ನಮಸ್ತೆ ಪ್ರಿಯ ಓದುಗರೇ, ಸ್ನೇಹಿತರೆ ಆನ್ಲೈನ್ ಟ್ರನ್ಸಾಕ್ಷನ್ ಎಷ್ಟು ಸುಲಭ ಮಾಡಿದೆಯೋ ಅಷ್ಟೇ ಕಷ್ಟ ಕೂಡ. ಸೋ ಇಂದಿನ ಲೇಖನದಲ್ಲಿ UPI ನಂಬರ್ ನ ಹೇಗೆ ಬದಲಿಸೋದು ಅಂತ ತಿಳಿಯೋಣ. ಈ UPI ಪಿನ್ ನಂಬರ್ ನಿಮಗೆ ಮಾತ್ರ ಗೊತ್ತಿರಬೇಕು. ಅಕಸ್ಮಾತ್ ಬೇರೆಯವರಿಗೆ ಗೊತ್ತಾಯ್ತು ಅಂದ್ರೆ ನೀವು ತುಂಬಾ ಬೇಗ ಒಂದೇ ನಿಮಿಷದಲ್ಲಿ ಬದಲಾಯಿಸಬಹುದು. ಬನ್ನಿ ಸ್ನೇಹಿತರೆ ಈ UPI ಪಿನ್ ನ ಪೇಟಿಎಮ್ ಅಲ್ಲಿ ಹೇಗೆ ಚೇಂಜ್ ಮಾಡೋದು ಅಂತ ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಮೊದಲು ಪೇಟಿಎಮ್ ಆಪ್ ನ ಓಪನ್ ಮಾಡಿ ಎಡಗಡೆ ನೋಡಿ ಪ್ರೊಫೈಲ್ ಐಕಾನ್ ಇರುತ್ತೆ, ಅದನ್ನು ನೀವು ಟಚ್ ಮಾಡಿ ಓಪನ್ ಮಾಡಿ, ಅಲ್ಲಿ ನಂತರ ಸೆಟ್ಟಿಂಗ್ಸ್ ಗೆ ಹೋಗಬೇಕು, ಪೇ ಮೇಂಟ್ ಸೆಟ್ಟಿಂಗ್ಸ್ ಅಲ್ಲಿ ಸೇವ್ಡ್ ಕಾರ್ಡ್ಸ್ ಮತ್ತು ಬ್ಯಾಂಕ್ ಅಕೌಂಟ್ ಇರುತ್ತೆ, ಅದನ್ನು ಸೆಲೆಕ್ಟ್ ಮಾಡಿಕೊಳ್ಳಿ, ಅದನ್ನು ನೀವು ಸೆಲೆಕ್ಟ್ ಮಾಡಿಕೊಂಡಾಗ ನೀವು ಯಾವ ಕಾರ್ಡ್ಸ್ ಸೆಲೆಕ್ಟ್ ಮಾಡಿದಿರಾ ಅದೆಲ್ಲ ಇರುತ್ತೆ, ಇವಾಗ ಇದರಲ್ಲಿ ಪೇಟಿಎಮ್ ಪೇ ಮೇಂಟ್ ಬ್ಯಾಂಕ್ ಸೆಲೆಕ್ಟ್ ಮಾಡಿಕೊಳ್ಳೋಣ.

ಯಾಕೆಂದರೆ ನಾವು ಪೇಟಿಎಮ್ ಅಕೌಂಟ್ ನಂಬರ್ ನ ಚೇಂಜ್ ಮಾಡ್ತಾ ಇದೀವಿ ಅದಕ್ಕೆ. ಇದನ್ನು ನೀವು ಸೆಲೆಕ್ಟ್ ಮಾಡಿದಾಗ ನಿಮಗೆ ಎರೆಡು ಆಪ್ಷನ್ ಕಾಣಿಸುತ್ತೆ, ಕ್ರಿಯೇಟ್ ನ್ಯೂ UPI ಮತ್ತು ರಿಮೂವ್ ಅಕೌಂಟ್ ಅಂತ. ಅದ್ರಲ್ಲಿ ನಾವು ಕ್ರಿಯೇಟ್ ನ್ಯೂ ಯುಪಿ ಯನ್ನ ಸೆಲೆಕ್ಟ್ ಮಾಡ್ಕೋಬೇಕು. ಅದನ್ನು ಸೆಲೆಕ್ಟ್ ಮಾಡಿದಾಗ ನಮ್ಮ ಡೆಬಿಟ್ ಕಾರ್ಡ್ ದು ಕೊನೆಯ ನಾಲ್ಕು ಡಿಜಿಟ್ ನ ಕೇಳುತ್ತೆ, ಆಮೇಲೆ ನಮ್ಮ ಕಾರ್ಡ್ ನ ಎಕ್ಸ್ಪೈರಿ ಡೇಟ್ ನ ಕೇಳುತ್ತೆ, ಅದನ್ನು ಅಲ್ಲಿ ತುಂಬಬೇಕು, ಈಗ ನಿಮಗೆ ಹಳೆಯ UPI ನಂಬರ್ ನೆನಪಿದ್ದರೆ ನೀವು ಕೆಳಗಡೆ ಇರುವ ಆಪ್ಷನ್ ಸೆಲೆಕ್ಟ್ ಮಾಡಿಕೊಳ್ಳಬಹುದು, ರಿಮೆಂಬರ್ ಮೈ ಓಲ್ಡ್ ಪಿನ್ ಅನ್ನೋ ಆಪ್ಷನ್ ನ ಸೆಲೆಕ್ಟ್ ಮಾಡಿಕೊಳ್ಳಬೇಕು. ನಂತರ ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರ್ ಗೆ ಒಂದು ಒ.ಟಿ.ಪಿ ಬರುತ್ತೆ, ಅದನ್ನು ನೀವು ಇಲ್ಲಿ ಹಾಕಬೇಕು, ಒ.ಟಿ.ಪೀ ಹಾಕಿದ ತಕ್ಷಣ ಹೊಸ UPI ಪಿನ್ ನ ಕೇಳುತ್ತೆ ಅದನ್ನು ನೀವು ಹಾಕಬೇಕು. ನಿಮಗೆ ಹೊಸ UPI ನಂಬರ್ ಎರೆಡು ಬಾರಿ ಕೇಳುತ್ತೆ, ಎರೆಡು ಬಾರಿಯೂ ಸಹ ಒಂದನ್ನೇ ನಿಮಗೆ ಯಾವುದು ಬೇಕು ಅದನ್ನು ಹಾಕಬೇಕು. ಇವಾಗ ನಮ್ಮ UPI ನಂಬರ್ ಚೇಂಜ್ ಆಯ್ತು.

ಇವಾಗ ಬ್ಯಾಂಕ್ ಅಕೌಂಟ್ UPI ನಂಬರ್ ನ ಹೇಗೆ ಚೇಂಜ್ ಮಾಡೋದು ಅಂತ ನೋಡೋಣ. ಅದಕ್ಕೆ ನೀವು ನಿಮ್ಮ ಬ್ಯಾಂಕ್ ಅಕೌಂಟ್ ನ ಸೆಲೆಕ್ಟ್ ಮಾಡ್ಕೋಬೇಕು. ಆಮೇಲೆ ಕ್ರಿಯೇಟ್ ನ್ಯೂ UPI ಪಿನ್ ನ ಸೆಲೆಕ್ಟ್ ಮಾಡ್ಕೊಳಿ. ಇಲ್ಲಿ ಕೂಡ ನಿಮ್ಮ ಡೆಬಿಟ್ ಕಾರ್ಡ್ ನ ಕೊನೆಯ ನಾಲ್ಕು ಡಿಜಿಟ್ ಹಾಗೂ ಕಾರ್ಡ್ ನ ಎಕ್ಸ್ಪೇರಿ ಡೇಟ್ ನ ಕೇಳುತ್ತೆ, ಇಲ್ಲಿಯೂ ಸಹ ನೀವು ಐ ರಿಮೆಂಬರ್ ಮೈ ಓಲ್ಡ್ ಪಿನ್ ನಂಬರ್ ಅನ್ನು ಆಯ್ಕೆ ಮಾಡಬಹುದು ಒಂದುವೇಳೆ ನಿಮಗೆ ನೆನಪಿದ್ದರೆ. ಈಗ ಓಲ್ಡ್ ಪಿನ್ ನ ನಂಬರ್ ಹಾಕಬೇಕು, ಹಾಗೆಯೇ ಹೊಸ ಪಿನ್ ನ ನಂಬರ್ ಅನ್ನು ಹಾಕ್ಬೇಕು. ಎರೆಡು ಬಾರಿ ಕೇಳುತ್ತೆ ನಮ್ಮ ಹೊಸ ಪಿನ್ ನಂಬರ್ ಅನ್ನು, ಎರೆಡೂ ಬಾರಿಯೋ ಸರಿಯಾಗಿ ಬರೆಯಬೇಕು. ಸೋ ಎರೆಡು ಸಾರಿ ಹಾಕಿ ಕನ್ಫರ್ಮ್ ಮಾಡಿಕೊಳ್ಳಿ. ನೋಡಿದ್ರಾ ಸ್ನೇಹಿತರೆ ನಮ್ಮ UPI ನಂಬರ್ ಚೇಂಜ್ ಆಯ್ತು. ನೀವು ಅಕಸ್ಮಾತ್ ನೀವು ನಿಮ್ಮ ಹಳೆಯ UPI ನಂಬರ್ ಮರೆತು ಹೋಗಿದ್ದಾಗಲೂ ಕೂಡ ನೀವು ಇದನ್ನು ಮಾಡಬಹುದು. ನಮ್ಮ ಆನ್ಲೈನ್ ಟ್ರನ್ಸಾಕ್ಷನ್ ಸೇಫ್ ಆಗಿರೋದು ತುಂಬಾನೇ ಮುಖ್ಯ ಅಲ್ವಾ. ಸೋ ಆಗಾಗ UPI ನಂಬರ್ ನ ಚೇಂಜ್ ಮಾಡ್ತಾ ಇರಿ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ, ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

Leave a Reply

Your email address will not be published. Required fields are marked *