ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ದೇಹದ ಆರೋಗ್ಯಕ್ಕೆ ವಿಟಮಿನ್ ‘ಡಿ’ ಹೇಗೆ ಸಹಾಯ ಮಾಡುತ್ತದೆ ಎಂದು ತಿಳಿದುಕೊಳ್ಳೋಣ. ಮನುಷ್ಯನ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲಸವನ್ನು ವಿಟಮಿನ್ ‘ಡಿ’ ಮಾಡುತ್ತದೆ. ವಿಟಮಿನ್ ‘ಡಿ’ ಕೊರತೆಯಿಂದ ಅಧಿಕ ತೂಕ, ಒತ್ತಡ ಸೇರಿದಂತೆ ಇನ್ನಿತರ ಮಾನಸಿಕ, ದೈಹಿಕ ತೊಂದರೆಗಳು ಬಾಧಿಸುವ ಸಾಧ್ಯತೆಗಳು ಇರುತ್ತವೆ. ವಿಟಮಿನ್ ‘ಡಿ’ ಅನ್ನು ನಮ್ಮ ದೇಹಕ್ಕೆ ಒದಗಿಸುವ ಬಹು ದೊಡ್ಡ ಮೂಲ ಅಂದ್ರೆ ಸೂರ್ಯ. ಸೂರ್ಯನ ಬೆಳಕಿನಿಂದ ನಮ್ಮ ದೇಹದಲ್ಲಿ ವಿಟಮಿನ್ ‘ಡಿ’ ಉತ್ಪತ್ತಿ ಆಗುತ್ತೆ. ವಿಟಮಿನ್ ‘ಡಿ’ ಯು ದೇಹದ ಮೂಳೆಗಳನ್ನು ಸುಧಾರಿಸುತ್ತದೆ. ಜೊತೆಗೆ ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ. ಹೃದ್ರೋಗ, ಅಧಿಕ ರಕ್ತದೊತ್ತಡ, ಮಧುಮೇಹ, ರೋಗ ನಿರೋಧಕ ಶಕ್ತಿಯ ಕೊರತೆ, ಬೇಗ ವಯಸ್ಸಾಗುವಿಕೆಯಿಂದಲೂ ವಿಟಮಿನ್ ‘ಡಿ’ ಅಂಶ ನಮ್ಮನ್ನು ರಕ್ಷಿಸುತ್ತದೆ.

ಇದಲ್ಲದೇ ಇದರ ಕೊರತೆಯಿಂದ ತಕ್ಷಣವೇ ಯಾವುದೇ ರೋಗ ಲಕ್ಷಣಗಳು ಕಂಡು ಬರುವುದಿಲ್ಲವಾದರು ನಿಧಾನವಾಗಿ ಸ್ನಾಯು ಸೆಳೆತ, ಬೆನ್ನು ನೋವು, ಆಯಾಸ, ಖಿನ್ನತೆ, ನಿದ್ರಾ ಹೀನತೆ ಮತ್ತು ಅಸ್ವಸ್ಥತೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ಸಮಸ್ಯೆಯಿಂದ ಹೊರ ಬರುವುದಕ್ಕೆ ನಾವು ಪ್ರತಿನಿತ್ಯ ತಪ್ಪಿದಲ್ಲಿ ವಾರದಲ್ಲಿ ಎರಡರಿಂದ ಮೂರು ಬಾರಿ ಆದರೂ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಬಿಸಿಲಿಗೆ ಮೈ ಒಡ್ಡುವ ಕೆಲಸವನ್ನು ಮಾಡಬೇಕು. ಹಾಗೆ ಆಹಾರಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಕಿತ್ತಳೆ, ಮೊಸರು, ಬೆಳ್ಳುಳ್ಳಿ, ಚಾಕೋಲೇಟ್, ಕಪ್ಪು ಸಾಸಿವೆ, ಅರಿಶಿನ, ಅಣಬೆ ಮೊದಲಾದವುಗಳ ಬಳಕೆಯೂ ಕೂಡ ಉತ್ತಮ. ಇನ್ನೂ ನಮ್ಮ ದೇಶದಲ್ಲಿ ಬಹಳ ಹಿಂದೆಯೇ ಋಷಿ ಮುನಿಗಳು ಸೂರ್ಯನ ಬಿಸಿಲಿನಿಂದ, ಎಳ್ಳು ಸೇವನೆಯಿಂದ ವಿಟಮಿನ್ ‘ಡಿ’ ಅಂಶವನ್ನು ಹೆಚ್ಚಿಸಿಕೊಳ್ಳಬಹುದು ಎನ್ನುವುದನ್ನು ಕಂಡುಕೊಂಡಿದ್ದರು.

ಎಳ್ಳು ಬೀಜಗಳು ಅತ್ಯಧಿಕ ಕ್ಯಾಲ್ಸಿಯಂ ಪ್ರಮಾಣವನ್ನು ಹೊಂದಿದ್ದು, 100 ಗ್ರಾಂ ಗೆ 975 ಮಿಲಿ ಗ್ರಾಂ ಅಷ್ಟು ಕ್ಯಾಲ್ಸಿಯಂ ಪ್ರಮಾಣವನ್ನು ಒದಗಿಸುತ್ತದೆ. ನಮ್ಮ ದೇಹ ಒಂದು ವರ್ಷದ ವರೆಗೆ ಅಗತ್ಯವಾದ ವಿಟಮಿನ್ ‘ಡಿ’ ಅನ್ನು ಸಂಗ್ರಹಿಸಿ ಇಡುವ ಸಾಮರ್ಥ್ಯವನ್ನು ಹೊಂದಿದೆ. ಚಳಿಗಾಲದ ಅಂತ್ಯ ಮತ್ತು ಬೇಸಿಗೆ ಕಾಲದ ಆರಂಭದಲ್ಲಿ ಸೂರ್ಯನ ಬಿಸಿಲು ಉತ್ತಮವಾಗಿ ಇರುತ್ತೆ, ಈ ಕಾರಣದಿಂದ ಬಹಳ ಹಿಂದೆಯೇ ಋಷಿ ಮುನಿಗಳು ಗಾಳಿ ಪಾಠಗಳನ್ನು ಹಾರಿಸುವ ಹಬ್ಬಗಳನ್ನು ಆರಂಭಿಸಿದರು. ಇಂತಹ ಹಬ್ಬಗಳ ಬಗ್ಗೆ ಅವರು ಎಷ್ಟು ತಿಳುವಳಿಕೆ ಉಳ್ಳವರು ಆಗಿದ್ರು ಎಂಬುದನ್ನು ನಮಗೆ ತಿಳಿಸುತ್ತದೆ. ಹಾಗೆ ಹಬ್ಬದ ಸಂದರ್ಭದಲ್ಲಿ ತಮ್ಮ ಮಕ್ಕಳಿಗೆ ಎಳ್ಳಿನ ಲಡ್ಡುಗಳನ್ನು ತಿನ್ನಿಸುವುದರ ಮೂಲಕ ಅವರಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವ ಕೆಲಸವನ್ನು ಮಾಡ್ತಾ ಇದ್ರು. ನೊಡಿದ್ರಲ್ವ ನಮ್ಮ ಪೂರ್ವಜರು ಎಷ್ಟು ಬುದ್ಧಿವಂತರು ಆಗಿದ್ರು ಅಂತ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

Leave a Reply

Your email address will not be published. Required fields are marked *