WhatsApp Group Join Now

ನಮಸ್ತೆ ಪ್ರಿಯ ಓದುಗರೇ, ಬೆಂಗಳೂರು ಎಂಬ ಮಾಯಾನಗರಿ ಹೆಸರು ಕೇಳುತ್ತಿದ್ದ ಹಾಗೆ ಥಟ್ಟನೆ ನೆನಪಾಗುವುದು ಕಾಂಕ್ರೀಟ್ ಕಟ್ಟಡಗಳು, ವಾಹನ ದಟ್ಟಣೆಗಳು, ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಕಾಣಿಸೋ ಗಗನಚುಂಬಿ ಕಟ್ಟಡಗಳು ಆದ್ರೆ ಉದ್ಯಾನನಗರಿ ಅಂತ ಕರೆಯೋ ಈ ಊರಿನಲ್ಲಿ ಕಟ್ಟಡಗಳು ಮಾತ್ರವಲ್ಲ ಅನೇಕ ಶಕ್ತಿಶಾಲಿ ದೇವಾಲಯಗಳು ಕೂಡ ಇವೆ. ಅದ್ರಲ್ಲೂ ಜನಗನ್ಮತೆಯ ಈ ದೇವಾಲಯಕ್ಕೆ ಹೋಗಿ ಒಂದು ಸಣ್ಣ ಚೀಟಿಯನ್ನು ಕಟ್ಟಿ ಬಂದ್ರೆ ಸಾಕು ಬದುಕಿನ ಎಲ್ಲಾ ಕಷ್ಟಗಳು ದೂರ ಆದಂತೆ. ಬನ್ನಿ ಹಾಗಾದರೆ ಆ ದೇವಾಲಯ ಯಾವುದು ಆ ಜಗನ್ಮಾತೆಯ ಶಕ್ತಿ ಎಂಥದು ಎನ್ನುವುದರ ಬಗ್ಗೆ ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಪ್ರಶಾಂತವಾದ ವಾತಾವರಣದಲ್ಲಿ ಇರುವ ಈ ಕಾಳಿಕಾ ದುರ್ಗಾಪರಮೇಶ್ವರಿ ದೇವಾಲಯವನ್ನು 1988 ರಲ್ಲಿ ನಿರ್ಮಿಸಲಾಗಿದ್ದು, ಏಳು ಅಂತಸ್ತಿನ 108 ಅಡಿ ಎತ್ತರದ ಸುಂದರ ಹಾಗೂ ಕಲಾತ್ಮಕ ಗೋಪುರವನ್ನು ಈ ಆಲಯ ಹೊಂದಿದೆ. ದ್ರಾವಿಡ ಶೈಲಿಯಲ್ಲಿ ನಿರ್ಮಿತವಾದ ಗೋಪುರದ ಮೇಲೆ ರುಂಡ ಮಾಲಿನಿ, ಮಹಿಷಾಸುರ ಮರ್ಧಿನಿ, ಮಹಾಲಕ್ಷ್ಮಿ ದೇವಿ ಹಾಗೂ ಇನ್ನೂ ಅನೇಕ ಬಗೆಯ ದೇವಾನುದೇವತಗಳ ಶಿಲ್ಪಗಳನ್ನು ಕೆತ್ತಲಾಗಿದ್ದು, ಈ ರಾಜ ಗೋಪುರವು ದೇಗುಲವನ್ನು ಪ್ರವೇಷಿಸುವವರ ಕಣ್ಮನ ತಣಿಸುತ್ತೆ.

ವಿಶಾಲವಾದ ಪ್ರದಕ್ಷಿಣಾ ಪಥವನ್ನು ಹೊಂದಿರುವ ಈ ಆಲಯದಲ್ಲಿ ಆರು ಅಡಿ ಎತ್ತರದ ಮಹಿಷಾಸುರ ಮರ್ಧಿನಿಯ ಸುಂದರವಾದ ಮೂರ್ತಿ ಇದ್ದು, ತಾಯಿಯ ಪಾದದ ಬಳಿ ಎಮ್ಮೆಯ ತಲೆ ಇದೆ. ಅಮ್ಮನವರು ಮಹಿಷಾಸುರನನ್ನು ಕೊಂದ ಭಂಗಿಯಲ್ಲಿ ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾಳೆ. ಇಲ್ಲಿ ದುರ್ಗಾಪರಮೇಶ್ವರಿ ಜೊತೆಗೆ ಗಣಪತಿ, ಶ್ರೀನಿವಾಸ ದೇವರು ಹಾಗೂ ಶಿವನ ಗುಡಿಗಳು ಇವೆ. ಈ ದೇಗುಲದಲ್ಲಿ ನೆಲೆಸಿರುವ ಈ ದೇವಿಯು ಅತ್ಯಂತ ಶಕ್ತಿಶಾಲಿ ಆಗಿದ್ದು, ಆಲಯಕ್ಕೇ ಹೋದವರು ತಮ್ಮ ಮನದ ಕೋರಿಕೆಯನ್ನು ಸಣ್ಣ ಚೀಟಿಯಲ್ಲಿ ಬರೆದು ತ್ರಿಶೂಲ ದಾರಿಯಾಗಿ ನಿಂತ ದುರ್ಗಾ ದೇವಿಯ ಪ್ರತಿಮೆಯ ಬಳಿ ಕಟ್ಟಿ ಬಂದ್ರೆ ಆರು ತಿಂಗಳ ಬಳಿಕ ಮನದ ಕೋರಿಕೆಗಳು ಎಲ್ಲವೂ ಸಿದ್ಧಿ ಆಗುತ್ತೆ ಎನ್ನುವುದು ಈ ಕ್ಷೇತ್ರಕ್ಕೆ ಬಂದು ಕೋರಿಕೆಗಳನ್ನು ಇಡೇರಿಸಿಕೊಂಡ ಭಕ್ತರ ಮನದ ಮಾತಾಗಿದೆ. ವ್ಯಾಪಾರ ಸಮಸ್ಯೆ, ಸಂತಾನ ಸಮಸ್ಯೆ, ವಿವಾಹ ವಿಳಂಬ ಸಮಸ್ಯೆ, ಅನಾರೋಗ್ಯ ಸಮಸ್ಯೆ, ನಿರುದ್ಯೋಗ ಸಮಸ್ಯೆ, ಕೌಟುಂಬಿಕ ಕಲಹ ಹೀಗೆ ಬದುಕಿನಲ್ಲಿ ಏನೇ ಕ್ಲಿಷ್ಟಕರವಾದ ಸಮಸ್ಯೆಗಳು ಇದ್ದರೂ ಅದನ್ನು ಚೀಟಿಯಲ್ಲಿ ಬರೆದು ತಾಯಿಗೆ ಒಪ್ಪಿಸಿದ್ರೆ ಆ ಸಮಸ್ಯೆಗಳು ಎಲ್ಲವೂ ಮಂಜಿನಂತೆ ಕರಗಿ ಬದುಕಿನಲ್ಲಿ ನೆಮ್ಮದಿ ದೊರಕುವಂತೆ ಈ ತಾಯಿಯು ಅನುಗ್ರಹಿಸುತ್ತಾಳೆ ಎನ್ನುವುದು ಈ ದೇಗುಲದ ವೈಶಿಷ್ಟ್ಯತೆ ಆಗಿದೆ.

ಇನ್ನೂ ಮಂಗಳವಾರ, ಶುಕ್ರವಾರ ಹಾಗೂ ಭಾನುವಾರ ದಂದು ಈ ದೇವಿಗೆ ಪ್ರಿಯವಾದ ದಿನಗಳಾಗಿದ್ದು ಈ ದಿನ ಮದುವೆಯಾದ ಹೆಣ್ಣು ಮಕ್ಕಳು ತಾಯಿಯ ದರ್ಶನ ಮಾಡಿ ಪೂಜೆ ಮಾಡಿಸಿಕೊಂಡು ಹೋದ್ರೆ ಅವರ ಮಾಂಗಲ್ಯ ಭಾಗ್ಯ ಸ್ಥಿರವಾಗಿ ಇರುವಂತೆ ದೇವಿಯು ಆಶೀರ್ವಾದ ನೀಡ್ತಳೆ ಎಂಬ ನಂಬಿಕೆ ಇದ್ದು, ಈ ದಿನಗಳಲ್ಲಿ ಹೆಚ್ಚು ಮಹಿಳಾ ಭಕ್ತರು ಆಗಮಿಸುತ್ತಾರೆ. ನವರಾತ್ರಿಯ ಒಂಭತ್ತು ದಿನಗಳು ದೇವಿಗೆ ವಿಶೇಷವಾದ ಪೂಜೆ ಪುನಸ್ಕಾರಗಳನ್ನು ಮಾಡಲಾಗುತ್ತೆ. ಈ ಸಮಯದಲ್ಲಿ ಸರ್ವ ಆಭರಣ ಭೋಷಿತೇ ಆದ ದೇವಿಯು ಪ್ರಸನ್ನ ವದಳಗಿ ಭಕ್ತರಿಗೆ ತನ್ನ ದಿವ್ಯ ರೂಪವನ್ನು ತೋರುತ್ತಾಳೆ. ನಿತ್ಯವೂ ಇಲ್ಲಿ ದೇವಿಗೆ ತ್ರಿಕಾಲ ಪೂಜೆಯನ್ನು ಮಾಡಲಾಗುತ್ತದೆ. ಈ ದೇವಿಯನ್ನು ಬೆಳಿಗ್ಗೆ 7 ರಿಂದ ಮಧ್ಯಾನ 12 ರ ವರೆಗೆ, ಸಂಜೆ 5.30 ರಿಂದ ರಾತ್ರಿ 8.30 ರ ವರೆಗೆ ದರ್ಶನ ಮಾಡಬಹುದಾಗಿದೆ. ಇಲ್ಲಿಗೆ ಬರುವ ಭಕ್ತಾದಿಗಳು ದೇವಿಗೆ ಕುಂಕುಮಾರ್ಚನೆ, ಅಲಂಕಾರ ಸೇವೆ, ಪಂಚಾಮೃತ ಅಭಿಷೇಕ, ಸೀರೆ ಸಮರ್ಪಣೆ, ಹಣ್ಣು ಕಾಯಿ ಸೇವೆಯನ್ನು ಮಾಡಿಸಬಹುದು. ಭಕ್ತರ ಸಂಕಷ್ಟಗಳನ್ನು ಪರಿಹರಿಸುವ ಕಾಳಿಕಾ ದುರ್ಗಾಪರಮೇಶ್ವರಿಯ ಈ ಆಲಯವು ಬೆಂಗಳೂರಿನ ಬೀ ಎಲ್ ಬಳಿ ಕ್ಷೇತ್ರದಲ್ಲಿ ಇದ್ದು, ಈ ಕ್ಷೇತ್ರವು ಕೆಂಪೇಗೌಡ ಬಸ್ ನಿಲ್ದಾಣ ದಿಂದ 17.1 ಕಿಮೀ, ದೂರದಲ್ಲಿದೆ. ಮೆಜೆಸ್ಟಿಕ್ ನಿಂದ ವಿದ್ಯಾರಣ್ಯ ಪುರಕ್ಕೆ 226 ನಂಬರ್ ನ ಬಸ್ ಮೂಲಕ ಪ್ರಯಾಣಿಸಿ ದೇಗುಲದ ಸ್ವಾಗತ ಕಮಾನಿನಿಂದ ಐದು ನಿಮಿಷಗಳ ಕಾಲ ನಡೆದುಕೊಂಡು ಹೋದ್ರೆ ಸುಲಭವಾಗಿ ಈ ದೇಗುಲವನ್ನು ತಲುಬಹುದಾಗಿದೆ. ಬೆಂಗಳೂರಿನಿಂದ ರಾಜ್ಯದ ಎಲ್ಲಾ ಭಾಗಗಳಿಂದಲೂ ಕರ್ನಾಟಕ ಸಾರಿಗೆ ವ್ಯವಸ್ಥೆ ಇದ್ದು, ಉದ್ಯಾನ ನಗರಿಯು ಉತ್ತಮವಾದ ರೈಲ್ವೇ ಹಾಗೂ ವಿಮಾನ ಯಾನದ ಸೌಲಭ್ಯ ಕೂಡ ಹೊಂದಿದೆ. ಸಾಧ್ಯವಾದರೆ ನೀವು ನಿಮ್ಮ ಜೀವನದಲ್ಲಿ ಈ ದೇವಿಯ ದರ್ಶನ ಪಡೆದು ಕೃತಾರ್ಥರಾಗಿ. ಶುಭದಿನ.

WhatsApp Group Join Now

Leave a Reply

Your email address will not be published. Required fields are marked *