ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿಯೋಣ ಸ್ನೇಹಿತರೆ. ಎರೆಡು ಹೆಕ್ಟೇರ್ ಗಿಂತ ಕಡಿಮೆ ಪ್ರಮಾಣದಲ್ಲಿ ಭೂಮಿ ಹೊಂದಿರುವ ರೈತರು ಈ ಯೋಜನೆಯ ಲಾಭವನ್ನು ಪಡೆಯಬಹುದು. ಈ ಯೋಜನೆಯಲ್ಲಿ ವರ್ಷಕ್ಕೆ 6,000 ರೂಪಾಯಿಗಳನ್ನು 4 ತಿಂಗಳಿಗೊಮ್ಮೆ ಎರೆಡು ಸಾವಿರ ರೂಪಾಯಿಗಳಂತೆ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಇನ್ನೂ ಈ ಯೋಜನೆಯಲ್ಲಿ ನೋಂದಣಿ ಮಾಡಿಕೊಳ್ಳಲು ಬಾಪೂಜಿ ಸೇವಾ ಕೇಂದ್ರ, ರೈತ ಸಂಪರ್ಕ ಕೇಂದ್ರ, ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ತಾವು ಹೊಂದಿರುವ ಕೃಷಿ ಭೂಮಿಗೆ ಸಂಬಂಧಿಸಿದ ಅಧಿಕೃತ ದಾಖಲೆ ಜೊತೆಗೆ ಅರ್ಜಿಯನ್ನು ಸಲ್ಲಿಸಬಹುದು. ಪಿ.ಏಮ್ ಕಿಸಾನ್ ಅಪ್ಲಿಕೇಷನ್ ಗೆ ಅಗತ್ಯವಿರುವ ಪ್ರಮುಖ ದಾಖಲೆಗಳನ್ನು ನೋಡುವುದಾದರೆ, ಮೊದಲನೆಯದಾಗಿ ಭೂಮಿಯ ಮೂಲ ದಾಖಲೆಗಳು ಹಾಗೆ ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್, ಮತದಾರರ ಗುರುತಿನ ಚೀಟಿ, ಪಾಸ್ ಪೋರ್ಟ್ ಅಳತೆಯ ಫೋಟೋ, ಚಾಲನಾ ಪರವಾನಗಿ ಪ್ರಮಾಣಪತ್ರ, ನಿಮ್ಮ ಮಾಲೀಕತ್ವ ದಲ್ಲಿರುವ ಭೂಮಿಯ ಸಂಪೂರ್ಣ ವಿವರಗಳು, ನಿವಾಸ ಪ್ರಮಾಣ ಪತ್ರ. ಪೀ.ಏಮ್ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುವುದು ಹೇಗೆ ಎನ್ನುವುದನ್ನು ನೋಡೋಣ ಬನ್ನಿ.
ಮೊದಲಿಗೆ www.pmkisan.gov.in ವೆಬ್ಸೈಟ್ ಗೆ ಹೋಗಬೇಕು, ಅಲ್ಲಿ ಹೋಂ ಪೇಜ್ ಅಲ್ಲಿ ಫಾರ್ಮರ್ಸ್ ಕಾರ್ನರ್ ಅಂತ ಆಪ್ಷನ್ ಇರುತ್ತೆ, ಅದರ ಮೇಲೆ ಕ್ಲಿಕ್ ಮಾಡಿ. ನಂತರ ಹೊಸ ರೈತರ ನೊಂದಣಿ ಅಂದ್ರೆ ನ್ಯೂ ಫಾರ್ಮರ್ ರೇಜಿಸ್ಟ್ರೇಶನ್ ಮೇಲೆ ಕ್ಲಿಕ್ ಮಾಡಿ. ನ್ಯೂ ಫಾರ್ಮರ್ ರಿಜಿಸ್ಟ್ರೇಷನ್ ಫಾರ್ಮ್ ಅಂತ ಕಾಣಿಸಿಕೊಳ್ಳುತ್ತದೆ, ಬಲ ಭಾಗದಲ್ಲಿ ಅದೇ ಪೇಜ್ ಅಲ್ಲಿ ಸೆಲೆಕ್ಟ್ ಲಾಂಗ್ವೇಜ್ ಅಂತ ಆಪ್ಷನ್ ಇರುತ್ತೆ, ಅಲ್ಲಿ ನಿಮಗೆ ಬೇಕಾಗಿರೋ ಭಾಷೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ, ಅಲ್ಲಿ ಕೇಳಿರುವ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ಮತ್ತು ಸೆಂಡ ಓಟಿಪಿ ಮೇಲೆ ಕ್ಲಿಕ್ ಮಾಡಿ, ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತೆ, ಆ ಓಟಿಪಿ ನ ಎಂಟ್ರಿ ಮಾಡಿ, ನಂತರ ಅದೇ ಪೇಜ್ ನ ಕೋನೆಗೆಯಿರುವ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ. ನಂತರ ಅಲ್ಲಿ ಕೇಳುವಂತಹ ಎಲ್ಲ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ. ದಾಖಲೆಗಳನ್ನು ಅಪ್ಲೋಡ್ ಮಾಡಿ. ಎಲ್ಲಾ ದಾಖಲೆಗಳು ಹಾಗೆ ವಿವರಗಳು ಸರಿಯಾಗಿದೆ ಎಂದು ಪರಿಶೀಲಿಸಿ ನಂತರ ಸೇವ್ ಬಟನ್ ಮೇಲೆ ಕ್ಲಿಕ್ ಮಾಡಿ. ಪೀ.ಏಮ್ ಕಿಸಾನ್ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಇ- ಕೆವೈಸಿ ಈಗ ಕಡ್ಡಾಯವಾಗಿದೆ. ಆಧಾರ್ ಕಾರ್ಡ್ ಗಳನ್ನಾ ಪೀ.ಏಮ್ ಕಿಸಾನ್ ಖಾತೆಗೆ ಲಿಂಕ್ ಮಾಡಬೇಕು. ಇಲ್ಲದಿದ್ದರೆ ಯಾವುದೇ ಪ್ರಯೋಜನ ಆಗುವುದಿಲ್ಲ. ಖಾತೆಗೆ ಆಧಾರ್ ಕಾರ್ಡ್ ನ್ನೂ ಲಿಂಕ್ ಮಾಡುವುದನ್ನು ಕೆಲವು ಸರಳ ಹಂತಗಳಲ್ಲಿ ಮಾಡಬಹುದು.
ಮೊದಲಿಗೆ www.pmkisan.gov.in ವೆಬ್ಸೈಟ್ ಗೆ ಹೋಗಿ, ನಂತರ ಹೋಂ ಪೇಜ್ ಅಲ್ಲಿ ಇ- ಕೆವೈಸಿ ಆಯ್ಕೆ ಮೇಲೆ ಕ್ಲಿಕ್ ಮಾಡಿ, ನಂತರ ಆಧಾರ್ ಕಾರ್ಡ್ ಸಂಖ್ಯೆಯನ್ನು ಎಂಟ್ರಿ ಮಾಡಿ. ಇದಾದ ನಂತರ ಸರ್ಚ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಇದಾದ ಮೇಲೆ ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಮೊಬೈಲ್ ಸಂಖ್ಯೆ ಎಂಟ್ರಿ ಮಾಡಿ. ನಂತರ ಗೆಟ್ ಮೊಬೈಲ್ ಓಟಿಪಿ ನ ಕ್ಲಿಕ್ ಮಾಡಿ. ಆಗ ನಿಮ್ಮ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತೆ ಆ ಓಟಿಪಿ ನ ಸಹ ಎಂಟ್ರಿ ಮಾಡಿ, ನಂತರ ಅದೇ ಪೇಜ್ ಅಲ್ಲಿ ಇರುವ ಸಬ್ ಮೀಟ್ ಮೇಲೆ ಕ್ಲಿಕ್ ಮಾಡಿ. ಇದಾದ ಮೇಲೆ ಪಿ.ಎಂ ಇ- ಕೆವೈಸಿ ಯಶಸ್ವಿಯಾಗಿದೆ ಎಂದು ಸಂದೇಶ ಬರುತ್ತೆ. ಅಥವಾ ಇ- ಕೆವೈಸಿ ಇಸ್ ಸಕ್ಸಸ್ ಫುಲ್ಲಿ ರೆಜಿಸ್ಟರ್ ಅಂತ ಸ್ಕ್ರೀನ್ ಮೇಲೆ ಬರುತ್ತೆ. ಹಾಗೆ ಅದೇ ಪೇಜ್ ಅಲ್ಲಿ ಮೇಕ್ ಪೇಮೆಂಟ್ ಅಂತ ಕಾಣಿಸುತ್ತೆ, ಅಲ್ಲಿ ಪಾಸ್ವರ್ಡ್ ಅಂತ ಆಪ್ಷನ್ ಇರುತ್ತೆ, ಅಲ್ಲಿ ಪಾಸ್ವರ್ಡ್ ಅನ್ನು ಎಂಟ್ರಿ ಮಾಡಿ ಕೆಳಗಿರುವ ವ್ಯಾಲಿಡೇಟ್ ಮೇಲೆ ಕ್ಲಿಕ್ ಮಾಡಿ ಈಗ ನಿಮಗೆ ಪೇಮೆಂಟ್ ಡನ್ ಸಕ್ಸಸ್ ಫ್ಯೂಲಿ ಅಂತ ಬರುತ್ತೇ. ಅಷ್ಟೇ ಪಿಎಂ ಕಿಸಾನ್ ಅಲ್ಲಿ ನಿಮ್ಮ ಹೆಸರು ನೋಂದಾಯಿ ಸುವ ಕೆಲಸ ಆಯ್ತು. ನೋಡಿದ್ರಲ್ಲಾ ಈ ಯೋಜನೆಯ ಲಾಭವನ್ನು ಪಡೆಯಲು ಏನೇನು ಮಾಡಬೇಕು ಎಂದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.