ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಪ್ರಧಾನ ಮಂತ್ರಿ ವಯ ವಂದನಾ ಯೋಜನೆಯ ಬಗ್ಗೆ ಹಾಗೂ ಮಹಿಳೆಯರು, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರಿಗಾಗಿ ಮಾಡಿದ ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯ ಕುರಿತಾಗಿ ಒಂದಿಷ್ಟು ಉಪಯೋಗಕಾರಿ ವಿಷಯಗಳನ್ನು ತಿಳಿದುಕೊಳ್ಳೋಣ ಸ್ನೇಹಿತರೆ. ದೇಶದಲ್ಲಿನ 60 ವರ್ಷ ಮೇಲ್ಪಟ್ಟ ನಾಗರಿಕರನ್ನು ಗಮನದಲ್ಲಿ ಇಟ್ಟುಕೊಂಡು ಭಾರತ ಸರ್ಕಾರ ಜಾರಿಗೊಳಿಸಿದ ಮಹತ್ವಾಕಾಂಕ್ಷಿ ಯೋಜನೆಯೇ ಪ್ರಧಾನ ಮಂತ್ರಿ ವಯ ವಂದನಾ ಯೋಜನೆ. ವೃದ್ಧರಿಗೆ ಭವಿಷ್ಯದ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಅವರಿಗೆ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಯೋಜನೆಯ ರೂಪು ರೇಷೆಗಳನ್ನು ಸಿದ್ಧಗೊಳಿಸಿ ಜಾರಿಗೆ ತಂದಿದೆ. ಭಾರತೀಯ ಜೀವ ವಿಮಾ ನಿಗಮದ ಮೂಲಕ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗಿದೆ. ಈ ಯೋಜನೆಯ ಚಂದಾದಾರರಾಗಲು 31 ಮಾರ್ಚ್ 2023 ರ ವರೆಗೆ ಅವಕಾಶವನ್ನು ಕಲ್ಪಿಸಲಾಗಿದೆ. ಈ ಯೋಜನೆ ಅಡಿಯಲ್ಲಿ ಪಿಂಚಣಿ ಪಾವತಿಯ ವಿಧಾನವು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ, ವಾರ್ಷಿಕ ಆಧಾರದ ಮೇಲೆ ಅವರ ಆಯ್ಕೆಯನ್ನು ಅವಲಂಬಿಸಿರುತ್ತದೆ. ಒಂದುವೇಳೆ ನಿಮಗೆ ವೃದ್ಧಾಪ್ಯದಲ್ಲಿ ಭವಿಷ್ಯದ ಭದ್ರತೆ ಚಿಂತೆ ಕಾಡ್ತಾ ಇದ್ರೆ ಇಂದೇ ಈ ಯೋಜನೆಯಲ್ಲಿ ತೊಡಗಿಸಿಕೊಳ್ಳಿ.

ಮಹಿಳೆಯರು, ಪರಿಶಿಷ್ಟ ಜಾತಿ/ ಪಂಗಡದವರ ಸಬಲೀಕರಣದ ಉದ್ದೇಶದಿಂದ ಜಾರಿಗೆ ತಂದ ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿಯೋಣ ಸ್ನೇಹಿತರೆ. ದೇಶದ ನಾಗರಿಕರ ಅನುಕೂಲಕ್ಕಾಗಿ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅಂತಹ ಪ್ರಮುಖ ಯೋಜನೆಗಳಲ್ಲಿ ಪರಿಶಿಷ್ಟ ಜಾತಿ ಹಾಗೆ ಪರಿಶಿಷ್ಟ ಪಂಗಡದ ಜನರು ಹಾಗೆ ಮಹಿಳೆಯರಿಗಾಗಿ ಜಾರಿಗೆ ತಂದ ಯೋಜನೆಯೇ ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆ. ಈ ಯೋಜನೆ ಮೂಲಕ ಯಾವುದೇ ಬ್ಯಾಂಕ್ಗಳಲ್ಲಿ ಹತ್ತು ಲಕ್ಷ ರೂಪಾಯಿಗಳಿಗೆ ಒಂದು ಕೋಟಿಯ ವರೆಗೆ ಸಾಲವನ್ನು ಈ ಯೋಜನೆಯ ಫಲಾನುಭವಿಗಳಿಗೆ ನೀಡಲಾಗಿದೆ. ಉತ್ಪಾದನೆ, ಸೇವೆ, ವ್ಯಾಪಾರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಈ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯ ಪಡೆಯಬಹುದು. ಪಾಲುದಾರಿಕೆಯಲ್ಲಿ ಕಾರ್ಯಾರಂಭ ಮಾಡುವ ಫಲಾನುಭವಿಗಳು ತಮ್ಮ ಸಂಸ್ಥೆಯ ಶೇಕಡಾ 51 ರಷ್ಟು ಪಾಲುದಾರಿಕೆಯನ್ನು ಹೊಂದಿರಬೇಕಾಗುತ್ತದೆ. 18 ವರ್ಷ ಮೇಲ್ಪಟ್ಟ ಮಹಿಳೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ದವರಿಗೆ ಈ ಯೋಜನೆ ಅನುಕೂಲಕರ ಆಗಿದೆ.

ಈ ಸಾಲಕ್ಕೆ ಒಳಪಡುವವರು ಹಸಿರು ಕ್ಷೇತ್ರ ಯೋಜನೆ ಒಳಗೆ ಇರಬೇಕು. ಸಾಲಗಾರ ಯಾವುದೇ ಬ್ಯಾಂಕ್ ನಲ್ಲಿ ಸದಸ್ಯ ಆಗಿರಬಾರದು. ಈ ಯೋಜನೆ ಮೂಲಕ ಶೇಕಡಾ 75 ರಷ್ಟು ಸಾಲವನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದು ಬ್ಯಾಂಕಿನ ಅತ್ಯಂತ ಕಡಿಮೆ ಬಡ್ಡಿ ದರವನ್ನು ಒಳಗೊಂಡಿದ್ದು, ಫಲಾನುಭವಿಗಳಿಗೆ ಹೆಚ್ಚು ಅನುಕೂಲವನ್ನು ಒದಗಿಸುತ್ತದೆ. ಪ್ರಾರ್ಥಮಿಕ ಭದ್ರತೆ ಹೊರತು ಪಡಿಸಿ ಇತರ ಬ್ಯಾಂಕಿನ ಸಹಕಾರ ಭದ್ರತೆ ಅಥವಾ ಭದ್ರತಾ ಖಾತರಿ ನಿಧಿ ಯೋಜನೆ ಸಹಕಾರದಿಂದ ಲೂ ಈ ಯೋಜನೆಯ ಅನುಕೂಲ ಪಡೆಯಬಹುದಾಗಿದೆ. ಸಾಲ ಪಡೆದ ದಿನಾಂಕ ದಿಂದ ಕಡಿಮೆ ಎಂದರೂ ೧೮ ತಿಂಗಳಿಂದ ೭ ವರ್ಷದ ಒಳಗಾಗಿ ಬಡ್ಡಿ ಸಹಿತ ಸಂಪೂರ್ಣ ಸಾಲವನ್ನು ಈ ಯೋಜನೆಯ ಫಲಾನುಭವಿಗಳು ಮರು ಪಾವತಿಸಬೇಕು. ಒಟ್ಟಿನಲ್ಲಿ ಮಹಿಳೆಯರು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಶ್ರೇಯೋಭಿವೃದ್ಧಿಗಾಗಿ ಗಮನ ಇಟ್ಟುಕೊಂಡು ಕೇಂದ್ರ ಸರ್ಕಾರ ಈ ಯೋಜನೆಯ ರೂಪು ರೇಷೆಗಳನ್ನು ಸಿದ್ಧಪಡಿಸಿದ್ದು, ಇದರಿಂದಾಗಿ ಅದೆಷ್ಟೋ ಜನರು ಅನುಕೂಲ ಪಡೆದಿದ್ದಾರೆ ಎಂದರೆ ಅತಿಶಯ ಅಲ್ಲ. ಈ ಎರೆಡೂ ಯೋಜನೆಗಳು ಸಧ್ಯ ಜಾರಿಯಲ್ಲಿದ್ದು ಈ ಯೋಜನೆಗಳ ಅನುಕೂಲವನ್ನು ಪಡೆಯಬಹುದು. ಈ ಮಾಹಿತಿ ಉಪಯೋಗಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

Leave a Reply

Your email address will not be published. Required fields are marked *