ನಮಸ್ತೆ ಪ್ರಿಯ ಓದುಗರೇ, ಭಾರತದ ಭವ್ಯ ಇತಿಹಾಸದಲ್ಲಿ ತನ್ನದೇ ಆದ ವಿಶಿಷ್ಟ ಸಂಸ್ಕೃತಿ, ಸಂಪ್ರದಾಯ, ಆಚರಣೆಗಳ ಮೂಲಕ ಪ್ರಖ್ಯಾತ ರಾಜ್ಯ ಎಂದರೆ ಅದು ನಮ್ಮ ಹೆಮ್ಮೆಯ ಕರ್ನಾಟಕ ರಾಜ್ಯ. ಸಾಮಾನ್ಯವಾಗಿ ನಮ್ಮ ಹಿಂದೂಗಳ ದೇವಸ್ಥಾನ ಒಂದು ಕಡೆ ಇದ್ರೆ ಮುಸ್ಲಿಂ ದರ್ಗಾ ಬೇರೆ ಕಡೆ ಸ್ಥಾಪನೆ ಆಗಿರೋದನ್ನು ನಾವು ನೊಡಿರ್ತೀವಿ. ಆದ್ರೆ ಯಾವತ್ತಾದರೂ ದರ್ಗಾದೊಳಗೆ ಸ್ಥಾಪನೆ ಆದ ಹಿಂದೂ ದೇವಾಲಯದ ಬಗ್ಗೆ ಕೇಳಿದ್ದೀರಾ? ಬನ್ನಿ ಹಾಗಾದರೆ ಆ ಸ್ಥಳ ಯಾವುದು ಅದರ ವಿಶೇಷತೆ ಏನು ಅನ್ನೋದನ್ನ ಇವತ್ತಿನ ಲೇಖನದಲ್ಲಿ ತಿಳಿದುಕೊಂಡು ಬರೋಣ. ಹಣಗೆರೆ ಕಟ್ಟೆ ಎಂದೇ ಪ್ರಸಿದ್ಧವಾದ ಭೂತರಾಯ ಚೌಡೇಶ್ವರಿ ಸೈಯದ್ ಸಾದತ್ ದರ್ಗಾದಲ್ಲಿ ಹಿಂದೂ ಮುಸ್ಲಿಂ ಎರೆಡೂ ಜನಾಂಗದವರು ನಿತ್ಯ ಒಟ್ಟಾಗಿ ಸೇರಿ ಪೂಜೆ ಸಲ್ಲಿಸೋದನ್ನ ನೋಡಬಹುದಾಗಿದೆ. ದರ್ಗಾದ ಒಳಗಡೆ ಸ್ಥಾಪನೆ ಆದ ವಿಶಿಷ್ಟ ಹಿಂದೂ ದೇವಾಲಯ ಎಂಬ ಹೆಗ್ಗಳಿಕೆಗೂ ಈ ಕ್ಷೇತ್ರ ಭಾಜನವಾಗಿದೆ. ಇಲ್ಲಿ ನೆಲೆಸಿರುವ ಮುತ್ತಿನ ಮರದಲ್ಲಿ ನೆಲೆ ನಿಂತ ಭೋತಪ್ಪನಿಗೆ ಹರಕೆ ಹೊತ್ತುಕೊಂಡರೆ ಅಂದುಕೊಂಡ ಕಾರ್ಯಗಳು ಸುದ್ಧಿ ಆಗುತ್ತವೆ ಎಂದೂ ಪ್ರತೀತಿ ಆಗಿದ್ದು ಹರಕೆ ತೀರಿದ ನಂತರ ಈ ಮರಕ್ಕೆ ಬೀಗ ಹಾಕುವ ವಿಶಿಷ್ಟ ಆಚರಣೆಯನ್ನ ನಾವಿಲ್ಲಿ ನೋಡಬಹುದಾಗಿದೆ.
ಇಷ್ಟು ಮಾತ್ರವಲ್ಲದೆ ಮರಕ್ಕೆ ಮೊಳೆ ಹೊಡೆಯೋದು, ತಾಯತ ತ್ರಿಶೂಲವನ್ನು ಅರ್ಪಿಸುವ ವಿಶಿಷ್ಟ ಸಂಪ್ರದಾಯ ಇಲ್ಲಿ ಜಾರಿಯಲ್ಲಿದೆ. ಇನ್ನೂ ಇಲ್ಲಿಗೆ ಬರುವ ಪ್ರತಿ ಭಕ್ತಾದಿಗಳು ದರ್ಗಾಕ್ಕೆ ಶಾಲನ್ನು ಒಪ್ಪಿಸಿ ನಂತರ ಗೋರಿ ಪಕ್ಕದಲ್ಲಿರುವ ಭೂತರಾಯ ಹಾಗೂ ಚೌಡೇಶ್ವರಿಗೆ ಹಣ್ಣು ಕಾಯಿ ಮತ್ತು ಎಡೆ ಇಟ್ಟು ಪೂಜೆ ಮಾಡಬೇಕು. ಹೀಗೆ ಮಾಡುವುದರಿಂದ ಮನದ ಅಭೇಷ್ಟೆಗಳೆಲ್ಲವೂ ಶ್ರೀಗ್ರವಾಗಿ ನೆರವೇರುತ್ತದೆ ಎನ್ನುವುದು ಇಲ್ಲಿಗೆ ಭೇಟಿ ನೀಡುವ ಹಿಂದೂ ಮತ್ತು ಮುಸ್ಲಿಂ ಭಕ್ತರ ಅಚಲವಾದ ನಂಬಿಕೆ ಆಗಿದೆ. ಇನ್ನೂ ಈ ಕ್ಷೇತ್ರದಲ್ಲಿ ದರ್ಗಾ ಮತ್ತು ದೇವಾಲಯವನ್ನು ಒಟ್ಟಿಗೆ ಸ್ಥಾಪನೆ ಮಾಡಿರುವುದರ ಹಿಂದೆ ಒಂದು ಘಟನೆ ಕೂಡ ಇದೆ. ಬಹಳ ವರ್ಷಗಳ ಹಿಂದೆ ಹಣಗೆರೆ ಕಟ್ಟೆಯ ಕೆರೆ ದಡದ ಮೇಲೆ ಬಾಗ್ದಾದ್ ಸೂಫಿ ಮನೆತನದ ಹಜ್ರತ್ ಸೈಯದ್ ಸಾದತ್ ಅವರು ಧ್ಯನಸಕ್ತರಾಗಿ ನೆಲೆಸಿರುತ್ತಾರೆ ಅವರ ದ್ಯಾನಕ್ಕೆ ಮಹಾನ್ ದೇವ ಭಕ್ತರಾದ ಭೂತಪ್ಪ ಹಾಗೂ ಚೌಡಮ್ಮ ಎಂಬ ಅಣ್ಣ ತಂಗಿಯರು ಹಾಲು ಹಣ್ಣುಗಳ ಒದಗಿಸುವ ಮೂಲಕ ನೆರವಾಗುತ್ತಾರೆ. ಮುಂದೆ ಹಜ್ರತ್ ಅವರು ಲೋಕ ಕಲ್ಯಾಣಕ್ಕಾಗಿ ಜೀವಂತ ಸಮಾಧಿ ಹೊಂದುವಾಗ ಭೂತಪ್ಪಾ ಮತ್ತು ಚೌಡಮ್ಮನ ಬಳಿ ನೀವು ಕೂಡ ನನ್ನ ಜೊತೆ ನೆಲೆ ನಿಂತು ಇಲ್ಲಿಗೆ ಬರುವ ಭಕ್ತರನ್ನು ಉದ್ಧರಿಸಬೇಕು ಎಂದು ಕೇಳಿಕೊಂಡರ ಫಲವಾಗಿ ಇಲ್ಲಿ ದರ್ಗಾ ಹಾಗೂ ಭೂಥರಾಯ ಮತ್ತು ಚೌಡೇಶ್ವರಿಯ ದೇಗುಲವನ್ನು ಸ್ಥಾಪನೆ ಮಾಡಲಾಯಿತು ಎಂದು ಇಲ್ಲಿನ ಸ್ಥಳಪುರಾಣ ಹೇಳುತ್ತದೆ.
ಹುಣ್ಣಿಮೆ ಅಮಾಾಸ್ಯೆಯಂದು ಇಲ್ಲಿಗೆ ಬಂದು ಪೂಜೆ ಸಲ್ಲಿಸಿದರೆ ಕೋರ್ಟ್ ವ್ಯಾಜ್ಯಗಳು, ಶತ್ರು ಬಾಧೆ, ವಾಮಾಚಾರ ಪ್ರಯೋಗ, ಆರೋಗ್ಯ ಸಮಸ್ಯೆ ಗಳು ದೂರವಾಗುತ್ತದೆ ಎಂದು ಹೇಳಲಾಗುತ್ತದೆ. ನಿತ್ಯ ಏರೆಡರಿಂದ ಮೂರು ಸಾವಿರ ಜನರು ಭೇಟಿ ಕೊಡುವ ಈ ದೇಗುಲಕ್ಕೆ ಅಮಾವಾಸ್ಯೆಯಂದು ಹತ್ತರಿಂದ ಹದಿನೈದು ಸಾವಿರ ಜನ ಭೇಟಿ ನೀಡುತ್ತಾರೆ. 500 ವರ್ಷಗಳಿಗೂ ಪುರಾತನವಾದ ಈ ದೇಗುಲಕ್ಕೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆ ವರೆಗೆ ಭೇಟಿ ನೀಡಬಹುದು. ಅಕ್ಟೋಬರ್ ನಿಂದ ಮಾರ್ಚ್ ತಿಂಗಳು ಈ ಕ್ಷೇತ್ರಕ್ಕೆ ಭೇಟಿ ನೀಡಲು ಸೂಕ್ತವಾದ ಸಮಯವಾಗಿದೆ. ಇಲ್ಲಿಗೆ ಬರುವ ಭಕ್ತಾದಿಗಳು ತಮ್ಮ ಇಷ್ಟಾನುಸಾರ ದೇವರಿಗೆ ಪೂಜೆಯನ್ನು ಸಲ್ಲಿಸಬಹುದು. ಹಿಂದೂ ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿರುವ ಈ ಸ್ಥಳವು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಣಗೆರೆ ಎಂಬ ಪುಟ್ಟ ಗ್ರಾಮದಲ್ಲಿದೆ. ಈ ಕ್ಷೇತ್ರವು ಬೆಂಗಳೂರಿನಿಂದ 347 ಕಿಮೀ, ಹಾಸನದಿಂದ 180 ಕಿಮೀ, ಮೈಸೂರಿನಿಂದ 282 ಕಿಮೀ, ಉಡುಪಿಯಿಂದ 118 ಕಿಮೀ, ಶಿವಮೊಗ್ಗದಿಂದ 137 ಕಿಮೀ, ದೂರದಲ್ಲಿದೆ. ಶಿವಮೊಗ್ಗಕ್ಕೆ ರಾಜ್ಯದ ಹಲವಾರು ಭಾಗಗಳಿಂದ ಕರ್ನಾಟಕ ಬಸ್ ಸಾರಿಗೆ ವ್ಯವಸ್ಥೆ ಇದ್ದು, ಶಿವಮೊಗ್ಗ ತಲುಪಿ ಅಲ್ಲಿಂದ ಬಸ್ ಅಥವಾ ಖಾಸಗಿ ವಾಹನ ಮಾಡಿಕೊಂಡು ಸುಲಭವಾಗಿ ಈ ದೇಗುಲಕ್ಕೆ ತಲುಬಹುದಾಗಿದೆ. ಶಿವಮೊಗ್ಗ ತೀರ್ಥಹಳ್ಳಿ ಯು ಹಣಗೆರೆಗೆ ಸಮೀಪದ ರೈಲ್ವೇ ನಿಲ್ದಾಣ ವಾಗಿದೆ. ಸಾಧ್ಯವಾದರೆ ನೀವು ಒಮ್ಮೆ ಈ ಸ್ಥಳಕ್ಕೆ ಭೇಟಿ ನೀಡಿ ದೇವರ ಕೃಪೆಗೆ ಪಾತ್ರರಾಗಿ. ಶುಭದಿನ.