WhatsApp Group Join Now

ನಮಸ್ತೆ ಪ್ರಿಯ ಓದುಗರೇ, ಬಿರ್ಯಾನಿ ಎಲೆ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದೇ ಇರುತ್ತದೆ ಇದು ಪ್ರತಿಯೊಬ್ಬರ ಮನೆಯಲ್ಲೂ ಇದ್ದೆ ಇರುತ್ತದೆ. ಬಿರ್ಯಾನಿ ಎಲೆಯನ್ನು ಉಪಯೋಗಿಸುವುದರಿಂದ ಅಡುಗೆಯಲ್ಲಿ ರುಚಿ, ವಾಸನೆ ತುಂಬಾ ಚೆನ್ನಾಗಿ ಇರುತ್ತದೆ. ಆದರೆ ಬಿರ್ಯಾನಿ ಎಲೆಯಲ್ಲಿ ತುಂಬಾ ಔಷಧಿ ಗುಣಗಳನ್ನು ಒಳಗೊಂಡಿದೆ. ಬಿರ್ಯಾನಿ ಎಲೆಯನ್ನು ಉಪಯೋಗ ಮಾಡಿಕೊಂಡು ಏಷ್ಟೋ ರೋಗಗಳನ್ನು ಗುಣಪಡಿಸಿಕೊಳ್ಳಬಹುದು. ಆಯುರ್ವೇದದಲ್ಲಿ ಕೂಡ ಬಿರ್ಯಾನಿ ಎಲೆಯನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ ಬಿರ್ಯಾನಿ ಎಲೆಯ ಪುಡಿ, ಬಿರ್ಯಾನಿ ಎಲೆಯ ಚೂರ್ಣ, ಬಿರ್ಯಾನಿ ಎಲೆಯ ನೀರನ್ನು ಉಪಯೋಗ ಮಾಡುವುದರಿಂದ ತುಂಬಾ ಸಮಸ್ಯೆಗಳು ಕಡಿಮೆಯಾಗುತ್ತವೆ. ಬಿರ್ಯಾನಿ ಎಲೆಯ ನೀರನ್ನು ಕುಡಿಯುವುದರಿಂದ ಅಧಿಕವಾದ ತೂಕ, ದೇಹದಲ್ಲಿ ಸೇರಿಕೊಂಡ ಕೊಬ್ಬು ಕರಗಿ ಹೋಗುತ್ತದೆ. ನಾಲ್ಕು ಇಲ್ಲಾ ಐದು ಎಲೆಯನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಮುಂಜಾನೆ ಆ ನೀರನ್ನು ಚೆನ್ನಾಗಿ ಕುದಿಸಿ ಪಕ್ಕಕ್ಕೆ ಇಟ್ಟು ಉಗುರು ಬೆಚ್ಚಗೆ ಇರುವಾಗ ಕುಡಿಯುವುದರಿಂದ ದೇಹದಲ್ಲಿ ಸೇರಿಕೊಂಡ ಕೊಬ್ಬು ಕರಗಿ ಹೋಗುತ್ತದೆ. ದಂತ ಸಮಸ್ಯೆಗಳು, ಮಧುಮೇಹ, ಮರೆವು, ಇಂತಹ ಖಾಯಿಳೆಗಳನ್ನು ಕಡಿಮೆ ಮಾಡುವಲ್ಲಿ ಕೂಡ ಬಿರ್ಯಾನಿ ಎಲೆ ಚೆನ್ನಾಗಿ ಕೆಲಸ ಮಾಡುತ್ತದೆ.

ಬಿರ್ಯಾನಿ ಎಲೆಯನ್ನು ದಿನಾಲೂ ಯಾವುದಾದರೂ ಒಂದು ರೀತಿಯಲ್ಲಿ ನಮ್ಮ ಆಹಾರದಲ್ಲಿ ತೆಗೆದುಕೊಳ್ಳುವುದರಿಂದ ತುಂಬಾ ಪ್ರಯೋಜನೆಗಳು ದೊರೆಯುತ್ತವೆ. ಬಿರ್ಯಾನಿ ಎಲೆಯನ್ನು ಪುಡಿ ಮಾಡಿಕೊಂಡು ಮಜ್ಜಿಗೆ ಇಲ್ಲಾ ಮೊಸರು ಅಥವಾ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ದೇಹದಲ್ಲಿ ಶುಗರ್ ಲೆವೆಲ್ ಕಂಟ್ರೋಲ್ ನಲ್ಲಿ ಇರುತ್ತದೆ. ಬಿರ್ಯಾನಿ ಎಲೆಯನ್ನು ತೆಗೆದುಕೊಂಡು ಮಿಕ್ಸಿಮಾಡಿ ಪೌಡರ್ ಮಾಡಿಕೊಂಡು ಯಾವುದಾದರೂ ಟೈಟಾಗಿ ಮುಚ್ಚಿಕೊಳ್ಳುವ ಬಾಕ್ಸ್ನಲ್ಲಿ ಹಾಕಿ ಇಟ್ಟುಕೊಳ್ಳಬೇಕು. ಒಂದು ಕಪ್ಪು ಮೊಸರಿನಲ್ಲಿ ಒಂದು ಚಿಟಿಕೆಯಷ್ಟು ಬಿರ್ಯಾನಿ ಎಲೆಯ ಪುಡಿಯನ್ನು ಹಾಕಿಕೊಳ್ಳಬೇಕು ಇದನ್ನು ಚೆನ್ನಾಗಿ ಬೆರೆಸಿ ತೆಗೆದುಕೊಳ್ಳುವುದರಿಂದ ಶುಗರ್, ಮರೆವು, ಇಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ. ನಂತರ ಒಂದು ಚಿಟಿಕೆಯಷ್ಟು ಬಿರ್ಯಾನಿ ಎಲೆಯ ಪುಡಿಯನ್ನು ತೆಗೆದುಕೊಂಡು ಹಲ್ಲು ಉಜ್ಜುವುದರಿಂದ ಹಳದಿ ಬಣ್ಣ ಇರುವ ಹಲ್ಲು, ಮತ್ತು ಗಲೀಜು ಕೂತಿರುವ ಹಲ್ಲು, ಇದರ ಜೊತೆಗೆ ಇವುಗಳನ್ನು ಬಿಳಿ ಬಣ್ಣವಾಗಿ ಮಾರ್ಪಡಿಸುತ್ತದೆ.

ಒಂದು ಗ್ಲಾಸ್ ಮಜ್ಜಿಗೆಯಲ್ಲಿ ಒಂದು ಚಿಟಿಕೆಯಷ್ಟು ಬಿರ್ಯಾನಿ ಎಲೆಯ ಪುಡಿಯನ್ನು ಹಾಕಿ ತೆಗೆದುಕೊಳ್ಳುವುದರಿಂದ ಅಜೀರ್ಣ, ಮತ್ತು ಒಟ್ಟೆ ನೋವಿಗೆ ಸಂಬಂದಿಸಿದ ಸಮಸ್ಯೆಗಳು ಕಡಿಮೆಯಾಗುತ್ತವೆ. ಬಿರ್ಯಾನಿ ಎಲೆಯ ಪುಡಿಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಆ ನೀರನ್ನು ಮುಂಜಾನೆ ಕಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗೆ ಇರುವಾಗ ಕುಡಿಯುವುದರಿಂದ ದೇಹದಲ್ಲಿ ಸೇರಿಕೊಂಡ ಕೊಬ್ಬು ಮತ್ತು ಹೆಚ್ಚಾದ ತೂಕ ಕಡಿಮೆಯಾಗುತ್ತದೆ. ಇದನ್ನು ಚಾಚೂತಪ್ಪದೆ ಐದಿನೈದು ದಿನ ಈ ಸಲಹೆಯನ್ನು ಪಲಿಸುವುದಾದರೆ ತೂಕ ಕಡಿಮೆಯಾಗುವ ಸಾದ್ಯತೆಗಳು ಇರುತ್ತವೆ. ಬಿರ್ಯಾನಿ ಎಲೆಯನ್ನು ದಿನಾಲೂ ಯಾವುದಾದರೂ ಒಂದು ರೀತಿಯಲ್ಲಿ ನಮ್ಮ ಆಹಾರದಲ್ಲಿ ಉಪಯೋಗ ಮಾಡುವುದು ತುಂಬಾ ಒಳ್ಳೆಯದು. ಬಿರ್ಯಾನಿ ಎಲೆಯು ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವುದರಲ್ಲಿ, ಮತ್ತು ಜೀರ್ಣಕ್ರಿಯೆಯನ್ನು ಸರಿಮಾಡುವಲ್ಲಿ ದಿವ್ಯವಾದ ಔಷಧಿಯಾಗಿ ಕೆಲಸ ಮಾಡುತ್ತದೆ. ಬಿರಿಯಾನಿ ಎಲೆಯ ಪುಡಿಯನ್ನು ನೀರಿನಲ್ಲಿ ಹಾಕಿ ಕುದಿಸಿ ಆ ನೀರನ್ನು ತಲೆಗೆ ಹಚ್ಚುವುದರಿಂದ ತಲೆಯಲ್ಲಿ ಹೊಟ್ಟು, ತುರಿಕೆ, ಹೇನಿನ ಸಮಸ್ಯೆ, ಕೂದಲು ಉದುರುವುದು, ಇಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ. ಶುಭದಿನ.

WhatsApp Group Join Now

Leave a Reply

Your email address will not be published. Required fields are marked *