ನಮಸ್ತೆ ಪ್ರಿಯ ಓದುಗರೇ, ಮುಟ್ಟಾದ ಸ್ತ್ರೀಯರು ಮನೆಯಿಂದ ಆಚೆ ಇರ್ಬೇಕಾ? ಮುಟ್ಟಾದ ಸ್ತ್ರೀಯರನ್ನು ಯಾರೂ ಮುಟ್ಟೀಸಿಕೊಳ್ಳಬಾರಾದಾ? ಮುಟ್ಟಾದ ಹೆಂಗಸರು ದೇವಾಲಯ ಪ್ರವೇಶ ನದಿ ಸ್ನಾನಗಳು ಮಾಡಬಾರದಾ? ಮುಟ್ಟಾದ ಸ್ತ್ರೀಯನ್ನು ಯಾಕೆ ಬಹಿಷ್ಠೆ ಅಂತ ಹೇಳಿ ಕರೆದು ದೂರ ಇಡ್ತೀವಿ. ಮುಟ್ಟಾದ ಸ್ತ್ರೀ ಆ ಮುಟ್ಟಿನ ಸಮಯದಲ್ಲಿ ಯಾಕೆ ಮನೆ ಮಂದಿಯೊಂದಿಗೆ ಬೆರೆಯಬಾರದು? ಕಾಲಕ್ಷೇಪ ಮಾಡಬಾರದು ಈ ಎಲ್ಲಾ ವಿಚಾರಗಳನ್ನು ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಸ್ನೇಹಿತರೆ ಒಂದು ಕಾಲ ಇತ್ತು, ಹೆಣ್ಣನ್ನು ಎಷ್ಟು ಚೆನ್ನಾಗಿ ತುಂಬಾ ಹೊಗಳುತ್ತಾ ಇರೋ ಕಾಲ ಇತ್ತು. ಸ್ವೇಚ್ಛೆ ಮತ್ತು ಸ್ವತಂತ್ರ ಹೆಣ್ಣಿಗೆ ಅಗಾಧವಾಗಿ ಇತ್ತು ಒಂದು ಕಾಲದಲ್ಲಿ. ಆದ್ರೆ ಈಗ ಸ್ವೇಚ್ಛೆ ಮತ್ತು ಸ್ವತಂತ್ರ ಅನ್ನೋ ಹೆಸರನ್ನು ಹೇಳಿಕೊಂಡು ನಾನು ಸ್ವೇಚ್ಛೆ ಹಾಗೂ ಸ್ವಾತಂತ್ರದಲ್ಲಿ ಇದ್ದೀನಿ ಎಂದು ಭ್ರಮೆಯಲ್ಲಿ ಬದುಕುತ್ತಾ ಇದ್ದಾರೆ. ಒಂದು ಹೆಣ್ಣು ಮಗು ಹೆಂಗಸಾಗಿ ಪರಿವರ್ತನೆ ಆಗೋದನ್ನ ಪುಷ್ಪವತಿ ಆಗುವುದು ಅಂತ ಕರೀತಾರೆ. ಆ ಪುಷ್ಪವತಿ ಆಗುವ ಸಂದರ್ಭದಲ್ಲಿ ಆಕೆ ಋತುಮತಿ ಆಗ್ತಾಳೆ. ಅಲ್ಲಿಂದ ಋತು ಪ್ರಾರಂಭ ಆಗುತ್ತೆ. ತಿಂಗಳಿಗೆ ಒಂದುಷ್ಟು ದಿವಸಗಳು ಎನ್ನುವ ಹಾಗೆ ಆ ಹೆಣ್ಣು ಮಗು ತನ್ನ ದೇಹದಿಂದ ರಕ್ತವನ್ನು ಸ್ರವಿಸುವ ಕ್ರಿಯೆ ಸರ್ವೇಸಾಮಾನ್ಯವಾಗಿ ನಡೆಯುತ್ತೆ, ಆಗ ಹೆಣ್ಣು ಮಕ್ಕಳನ್ನು ದೂರ ಇಡಬೇಕು ಅವರಿಂದ ಅಂತರವನ್ನು ಕಾಯ್ದುಕೊಳ್ಳಬೇಕು. ಅವರನ್ನು ಯಾವುದೇ ಕಾರಣಕ್ಕೋ ಪೂಜೆ ಪುಂಸ್ಕಾರಗಳು, ದೇವಸ್ಥಾನಗಳ ಪ್ರವೇಶವನ್ನು ಮಾಡಬಾರದು, ಆಕೆಯನ್ನು ದೂರ ಇಟ್ಟು ಮನೆಯಿಂದ ಹೊರಗೆ ಹಾಕಿ ಹೀನವಾಗಿ ನಡೆಸಿಕೊಳ್ಳಬೇಕು ಎಂಬ ಯಾವುದೇ ಶಾಸ್ತ್ರ ಪದ್ಧತಿ ಇಲ್ಲ.
ಕಾರಣಗಳು ಹಿಂದೆ ಹಲವಾರು ಇದ್ದಿರಬಹುದು. ಆ ಕಾರಣಗಳು ಇಷ್ಟೇ ಹಿಂದಿನ ಕಾಲದಲ್ಲಿ ಯಾವುದೇ ಸ್ಯಾನಿಟರಿ ಪ್ಯಾಡ್ ಇರಲಿಲ್ಲ. ಶುಚಿತ್ವಕ್ಕೆ ಕೊರತೆ ಇರ್ತಿತ್ತು, ಅದಲ್ಲದೆ ಹಿಂದಿನ ಕಾಲದಲ್ಲಿ ಒಂದು ಕೂಡು ಕುಟುಂಬ ಅನ್ನೋ ಸಂದರ್ಭದಲ್ಲಿ ಮನೆಯ ಹೆಂಗಸು ಮನೆಯ ಪ್ರತಿಯೊಂದು ಜವಾಬ್ದಾರಿ ತಲೆ ಮೇಲೆ ಹೊತ್ತು ಜೀವನ ಸಾಗುಸ್ಬೇಕಿತ್ತು. ಅದರೊಟ್ಟಿಗೆ ಮೆನೆಯ ಜನರ ಬೇಕು ಬೇಡಗಳನ್ನು ನೋಡೋದು, ಊಟಾ ಉಪಚಾರಗಳನ್ನು ಮಾಡುವಂಥ ಕೆಲ್ಸ ಮಾಡಬೇಕಿತ್ತು. ಆಕೆ ಐದಾರು ದಿನಗಳ ಕಾಲ ಋತು ಚಕ್ರ ಆಗುವಾಗ ಆಕೆಗೆ ಮೈಂಡ್ ಮೇಲೆ ಕಂಟ್ರೋಲ್ ಇರ್ತಾ ಇರಲಿಲ್ಲ. ಸಹಿಸಲಾರದ ನೋವು, ಸಂಕಟ ಆಕೆಯ ದೇಹದಲ್ಲಿ ಆಗ್ತಾ ಇರುತ್ತೆ. ದೇಹದ ಹಲವು ಭಾಗಗಳಲ್ಲಿ ಉರಿಯೂತ, ಕೆರೆತ ಇರುತ್ತವೆ. ಅದನ್ನು ಯಾರ ಹತ್ತಿರ ಹೇಳಿಕೊಳ್ಳಲು ಆಗದೆ ಇರುವ ಪರಿಸ್ಥಿತಿ ಆಕೆ ಹೆದರುಸುತ್ತ ಇರ್ತಾಳೆ. ಆಗ ಆಕೆಗೆ ಅಡುಗೆ ಮಾಡು, ಕೆಲಸ ಮಾಡು ಅಂತ ಹೇಳಬಾರದು ಅನ್ನೋ ಕಾರಣಕ್ಕೆ ಆಕೆಯನ್ನು ಐದಾರು ದಿನಗಳ ಕಾಲ ಯಾರೋ ಮಾತನಾಡಿಸ ಬೇ ಡಿ, ಯಾರೋ ಆಕೆಗೆ ಹಿಂಸೆ ಕೊಡಬೇಡಿ, ಆಕೆಗೆ ಏನು ಬೇಕು ಊಟಾ ಉಪಚಾರ ಹೊತ್ತು ಹೊತ್ತಿಗೆ ಮಾಡಿ ಕೊಡಿ ಅಂತ ಹೇಳಿ ಹೊರಗಿಟ್ಟರು. ಹೊರಗಿಡಲು ಕಾರಣ ಅಂದ್ರೆ ಶುಚಿತ್ವ.
ಈಗಿನ ರೀತಿ ಆಗ ಶುಚಿತ್ವಕ್ಕೆ ಬಳಸುವ ಸಾಧನಗಳು ಇರಲಿಲ್ಲ, ಆಗ ಬೇಗ ಬ್ಯಾಕ್ಟೀರಿಯಾ ಹರದೋಡು ಆಗ್ತಾ ಇತ್ತು. ಪೂಜೆ ಯಾಕೆ ಮಾಡಬಾರದು ಅಂದ್ರೆ ಆಕೆ ಆಕೆಯನ್ನು ಸಂಭಾಲಿಸಲು ಕಷ್ಟ ಪಡುತ್ತಿರುವಾಗ ಆಕೆಯ ಮಾನಸಿಕ ಅಸಮತೋಲನ, ಹೊಯ್ದಾಟ ಆಗುತ್ತಿರುವಾಗ ಪೂಜೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಪೂಜೆ ಮಾಡಬಾರದು ಅಂತ ಹೇಳ್ತಾ ಇದ್ರು. ಇನ್ನೂ ನದಿ ಸ್ನಾನ ಆಗಲೂ ನಿಷಿದ್ಧ ಇತ್ತು ಈಗಲೂ ಇದೆ ಯಾಕೆ ಅಂದ್ರೆ ನಮಗೆಲ್ಲರಿಗೂ ಗೊತ್ತಿರುವ ಹಾಗೆ ರಕ್ತ ಸ್ರಾವ ಆಗೋ ಸಮಯದಲ್ಲಿ ಬ್ಯಾಕ್ಟೀರಿಯಾಗಳು ಬೇಗ ಹರಡುತ್ತವೆ ಹಾಗಾಗಿ ನದಿ ಸ್ನಾನ ಮಾಡುವುದು ಒಳ್ಳೆಯದಲ್ಲ. ನಿಮ್ಮ ದೇಹ ಮನಸ್ಸು ನಿಮ್ಮ ನಿಯಂತ್ರಣದಲ್ಲಿ ಇದ್ದರೆ, ಯಾವುದೇ ನೋವು, ಅಸಮಾಧಾನ, ಯಾತನೆಗಳು ಇಲ್ಲದಿದ್ದರೆ ನೀವು ಯಾವ ಸಂಶಯವೂ ಇಲ್ಲದೆ ಮನೆಯಲ್ಲಿ ಪೂಜೆ ಪುನಸ್ಕಾರ, ಜಪ, ಅಡುಗೆ, ಎಲ್ಲರ ಜೊತೆ ಮಾತುಕತೆ, ಹರಟೆ ಎಲ್ಲವನ್ನೂ ಮಾಡಬಹುದು. ಯಾರೋ ಬೇಡ ಅನ್ನುವಂತಿಲ್ಲ. ನೈಸರ್ಗಿಕವಾಗಿ ನಡೆಯುವ ಹೆಣ್ಣಿನ ಈ ಪ್ರಕ್ರಿಯೆಗೆ ಯಾವುದೇ ರೀತಿಯ ಮುಜುಗರ, ಅಡ್ಡಿ ಆತಂಕಗಳನ್ನೂ ಮನಸಿನಲ್ಲಿ ಇಟ್ಟುಕೊಳ್ಳುವುದು ಬೇಡ. ಆ ಐದು ದಿನಗಳ ಯಾತನೆಯನ್ನು ಅನುಭವಿಸುವ ಸ್ತ್ರೀಯನ್ನು ಅವಳ ಪಾಡಿಗೆ ಅವಳನ್ನು ಬಿಟ್ಟುಬಿಡಿ ಆದರೆ ಅವಳಿಗೆ ದೂಷಣೆ ಮಾಡುವುದು, ಅದನ್ನು ಮಾಡಬಾರದು, ಇದನ್ನು ಮಾಡಬಾರದು, ಮುಟ್ಟೀಸಿಕೊಳ್ಳಬಾರದು ಎನ್ನುವುದು ಅಪರಾಧ. ನಮ್ಮ ಹಿರಿಯರು ಬುದ್ಧಿವಂತರು ಇದ್ರು ಆದ್ರೆ ಈ ರೀತಿಯ ಕೆಟ್ಟ ಆಚರೆಗಳನ್ನು ನಡೆಸಿ ಎನ್ನುವ ಮೌಢ್ಯರು ಅವರು ಆಗಿರಲಿಲ್ಲ. ಶುಭದಿನ.