ನಮಸ್ತೆ ಪ್ರಿಯ ಓದುಗರೇ, ಹುಣಸೆ ಬೀಜದಲ್ಲಿ ಇರುವಂತಹ ಅರೋಗ್ಯ ಲಾಭಗಳು. ಉಪ್ಪು, ಕಾರ, ಹುಳಿ ಇಲ್ಲದೆ ಇರುವಂತಹ ಆಹಾರ ತುಂಬಾ ರುಚಿಕರವಾಗಿ ಇರುವುದಿಲ್ಲ. ಇಂತಹ ಅಡುಗೆಯನ್ನು ಯಾರು ಇಷ್ಟ ಪಡುವುದಿಲ್ಲ ಅದರಲ್ಲೂ ದಕ್ಷಿಣ ಭಾರತೀಯರು ಹುಳಿ ಇಲ್ಲದೆ ಯಾವುದೇ ಅಡುಗೆಯನ್ನು ಮಾಡಲ್ಲ. ಹುಣಸೆ ಹುಳಿಯು ಪ್ರಮುಖವಾಗಿ ಭಾರತೀಯರು ಬಳಸಲ್ಪಡುವ ಹುಳಿಯಾಗಿದೆ. ಹುಣಸೆ ಬೀಜವನ್ನು ಉರಿದು ತಿನ್ನುವುದು ಗ್ರಾಮೀಣ ಜನರ ಅಭ್ಯಾಸವಾಗಿದೆ ಹಾಗೆಯೇ ವಿವಿಧ ಔಷಧಿ ಪ್ರಯೋಜನಗಳಿಗೆ ಪುರಾತನ ವೈದ್ಯದಲ್ಲಿ ಇವುಗಳನ್ನು ಉಪಯೋಗಿಸುತ್ತಾರೆ.ಹುಣಸೆ ಬೀಜವನ್ನು ನಾವು ಹುಣಸೆ ಹಣ್ಣನ್ನು ಬಳಸುವಾಗ ಹುಣಸೆ ಬೀಜವನ್ನು ಬಿಸಾಡುತ್ತೆವೆ ಆದರೆ ಹುಣಸೆ ಬೀಜದಲ್ಲಿ ಇರುವ ಪ್ರೊಟೀನ್ ನಲ್ಲಿ ಯಾಂಟಿ ವೈರಲ್ ಲಕ್ಷಣಗಳು ಒಳಗೊಂಡಿವೆ ಮತ್ತು ಚಿಕನ್ ಗುನ್ಯಾಗೆ ಬೇಕಾದಂತಹ ಯಾಂಟಿ ವೈರಲ್ ಔಷಧಿಗಳನ್ನು ಅಬಿವೃದ್ಧಿ ಮಾಡುವುದಕ್ಕೆ ಈ ಬೀಜವನ್ನು ಬಳಕೆ ಮಾಡಬಹುದು ಎಂದು ಅದ್ಯನದಲ್ಲಿ ತಿಳಿಸಿದ್ದಾರೆ.

1. ಜೀರ್ಣಕ್ರಿಯೆಯನ್ನು ಪ್ರೋತ್ಸಾಹ ಮಾಡುವುದರಲ್ಲಿ ಸಹಾಯ ಮಾಡುತ್ತದೆ – ಹುಣಸೆ ಬೀಜದ ರಸ ಅಜೀರ್ಣವನ್ನು ಹೋಗಲಾಡಿಸಿ ಮತ್ತು ಪಿತ್ತರಸವನ್ನು ಹೆಚ್ಚು ಮಾಡುತ್ತದೆ. ಕೊಲೆಸ್ಟ್ರಾಲ್ ಕಡಿಮೆ ಇದ್ದು ನಾರಿನಾಂಶ ಹೆಚ್ಚಾಗಿ ಹೊಂದಿದೆ ಇದರಿಂದ ಅಜಿರ್ಣಕ್ರಿಯೆ ಸರಾಗವಾಗಿ ಆಗಿ ಮತ್ತು ನೈಸರ್ಗಿಕವಾಗಿ ಹಸಿವು ಉಂಟು ಮಾಡುವುದು. ಮಲಬದ್ಧತೆ ನಿವಾರಣೆ ಮಾಡಲು ತುಂಬಾ ಪರಿಣಾಮಕಾರಿಯಾಗಿದೆ. 2. ಹಲ್ಲಿನ ದುರ್ವಾಸನೆಯನ್ನು ಹೋಗಲಾಡಿಸುತ್ತದೆ – ಹಲ್ಲುಗಳು ತುಂಬಾ ದುರ್ಬಲವಾಗಿದ್ದರೆ ಆಗ ಹುಣಸೆ ಬೀಜದ ಪುಡಿಯನ್ನು ಒಸಡು ಮತ್ತು ಹಲ್ಲುಗಳಿಗೆ ಹಚ್ಚಿಕೊಳ್ಳಿ ಮುಖ್ಯವಾಗಿ ಹೆಚ್ಚು ದೂಮಪಾನ ಮಾಡುವವರು, ಬಾಯಿಯ ಸ್ವಚ್ಛತೆ ಸರಿಯಾಗಿ ಮಾಡದೆ ಇರುವವರು, ಅತಿಯಾಗಿ ತಂಪು ಪಾನೀಯ ಸೇವನೆ ಮಾಡುವವರಲ್ಲಿ ಹಲ್ಲಿನ ಮೇಲೆ ಕಲೆ ಅಥವಾ ಪದರ ನಿರ್ಮಾಣವಾಗಿರುತ್ತದೆ. ಇದು ಕಾಪಿ, ಚಾ, ಸೋಡಾ, ಮತ್ತು ದುಮಪಾನದಿಂದ ಉಂಟಾಗಿರುವ ಕಲೆಗಳನ್ನು ನಿವಾರಿಸುತ್ತದೆ. ಹುಣಸೆ ಹಣ್ಣಿನ ಪುಡಿಯು ಎಲ್ಲಾ ರೀತಿಯ ದಂಥ ಸಮಸ್ಯೆ ನಿವಾರಣೆ ಮಾಡುವುದು ಮತ್ತು ಹಲ್ಲಿನಲ್ಲಿ ಇರುವಂತಹ ನಿಕೋಟಿನ್ ನ್ನು ತೆಗೆದು ಹಾಕುವುದು. ಉರಿದ ಅಥವಾ ಕರಿದ ಹುಣಸೆ ಬೀಜವನ್ನು ಪುಡಿ ಮಾಡಿಕೊಂಡು ಅದು ಮೆತ್ತಗೆ ಆದ ಬಳಿಕ ಅದರಿಂದ ಹಲ್ಲುಜ್ಜಿಕೊಳ್ಳಿ.

3. ಮಧುಮೇಹ ಕಡಿಮೆ ಮಾಡಲು ಸಹಾಯ ಮಾಡುತ್ತದೆ – ಹುಣಸೆ ಬೀಜವನ್ನು ಪುಡಿಮಾಡಿ ನೀರಿನಲ್ಲಿ ಹಾಕಿ ಕುಡಿಯುವುದರಿಂದ ರಕ್ತದಲ್ಲಿ ಇರುವ ಸಕ್ಕರೆ ಮಟ್ಟವನ್ನು ಸಹಜವಾಗಿ ಕಡಿಮೆ ಮಾಡುತ್ತದೆ. ಮತ್ತು ಹುಣಸೆ ಬೀಜ ಇನ್ಸುಲಿನ್ ಉತ್ಪತ್ತಿ ಮಾಡುವ ಕೋಶದ ಗಾತ್ರವನ್ನು ಹಿಗ್ಗಿಸಿ ಮೇದೋಜೀರಕ ಗ್ರಂಥಿಯನ್ನು ರಕ್ಷಿಸುತ್ತದೆ. 4. ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು – ಹುಣಸೆ ಬೀಜದಲ್ಲಿ ಪೊಟಾಶಿಯಂ ಇರುತ್ತದೆ ಇದು ರಕ್ತದೊತ್ತಡ ಮತ್ತು ಇತರ ಹೃದಯ ಸಂಬಂಧ ಕಾಯಿಲೆಯಿಂದ ಬಳಲುವಂಥವರಿಗೆ ಈ ಬೀಜ ತುಂಬಾ ಸಹಕಾರಿಯಾಗುತ್ತದೆ. 5. ಕೆಮ್ಮು ಗಂಟಲಿನ ಸೋಂಕಿನಿಂದ ರಕ್ಷಣೆ ನೀಡುತ್ತದೆ – ಹುಣಸೆ ಬೀಜದಲ್ಲಿ ಯಾಂಟಿ ಬ್ಯಾಕ್ಟೀರಿಯಾ ಲಕ್ಷಣಗಳು ಒಳಗೊಂಡಿರುತ್ತದೆ ಇವು ಇನ್ಫೆಕ್ಷನ್ ನಿಂದ ರಕ್ಷಣೆ ಮಾಡುವುದಕ್ಕೆ ಸಹಾಯ ಮಾಡುತ್ತವೆ. ಹಾಗೆಯೇ ಹುಣಸೆ ಬೀಜವನ್ನು ಪುಡಿಮಾಡಿ ಶುಂಠಿ ಮತ್ತು ದಾಲ್ಚಿನ್ನಿ ಜೊತೆಗೆ ಮಿಶ್ರಣ ಮಾಡಿಕೊಂಡು ಕುಡಿದರೆ ಶೀತ, ಕೆಮ್ಮು, ನೆಗಡಿ, ಗಂಟಲಿನ ಸಮಸ್ಯೆ ಕಡಿಮೆಯಾಗುತ್ತದೆ. 6. ಮೂಳೆ ಮುರಿತ – ಹುಣಸೆ ಬೀಜವನ್ನು ದಪ್ಪಗಿನ ಪೇಸ್ಟ್ ಮಾಡಿಕೊಂಡು ಮುರಿದ ಮೂಳೆಗೆ ಹಚ್ಚಿದರೆ ಅದು ಜೋಡಣೆಯಾಗುತ್ತದೆ. ಶುಭದಿನ.

Leave a Reply

Your email address will not be published. Required fields are marked *