ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಪೀ.ಏಮ್ ಸ್ವನಿಧಿ ಯೋಜನೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿಯೋಣ. ಪೀ.ಏಮ್ ಸ್ವನಿಧಿ ಅಂದರೆ ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿ. ಇದು ಜೂನ್ 2020 ರಲ್ಲೀ ಪ್ರಾರಂಭವಾದ ಕೇಂದ್ರ ವಲಯದ ಯೋಜನೆ. ಪೀ.ಏಮ್ ಸ್ವನಿಧಿ ಯೋಜನೆಯ ಪ್ರಮುಖ ಲಕ್ಷಣಗಳನ್ನು ಹೇಳುವುದಾದರೆ, ಕೋರೋನ ವೈರಸ್ ಸಾಂಕ್ರಾಮಿಕ ರೋಗದಿಂದ ಪೀಡಿತರಾಗಿ ರುವ ಬೀದಿ ವ್ಯಾಪಾರಿಗಳಿಗೆ ಇದು ಕೈಗೆ ಎಟಕುವ ಕೆಲಸಕ್ಕೆ ಬಂಡವಾಳ ಹೂಡಲು ಸಾಲಗಳನ್ನು ಒದಗಿಸುತ್ತದೆ. ಇದು ಮಾರ್ಚ್ 2022 ರ ವರೆಗೆ ಜಾರಿಯಲ್ಲಿ ಇರುತ್ತೆ, ಮಾರಾಟಗಾರರಿಗೆ ಆರಂಭಿಕ ಕಾರ್ಯ ಬಂಡವಾಳವನ್ನು ಅಂದರೆ ರೂಪಾಯಿ ಹತ್ತು ಸಾವಿರ ಸಾಲದ ಆರಂಭಿಕ ಅಥವಾ ಅಕಾಲಿಕ ಮರು ಪಾವತಿಯಲ್ಲಿ ಮಾರಾಟಗಾರ ನು ಶೇಕಡಾ ಏಳರಷ್ಟು ಬಡ್ಡಿ ಸಬ್ಸಿಡಿ ಅನ್ನು ಪಡೆಯುತ್ತಾನೆ.

ಡಿಜಿಟಲ್ ಪಾವತಿಗಳ ಮೇಲೆ ಮಾಸಿಕ ಕ್ಯಾಶ್ ಬ್ಯಾಕ್ ಪ್ರೋತ್ಸಾಹದ ನಿಭಂದನೆ ಇದೆ. ರೂಪಾಯಿ ವ್ಯಾಪ್ತಿಯಲ್ಲಿ ಮಾಸಿಕ ಕ್ಯಾಶ್ ಬ್ಯಾಕ್ ಅಂದ್ರೆ 50-100 ರೂಪಾಯಿ. ಮಾರಾಟಗಾರನು ಮೊದಲ ಸಾಲವನ್ನು ಸಮಯಕ್ಕೆ ಸರಿಯಾಗಿ ಮರು ಪಾವತಿಸಿದರೆ ಹೆಚ್ಚಿನ ಸಾಲಕ್ಕೆ ಅರ್ಹರಾಗಲೂ ಹೆಚ್ಚಿನ ಸಂಭವಾತೆಯನ್ನು ಹೊಂದಿರುತ್ತಾರೆ. ಪೀ.ಏಮ್ ಸ್ವಾನಿಧಿ ಅಡಿಯಲ್ಲಿ ಸಾಲ ನೀಡುವ ಸಂಸ್ಥೆಗಳನ್ನು ಹೇಳುವುದಾದರೆ, ಶೆಡ್ಯೂಲ್ ವಾಣಿಜ್ಯ ಬ್ಯಾಂಕ್ ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳು, ಹಾಗೆ ಸಹಕಾರಿ ಬ್ಯಾಂಕ್ ಗಳು, ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು, ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಸ್ವ ಸಹಾಯ ಗುಂಪುಗಳು. ಈ ಯೋಜನೆಯಲ್ಲಿ ನೋಂದಾಯಿಸಿ ಕೊಳ್ಳಲು www.pmsvanidhi.mohua.giv.in ವೆಬ್ಸೈಟ್ ಗೆ ಹೋಗಿ. ನಂತರ ಅಪ್ಲಿಕ್ಯಾಂಟ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಇದಾದ ಮೇಲೆ ಮೊಬೈಲ್ ಸಂಖ್ಯೆ ನ ಎಂಟ್ರಿ ಮಾಡಿ. ಹಾಗೆ ಕೆಳಗೆ ಇರುವಂಥ ರಿಕ್ಯಾಪ್ಚರ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ನಂತರ ರಿಕ್ವಿಸ್ಟ್ ಓಟಿಪಿ ಮೇಲೆ ಕ್ಲಿಕ್ ಮಾಡಿ.

ಆಗ ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತೆ, ಆ ಓಟಿಪಿ ನ ಎಂಟ್ರಿ ಮಾಡಿ. ವೆರಿಫೈ ಓಟಿಪಿ ಮೇಲೆ ಕ್ಲಿಕ್ ಮಾಡಿ. ನಂತರ ಡು ಯು ಹ್ಯಾವ್ ಆಧಾರ್ ಕಾರ್ಡ್? ಅಂತ ಕೇಳುತ್ತೆ, ಕೆಳಗೆ ಎಸ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಇದಾದ ಮೇಲೆ ವೆಂಡರ್ ಕ್ಯಾಟೆಗೆರಿಸ್ ಅಂದ್ರೆ ಮಾರಾಟಗಾರರ ವರ್ಗಗಳಲ್ಲಿ ನಿಮ್ಮ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಮತ್ತು ವೆಂಡರ್ ಡೀಟೇಲ್ಸ್ ಅಂದ್ರೆ ಮಾರಾಟಗಾರರ ವಿವರಗಳಲ್ಲಿ ಸರ್ವೇ ರೆಫರೆನ್ಸ್ ನಂಬರ್ ಅನ್ನು ಎಂಟ್ರಿ ಮಾಡಿ. ನಂತರ ನೆಕ್ಸ್ಟ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಕೊನೆಗೆ ಅಪ್ಲಿಕೇಶನ್ ತುಂಬಿ ಡಾಕ್ಯುಮೆಂಟ್ಸ್ ಅನ್ನು ಅಪ್ಲೋಡ್ ಮಾಡಿ. ನಂತರ ಅಪ್ಲಿಕೇಶನ್ ಸಬ್ ಮೀಟ್ ಮಾಡಿ. ಪೀ.ಏಮ್ ಸ್ವನಿದಿ ಯೋಜನೆ ಅಪ್ಲಿಕೇಶನ್ ಹಾಕಲು ಅಗತ್ಯ ಇರುವ ಪ್ರಮುಖ ದಾಖಲೆಗಳನ್ನು ನೋಡುವುದಾದರೆ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ವಾಹನ ಚಲಾ ವಣೆ ಪರವಾನಗಿ ಪ್ರಮಾಣ ಪತ್ರ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಿಗೋ ಜಾಬ್ ಕಾರ್ಡ್, ಪಾನ್ ಕಾರ್ಡ್. ಇವಿಷ್ಟೂ ದಾಖಲೆಗಳು ಇದ್ದರೆ ಇಂದೇ ನಿಮ್ಮ ಹೆಸರನ್ನು ನೊಂದಾಯಿಸಿ ಅದರ ಸಂಪೂರ್ಣ ಲಾಭ ಪಡೆಯಿರಿ. ಶುಭದಿನ.

Leave a Reply

Your email address will not be published. Required fields are marked *