ನಮಸ್ತೆ ಪ್ರಿಯ ಓದುಗರೇ, ಮೇದೋಜೀರಕ ಗ್ರಂಥಿಯನ್ನು ಆರೋಗ್ಯವಾಗಿ ಇಡುವುದು ಬಹಳ ಮುಖ್ಯ. ಜೀರ್ಣಾಂಗ ವ್ಯವಸ್ಥೆಯ ಮುಖ್ಯ ಭಾಗ ಮತ್ತು ಸಣ್ಣ ಕರುಳಿನ ಮೊದಲ ಭಾಗ ಮೇದೋಜೀರಕ ಗ್ರಂಥಿ. ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೇ ದೇಹದಲ್ಲಿ ಸಕ್ಕರೆ ತಯಾರಿಸುವ ಪ್ರಕ್ರಿಯೆಯನ್ನು ನಿಯಂತ್ರಿಸುತ್ತದೆ. ಹಾಗಾಗಿ ನಾವಿಂದು ಮೇದೋಜೀರಕ ಗ್ರಂಥಿಯ ಅರೋಗ್ಯದ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿಯೋಣ. ಮೇದೋಜೀರಕ ಗ್ರಂಥಿಯ ಸಮಸ್ಯೆಗೆ ಗೆ ಕಾರಣಗಳು ಏನು? ಮೇದೋಜೀರಕ ಗ್ರಂಥಿ ಎಂದರೇನು? ಅನ್ನನಾಳ ಹಾಗೂ ಜಠರದ ನಂತರ ಬರುವ ಅಂಗಾಂಗಳಿಗೆ ಮೇದೋಜೀರಕ ಗ್ರಂಥಿ ಎಂದು ಹೇಳಲಾಗುತ್ತದೆ. ಆ ಗ್ರಂಥಿಯಿಂದ ಇನ್ಸುಲಿನ್ ಇನ್ನೂ ಹಾರ್ಮೋನ್ ಬಿಡುಗಡೆ ಆಗುತ್ತೆ. ಆದ್ದರಿಂದ ನಮ್ಮ ದೇಹದಲ್ಲಿ ನಾವು ತಿನ್ನುವ ಆಹಾರವಾನ್ನು ನೀರಿನ ಹಾಗೆ ಮಾಡುವ ಶಕ್ತಿ ಇದಕ್ಕಿದೆ. ಸರಿ ಸುಮಾರು ಒಂದು ದಿನಕ್ಕೆ ಒಂದರಿಂದ ಒಂದೂವರೆ ಲೀಟರ್ ಬಿಡುಗಡೆ ಆಗುತ್ತೆ ಹೀಗೆ ತಯಾರಾದ ನೀರಿನಂತಹ ದ್ರವ ನಾವು ತಿನ್ನುವ ಊಟಾವನ್ನು ನೀರಿನ ಹಾಗೆ ಬದಲಾಯಿಸಲು ಸಹಾಯ ಮಾಡುತ್ತದೆ. ಯಾವಾಗ ಇದು ಬಿಡುಗಡೆ ಆಗುವುದು ನಿಲ್ಲುತ್ತದೆ ಆಗ ಕೆಲವರಿಗೆ ಶುಗರ್ ಅಂದರೆ ಸಕ್ಕರೆ ಕಾಯಿಲೆ ಬರಬಹುದು ಅದೂ ಕೂಡ ಕೇವಲ 20-25 ವರ್ಷದೊಳಗಿನ ಮಕ್ಕಳಿಗೆ ಶುಗರ್ ಸಮಸ್ಯೆ ಶುರು ಆಗುತ್ತದೆ.
ಯಾವಾಗ ನಮ್ಮ ಮೇದೋಜೀರಕ ಗ್ರಂಥಿ ಸರಿಯಾಗಿ ಕೆಲಸ ಮಾಡುವುದಿಲ್ಲ ಆಗ ಈ ತರಹ ಸಮಸ್ಯೆ ಶುರು ಆಗುತ್ತದೆ. ಇಲ್ಲ ವಯಸ್ಸಾದಂತೆ ಮೇದೋಜೀರಕ ಗ್ರಂಥಿಯ ಕೆಲಸ ಬದಲಾಗುತ್ತಾ ಅದರಿಂದಲೂ ಸಮಸ್ಯೆ ಉಂಟಾದಾಗ ವಯಸ್ಕರಿಗೂ ಅಂದರೆ 40-45 ವರ್ಷದ ವಯಸ್ಸಿನವರಿಗೂ ಶುಗರ್ ಬರಲು ಕಾರಣ ಆಗುತ್ತದೆ. ಅದಾದ ನಂತರ ಸರ್ಜಿಕಲ್ ತೊಂದರೆ ಉಂಟಾಗುತ್ತದೆ. ಹಾಗಂದರೇನು ಎಂದರೆ ಈ ಪಿತ್ತಕೋಶ ಪಿತ್ತನಾಳ ದಿಂದ ಬರುವಂತಹ ಕಲ್ಲು ಮೇದೋಜೀರಕ ಗ್ರಂಥಿ ಮೂಲಕ ಹಾದು ಹೋಗುವಾಗ ಏನಾದರೂ ಡ್ಯಾಮೇಜ್ ಮಾಡಿದರೆ ಹಾನಿ ಉಂಟು ಮಾಡಿದರೆ ಅದನ್ನು ಪ್ಯಾಂಕ್ರಿಯಾಟಿಟಿಸ್ ಎನ್ನುತ್ತೇವೆ. ಇದು ಒಂದೇ ಕಾರಣ ಅಂತಲ್ಲ ಕೆಲವರು 40-45 ವರ್ಷದ ಪುರುಷ ಅಥವಾ ಮಹಿಳೆ ಆಗಿರಬಹುದು ಅವರು ಈ ಮೇದೋಜೀರಕ ಗ್ರಂಥಿಯ ಜೊತೆ ಪಿತ್ತಕೋಶದ ಕಲ್ಲು ಏನಾದರೂ ತೊಂದರೆ ಕೊಟ್ಟಾಗ ಅದನ್ನು ಸರ್ಜರಿ ಮಾಡಿಸಿಕೊಳ್ಳುವುದು ತುಂಬಾ ಉತ್ತಮ. ಈ ಮೇದೋಜೀರಕ ಗ್ರಂಥಿಯ ಸಮಸ್ಯೆ ಇನ್ನೂ ಯಾರ್ಯಾರಿಗೆ ಆಗಬಹುದು ಎಂದರೆ ತುಂಬಾ ಮಧ್ಯಪಾನ ಮಾಡುವವರಿಗೆ ಕಾಡಬಹುದು.
ಮಧ್ಯಪಾನ ಬೆಳಿಗ್ಗೆ ಇಂದ ಮಧ್ಯಾನದ ವರೆಗೆ ಮಾಡುವುದು, ಸಾಯಂಕಾಲ ಬಿಡದೇ ಒಂದೇ ಸಮ ಕುಡಿಯುವವರಲ್ಲಿ ನರಗಳು ವೀಕ್ ಆಗಿ, ಫ್ಯಾಟ್ ಡೆಪಾಸಿಟ್ ಆಗಿ ಆಗಿ ಮೇದೋಜೀರಕ ಗ್ರಂಥಿಗೆ ಇನ್ಫೆಕ್ಷನ್ ಅಥವಾ ಇನ್ಫ್ಲಾಮೇಶನ್ ಆಗಿ ಆ ಮೇದೋಜೀರಕ ಗ್ರಂಥಿ ವೀಕ್ ಆಗಿ ಆ ಭಾಗಕ್ಕೆ ಅಂದ್ರೆ ಗ್ರಂತಿಗೆ ನೀರಿನ ಅಂಶ ಜಾಸ್ತಿ ಸಿಗದೇ ಹೋಗಿ ಈ ಸಮಸ್ಯೆ ಉಲ್ಬಣ ಆಗುತ್ತೆ. ಹೀಗಿದ್ದಾಗ ಆದಷ್ಟು ನೀರನ್ನು ಜಾಸ್ತಿ ಕೂಡಿಬೇಕೂ ಹಾಗೆ ಮಧ್ಯಪಾನ ಕಮ್ಮಿ ಮಾಡಬೇಕಾಗುತ್ತದೆ. ಇಲ್ಲ ಎಂದರೆ ಈ ಮೇದೋಜೀರಕ ಗ್ರಂಥಿ ಒಂದು ಸರಿ ಡ್ಯಾಮೇಜ್ ಆದರೆ ಮತ್ತೆ ಸರಿ ಹೋಗೋದೇ ಇಲ್ಲ. ಹೀಗೆ ಆದ ಮೇಲೆ ಅದರಿಂದ ಕಲ್ಲು ಸ್ಟೋನ್ ಆಗುವ ಸಾಧ್ಯತೆ ಇರುತ್ತದೆ. ಅಲ್ಲಿಂದ ನರಗಳು ಹೆಪ್ಪುಗಟ್ಟಿ ಅದರಿಂದ ದಪ್ಪ ಆಗುವ ಸಾಧ್ಯತೆ ಇರುತ್ತದೆ. ಈ ಮೇಲಿನ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ನೀವು ಒಮ್ಮೆ ಸರ್ಜನ್ ಬಳಿ ಹೋಗಿ ಬರುವುದು ತುಂಬಾನೇ ಒಳ್ಳೆಯದು. ವೈದ್ಯರು ಅದಕ್ಕೆ ತಕ್ಕ ಹಾಗೆ ಪರೀಕ್ಷೆಗಳು ಹಾಗೂ ಸ್ಕ್ಯಾನ್ ಮಾಡುವುದರ ಮೂಲಕ ಅದಕ್ಕೆ ಬೇಕಾದ ಸಲಹೆಗಳನ್ನು ನೀಡ್ತಾರೆ. ಕೆಲವೊಮ್ಮೆ ಹೊಟ್ಟೆಗೆ ಸಂಬಂಧ ಇರುವಂತಹ ಹಾಗೂ ಮೇದೋಜೀರಕ ಗ್ರಂಥಿ ಸಮಸ್ಯೆಯನ್ನು ನಾವು ಗ್ಯಾಸ್ಟ್ರಿಕ್ ಸಮಸ್ಯೆ ಎಂದು ಅಂದುಕೊಂಡು ತಲೆ ಕೆಡಿಸಿಕೊಳ್ಳದೆ ಹೋಗಬಹುದು ಆದರೆ ಆ ಗ್ಯಾಸ್ಟ್ರಿಕ್ ಸಮಸ್ಯೆ ಬರೀ ಗ್ಯಾಸ್ಟ್ರಿಕ್ ಸಮಸ್ಯೆ ಆಗಿರದೇ ಮೇದೋಜೀರಕ ಗ್ರಂಥಿಯ ಸಮಸ್ಯೆ ಕೂಡ ಆಗಿರಬಹುದು. ಆದ್ದರಿಂದ ಯಾವುದೇ ಕಾರಣಕ್ಕೂ ತಡ ಮಾಡದೆ ತಪ್ಪದೇ ವೈದ್ಯರನ್ನು ಕಾಣುವುದು ನಿಮಗೆ ಒಳಿತು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.