ನಮಸ್ತೆ ಪ್ರಿಯ ಓದುಗರೇ, ಸ್ಮಾರ್ಟ್ ಫೋನ್, ಈಗಿನ ದಿನಗಳಲ್ಲಿ ಯಾರ ಹತ್ತಿರ ಮೊಬೈಲ್ ಫೋನ್ ಇರಲ್ಲ ಹೇಳಿ? ಒಬ್ಬ ಮನುಷ್ಯನಿಗೆ ಏನೂ ಇಲ್ಲದಿದ್ದರೆ ಏನು ಮೊಬೈಲ್ ಅಂತೂ ಬೇಕೇ ಬೇಕು. ಈ ಮೊಬೈಲ್ ಬಗ್ಗೆ ನಾವು ಆವಾಗಾವಾಗ ಏನೇನೋ ಸುದ್ದಿಯನ್ನು ಕೇಳ್ತಾನೆ ಇರ್ತೀವಿ. ಅದರಲ್ಲೊಂದು ಇದ್ದಕ್ಕಿದ್ದ ಹಾಗೆ ಮೊಬೈಲ್ ಗೆ ಬೆಂಕಿ ಹತ್ತಿಕೊಳ್ತು ಅನ್ನೋದು. ಇನ್ನೊಂದು ಅಂದ್ರೆ ಇದ್ದಕ್ಕಿದ್ದ ಹಾಗೆ ಪ್ಯಾಂಟ್ ಜೇಬಲ್ಲಿ ಇದ್ದ ಮೊಬೈಲ್ ಬೆಂಕಿ ಹತ್ತಿಕೊಂಡು ಉರಿದು ಹೋಯ್ತು ಅಂದ್ರೆ ತಲೆ ಕೆಟ್ಟು ಹೋಗಲ್ವ? ಹಾಗಾದ್ರೆ ಈ ಮೊಬೈಲ್ ಗೆ ಬೆಂಕಿ ಹತ್ತಿಕೊಳ್ಳೋದು ಯಾಕೆ? ತಾಂತ್ರಿಕ ದೋಷ ಬಿಟ್ಟು ಬೇರೆ ಯಾವ ಯಾವ ಯಡವಟ್ಟು ಮಾಡಿಕೊಂಡರೆ ನಿಮ್ಮ ಮೊಬೈಲ್ ಬೆಂಕಿ ಹತ್ತಿಕೊಳ್ಳುತ್ತೆ ಎಂದು ಇಂದಿನ ಲೇಖನದಲ್ಲಿ ತಿಳಿಯೋಣ ಸ್ನೇಹಿತರೆ. ನೀವು ತುಂಬಾ ಜನರ ಮೊಬೈಲ್ ನೋಡಿಯೇ ಇರ್ಥೀರ. ಡಿಸ್ಪ್ಲೇ ಒಡೆದು ಹೋಗಿರುತ್ತೆ ಅಥವಾ ಬ್ಯಾಕ್ ಪ್ಯಾನೆಲ್ ಡ್ಯಾಮೇಜ್ ಆಗಿರುತ್ತೆ, ಆದ್ರೂ ಅದನ್ನ ಬದಲಾಯಿಸೋದಿಲ್ಲ. ಎಷ್ಟು ದಿನ ಬಳಕೆ ಮಾಡಬಹುದು ಎಷ್ಟು ದಿನ ಓಡುತ್ತೋ ಒಡ್ಲಿ ಅಂತ ಅದನ್ನೇ ಬಳಸುತ್ತಾ ಇರ್ತಾರೆ. ಅದೇ ನೀವು ಮಾಡೋ ಎಡವಟ್ಟು. ಆ ಒಡೆದು ಹೋದ ಡಿಸ್ಪ್ಲೇ ಇಂದ ನೀರು ಇನ್ಯಾವುದೇ ದ್ರವ ರೂಪದ ವಸ್ತು ಅಪ್ಪಿ ತಪ್ಪಿ ಒಳಗಡೆ ಹೋದ್ರೆ, ಮೊಬೈಲ್ ಫೋನ್ ಒಳಗಿರುವ ಮದರ್ ಬೋರ್ಡ್ ಮತ್ತು ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹತ್ತಿಕೊಳ್ಳೋ ಸಂಭವ ಹೆಚ್ಚು ಇರುತ್ತೆ.
ನೀವು ಎಲ್ಲಾದರೂ ಬೇರೆ ಊರಿಗೆ ಅಥವಾ ಬೇರೆ ಕಡೆ ಹೋದಾಗ ಮೊಬೈಲ್ ಚಾರ್ಜರ್ ಬಿಟ್ಟು ಬಂದಿರ್ತೀರಿ. ಆಗ ಎನ್ ಮಾಡೋದು? ಹೊಸ ಚಾರ್ಜರ್ ತೋಗೊಬೇಕು. ನಿಮ್ಮ ಮೊಬೈಲ್ ಕಂಪನಿಯದ್ದೇ ಆದ್ರೆ ಸಾವಿರಗಟ್ಟಲೆ ಹೇಳ್ತಾರೆ. ಅದಕ್ಕೆ ನೀವು ಎನ್ ಮಾಡ್ತೀರಾ? ಅದಕ್ಕೆ ಯಾಕೆ ಅಷ್ಟೋಂದು ದುಡ್ಡು ಕರ್ಚು ಮಾಡೋದು ಅಂತ ನೂರು ಅಥವಾ ಇನ್ನೂರು ದುಡ್ಡು ಕೊಟ್ಟು ಹೊಸ ಡುಪ್ಲಿಕೇಟ್ ಚಾರ್ಜರ್ ತೋಗೋತಿರ. ಅದೇ ನೀವು ಮಾಡೋ ಎರಡನೇ ಯಡವಟ್ಟು. ಒಂದು ಉದಾಹರಣೆ ಮೂಲಕ ಹೇಳೋದಾದ್ರೆ, ಇಡ್ಲಿನ ಸಾಂಬರ್ ಜೊತೆ ಮಿಕ್ಸ್ ಮಾಡಿ ತಿಂದ್ರೇನೆ ಚಂದ. ಕಾಫಿ ಮಿಕ್ಸ್ ಮಾಡಿಕೊಂಡು ತಿನ್ನಬಾರದು ಅಲ್ವಾ?. ಅಂದ್ರೆ ಯಾವ ಫೋನ್ ಚಾರ್ಜರ್ ನ ಅದೇ ಕಂಪನಿ ಮೊಬೈಲ್ ಗೆ ಬಳಸಬೇಕು. ಒರಿಜಿನಲ್ ಚಾರ್ಜರ್ ಸ್ವಲ್ಪ ದುಬಾರಿ ಅನ್ನಿಸಿದರೂ ತಾಂತ್ರಿಕವಾಗಿ ಮೊಬೈಲ್ ಗೆ ಸಪೋರ್ಟ್ ಮಾಡುತ್ತೆ, ಆದ್ರೆ ನಕಲಿ ಚಾರ್ಜರ್ ನಿಮ್ಮ ಮೊಬೈಲ್ ನ ಬ್ಯಾಟರಿಯನ್ನ ತುಂಬಾ ಹೀಟ್ ಮಾಡುತ್ತೆ ಹಾಗೆ ಬ್ಯಾಟರಿ ಡ್ಯಾಮೇಜ್ ಮಾಡುತ್ತೆ, ಆಮೇಲೆ ಇನ್ನೇನು ಮೊಬೈಲ್ ಧಗ ಧಗ ಉರಿದು ಸುಟ್ಟು ಹೋಗುತ್ತೆ. ಇದೇ ರೀತಿ ಬ್ಯಾಟರಿ ವಿಷಯದಲ್ಲೂ ಅಷ್ಟೇ, ಕಡಿಮೆ ದುಡ್ಡಿಗೆ ಸಿಗುತ್ತೆ ಅಂತ ನಕಲಿ ಬ್ಯಾಟರಿ ನ ಹಾಕಿಸಿಕೊಳ್ಳಬೇಡಿ. ಈಗೆಲ್ಲಾ ಲಿಥಿಯಂ ಐಯಾನ್ ಬ್ಯಾಟರಿ ಬರುತ್ತಿವೆ, ಇದನ್ನ ಕೆಮಿಕಲಿ ಸರಿಯಾಗಿ ತಯಾರಿಸುತ್ತಾರೆ. ಅದನ್ನ ಇನ್ಯಾವುದೋ ಡಬ್ಬ ಕಂಪನಿ ಡುಪ್ಲಿಕೇಟ್ ತಯಾರು ಮಾಡಿರುತ್ತಾರೆ.
ನೋಡಲು ಅದೇ ಒರಿಜಿನಲ್ ಬ್ಯಾಟರಿ ಥರಾನೇ ಕಾಣುತ್ತೆ ಅಂತ ನಿಮ್ಮ ಮೊಬೈಲ್ ಗೆ ಹಾಕಿಕೊಂಡರೆ, ಕೊಟ್ಟೋನು ಈರಬಧ್ರ ಇಸ್ಕೊಂಡೋನು ಕೋಡಂಗಿ ಅಂತ ಆಗುತ್ತೆ. ಸೋ ನೋ ಡುಪ್ಲಿಕೇಟ್ ನಕಲಿ ಬ್ಯಾಟರಿ. ಕೆಲವು ಕೆಲವೊಬ್ಬರು ರಾತ್ರಿ ಇಡೀ ಮೊಬೈಲ್ ನ ಚಾರ್ಜ್ ಹಾಕಿ ಮಲಗಿ ಬಿಡ್ತಾರೆ. ಕೆಲವೊಂದು ಮೊಬೈಲ್ ಗಳಲ್ಲಿ ಆಟೋ ಕಟ್ ಅನ್ನೋ ಆಪ್ಷನ್ ಇರುತ್ತೆ ಆಗ ಏನೂ ತೊಂದರೆ ಇಲ್ಲ, ಆದ್ರೆ ಕೆಲವು ಮೊಬೈಲ್ ಗಳಲ್ಲಿ ಈ ಆಪ್ಷನ್ ಇರಲ್ಲ, ಆಗ ಆ ಮೊಬೈಲ್ ಗೆ ಜಾಸ್ತಿ ಚಾರ್ಜ್ ಮಾಡೋದ್ರಿಂದ ಓವರ್ ಹೀಟ್ ಆಗಿ ಮೊಬೈಲ್ ಬರ್ನ್ ಆಗೋ ಚಾನ್ಸಸ್ ಇರುತ್ತೆ. ಬ್ಯಾಟರಿ ಕೂಡ ಹಾಳಾಗುತ್ತದೆ. ಒಂದಲ್ಲಾ ಒಂದು ದಿನ ನಿಮ್ಮ ಜೇಬು ಸುಡೋದೂ ಖಂಡಿತ. ಅನ್ನನ ಕುಕ್ಕರ್ ಅಲ್ಲಿ 2 ವಿಷಲ್ ಕೂಗಿಸಿದರೆ ಊಟಾ ಮಾಡ್ಬೋದು, ಆದ್ರೆ ಅದೇ ಅನ್ನವನ್ನ 5-6 ಬಾರಿ ಕೋಗಿಸಿದರೆ ಅನ್ನ ಸುಟ್ಟು ಕರಕಲು ಆಗುತ್ತೆ. ಮೊಬೈಲ್ ವಿಷಯದಲ್ಲೂ ಹಂಗೇ. ಸೋ ನೋ ಫುಲ್ ನೈಟ್ ಚಾರ್ಜಿಂಗ್. ಇದಿಷ್ಟೂ ಬೇಸಿಕ್ ಮಾಹಿತಿ. ಇದನ್ನು ಬಿಟ್ರೆ ನೀರಿಂದ ಡ್ಯಾಮೇಜ್ ಆಗಿರೋ ಮೊಬೈಲ್ ನ ಮತ್ತೆ ಬಳಸಲು ಹೋಗಬೇಡಿ. ಹತ್ತಾರು ಅಪ್ಲಿಕೇಷನ್ ನ ಓಪನ್ ಮಾಡಿ ಅವುಗಳನ್ನು ಕ್ಲಿಯರ್ ಮಾಡದೇ ಹಾಗೇ ಇಡಬೇಡಿ, ಇನ್ನೆಲ್ಲ ನಿಮಗೆ ಗೊತ್ತಿರೋದೇ. ನಿಮ್ಮ ಮೊಬೈಲ್ ಸೇಫ್ ಆಗಿದ್ರೆ ನೀವು ಕೂಡ ಸೇಫ್ ಇದ್ದಂಗೆ. ನಿಮ್ ಮೊಬೈಲ್ ಸೇಫ್ ಇದ್ರೆ ನಮಗೆ ಖುಷಿನೇ ಯಾಕಂದ್ರೆ ನಿಮ್ ಮೊಬೈಲ್ ಹಾಳಾದರೆ ನೀವು ನನ್ನ ಲೇಖನ ಹೇಗೆ ಓದುವುದು ಅಲ್ವಾ? ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ, ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.