ನಮಸ್ತೆ ಪ್ರಿಯ ಓದುಗರೇ, ಸರಳವಾದ ನಮ್ಮ ದೈನಂದಿನ ಜೀವನ ಶೈಲಿ ನಮ್ಮ ಆರೋಗ್ಯವನ್ನೂ ಕಾಪಾಡುತ್ತದೆ ಎಂದು ಹೇಳಿದರೆ ತಪ್ಪಿಲ್ಲ. ಈ ಸರಳತೆ ಜೊತೆಗೆ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಇಲ್ಲದೆ ಹೋದರೆ ನಮ್ಮ ದೇಹದಲ್ಲಿರುವ ಕೆಲವು ಸೂಕ್ಷ್ಮ ಅಂಗಗಳ ಮೂಲಕ ಸೂಕ್ಷ್ಮಾಣು ಜೀವಿಗಳ ದೇಹವನ್ನು ಹೊಕ್ಕಿ ಸಮಸ್ಯೆಗಳು ಉದ್ಭವಿಸುವ ಹಾಗೆ ಮಾಡುತ್ತವೆ. ಇದರಿಂದ ಅನಾರೋಗ್ಯದ ಸಮಸ್ಯೆಗಳು ಉಂಟಾಗಬಹುದು. ನಾವು ಆರೋಗ್ಯದಿಂದ ಇರಲು ನಮ್ಮ ದೇಹದ ಎಲ್ಲಾ ಅಂಗಗಳೂ ಕೂಡ ಕಾರ್ಯ ನಿರ್ವಹಿಸಬೇಕಾಗುತ್ತದೆ. ಆಹಾರ ಸೇವನೆ ಜೊತೆಗೆ ಉತ್ತಮ ಸರಳ ಜೀವನ ಶೈಲಿ ಸ್ವಚ್ಚತೆ ಕೂಡ ಬಹು ಮುಖ್ಯ ಆಗ ಮಾತ್ರ ನಾವು ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯದಿಂದ ಇರಲು ಸಾಧ್ಯ ಆಗುತ್ತದೆ. ದೇಹದ ಎಲ್ಲಾ ಭಾಗಗಳು ನಮಗೆ ಮುಖ್ಯ ಪಾತ್ರ ವಹಿಸುತ್ತದೆ. ಆದ್ದರಿಂದ ನಮ್ಮ ದೇಹದ ಎಲ್ಲಾ ಅಂಗಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎನ್ನುವುದು ಬಹಳ ಮುಖ್ಯವಾಗಿರುತ್ತದೆ. ಸ್ನೇಹಿತರೆ ಅಂದ ಹಾಗೆ ದೇಹದ ಅಂಗಗಳ ಸ್ವಚ್ಚತೆ ಕೇವಲ ಸ್ನಾನ ಮಾಡಿದರೆ ಸಾಕಾಗುವುದಿಲ್ಲ.
ಅಂಗಗಳ ಸ್ವಚ್ಚತೆ ಮಾಡುವುದಕ್ಕೆ ಹಲವು ವಿಧಾನ ಇರುತ್ತವೆ ಅದರ ಬಗ್ಗೆ ಗಮನ ಕೊಡುತ್ತಾ ಇರಬೇಕಾಗುತ್ತದೆ. ಸ್ನಾನ ಮಾಡುವಾಗ ಹಲವಾರು ದೇಹದ ಪ್ರಮುಖ ಭಾಗವಾದ ಹೊಕ್ಕಳನ್ನು ಸ್ವಚ್ಛ ಮಾಡುವುದನ್ನು ಮರೆತೇ ಬಿಡುತ್ತಾರೆ. ಈ ಹೊಕ್ಕಳಿನ ಒಳ ಭಾಗದಲ್ಲಿ ಬೆವರು ಇರುತ್ತದೆ. ಸ್ನಾನ ಮಾಡುವಾಗ ದೇಹದ ಕೊಳೆಯು ಅಲ್ಲೇ ಕೂರುವ ಸಾಧ್ಯತೆ ಇರುತ್ತದೆ. ಇದನ್ನು ಸ್ವಚ್ಛಗೊಳಿಸದೇ ಇದ್ದರೆ ಬ್ಯಾಕ್ಟೀರಿಯಾಗಳು ದೇಹವನ್ನು ಆವರಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದ ನಮಗೆ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಹೊಕ್ಕಳಿನ ಸ್ವಚ್ಚತೆ ಬಹಳ ಮುಖ್ಯವಾಗಿರುತ್ತದೆ. ಇನ್ನೂ ನಮ್ಮ ಹೊಕ್ಕಳಿನ ಸ್ವಚ್ಚತೆ ಯನ್ನು ಯಾವ ರೀತಿ ಮಾಡಿಕೊಳ್ಳಬೇಕು ಎಂದರೆ ಕೇಕವ ನೀರಿನಿಂದ ತೊಳೆದುಕೊಳ್ಳುವುಧರಿಂದ ಕೂಡ ಸ್ವಚ್ಚತೆ ಆಗುತ್ತದೆ ಹಾಗೂ ಹತ್ತಿಯಿಂದ ಕೂಡ ಇದನ್ನು ಸ್ವಚ್ಛ ಮಾಡಿಕೊಳ್ಳಬಹುದು. ಮತ್ತು ಧೂಳು ಕೊಳಕಿನಿಂದ ಕೂಡಿರುವುದರಿಂದ ಕಲ್ಮಶ ಪದರುಗಳು ಕೂಡಿರುತ್ತವೆ. ಅಂತಹ ಸಂದರ್ಭದಲ್ಲಿ ಶುದ್ಧವಾದ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ಅದನ್ನು ಉಗುರು ಬೆಚ್ಚಗೆ ಕಾಸಿ ಅದನ್ನು ಹೊಕ್ಕಳಿಗೆ ಹಚ್ಚಿಕೊಂಡು ಸ್ವಚ್ಛ ಮಾಡಿಕೊಳ್ಳುವುದು.
ತುಂಬಾ ದಿನದಿಂದ ಕೂಡಿಕೊಂಡಿರುವ ಧೂಳು ಹಾಗೂ ಗೊಬ್ಬನ್ನು ಬಿಸಿ ಎಣ್ಣೆಯಿಂದ ಸುಲಭವಾಗಿ ಸ್ವಚ್ಛ ಮಾಡಿಕೊಳ್ಳಬಹುದು. ಮತ್ತು ಸ್ನಾನವನ್ನು ಮಾಡಿದ ನಂತರ ನಿಮ್ಮ ಹೊಕ್ಕಳನ್ನು ಟವೆಲ್ ನಿಂದ ನೀಟಾಗಿ ಒರೆಸಿಕೊಳ್ಳತ್ತಾ ಬಂದರೆ ದಿನದಿಂದ ದಿನಕ್ಕೆ ಹೊಕ್ಕಳು ಸ್ವಚ್ಛ ಆಗುತ್ತದೆ. ಇಲ್ಲಿ ಯಾವುದೇ ಕಾರಣಕ್ಕೂ ನೀರನ್ನು ಹಾಗೆಯೇ ಉಳಿಯುವತೆ ಬಿಡಬೇಡಿ. ಯಾಕೆಂದರೆ ತೇವಾಂಶ ಇರುವ ಜಾಗದಲ್ಲಿ ಬ್ಯಾಕ್ಟೀರಿಯಾಗಳು ವೇಗವಾಗಿ ಹಾಗೂ ಸುಲಭವಾಗಿ ಬೆಳೆಯಲು ಸಹಾಯ ಆಗುತ್ತದೆ. ಹೇಗೆ ದಿನವೂ ಅಲ್ಲಿ ನೀರು ಶೇಖರಣೆ ಆಗಿ ಆಗಿ ದಪ್ಪಗಿನ ಪದರು ಬೆಳೆದು ಸೋಂಕು ತಗುಲಿ ದೇಹಕ್ಕೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ದೇಹದ ಇತರೆ ಭಾಗಗಳನ್ನು ಎಷ್ಟು ಚೆನ್ನಾಗಿ ಸ್ವಚ್ಛವಾಗಿ ಇಟ್ಟಿಕೊಳ್ಳುತ್ತೀವೋ ಹಾಗೆ ಈ ಹೊಕ್ಕಳಿನ ಮೇಲೂ ಗಮನ ಹರಿಸಿ ಸ್ವಚ್ಛವಾಗಿ ಇಟ್ಟುಕೊಳ್ಳುವುದು ಒಳ್ಳೆಯದು. ನೋಡಿದ್ರಲ ಸ್ನೇಹಿತರೆ ಹೊಕ್ಕಳಿನ ಸ್ವಚ್ಚತೆ ಎಷ್ಟು ಮುಖ್ಯ ಅಂತ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.