ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಸ್ನೇಹಿತರೆ. ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ ಅಥವಾ ರಾಷ್ಟ್ರೀಯ ಆರೋಗ್ಯ ಬಿಮಾ ಯೋಜನೆಯನ್ನು ದೇಶದ ಬಡ ಜನರನ್ನು ಗಮನದಲ್ಲಿ ಇಟ್ಟುಕೊಂಡು ಭಾರತ ಸರ್ಕಾರ ಜಾರಿಗೆ ತಂದಿದೆ. ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಜನ ಸಾಮಾನ್ಯರನ್ನೂ ಗಮನದಲ್ಲಿ ಇಟ್ಟುಕೊಂಡು ಈ ಯೋಜನೆಯ ಕಾರ್ಯ ವೈಖರಿಯನ್ನು ರೂಪಿಸಲಾಗಿದೆ. ಈ ಯೋಜನೆ ಅಡಿಯಲ್ಲಿ ನೋಂದಣಿ ಮಾಡಿಕೊಂಡ ಬಿಪಿಎಲ್ ಕಾರ್ಡ್ ದಾರರಿಗೂ ಹಾಗೂ ಅವರ ಕುಟುಂಬಸ್ಥರಿಗೆ ಈ ಸೌಲಭ್ಯ ದೊರೆಯಲಿದೆ. 2015 ರಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಈ ಯೋಜನೆಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿದೆ. ಈ ಯೋಜನೆ ಮೂಲಕ ಯಾವುದೇ ಎಂಪೇಲೆಡ್ ಆಸ್ಪತ್ರೆಗಳಲ್ಲಿ ಒಳ ರೋಗಿಗಳಿಗೆ ಚಿಕಿತ್ಸೆ ಪಡೆಯುವ ಪ್ರತಿ ಕುಟುಂಬಕ್ಕೆ ವರ್ಷದಲ್ಲಿ 30,000 ರೂಪಾಯಿಗಳ ವರೆಗೆ ಹಣಕಾಸಿನ ನೆರವನ್ನು ಸರ್ಕಾರ ಒದಗಿಸುತ್ತದೆ.
ವಿಶ್ವ ಬ್ಯಾಂಕ್, ಯುನೈಟೆಡ್ ನೇಶನ್ಸ್, ಐ.ಯೆಲ್.ಒ ಗಳು ಈ ಯೋಜನೆಯನ್ನು ಅತ್ಯುತ್ತಮ ಆರೋಗ್ಯ ಬಿಮಾ ಯೋಜನೆ ಎಂದು ಪರಿಗಣಿಸಿ ಪ್ರಶಂಸೆ ವ್ಯಕ್ತಪಡಿಸಿಸಿವೆ. ಈ ಯೋಜನೆಯಿಂದ ಅಸಂಘಟಿತ ಕಾರ್ಮಿಕರ ವಲಯಕ್ಕೆ ಹೆಚ್ಚಿನ ಅನುಕೂಲ ದೊರೆಯಲಿದೆ. ಸ್ಮಾರ್ಟ್ ಕಾರ್ಡ್ ಮೂಲಕವೂ ಈ ಯೋಜನೆಯ ಅನುಕೂಲಗಳನ್ನು ಪಡೆಯಬಹುದು. ನಗದು ರಹಿತ ವ್ಯವಹಾರಕ್ಕೂ ಇದು ಅನುಕೂಲವನ್ನು ಒದಗಿಸುತ್ತದೆ. ಈಗ ಪ್ರಧಾನ ಮಂತ್ರಿ ಜನ್ ಆರೋಗ್ಯ ಜೋಜನೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿಯೋಣ. ಆಯುಷ್ಮನ್ ಭಾರತದ ಅಡಿಯಲ್ಲಿ ಬರುವ ಈ ಯೋಜನೆ ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆ. ಈ ಯೋಜನೆಯನ್ನು 2018 ಸೆಪ್ಟೆಂಬರ್ 21 ರಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಪ್ರಾರಂಭಿಸಿದರು. ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆ ಪ್ರತಿ ಕುಟುಂಬಕ್ಕೆ ರೂಪಾಯಿ 5 ಲಕ್ಷದ ವರೆಗೆ ವಿಮಾ ರಕ್ಷಣೆಯನ್ನು ಒದಗಿಸುತ್ತದೆ. ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆ ಗೆ ನೀವು ಹೇಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಯೋಣ.
ಅಯುಷ್ಮನ್ ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆ ಯ ಅಧಿಕೃತ ವೆಬ್ಸೈಟ್ www.mera.pmjay.gov.in ಗೆ ಭೇಟಿ ನೀಡಿ ನಂತರ ನೀವು ಆಯುಶ್ಮನ್ ಮಿತ್ರ pmjay ಗೆ ಲಾಗ್ ಇನ್ ಆಗಿ ಕ್ಲಿಕ್ ಹಿಯರ್ ಟು ರಿಜಿಸ್ಟರ್ ಮೇಲೆ ಕ್ಲಿಕ್ ಮಾಡಿ, ಈಗ ನಿಮಗೆ ನಾಲ್ಕು ಆಪ್ಷನ್ ಕಾಣಿಸುತ್ತೆ, ಆಯುಷ್ಮಾನ್ ಮಿತ್ರ ರಿಜಿಸ್ಟ್ರೇಷನ್ ಮೇಲೆ ಕ್ಲಿಕ್ ಮಾಡಿ. ಹೀಗೆ ಮಾಡುವಾಗ ನಿಮ್ಮ ಆಧಾರ್ ಹಾಗೂ ಫೋನ್ ನಂಬರ್ ಕೇಳುತ್ತೆ, ಎಂಟ್ರಿ ಮಾಡಿದ ಮೇಲೆ ಸಬ್ ಮಿಟ್ ಮೇಲೆ ಕ್ಲಿಕ್ ಮಾಡಿ. ನಂತರ ಇ ಕೇವೈಸಿ ಅತೆಂಟಿಂಕೇಶನ್ ಅಂತ ಬರುತ್ತೇ, ಅಲ್ಲಿ ಬಾಕ್ಸ್ ಟೈಪ್ ಕಾಣುತ್ತೆ ಅಲ್ಲಿ ಕ್ಲಿಕ್ ಮಾಡಿ. ಆಗ ನಿಮ್ಮ ಮೊಬೈಲ್ ಗೆ ಓಟಿಪಿ ಬರುತ್ತೆ, ಓಟೀಪಿ ಎಂಟ್ರಿ ಮಾಡಿ ವ್ಯಲಿಡೆಟ್ ಮೇಲೆ ಕ್ಲಿಕ್ ಮಾಡಿ, ಈಗ ನಿಮಗೆ ನಿಮ್ಮ ಕೆವೈಸಿ ವೇರಿಫೈ ಆಗಿದೆ ಎಂದು ಬರುತ್ತೆ. ಓಕೆ ಅಂತ ಕ್ಲಿಕ್ ಮಾಡಿ. ನಂತರ ಆಯುಷ್ಮಾನ ಮಿತ್ರ ಸೆಲ್ಫ್ ರಿಜಿಸ್ಟ್ರೇಷನ್ ಪೇಜ್ ಓಪನ್ ಆಗುತ್ತೆ, ಈ ಪೇಜ್ ಅಲ್ಲಿ ಎಲ್ಲ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ. ನಿಮ್ಮ ಫೋಟೋ ಅಪ್ಲೋಡ್ ಮಾಡೋ ಆಪ್ಷನ್ ಕೂಡ ಇರುತ್ತೆ, ಎಲ್ಲಾ ಎಂಟ್ರಿ ಮಾಡಿದ ಮೇಲೆ ಸೆಲ್ಫ್ ರೆಜಿಸ್ಟರ್ ಕ್ಲಿಕ್ ಮಾಡಿ. ಆಗ ನಿಮಗೆ ಆಯುಶ್ಮಾನ್ ಮಿತ್ರ ಐಡಿ ಕ್ರಿಯೇಟ್ ಆಗುತ್ತೆ. ನಂತರ ಓಕೆ ಅಂತ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ. ಆಗ ನಿಮ್ಮ ಫೋನ್ ಗೆ ಐಡಿ ಬರುತ್ತೆ ಅದೇ ಐಡಿ ಬಳಸಿ ಲಾಗ್ ಇನ್ ಆಗಿ. ಲಾಗ್ ಇನ್ ಆದಮೇಲೆ ಮತ್ತೆ ಒಟಿಪಿ ಬರುತ್ತೆ, ಓಟಿಪೀ ಎಂಟ್ರಿ ಮಾಡಿ ವ್ಯಲಿಡೆಟ್ ಮೇಲೆ ಕ್ಲಿಕ್ ಮಾಡಿ. ಈಗ ನಿಮ್ಮ ರಿಜಿಸ್ಟ್ರೇಷನ್ ಕೆಲಸ ಸಂಪೂರ್ಣ ಆದ ಹಾಗೆ. ನೂಡಿದ್ರಲ್ಲ ಸ್ನೇಹಿತರೆ ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆ ಬಗ್ಗೆ. ಈ ಎರೆಡೂ ಯೋಜನೆಗಳು ಜಾರಿಯಲ್ಲಿದ್ದು, ಇದರ ಸಂಪೂರ್ಣ ಲಾಭ ಪಡೆಯಿರಿ. ಶುಭದಿನ.