ನಮಸ್ತೆ ಪ್ರಿಯ ಓದುಗರೇ, ದೇವರು ಭೂಮಿ ಮೇಲೆ ನೆಲೆಸಿರುವ ಹಾಗೆ ಜಗತ್ತಿನಲ್ಲಿ ಅತಿಮಾನುಷ ಶಕ್ತಿಗಳೂ ಕೂಡ ಇವೆ ಎಂದು ಹೇಳಲಾಗುತ್ತದೆ. ಈ ಆಧುನಿಕ ಯುಗದಲ್ಲಿ ದೆವ್ವ ಪಿಶಾಚಿಗಳ ಕಾಟದಿಂದ ಬಳಲುವವರ ಸಂಖ್ಯೆಗೆ ಲೆಕ್ಕವೇ ಇಲ್ಲ. ಹಾಗಾದ್ರೆ ಈ ದುಷ್ಟ ಶಕ್ತಿಗಳಿಂದ ಬಳಲುವವರಿಗೆ ಪರಿಹಾರ ಏನು ಅಂದು ಯೋಚನೆ ಮಾಡುವವರಿಗೆ ಈ ಕ್ಷೇತ್ರಕ್ಕೆ ಹೋದ್ರೆ ಶಾಶ್ವತ ಪರಿಹಾರ. ಬನ್ನಿ ಹಾಗಾದರೆ ಆ ಕ್ಷೇತ್ರ ಯಾವುದು ಅಲ್ಲಿನ ವಿಶೇಷತೆಗಳು ಏನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಂಡು ಬರೋಣ.
ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.
ಉಕ್ಕಡಗಾತ್ರಿ ಎಂಬ ದಿವ್ಯ ಸ್ಥಳವು ಗುರು ಕರಿಬಸವೇಶ್ವರರು ಜೀವಂತ ಸಮಾಧಿ ಹೊಂದಿದ ಸ್ಥಳವಾಗಿದ್ದು, ಇಂದಿಗೂ ಅಜ್ಜಯ್ಯನವರು ಸಮಾಧಿಯಲ್ಲಿ ಜೀವಂತ ಇದ್ದು, ತಮ್ಮ ಬಳಿ ಬರುವ ಭಕ್ತರ ಕಣ್ಣೀರನ್ನು ಒರೆಸುತ್ತಿದ್ದರೆ ಎಂದು ಹೇಳಲಾಗುತ್ತದೆ. ವಿಶಾಲವಾದ ಪ್ರಾಂಗಣವನ್ನಾ ಹೊಂದಿದ ಈ ಆಲಯದ ಗರ್ಭ ಗುಡಿಯಲ್ಲಿ ಶ್ವೇತಾ ಧಾರಿಯಾಗಿ ಶ್ರೀ ಅಜ್ಜಾಯ್ಯನವರು ಕಂಗೊಳಿಸುತ್ತಿದ್ದಾರೆ. 400 ವರ್ಷಗಳಷ್ಟು ಪುರಾತನವಾದ ಸ್ಥಳವಾದ ಈ ಕ್ಷೇತ್ರವು ಹಿಂದೆ ಸ್ಮಶಾನವಾಗಿದ್ದು, ಅಜ್ಜಯ್ಯನವರು ಇಲ್ಲಿ ತಪಸ್ಸನ್ನು ಆಚರಿಸಿದ ಮೇಲೆ ಈ ಕ್ಷೇತ್ರವು ಪುಣ್ಯ ಸ್ಥಳವಾಗಿ ಪ್ರಖ್ಯಾತವಾಗಿದೆ. ದೆವ್ವ, ಪಿಶಾಚಿ, ವಾಮಾಚಾರ ತೊಂದರೆಗೆ ಒಳಗಾಗಿರುವ ಜನರು ಈ ದೇಗುಲಕ್ಕೆ ಬಂದು ತುಂಗಭದ್ರಾ ನದಿಯಲ್ಲಿ ಮಿಂದೆದ್ದು ಒಂದು ನಿಂಬೆ ಹಣ್ಣನ್ನು ತುಳಿಯುವುದರಿಂದ ದೆವ್ವದ ಕಾಟ ದೂರವಾಗುತ್ತದೆ ಎನ್ನುವುದು ಇಲ್ಲಿಗೆ ಬರುವ ಭಕ್ತಾದಿಗಳ ಅಚಲವಾದ ನಂಬಿಕೆ ಆಗಿದೆ.
ಇಂದಿಗೂ ದೆವ್ವ ಹಿಡಿದವರು ತಮ್ಮ ಸಮಸ್ಯೆಯಿಂದ ಪಾರಾಗೊದನ್ನ ಪ್ರತ್ಯಕ್ಷವಾಗಿ ನೋಡಬಹುದು. ಇನ್ನೂ ಪರಮ ಪಾವನಳಾದ ತುಂಗಾ ನದಿಯಲ್ಲಿ ಸ್ನಾನ ಮಾಡಿ ನಂತರ ದೇವಸ್ಥಾನದ ಸುತ್ತ ಒಂದು ಸುತ್ತು ಉರುಳು ಸೇವೆ ಮಾಡುವುದರಿಂದ ಅಜ್ಜಯ್ಯನವರೂ ನಮಗೆ ಬಂದ ಕಷ್ಟಗಳನ್ನು ಬಗೆ ಹರಿಸುತ್ತಾರೆ ಎಂಬ ನಂಬಿಕೆ ಇಲ್ಲಿಗೆ ಬರುವ ಭಕ್ತಾದಿಗಳಲ್ಲಿ ಇದ್ದು, ಅಜ್ಜಯ್ಯನವರಿಗೆ ಖಾರ ಮಂಡಕ್ಕಿ ಬಲು ಪ್ರೀತಿಯ ತಿನಿಸಾಗಿದೆ. ಹೀಗಾಗಿ ಇಲ್ಲಿಗೆ ಬರುವ ಜನರು ಸಾಮಾನ್ಯವಾಗಿ ಅಜ್ಜಯ್ಯನವರಿಗೆ ಅರ್ಪಿಸುವುದಕ್ಕೆ ಕೆಜಿ ಗಟ್ಟಲೆ ಖರ ಮಂಡಕ್ಕಿಯನ್ನು ಹಿಡಿದು ಬರುವುದನ್ನು ನಾವಿಲ್ಲಿ ಕಾಣಬಹುದು. ಹುಣ್ಣಿಮೆ ಅಮಾವಾಸ್ಯೆಗಳಾಂದು ಸಾವಿರಾರು ಮಂದಿ ಸೇರುವ ಈ ದೇಗುಲದಲ್ಲಿ ಈ ದಿನ ಅಜ್ಜಯ್ಯನವರಿಗೇ ವಿಶೇಷ ಪೂಜೆ ಪುನಸ್ಕಾರಗಳನ್ನು ಮಾಡಲಾಗುತ್ತೆ. ಪ್ರತಿ ವರ್ಷವೂ ಈ ಕ್ಷೇತ್ರದಲ್ಲಿ ಗುರು ಕರಿಬಸವೇಶ್ವರ ಜಾತ್ರಾ ಮಹೋತ್ಸವವನ್ನಾ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಉತ್ಸವ ಮೂರ್ತಿಗೆ ಪುಣ್ಯಾಹ ವಾಚನ, ರಥ ಪೂಜೆ, ಬಲಿ ಪೂಜೆ, ರುದ್ರಾಭಿಷೇಕ ವನ್ನಾ ಮಾಡಲಾಗುತ್ತೆ. ಜಾತ್ರೆಯ ಸಂದರ್ಭದಲ್ಲಿ ಜನರು ಹರ ಹರ ಮಹಾದೇವ ಕರಿ ಬಸವೇಶ್ವರ ಮಹಾರಾಜರಿಗೆ ಜೈ ಎಂದು ಉದ್ಗಾರ ಘೋಷ ಮಾಡಿ ರಥವನ್ನು ಎಳೆಯುತ್ತಾರೆ.
ಇನ್ನೂ ಇಲ್ಲಿಗೆ ಬಂದವರು ಜಾತ್ರಾ ಸಮಯದಲ್ಲಿ ರಥಕ್ಕೆ ಉತ್ತುತ್ತಿ, ಬಾಳೆಹಣ್ಣು , ಧಾನ್ಯ, ಹೂವು, ತೆಂಗಿನ ಕಾಯಿಯನ್ನು ಸಮರ್ಪಣೆ ಮಾಡುವುದರಿಂದ ಎಲ್ಲಾ ಜನ್ಮಗಳ ಪಾಪಗಳೂ ದೂರವಾಗುತ್ತದೆ ಎಂಬ ವಾಡಿಕೆಯೂ ಈ ದೇಗುಲದಲ್ಲಿ ಕೇಳಿ ಬರುತ್ತೆ. ಅಜ್ಜಯ್ಯನವರ ಗದ್ದುಗೆಗೆ ನಿತ್ಯ ಮೂರು ಬಾರಿ ಪೂಜೆಯನ್ನು ಮಾಡಲಾಗುತ್ತದೆ. ಬೆಳಿಗ್ಗೆ 7 ಗಂಟೆಯಿಂದ ಸಂಜೆ 8 ಗಂಟೆ ವರೆಗೆ ಅಜ್ಜಯ್ಯನವರನ್ನು ದರ್ಶನ ಮಾಡಬಹುದು. ಇಲ್ಲಿಗೆ ಬರುವ ಭಕ್ತಾದಿಗಳು ದೇವರಿಗೆ ತಮ್ಮ ಇಷ್ಟಾನುಸಾರ ಪೂಜೆಯನ್ನು ಮಾಡಿಸಬಹುದು. ಪ್ರತಿನಿತ್ಯ ಈ ಕ್ಷೇತ್ರದಲ್ಲಿ ಅನ್ನ ದಾಸೋಹ ನಡೆಸಲಾಗುತ್ತದೆ.
ಗುರು ಕರಿಬಸವೇಶ್ವರರ ಗದ್ದುಗೆ ಇರುವ ಈ ಪುಣ್ಯ ಕ್ಷೇತ್ರವೂ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಉಕ್ಕಡಗಾತ್ರಿ ಎಂಬ ಪುಟ್ಟ ಊರಿನಲ್ಲಿ ದೆ. ಈ ಕ್ಷೇತ್ರವು ಬೆಂಗಳೂರಿನಿಂದ 305 ಕಿಮೀ, ಹುಬ್ಬಳ್ಳಿಯಿಂದ 133 ಕಿಮೀ, ಉಡುಪಿಯಿಂದ 217 ಕಿಮೀ, ಹರಿಹರ ದಿಂದ 30 ಕಿಮೀ, ದಾವಣಗೆರೆ ಇಂದ 42 ಕಿಮೀ, ಮಲೆ ಬೆನ್ನೊರಿನಿಂದ 19 ಕಿಮೀ ದೂರದಲ್ಲಿದೆ. ದಾವಣಗೆರೆ ಇಂದ ಉಕ್ಕಡಗಾತ್ರಿಗೆ ಸಾಕಷ್ಟು ಸರ್ಕಾರಿ ಬಸ್ ಸೌಲಭ್ಯ ಇದ್ದು, ಮಲೆ ಬೆನ್ನೋರು ಅಥವಾ ಹರಿಹರ ಮಾರ್ಗವಾಗಿ ಈ ಕ್ಷೇತ್ರಕ್ಕೆ ಸುಲಭವಾಗಿ ತಲುಪಬಹುದು. ದಾವಣಗೆರೆಯು ರಾಜ್ಯದ ಹಲವಾರು ಭಾಗಗಳಿಂದ ಕರ್ನಾಟಕ ಬಸ್ ಸಾರಿಗೆ ಸೌಲಭ್ಯ ಹೊಂದಿದ್ದು ಹರಿಹರ ವೂ ಈ ದೇಗುಲಕ್ಕೆ ಸಮೀಪದ ರೈಲ್ವೇ ನಿಲ್ದಾಣ ಆಗಿದೆ. ಸಾಧ್ಯವಾದರೆ ನೀವು ಒಮ್ಮೆ ಉಕ್ಕಡಗಾತ್ರಿಯ ಪವಾಡ ಪುರುಷರಾದ ಅಜ್ಜಯ್ಯನ ದರ್ಶನ ಮಾಡಿ ಅವರ ಆಶೀರ್ವಾದ ಪಡೆಯಿರಿ ಎಂದು ಹೇಳ್ತಾ ಇಂದಿನ ಲೇಖನಕ್ಕೆ ಪೂರ್ಣ ವಿರಾಮ ಹಾಕುತ್ತಿದ್ದೇವೆ. ಶುಭದಿನ.