ನಮಸ್ತೆ ಪ್ರಿಯ ಓದುಗರೇ, ಇಂದಿನ ದಿನಗಳಲ್ಲಿ ಹೆಚ್ಚಾಗಿ ಜನರು ಒಳ್ಳೆಯ ಆರೋಗ್ಯ ಬೇಕೆಂದು ಅದು ಇದು ವ್ಯಾಯಾಮ, ವಾಕಿಂಗ್ ಅಂತ ಪರದಾಡುತ್ತ ಇರುವುದು ಸರ್ವೇ ಸಾಮಾನ್ಯ. ಹೌದು! ಉತ್ತಮ ಆರೋಗ್ಯಕ್ಕೆ ಬೆಳಗಿನ ನಡಿಗೆ, ವ್ಯಾಯಾಮ, ಉತ್ತಮ ಉಸಿರಾಟ ಪ್ರಕ್ರಿಯೆ ಬೇಕು ನಿಜ ಆದರೆ ಅದರ ಜೊತೆಗೆ ಮನಸ್ಸಿನ ಮೇಲೆ ಸಮತೋಲನ ಸಾಧಿಸಿ, ಹೃದಯವನ್ನು ಉಲ್ಲಾಸದಿಂದ ಸಂತೋಷದಿಂದ ನೆಮ್ಮದಿಯಿಂದ ಇರಿಸುವುದು ಬಹು ಮುಖ್ಯ. ಹಾಗಾಗಿ ಇಂದಿನ ಲೇಖನದಲ್ಲಿ ಹೃದಯದ ಆರೋಗ್ಯಕ್ಕೆ ಹೇಗೆ ನಮ್ಮ ನಗುವೇ ಔಷಧ ಎಂದು ತಿಳಿಯೋಣ ಸ್ನೇಹಿತರೆ. ಕಾಲ ಬದಲಾಗುತ್ತಾ ಇದೆ, ಮನುಷ್ಯನ ಆಹಾರ ಕ್ರಮ, ದೈನಂದಿನ ಚಟುವಟಿಕೆಗಳಲ್ಲಿ ಹಲವು ತರಹದ ಏರು ಪೇರು, ಅಸಮತೋಲನ ಆಗ್ತಾ ಇದೆ ಎನ್ನುವುದು ಸಧ್ಯದ ಸತ್ಯ. ಉತ್ತಮ ಆರೋಗ್ಯ ಹೊಂದಬೇಕು ಎಂಬ ನಿಟ್ಟಿನಲ್ಲಿ ನಾವೆಲ್ಲರೂ ತುಂಬಾನೇ ಪ್ರಯತ್ನ ಮಾಡ್ತಾ ಇರ್ತೀವಿ. ಹೇಗಪ್ಪಾ ಆರೋಗ್ಯ ಕಾಪಾಡಿ ಕೊಳ್ಳೋದು ಅನ್ನೋ ಚಿಂತೆಯಲ್ಲಿ ನಾವು ಹಲವಾರು ಸಂಧರ್ಭದಲ್ಲಿ ನಗೋದನ್ನೆ ಮರೆತು ಬಿಡ್ತೀವಿ.
ನಿಮಗೆ ಗೊತ್ತಾ? ನಗೋದ್ರಿಂದ ನಮ್ಮ ಆರೋಗ್ಯಕ್ಕೆ ತುಂಬಾನೆ ಅನುಕೂಲ ಆಗುತ್ತೆ. ಹೃದಯಕ್ಕೆ ರಕ್ತ ಪರಿಚಲನೆ ಸರಿಯಾಗಿ ಆಗುವುದಕ್ಕೂ ನಗು ಸಹಾಯ ಮಾಡುತ್ತೆ. ಪ್ರತಿನಿತ್ಯ 15 ನಿಮಿಷಗಳ ಕಾಲ ನಗೋದ್ರಿಂದ ಹೃದಯಕ್ಕೆ ರಕ್ತ ಪರಿಚಲನೆ ಆಗೋದು ಶೇಕಡಾ 20% ಗಿಂತಲೂ ಹೆಚ್ಚಾಗುತ್ತೆ. ಇದು ರಕ್ತ ನಾಳಗಳು ದಪ್ಪವಾಗುವುದನ್ನು ಸಹ ತಪ್ಪಿಸುತ್ತದೆ. ಹಾಗೆ ಹೃದಯದ ಆರೋಗ್ಯವನ್ನೂ ಕಾಪಾಡಿಕೊಳ್ಳುವುದ ಕ್ಕೆ ಪೂರಕವಾಗಿ ಕೆಲಸ ಮಾಡುತ್ತೆ. ನಗುವಿನ ಜೊತೆಗೆ ಒತ್ತಡ ನಿರ್ವಹಣೆ ಮಾಡೋದ್ರಿಂದ ಹೃದಯಾಘಾತ ದಂತಹ ವಿಷಯಗಳು ಸಂಭವಿಸುವುದು ತಪ್ಪುತ್ತದೆ. ಯೋಗ, ಧ್ಯಾನ ಮೊದಲಾದವುಗಳನ್ನು ಅಭ್ಯಾಸ ಮಾಡಿಕೊಳ್ಳುವುದರಿಂದ ಒತ್ತಡ ನಿರ್ವಹಣೆ ಸಾಧ್ಯ ಆಗುತ್ತದೆ.
ಒತ್ತಡ ನಿಯಂತ್ರಣ ಆದಲ್ಲಿ ಹೃದಯದ ಆರೋಗ್ಯ ಕೂಡ ಚೆನ್ನಾಗಿರುತ್ತೆ. ಹಾಗೆ ಸಾಕಷ್ಟು ಪ್ರಮಾಣದಲ್ಲಿ ನಿದ್ದೆ ಮಾಡೋದು ಕೂಡ ಹೃದಯ ಸರಿಯಾಗಿ ಕೆಲಸ ಮಾಡೋದಕ್ಕೆ ಅನುಕೂಲ ಮಾಡಿಕೊಟ್ಟಂತಗುತ್ತದೆ. ಕೋಪ ನಿಯಂತ್ರಣ ದಿಂದಲೂ ಹೃದಯ ಸಂಬಂಧಿ ಸಮಸ್ಯೆಗಳನ್ನು ನಿಯಂತ್ರಣ ಮಾಡೋದು ಈಗ ಸಾಧ್ಯ. ನೋಡಿದಿರಲ್ಲಾ ಸ್ನೇಹಿತರೆ, ನಮ್ಮ ಹೃದಯ ಆರೋಗ್ಯ ಕಾಪಾಡಿಕೊಳ್ಳಲು ನಾವೇ ಅನುಸರಿಸಬಹುದಾದ ಹಾದಿಗಳ ಬಗ್ಗೆ. ಹಾಗಾದರೆ ಒಮ್ಮೆ ನಿಮ್ಮ ಎಲ್ಲಾ ಚಿಂತೆ, ಯೋಚನೆಗಳನ್ನು ಬದಿಗೊತ್ತಿ ಚೆನ್ನಾಗಿ ಮನಸ್ ಪೂರ್ತಿಯಾಗಿ ದಿನಕ್ಕೆ ಒಮ್ಮೆಯಾದರೂ ಜೋರಾಗಿ ನಕ್ಕುಬಿಡಿ. ನಿಮ್ಮ ಹೃದಯದ ಆರೋಗ್ಯ ಈಗ ನಿಮ್ಮ ಕೈಯಲ್ಲೇ ಇದೆ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.