ನಮಸ್ತೆ ಪ್ರಿಯ ಓದುಗರೇ, ನಮಗೆ ಆರೋಗ್ಯ ಸರಿ ಇಲ್ಲದೆ ನಾವು ವೈದ್ಯರ ಬಳಿ ಹೋದಾಗ, ವೈದ್ಯರು ಸಲಹೆ ನೀಡುವುದೇ ನೀವು ಒಳ್ಳೆಯ ಆಹಾರ ಹಾಗೂ ಹಸಿರು ತರಕಾರಿ, ಹಣ್ಣುಗಳನ್ನು ಸೇವನೆ ಮಾಡಿ ಎಂದು. ಯಾಕೆಂದರೆ ನಮ್ಮ ಆಹಾರ ಪದ್ಧತಿ ಸರಿಯಾಗಿ ಇದ್ದರೆ ಮುಂದೆ ಬರುವಂತಹ ದಿನಗಳಲ್ಲಿ ನಮಗೆ ಯಾವುದೇ ರೀತಿಯ ಅನಾರೋಗ್ಯದ ಸಮಸ್ಯೆಗಳು ಕಂಡು ಬರುವುದಿಲ್ಲ. ಹಾಗಾಗಿ ನಾವು ನಮ್ಮ ಆಹಾರ ಪದ್ಧತಿಯನ್ನು ಸರಿಯಾಗಿ ಇಟ್ಟುಕೊಳ್ಳ ಬೇಕಾಗುತ್ತದೆ. ಇವತ್ತಿನ ಲೇಖನದಲ್ಲಿ ಸುವರ್ಣ ಗಡ್ಡೆಯನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲ ರೀತಿಯ ಉಪಯೋಗಗಳು ಆಗುತ್ತವೆ. ಹಾಗೂ ಇದನ್ನು ಯಾರು ಸೇವನೆ ಮಾಡಬಾರದು ಎನ್ನುವುದರ ಕುರಿತು ಒಂದಿಷ್ಟು ಮಾಹಿತಿಯನ್ನು ತಿಳಿಯೋಣ ಸ್ನೇಹಿತರೆ. ಈ ಮಾಹಿತಿಯನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ. ಮೊದಲನೆಯದಾಗಿ ಸುವರ್ಣ ಗಡ್ಡೆ ಯಾವೆಲ್ಲ ನ್ಯುಟ್ರಿ ಶನ್ ಫ್ಯಾಕ್ಟರ್ಸ್ ಗಳನ್ನ ಒಳಗೊಂಡಿದೆ ಅಂತ ನೋಡುವುದಾದರೆ. ಇದರಲ್ಲಿ ಉತ್ತಮವಾದ ಕ್ಯಾಲೋರಿ ಇವೆ. ಫ್ಯಾಟ್ ಇದೆ, ಸೋಡಿಯಂ ಇದೆ, ಪೊಟ್ಯಾಸಿಯಂ ಹಾಗೂ ಕಾರ್ಬೋಹೈಡ್ರೇಟ್ಸ್, ಪ್ರೊಟೀನ್ ಇದೆ. ಇನ್ನೂ ವಿಟಮಿನ್ಸ್ ಹಾಗೂ ಮಿನರಲ್ಸ್ ಯಾವೆಲ್ಲ ಇವೆ ಎಂದು ನೋಡುವುದಾದರೆ ಐರನ್, ವಿಟಮಿನ್ ಏ, ಕ್ಯಾಲ್ಸಿಯಂ ಕೂಡ ಇದೆ. ನೋಡಿ ಇಷ್ಟೆಲ್ಲಾ ನುಟ್ರಿ ಷನ್ ಮತ್ತು ವಿಟಮಿನ್ಸ್ ಗಳನ್ನು ಒಳಗೊಂಡಿದೆ. ಇವುಗಳನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲ ರೀತಿಯ ಉಪಯೋಗಗಳು ಆಗುತ್ತವೆ ಎಂದೂ ನೋಡುವುದಾದರೆ,
ಮೊದಲನೆಯದಾಗಿ ಯಾರಿಗೆ ಸರಿಯಾಗಿ ಜೀರ್ಣ ಕ್ರಿಯೆ ಆಗುತ್ತಿಲ್ಲವೊ, ಮತ್ತು ಮಲಬದ್ದತೆ ಅಂತಹ ಸಮಸ್ಯೆ, ಮೂಲವ್ಯಾಧಿ ಸಮಸ್ಯೆ ಇರುತ್ತದೆ ಅಂತಹವರಿಗೆ ಇದು ತುಂಬಾನೇ ಒಳ್ಳೆಯದು. ಹೌದು ಸುವರ್ಣ ಗಡ್ಡೆಯಲ್ಲಿ ಉತ್ತಮವಾದ ನಾರಿನ ಅಂಶ ಇದೆ. ಇದು ನಮ್ಮ ಜೀರ್ಣ ಕ್ರಿಯೆ ವ್ಯವಸ್ಥೆಯನ್ನು ಸರಿಯಾಗಿ ಮಾಡಲು ಸಹಾಯ ಮಾಡುತ್ತದೆ. ಮತ್ತು ಇದರಲ್ಲಿ ನಾರಿನ ಅಂಶ ಇರುವುದರಿಂದ ಪದೇ ಪದೇ ತಿನ್ನುವಂತ ಬಯಕೆಯನ್ನು ಕಡಿಮೆ ಮಾಡುತ್ತದೆ. ಹಾನಿಕಾರಕ ಆಹಾರವನ್ನು ಸೇವನೆ ಮಾಡದಂತೆ ತಡೆಯುತ್ತದೆ. ಮತ್ತು ಇದರಲ್ಲಿ ಪೊಟ್ಯಾಸಿಯಂ ಇರುವ ಕಾರಣದಿಂದ ಕರುಳಿನ ಕ್ರಿಯೆ ಸರಾಗವಾಗಿ ಆಗಲು ಇದು ನೆರವಾಗುತ್ತದೆ. ಮತ್ತು ನಾರಿನಂಶ ನಮ್ಮ ಕರುಳನ್ನು ಸ್ವಚ್ಛ ಮಾಡುವುದಲ್ಲದೆ ಮಲಬದ್ಧತೆಯನ್ನು ಕೂಡ ನಿವಾರಣೆ ಮಾಡುತ್ತದೆ. ಹಾಗಾಗಿ ಯಾರಿಗೆ ಜೀರ್ಣ ಕ್ರಿಯೆ ಸಮಸ್ಯೆ ಇರುತ್ತದೆ ಮತ್ತು ಮೂಲವ್ಯಾಧಿ ಅಂತಹ ಸಮಸ್ಯೆ ಇರುತ್ತದೆ ಅಂಥವರು ಇದನ್ನು ನಿಯಮಿತವಾಗಿ ಸೇವನೆ ಮಾಡುವುದು ತುಂಬಾನೇ ಒಳ್ಳೆಯದು ಎಂದು ಹೇಳಬಹುದು. ಇನ್ನೂ ಈ ಗಡ್ಡೆಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡುವುದು ಜೊತೆಗೆ ರಕ್ತ ಹೀನತೆ ಸಮಸ್ಯೆಯನ್ನು ಕೂಡ ನಿವಾರಣೆ ಮಾಡುತ್ತದೆ. ಇದು ನಮ್ಮ ರಕ್ತ ನಾಳಗಳಲ್ಲಿ ಇರುವಂತಹ ಹೆಚ್ಚಿನ ಸೋಡಿಯಂ ಅಂಶವನ್ನು ತೆಗೆದು ಹಾಕಿ ಹೃದಯದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಸೋಡಿಯಂ ಅಧಿಕವಾಗಿ ಇದ್ದರೆ ರಕ್ತದೊತ್ತಡಕ್ಕೆ ಕಾರಣ ಆಗುತ್ತದೆ. ಮತ್ತು ಇದು ಹೃದಯಾಘಾತ ಹಾಗೂ ಪಾರ್ಶ್ವ ವಾಯು ಉಂಟು ಮಾಡುತ್ತದೆ.
ಪೊಟ್ಯಾಸಿಯಂ ಮೇಜ್ಞೆಸಿಯಂ ಹಾಗೂ ಇನ್ನಿತ್ರಾ ಖನಿಜ ಅಂಶಗಳು ಈ ಗಡ್ಡೆಯಲ್ಲಿ ಇರುವುದರಿಂದ ಇದು ನಮ್ಮ ರಕ್ತ ನಾಳಗಳನ್ನು ಆರೋಗ್ಯವಾಗಿ ಇಡಲು ಸಹಾಯವಾಗುತ್ತದೆ. ಇದನ್ನು ನಿಯಮಿತವಾಗಿ ಬಳಸುವುದರಿಂದ ರಕ್ತದೊತ್ತಡವನ್ನು ತೆಡೆಯುತ್ತದೆ. ಈ ಸುವರ್ಣ ಗದ್ದೆಯಲ್ಲಿ ಕಬ್ಬಿಣ ಮತ್ತು ಉತ್ತಮ ಖನಿಜಾಂಶಗಳು ಇರುವ ಕಾರಣದಿಂದ ಇದು ನಮ್ಮ ಕೆಂಪು ರಕ್ತ ಕಣಗಳನ್ನು ಹೆಚ್ಚಿಸುವುದರ ಜೊತೆಗೆ ರಕ್ತ ಹೀನತೆ ಸಮಸ್ಯೆಯನ್ನು ಕೂಡ ನಿವಾರಣೆ ಮಾಡುತ್ತದೆ. ಇದರ ಸೇವನೆಯಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಕ್ಯಾನ್ಸರ್ ಕೋಶಗಳನ್ನು ತಡೆಗಟ್ಟುವ ಶಕ್ತಿ ಕೂಡ ಹೊಂದಿದೆ. ಸಾಮಾನ್ಯವಾಗಿ ವಯಸ್ಸಾದ ಮೇಲೆ ಮುಖ ಜೋತು ಬೀಳುವುದು, ದೇಹದಲ್ಲಿ ನಿಶ್ಯಕ್ತಿ ಕಾಣುವುದು ಸಹಜ. ಆದರೆ ಈ ಸುವರ್ಣ ಗಡ್ಡೆಯನ್ನು ಸೇವನೆ ಮಾಡುವುದರಿಂದ ಇದರಲ್ಲಿನ ಉತ್ತಮವಾದ ಆಂಟಿ ಆಕ್ಸಿಡೆಂಟ್ ಗಳು ನಮಗೆ ವಯಸ್ಸಾದ ಹಾಗೆ ಕಾಣದಂತೆ ನೋಡಿಕೊಳ್ಳುತ್ತದೆ. ಮತ್ತು ಪ್ರಮುಖವಾದ ಅಂಶ ಎಂದರೆ, ಇದರಲ್ಲಿ ವಿಟಮಿನ್ ಸಿ ಹೇರಳವಾಗಿ ಇರುವುದರಿಂದ ವಯಸ್ಸಾಗುವ ಪ್ರಕ್ರಿಯೆ ನಿಧಾನಗೊಳಿಸಲು ಸಹಾಯ ಮಾಡುತ್ತದೆ. ನಮ್ಮ ಚರ್ಮದ ಕಪ್ಪು ಕಲೆಗಳನ್ನು, ಮುಖದಲ್ಲಿನ ಮೊಡವೆಗಳನ್ನು ಕೂಡ ದೂರ ಮಾಡಲು ಸಹಾಯ ಮಾಡುತ್ತದೆ. ನೊಡಿದಿರಲ್ಲ ಸ್ನೇಹಿತರೆ ಸುವರ್ಣ ಗಡ್ಡೆಯ ಉಪಯೋಗಗಳು ಏನೆಂದು. ಸಾಕಷ್ಟು ಪ್ರದೇಶಗಳಲ್ಲಿ ಇದು ಸಿಗುವುದಿಲ್ಲ. ಹಾಗಾಗಿ ಸಿಕ್ಕಾಗ ಇದನ್ನು ತಿಂದು ಆರೋಗ್ಯ ಹೆಚ್ಚಿಸಿಕೊಳ್ಳಿ. ಇನ್ನೂ ಇದನ್ನು ಯಾರು ಸೇವನೆ ಮಾಡಬಾರದು ಎಂದರೆ, ನಿಮಗೇನಾದರೂ ಅಸ್ತಮಾ ರೋಗ ಇದ್ದರೆ, ಶೀತ ಸೈನಸ್ ಇದ್ದರೆ ನೀವು ಒಮ್ಮೆ ವೈದ್ಯರ ಸಲಹೆ ಪಡೆದು ನಂತರ ಇದನ್ನು ಬಳಸುವುದು ಒಳಿತು. ಈ ಮಾಹಿತಿ ಇಷ್ಟ ಆಗಿದ್ದರೆ ದಯವಿಟ್ಟು ತಪ್ಪದೇ ಶೇರ್ ಮಾಡಿ ಲೈಕ್ ಮಾಡಿ. ಶುಭದಿನ.