ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಮೂಲಂಗಿ ನಮ್ಮ ಅರೋಗ್ಯದ ಮೇಲೆ ಯಾವ ರೀತಿ ಪರಿಣಾಮಕಾರಿ ಆಗಿದೆ ಎಂಬುದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿಯೋಣ ಸ್ನೇಹಿತರೆ. ಮೂಲಂಗಿ ಅಂದ್ರೆ ಎಷ್ಟೋ ಜನಕ್ಕೆ ಇಷ್ಟಾನೆ ಆಗಲ್ಲ. ದೇಹದ ಅರಿಗ್ಯಕ್ಕೆ ಮೂಲಂಗಿ ಎಷ್ಟು ಪ್ರಯೋಜನಕಾರಿ ಎಂದು ಗೊತ್ತಾದ್ರೆ, ಎಲ್ಲರೂ ಮೂಲಂಗಿಯನ್ನು ಇಷ್ಟ ಪಟ್ಟು ತಿನ್ನೋದಕ್ಕೆ ಶುರು ಮಾಡ್ತಾರೆ. ತಜ್ಞರು ಹೇಳುವಂತೆ ಚಳಿಗಾಲದಲ್ಲಿ ಮೂಲಂಗಿ ಸೇವನೆ ಮಾಡುವುದರಿಂದ ದೇಹದಲ್ಲಿನ ರೋಗನಿರೋಧಕ ಶಕ್ತಿ ಹೆಚ್ಚುತ್ತೆ. ಶೀತ, ಕೆಮ್ಮು ಅಂತಹ ರೋಗಗಳು ಬಾರದಂತೆ ತಡೆಯಲು ಸಹಾಯ ಮಾಡುತ್ತೆ. ಮೂಲಂಗಿ ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ಸಹ ದೂರ ಮಾಡಬಹುದು. ಆದ್ರೆ ಮೂಲಂಗಿಯನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬಾರದು. ರಾತ್ರಿ ಊಟಾದಲ್ಲಿಯೊ ಮೂಲಂಗಿಯನ್ನು ಸೇವಿಸಬಾರದು. ಆಗಾಗ ಜನರು ಮೂಲಂಗಿಯನ್ನು ಆಹಾರದೊಂದಿಗೆ ಸಲಾಡ್ ಆಗಿ ತಿಂತಾರೆ. ಬೇಯಿಸಿದ ತರಕಾರಿ ಜೊತೆ ಹಸಿ ತರಕಾರಿ ಸೇವನೆ ಮಾಡಿದರೆ ಜೀರ್ಣಾಂಗ ವ್ಯವಸ್ಥೆಯ ಮೇಲೆ ಒತ್ತಡ ಬೀಳುತ್ತದೆ, ಆದ್ದರಿಂದ ಮೂಲಂಗಿಯನ್ನು ಬೆಳಗಿನ ಉಪಹಾರ ದ ನಂತರ ಅಥವಾ ಊಟಾದ ಮೊದಲು ತಿನ್ನಬೇಕು. ನಿಮ್ಗೆ ತಿನ್ನಲೇಬೇಕು ಎನ್ನಿಸಿದರೆ ಮಧ್ಯಾನ ಮತ್ತು ರಾತ್ರಿಯ ಊಟಾದ ನಡುವಿನ ಸಮಯದಲ್ಲಿ ನೀವು ಮೂಲಂಗಿಯನ್ನು ಸೇವಿಸಬಹುದು.
ಈ ಸಮಯದಲ್ಲಿ ಮೂಲಂಗಿಯನ್ನು ತಿನ್ನುವುದರಿಂದ ನಿಮ್ಮ ದೇಹಕ್ಕೆ ಮೂಲಂಗಿಯ ಎಲ್ಲಾ ಪೋಷಕಾಂಶಗಳು ಸಿಗುತ್ತೆ ಮತ್ತು ಜೀರ್ಣ ಕ್ರಿಯೆಯೂ ಚೆನ್ನಾಗಿರುತ್ತೆ. ಹಸಿ ಮೂಲಂಗಿಯನ್ನು ನಿಮಗೆ ತಿನ್ನಲೇಬೇಕು ಎನ್ನಿಸಿದರೆ ಅದರೊಂದಿಗೆ ಇತರೆ ಹಸಿ ತರಕಾರಿಗಳನ್ನು ಸೇವಿಸಿ. ಉದಾಹರಣೆಗೆ ಸೌತೆಕಾಯಿ, ಟೊಮೆಟೊ, ಕ್ಯಾರೆಟ್ ಇತ್ಯಾದಿಗಳನ್ನು ಮಿಕ್ಸ್ ಮಾಡಿ ಸಲಾಡ್ ನಂತೆ ತಿನ್ನಬಹುದು. ಮೂಲಂಗಿಯನ್ನು ಖರೀದಿಸುವಾಗ ಬೆಳೆದ, ದೊಡ್ಡ ಮೂಲಂಗಿಯನ್ನು ಖರಿದಿಸಬೇಡಿ. ಬೆಳೆದ ಮೂಲಂಗಿಯನ್ನು ತಿನ್ನುವ ಬದಲು ಸಣ್ಣ ಮತ್ತು ಸಿಹಿ ಮೂಲಂಗಿಯನ್ನು ಸೇವನೆ ಮಾಡುವುದು ಉತ್ತಮ. ಮೂಲಂಗಿ ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತದೆ, ಆದ್ದರಿಂದ ಮೂಲಂಗಿಯನ್ನು ತಿಂದ ನಂತರ ಒಂದೇ ಸ್ಥಳದಲ್ಲಿ ಕುಳಿತು ಕೊಳ್ಳಬೇಡಿ. ಸ್ವಲ್ಪ ಅಲ್ಲಿ ಇಲ್ಲಿ ನಡೆದಾಡಲು ಮರೆಯಬೇಡಿ. ಮೂಲಂಗಿಯನ್ನು ಸಿಪ್ಪೆ ತೆಗೆದು ಕಪ್ಪು ಉಪ್ಪಿನೊಂದಿಗೆ ತಿನ್ನುವುದು ಬಹಳ ಪ್ರಯೋಜನಕಾರಿ. ಮೂಲಂಗಿಯನ್ನು ತುರಿದು ಅದಕ್ಕೆ ಸ್ವಲ್ಪ ಉಪ್ಪು, ಸ್ವಲ್ಪ ಮೆಣಸಿನ ಪುಡಿ ಹಾಗೂ ಮೊಸರಿನೊಂದಿಗೆ ಸೇವನೆ ಮಾಡಿದ್ರೆ ರುಚಿಯಾಗಿರುತ್ತೆ. ಹಾಗೆ ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿ.
ಮೂಲಂಗಿ ಸೇವನೆ ಇಂದ ಆಗುವ ಪ್ರಯೋಜನಗಳನ್ನು ಹೇಳುವುದಾದರೆ, ಚಳಿಗಾಲದಲ್ಲಿ ಪ್ರತಿನಿತ್ಯ ಮೂಲಂಗಿಯನ್ನು ತಿನ್ನುವುದರಿಂದ ಕೆಮ್ಮು ನೆಗಡಿ ಸಮಸ್ಯೆ ದೂರವಾಗುತ್ತದೆ. ಮೂಲಂಗಿ ಸೇವನೆಯು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತೆ. ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಜೀರ್ಣ ಕ್ರಿಯೆಯನ್ನು ಸುಧಾರಿಸಲು ಕೂಡ ಮೂಲಂಗಿ ಪ್ರಯೋಜನಕಾರಿ. ಮೂಲಂಗಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ. ಹಾಗಾದ್ರೆ ಮೂಲಂಗಿಯನ್ನು ಯಾರು ತಿನ್ನಬಾರದು? ನೋವಿನ ಸಮಸ್ಯೆ ಇರುವವರು ಮೂಲಂಗಿಯಿಂದ ದೂರವಿರುವುದು ಒಳ್ಳೆಯದು. ಮೂಲಂಗಿ ನೋವಿನ ಸಮಸ್ಯೆಯನ್ನು ಹೆಚ್ಚು ಮಾಡುವ ಸಾಧ್ಯತೆ ಇದೆ. ದೈಹಿಕ ಚಟುವಟಿಕೆಯ ನ್ನೂ ಮಾಡದೇ ಒಂದೇ ಕಡೆ ಕೂತಿರುವ ಜನರು ಮೂಲಂಗಿಯನ್ನು ತಿನ್ನುವುದು ಒಳ್ಳೆಯದಲ್ಲ. ಕುಳಿತು ಕೆಲಸ ಮಾಡುವವರು ಮೂಲಂಗಿ ಸೇವನೆ ಮಾಡಿದ್ರೆ ಅವರಿಗೆ ಗ್ಯಾಸ್ಟ್ರಿಕ್ ಹಾಗೂ ಹೊಟ್ಟೆ ನೋವಿನ ಸಮಸ್ಯೆ ಕಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಸದಾ ಕುಳಿತು ಕೆಲಸ ಮಾಡುವವರು ಮೂಲಂಗಿ ಇಂದ ದೂರವಿದ್ರೆ ಒಳ್ಳೆಯದು. ನೋಡಿದ್ರಲ್ವ ಸ್ನೇಹಿತರೆ ಮೂಲಂಗಿಯನ್ನು ಹೇಗೆ ಉಪಯೋಗ ಮಾಡಬಹುದು. ಯಾವ ರೀತಿ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಅಂತ. ಈ ಮಾಹಿತಿ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.