಕೆ ಖನಿಜಗಳು ಲವಣಗಳು ವಿಟಮಿನ್ ಗಳು ತುಂಬಾನೇ ಮುಖ್ಯ. ವಿಟಾಮಿನ್ ಗಳಲ್ಲಿ ಎ, ಬಿ, ಸಿ, ಕೆ ಇನ್ನಿತರ ವಿಟಮಿನ್ ಗಳು ವಿವಿಧ ಆಹಾರದಲ್ಲಿ ಹುದುಗಿ ಕೊಂಡಿವೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ವಿಟಮಿನ್ ಎ ಕಡಿಮೆ ಆದರೆ ಯಾವ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಅನ್ನುವ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಬನ್ನಿ. ಮೊದಲಿಗೆ ವಿಟಮಿನ್ ಎ ಯಾಕೆ ನಮ್ಮ ದೇಹಕ್ಕೆ ಅವಶ್ಯಕ ಅಂತ ತಿಳಿಯೋಣ.ನಾವು ಸೇವಿಸಿದ ಆಹಾರವು ಆರೋಗ್ಯದ ದೃಷ್ಟಿಯಲ್ಲಿ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಹೌದು ಸರಿಯಾದ ಆಹಾರವನ್ನು ಸೇವನೆ ಮಾಡುವುದರಿಂದ ಉತ್ತಮವಾದ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ವಿಟಮಿನ್ ಗಳು ದೇಹದ ಆರೋಗ್ಯಕ್ಕೆ ಒಳ್ಳೆಯದು ಅದರಲ್ಲೂ ಕಣ್ಣಿನ ಆರೋಗ್ಯಕ್ಕೆ ವಿಟಮಿನ್ ಎ ತುಂಬಾನೇ ಅವಶ್ಯಕ. ಇದು ಕಣ್ಣಿನ ಎಲ್ಲ ಸಮಸ್ಯೆಗಳನ್ನು ದೂರ ಮಾಡುತ್ತದೆ. ಮತ್ತು ಕಣ್ಣುಗಳನ್ನು ರಕ್ಷಣೆಯನ್ನು ಮಾಡುತ್ತದೆ.ಹಾಗೂ ಕಣ್ಣಿನ ನರಗಳನ್ನು ಬಲಗೊಳಿಸುತ್ತದೆ. ವಿಟಮಿನ್ ಎ ನಲ್ಲಿ ಆಂಟಿ ಆಕ್ಸಿಡೆಂಟ್ ಗಳು ಇವೆ. ಇವುಗಳು ಕ್ಯಾನ್ಸರ್ ಜೀವಕೋಶ ತಡೆಯದಂತೆ ನೋಡಿಕೊಳ್ಳುತ್ತದೆ.

ಮೂಳೆಗಳು ಆರೋಗ್ಯವಾಗಿರಲು ಬಲವಾಗಿರಲು ಈ ವಿಟಮಿನ್ ಎ ಸಹಾಯ ಮಾಡುತ್ತದೆ. ಇನ್ನೂ ಈ ವಿಟಮಿನ್ ಎ ಕಡಿಮೆ ಆದರೆ ಮುಖ್ಯವಾಗಿ ಇರುಳು ಕುರುಡುತನ ಬರುತ್ತದೇ ಕಡಿಮೆ ಬೆಳಕಿನಲ್ಲಿ ಕಣ್ಣುಗಳು ಸರಿಯಾಗಿ ಕಾಣುವುದಿಲ್ಲ. ಕಣ್ಣಿನಿಂದ ಕಣ್ಣೀರು ಬರುವುದಿಲ್ಲ. ಕಣ್ಣುಗಳು ಒಣಗುತ್ತದೆ ಮತ್ತು ರಾತ್ರಿ ಕಣ್ಣುಗಳು ಕಾಣುವುದಿಲ್ಲ. ಇನ್ನೂ ತಾಯಿಯಾಗುವವಳು ತನಗೆ ಹುಟ್ಟುವ ಮಗು ಆರೋಗ್ಯವಾಗಿ ದಷ್ಟ ಪುಷ್ಟವಾಗಿ ಬೆಳೆಯಬೇಕು ಅಂತ ಪ್ರತಿ ತಾಯಿ ಬಯಸುತ್ತಾಳೆ ಹಾಗೂ ಕನಸುಗಳನ್ನು ಹೊಂದಿರುತ್ತಾಳೆ. ಆದರೆ ಇದಕ್ಕೆ ಕೇವಲ ಕನಸುಗಳನ್ನು ಕಂಡರೆ ಸಾಲುತ್ತದೆಯೇ. ನಿಜಕ್ಕೂ ಇಲ್ಲ. ಗರ್ಭವತಿಯು ಸರಿಯಾದ ವೇಳೆಗೆ ಊಟವನ್ನು ಮಾಡಬೇಕು. ಪೌಷ್ಟಿಕಾಂಶ ಆಹಾರವನ್ನು ಸೇವಿಸಬೇಕು. ವೈದ್ಯರು ಹೇಳಿದ ಎಲ್ಲ ಆಹಾರವನ್ನು ತಿನ್ನಬೇಕು. ಏಕೆಂದರೆ ವಿಟ್ಯಾಮಿನ್ ಎ ಕೊರತೆಯಿಂದ ಹುಟ್ಟುವ ಮಕ್ಕಳು ಕುರುಡಾಗಿ ಹುಟ್ಟುತ್ತವೇ ಅನ್ನುವ ಕಾರಣದಿಂದಾಗಿ ತಾಯಿಯಂದಿರಿಗೆ ವೈದ್ಯರು ಈ ರೀತಿಯಾಗಿ ಸಲಹೆಯನ್ನು ನೀಡುತ್ತಾರೆ. ಆದ್ದರಿಂದ ಗರ್ಭಿಣಿಯರು ಎಲ್ಲ ವಿಟಮಿನ್ ಗಳನ್ನು ಸೇವನೆ ಮಾಡಬೇಕು. ಈ ವಿಟಮಿನ್ ಎ ಅನ್ನುವುದು ಕೇವಲ ಕಣ್ಣಿನ ಆರೋಗ್ಯಕ್ಕೆ ಉತ್ತಮವಲ್ಲದೆ. ಇದನ್ನು ಯಾವ ಆಹಾರದ ಮೂಲಕ ಪಡೆದುಕೊಳ್ಳಬಹುದು ಅಂತ ತಿಳಿಯೋಣ.

ಈ ವಿಟಮಿನ್ ಎ ಅನ್ನು ನಾವು ಎರಡು ಪದಾರ್ಥಗಳಲ್ಲಿ ಕಾಣಬಹುದು ಸಸ್ಯಹಾರದಲ್ಲಿ ಮತ್ತು ಮಾಂಸಾಹಾರದಲ್ಲಿ. ಮೊದಲಿಗೆ ಸಸ್ಯಾಹಾರದಲ್ಲಿ ಹೇಳುವುದಾದರೆ ಕ್ಯಾರೆಟ್ ನಲ್ಲಿ ವಿಟಮಿನ್ ಎ ಅಧಿಕವಾಗಿದೆ. ಇದು ಕಣ್ಣಿನ ಆರೋಗ್ಯವನ್ನು ಮತ್ತು ತ್ವಚೆಯನ್ನು ಅಭಿವೃದ್ಧಿ ಪಡಿಸುತ್ತದೆ. ಎರಡನೆಯದು ಸಿಹಿ ಗೆಣಸು. ಇದರಲ್ಲಿರುವ ಬೀಟಾ ಕ್ಯಾರೋಟಿನ್ ದೇಹದಲ್ಲಿ ವಿಟಮಿನ್ ಎ ಆಗಿ ಪರಿವರ್ತನೆ ಆಗುತ್ತದೆ. ಇದು ಜೀವಕೋಶಗಳ ಬೆಳವಣಿಗೆಗೆ ಅತ್ಯವಶ್ಯಕ ಆಗಿದೆ. ಕೆಂಪು ದೊಣ್ಣೆ ಮೆಣಸಿನಕಾಯಿ, ಗೆಣಸು ಬೆಣ್ಣೆಯಲ್ಲಿ ವಿಟಮಿನ್ ಎ ಇದೆ.ಇನ್ನೂ ಎಲ್ಲ ಬಗೆಯ ಹಸಿರು ತರಕಾರಿ ಸೊಪ್ಪುಗಳಲ್ಲಿ ವಿಟಮಿನ್ ಎ ಅಡಗಿದೆ. ಮುಖ್ಯವಾಗಿ ಪಾಲಕ್ ಸೊಪ್ಪು ಮತ್ತು ಮೆಂತ್ಯೆ ಸೊಪ್ಪಿನಲ್ಲಿ ಅಧಿಕವಾದ ವಿಟಮಿನ್ ಎ ಪಡೆಯಬಹುದು. ಹಾಗೆಯೇ ಹಣ್ಣುಗಳಲ್ಲಿ ಹೇಳುವುದಾದರೆ ಕರ್ಭೂಜ್ ಹಣ್ಣು ಬೆಣ್ಣೆ ಹಣ್ಣಿನಲ್ಲಿ ಪಪ್ಪಾಯಿ ಮಾವಿನ ಹಣ್ಣಿನಲ್ಲಿ ಟೊಮ್ಯಾಟೋ ಸೀಬೆಹಣ್ಣು ಬಾದಾಮಿ ಬಾಳೆಹಣ್ಣು ಕೇಸರಿ ಮತ್ತು ಹಳದಿ ಬಣ್ಣದಲ್ಲಿ ಸಿಗುವ ಎಲ್ಲ ಹಣ್ಣುಗಳಲ್ಲಿ ಈ ವಿಟಮಿನ್ ಎ ಇದೆ.ಇನ್ನು ಮೊಟ್ಟೆಯ ಹಳದಿ ಭಾಗದಲ್ಲಿ ವಿಟಮಿನ್ ಎ ಇದೆ. ಚಿಕನ್ ಮಟನ್ ಲಿವರ್ ನಲ್ಲಿ ಹಾಗೂ ಮೀನಿನಲ್ಲಿ ಇದೆ. ಆದ್ದರಿಂದ ವಿಟಮಿನ್ ಎ ನಮ್ಮ ದೇಹಕ್ಕೆ ತುಂಬಾನೇ ಅಗತ್ಯವಿದೆ. ಆದ್ದರಿಂದ ಈ ಎಲ್ಲ ಆಹಾರವನ್ನು ಸೇವಿಸಿ ವಿಟಮಿನ್ ಎ ಅನ್ನು ಪಡೆದುಕೊಳ್ಳಿ.

Leave a Reply

Your email address will not be published. Required fields are marked *