ನಮಸ್ತೆ ಪ್ರಿಯ ಓದುಗರೇ, ಪಾಪಸ್ ಕಳ್ಳಿ ಗಿಡ ಇದು ಮರುಳುಗಾಡಿನಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಇದನ್ನು ಮರುಭೂಮಿ ಗಿಡ ಅಂತಾನೆ ಕರೆಯುತ್ತಾರೆ. ಕಡಿಮೆ ನೀರಿನೊಂದಿಗೆ ಹೆಚ್ಚುಕಾಲ ಜೀವಿಸುತ್ತದೆ ಹಾಗೆಯೇ ಇದು ಗಿಡದ ತುಂಬಾ ಮುಳ್ಳುಗಳಿಂದ ಕೂಡಿರುತ್ತದೆ ಮತ್ತು ಇದರಲ್ಲಿ ಕೆಂಪು ಬಣ್ಣದ ಹಣ್ಣುಗಳನ್ನು ಬಿಡುತ್ತದೆ ಈ ಹಣ್ಣುಗಳಲ್ಲಿ ಅನೇಕ ರೀತಿಯ ಪೋಷಕಾಂಶಗಳು ಒಳಗೊಂಡಿರುತ್ತದೆ. ಇದರಲ್ಲಿ ಇರುವಂತಹ ಪೋಷಕಾಂಶಗಳ ಬಗ್ಗೆ ತಿಳಿದುಕೊಂಡರೆ ತಪ್ಪದೆ ಈ ಹಣ್ಣನ್ನು ತಿನ್ನಬೇಕು ಎಂದುಕೊಳ್ಳುತ್ತಿರ ವಿದೇಶಗಳಲ್ಲಿ ಆಹಾರದ ಜೊತೆಗೆ ಈ ಹಣ್ಣನ್ನು ಉಪಯೋಗಿಸುತ್ತಾರೆ. ಪಾಪಸ್ ಕಳ್ಳಿ ಇದೇರೀತಿ ಅನೇಕ ಜಾತಿಯ ಕಳ್ಳಿ ಗಿಡಗಳು ಇವೆ ನಮ್ಮ ದೇಶದಲ್ಲಿ ಸಿಗುವಂತಹ ಗಿಡವನ್ನು ಇಂಡಿಯನ್ ಪಾಪಸ್ ಕಳ್ಳಿ ಗಿಡ ಅಂತಾನೆ ಕರೆಯುತ್ತಾರೆ ಪೂರ್ವಕಾಲದಲ್ಲಿ ವಯಸ್ಕರು, ಮಕ್ಕಳು ಈ ಹಣ್ಣನ್ನು ತಿಂದು ಕುಷಿಪಡುತ್ತಿದ್ದರು ಹಾಗೆಯೇ ಈ ಹಣ್ಣನ್ನು ತಿಂದನಂತರ ನಾಲಿಗೆ ಕೆಂಪಾಗಿರುವುದನ್ನು ಒಬ್ಬರಿಗೆ ಒಬ್ಬರು ತೋರಿಸಿಕೊಂಡು ಸಂತೋಷ ಪಡುತ್ತಿದ್ದರು. ಈ ಹಣ್ಣಿನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಇದನ್ನು ಪೂರ್ತಿಯಾಗಿ ನೋಡಿ.
ಪಾಪಸ್ ಕಳ್ಳಿ ಗಿಡದಲ್ಲಿ ಹೆಚ್ಚು ಮುಳ್ಳುಗಳಿರುತ್ತವೆ ಈ ಮುಳ್ಳನ್ನು ಜಾಗ್ರತೆಯಿಂದ ತೆಗೆದು ಹಣ್ಣನ್ನು ತಿನ್ನಬೇಕು ಹಣ್ಣಿನ ಮೇಲೆ ಇರುವಂತಹ ಸಿಪ್ಪೆಯನ್ನು ತೆಗೆದು ಒಳಗೆ ಇರುವ ಗೊಜ್ಜನ್ನು ತಿಂದು ಬೀಜವನ್ನು ಉಗಿಯಬೇಕು ಇದರಲ್ಲಿ ವಿಟಮಿನ್ ಸಿ ಅಧಿಕವಾಗಿ ಇರುತ್ತದೆ ಹಾಗೆಯೇ ಯಾಂಟಿ ಆಕ್ಸಿಡೆಂಟ್ ಹೆಚ್ಚಾಗಿ ಇರುವುದರಿಂದ ಬಿಳಿ ರಕ್ತಕಣಗಳನ್ನು ಅಬಿವೃದ್ಧಿ ಮಾಡುವುದಕ್ಕೆ ಸಹಾಯ ಮಾಡುತ್ತದೆ. ಚಯಾಪಚಯ ಹೆಚ್ಚಿಸಿ ರೋಗನಿರೋಧಕ ವ್ಯವಸ್ಥೆಯನ್ನು ಬಲವರ್ಧನೆ ಮಾಡುತ್ತದೆ ಇದರಿಂದ ಜ್ವರ ಮತ್ತು ಅನೇಕ ಕಾಯಿಲೆಗಳಿಂದ ರಕ್ಷಿಸುತ್ತದೆ. ಈ ಹಣ್ಣಿನಲ್ಲಿ ಕ್ಯಾಲ್ಷಿಯಂ ಹೆಚ್ಚಾಗಿ ಇದ್ದು ಎಲುಬುಗಳನ್ನು ಆರೋಗ್ಯವಾಗಿ, ಗಟ್ಟಿಯಾಗಿ ಇಡುವುದಕ್ಕೆ ಸಹಾಯ ಮಾಡುತ್ತದೆ ಇದು ಮಕ್ಕಳ ಬೆಳವಣಿಗೆಗೆ ಕೂಡ ಸಹಾಯ ಮಾಡುತ್ತದೆ ಮತ್ತು ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಿರಿಯರಲ್ಲಿ ಕಂಡುಬರುವ ಅಲ್ಜಿಮರ್ಸ್, ಡಿಮೆನ್ಷಿಯಾ ದಿಂದ ಕಾಪಾಡುತ್ತದೆ. ಈ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಕೆ, ವಿಟಮಿನ್ ಇ, ನಂತಹ ಯಾಂಟಿ ಆಕ್ಸಿಡೆಂಟ್ ಅಧಿಕವಾಗಿ ಇದ್ದು ಚರ್ಮ ಸೌಂದರ್ಯವನ್ನು ಕಾಪಾಡುತ್ತದೆ. ಜೊತೆಗೆ ಚರ್ಮ ಆರೋಗ್ಯವನ್ನು ಕಾಪಾಡುವುದು, ಚರ್ಮ ಸಂಬಂಧಿ ಕಾಯಿಲೆಗಳು, ಸಮಸ್ಯೆಗಳು ಬರದ ಹಾಗೆ ಮಾಡುತ್ತದೆ.
ಇದರಲ್ಲಿ ಕಂಡುಬರುವ ಡೈಟರಿ ಫೈಬರ್ ತಿಂದ ಆಹಾರವನ್ನು ಜೀರ್ಣಮಾಡಿ ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ. ಮತ್ತು ಕ್ಯಾನ್ಸರ್ ಬರದಹಾಗೆ ಅಡ್ಡಿಪಡಿಸುತ್ತದೆ ನಮ್ಮ ದೇಹದಲ್ಲಿ ಬೆಳೆಯುವ ಕೆಟ್ಟ ಕೊಬ್ಬಿನಾಂಶವನ್ನು ಕರಗಿಸಿ ಒಳ್ಳೆಯ ಕೊಬ್ಬನ್ನು ಉತ್ಪತ್ತಿ ಮಾಡುತ್ತದೆ. ದೇಹದಲ್ಲಿ ಪ್ರಿರಾಡಿಕಲ್ಸ್ ಅಡ್ಡಿಪಡಿಸಿ ಕ್ಯಾನ್ಸರ್ ಬರದಹಾಗೆ ಮಾಡುತ್ತವೆ ಇದರಲ್ಲಿ ಪೋಷಕಾಂಶಗಳು ಹೆಚ್ಚಾಗಿದ್ದು, ಕ್ಯಲಾರಿಸ್ ಕಡಿಮೆ ಇರುವುದರಿಂದ ತೂಕ ಕಡಿಮೆ ಮಾಡುವುದಕ್ಕೆ ಸಹಾಯ ಮಾಡುತ್ತವೆ. ಮಧುಮೇಹ ಇರುವವರಿಗೆ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ತುಂಬಾ ಚೆನ್ನಾಗಿ ಸಹಾಯ ಮಾಡುತ್ತವೆ. ಲಿವರ್ ನಲ್ಲಿ ಇರುವಂತಹ ವಿಷಪದಾರ್ಥಗಳನ್ನು ತೆಗೆದುಹಾಕಿ ಆರೋಗ್ಯದಿಂದ ಇರುವುದಕ್ಕೆ ಸಹಕರಿಸುತ್ತವೆ. ಮೈಗ್ರೆನ್, ತಲೆನೋವು ಇರುವವರು ಈ ಹಣ್ಣನ್ನು ಹತ್ತುದಿನ ಚಚುತಪ್ಪದ ಹಾಗೆ ತಿನ್ನುವುದರಿಂದ ತಲೆನೋವು ಶಾಶ್ವತವಾಗಿ ಕಡಿಮೆಯಾಗುತ್ತದೆ. ರಕ್ತಪರಿಚಲನೆ ಹೆಚ್ಚಾಗಿ ಕೂದಲು, ಚರ್ಮ ಆರೋಗ್ಯದಿಂದ ಹೊಳೆಯುತ್ತದೆ ಹಾಗೆಯೇ ಉಗುರು ಬೆಳೆಯುವುದಕ್ಕೆ ಸಹಕರಿಸುತ್ತದೆ ಸಂತಾನ ಇಲ್ಲದವರಿಗೆ ವೀರ್ಯ ಕಣಗಳ ವೃದ್ಧಿಯನ್ನು ಹೆಚ್ಚಿಸುತ್ತದೆ. ಆರೋಗ್ಯಕ್ಕೆ ಇಷ್ಟು ಲಾಭಗಳನ್ನು ಕೊಡುವ ಈ ಹಣ್ಣು ವಿದೇಶಗಳಲ್ಲಿ ಸೂಪರ್ ಮಾರ್ಕೆಟ್ ನಲ್ಲಿ ಹೆಚ್ಚಾಗಿ ಕಾಣಿಸುತ್ತದೆ. ಆದರೆ ನಮ್ಮಲ್ಲಿ ಹಳ್ಳಿಗಳಲ್ಲಿ, ಮಾರುಳುಗಾಡಿನಲ್ಲಿ ಹೆಚ್ಚಾಗಿ ಕಂಡುಬರುತ್ತವೆ ಇದನ್ನು ತಿನ್ನುವಾಗ ತುಂಬಾ ಜಾಗರೂಕತೆಯಿಂದ ತಿನ್ನಬೇಕು. ಶುಭದಿನ.