ನಮಸ್ತೆ ಪ್ರಿಯ ಓದುಗರೇ, ಇವತ್ತಿನ ಲೇಖನದಲ್ಲಿ ಒಂದು ರುಚಿಯಾದ ಬೆಳಗಿನ ಉಪಹಾರ ಮಾಡುವ ವಿಧಾನ ತಿಳಿದುಕೊಳ್ಳೋಣ ಸ್ನೇಹಿತರೆ. ಇಂದಿನ ಲೇಖನದಲ್ಲಿ ತೆಳುವಾಗಿ ಹಾಗೂ ಗರಿ ಗರಿಯಾಗಿ ಮಾಡುವಂಥ ರವೆ ರೊಟ್ಟಿಯನ್ನು ತಯಾರಿಸುವ ವಿಧಾನ ನೋಡೋಣ. ಹಾಗಾದರೆ ತಡ ಯಾಕೆ ಈಗಲೇ ಶುರು ಮಾಡೋಣ. ಇದನ್ನು ಬೆಳಗಿನ ಉಪಹಾರಕ್ಕೆ ಅಥವಾ ಸಂಜೆಯ ಸ್ನಾಕ್ಸ್ ಆಗಿ ಕೂಡ ಮಾಡಿಕೊಳ್ಳಬಹುದು. ತುಂಬಾ ಸುಲಭವಾಗಿ ಬಹಳ ಕಡಿಮೆ ಸಾಮಗ್ರಿಗಳನ್ನು ಬಳಸಿ ತಯಾರಿಸುವಂತದ್ದು. ಮೊದಲು ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಒಂದು ಲೋಟದಷ್ಟು ಚಿರೋಟಿ ರವೆಯನ್ನು ಹಾಕ್ಕೊಳ್ಳಿ. ಇದಕ್ಕೆ ಬಾಂಬೆ ರವೆಗಿಂತ ಚಿರೋಟಿ ರವೆಯನ್ನು ಬಳಸಿದರೆ ರುಚಿ ಚೆನ್ನಾಗಿ ಬರುತ್ತದೆ, ಹಾಗಾಗಿ ಚಿರೋಟಿ ರವೆಯನ್ನ ಬಳಸುವುದು ಸೂಕ್ತ. ಹಾಗೆ ಇದಕ್ಕೆ ಒಂದು ಬಟ್ಟಲು ಸಣ್ಣದಾಗಿ ಹೆಚ್ಚಿಟ್ಟು ಕೊಂಡ ಈರುಳ್ಳಿಯನ್ನು ಸೇರಿಸಿ, ಈರುಳ್ಳಿಯನ್ನು ಜಾಸ್ತಿ ಹಾಕಿಕೊಂಡರೆ ರೊಟ್ಟಿಯ ರುಚಿ ಇನ್ನಷ್ಟೂ ಇಮ್ಮಡಿಯಾಗುತ್ತದೆ. ನಂತರ ಇದಕ್ಕೆ ಕರಿಬೇವಿನ ಎಲೆಗಳನ್ನು ಚಿಕ್ಕದಾಗಿ ಕತ್ತರಿಸಿ ಹಾಕಿ, ಆಮೇಲೆ ನಾಲ್ಕು ಹಸಿ ಮೆಣಸಿನ ಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ ಸೇರಿಸಿ, ಅದಾದ ನಂತರ ಒಂದು ಚಮಚದಷ್ಟು ಜೀರಿಗೆಯನ್ನು ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಕೊನೆಗೆ ಕೊತ್ತಂಬರಿ ಸೊಪ್ಪನ್ನು ಸೇರಿಸಿ, ಕೊತ್ತಂಬರಿ ಸೊಪ್ಪನ್ನು ಜಾಸ್ತಿ ಹಾಕಿದಷ್ಟೂ ರುಚಿ ಕೊಡುತ್ತದೆ.
ನಂತರ ಇದಕ್ಕೆ ಒಂದು ಬಟ್ಟಲು ಮೊಸರನ್ನು ಸೇರಿಸಿ, ಹುಳಿ ಮೊಸರನ್ನು ಬಳಸಿದರೂ ತೊಂದರೆ ಇಲ್ಲ. ರುಚಿ ಇನ್ನೂ ಚೆನ್ನಾಗಿ ಬರುತ್ತದೆ. ಇವೆಲ್ಲವನ್ನೂ ಸ್ವಲ್ಪ ನೀರನ್ನು ಚೆನ್ನಾಗಿ ಕಲಸಿ. ಇದಕ್ಕೆ ನೀವು ಕ್ಯಾರೆಟ್ ತುರಿ, ಹಸಿ ಕಾಯಿತುರಿ ಗಳನ್ನೋ ಸೇರಿಸಬಹುದು. ಆದರೆ ಸಿಂಪಲ್ ಆಗಿ ಮಾಡುವುದಾದರೆ ಮೇಲಿನ ಪದಾರ್ಥಗಳನ್ನು ಸೇರಿಸಿ ಮಾಡಿದರೂ ರುಚಿ ಅದ್ಭುತವಾಗಿ ಇರುತ್ತದೆ. ಕೈಯಿಯ ಸಹಾಯದಿಂದ ಚೆನ್ನಾಗಿ ಕಲಸಿ, ರವೆ ನೆಂದ ಮೇಲೆ ನೀರನ್ನು ಎಳೆದುಕೊಳ್ಳುವ ದರಿಂದ ನೀರನ್ನು ನೋಡಿ ಸೇರಿಸಿಕೊಳ್ಳಿ. ಹಿಟ್ಟನ್ನು ಸ್ವಲ್ಪ ಲೂಸ್ ಆಗಿ ನೀರು ಹೆಚ್ಚು ಹಾಕಿ ಮೆದುವಾಗಿ ಕಲಸಿ. ಹಾಗಂತ ಹೆಚ್ಚಿಗೆ ನೀರನ್ನು ಸಹ ಸೇರಿಸಬೇಡಿ. ಹೆಚ್ಚು ನೀರು ಬಳಸಿದರೆ ರೊಟ್ಟಿ ಹರಿದು ಹೋಗುವ ಸಾಧ್ಯತೆ ಇರುತ್ತದೆ. ಹೀಗೆ ಕಲಸಿದ ಹೊಟ್ಟನ್ನು ಒಂದು ಮುಚ್ಚಳ ಮುಚ್ಚಿ 20 ನಿಮಿಷಗಳ ಕಾಲ ನೆನೆಯಲು ಬಿಡಿ. ನಿಮಗೆ ಇನ್ನೂ ಸಮಯ ಹೆಚ್ಚಿದ್ದರೆ 30 ನಿಮಿಷ ಬಿಡಬಹುದು.
ಈಗ ಹಿಟ್ಟು ನೀರನ್ನು ಚೆನ್ನಾಗಿ ಎಳೆದುಕೊಂಡು ರೊಟ್ಟಿ ತಟ್ಟುವ ಹದಕ್ಕೆ ಬಂದಿದೆ, ಈ ಸಮಯದಲ್ಲಿ ರವೆ ಸ್ವಲ್ಪ ಗಟ್ಟಿ ಅನ್ನಿಸಿದರೆ ಆಗಲೂ ಸ್ವಲ್ಪ ನೀರು ಸೇರಿಸಿ ಲೂಸ್ ಆಗಿ ಕಲಸಿಕೊಳ್ಳಿ. ಈಗ ಒಂದು ದೋಸೆ ಹೆಂಚು ಕಾವಲಿ ಅಥವಾ ಗ್ಯಾಸ್ ಮೇಲಿಟ್ಟು ಎಣ್ಣೆ ಸವರಿ ಬಿಸಿಯಾಗಲು ಬಿಡಿ, ಈಗ ಈ ಹಿಟ್ಟನ್ನು ನೀವು ನೇರವಾಗಿ ಕಾದ ಹೆಂಚಿನ ಮೇಲೆ ತಟ್ಟಬಹುದು, ಅಥವಾ ಬಟ್ಟರ್ ಪೇಪರ್ ಮೇಲೆ ಅಥವಾ ಬಾಳೆ ಎಲೆಯ ಮೇಲೂ ತಟ್ಟಬಹುದು. ನಾವಿಲ್ಲಿ ನೇರವಾಗಿ ಕಾದ ಹೆಂಚಿನ ಮೇಲೆಯೇ ಒಂದು ದೊಡ್ಡ ಉಂಡೆಯನ್ನು ತೆಗೆದುಕೊಂಡು ಚೆನ್ನಾಗಿ ದುಂಡಾದ ಆಕಾರದಲ್ಲಿ ತಟ್ಟರಿ, ಈ ರೊಟ್ಟಿ ತಟ್ಟುವಾಗ ಹಿಟ್ಟು ಕೈಗೆ ಅಂಟಿಕೊಳ್ಳುತ್ತಿದೇ ಅನ್ನಿಸಿದರೆ ಕೈಗೆ ನೀರನ್ನು ಅದ್ದಿ ಅದ್ದಿ ತುಂಬಾ ತೆಳ್ಳಗೂ ಕೂಡ ತಟ್ಟಬಹುದು. ಈಗ ದುಂಡಾಗಿ ಅಗಲವಾಗಿ ತಟ್ಟಿದ ರೊಟ್ಟಿಯ ಮೇಲೆ ಒಂದು ಲಿಡ್ ಅಥವಾ ಮುಚ್ಚಳ ಮುಚ್ಚಿ ಬೇಯಲು ಬಿಡಿ, ಹೀಗೆ ಲೀಡ್ ಮುಚ್ಚಿ ಎರೆಡೂ ಕಡೆ ಚೆನ್ನಾಗಿ ಕೆಂಪತ್ತುವ ಹಾಗೆ ಬೇಯಿಸಿದರೆ ಗರಿ ಗರಿಯಾದ ರವೆ ರೊಟ್ಟಿ ಸವಿಯಲು ಸಿದ್ದ. ನೋಡಿದೀರಲ್ಲ ಆಹಾರ ಪ್ರಿಯರೇ ರುಚಿಯಾದ ಅತೀ ಕಡಿಮೆ ಪದಾರ್ಥಗಳನ್ನು ಬಳಸಿ ರವೆ ರೊಟ್ಟಿ ರೆಸಿಪಿಯನ್ನ. ಹಾಗಾದರೆ ಈ ರೆಸಿಪಿ ಇಷ್ಟ ಆಗಿದ್ದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಫ್ರೆಂಡ್ಸ್ ಹಾಗೂ ರಿಲೇಟಿವ್ ಗೆ ತಿಳಿಸಿ. ಶುಭದಿನ.