ನಮಸ್ತೆ ಪ್ರಿಯ ಓದುಗರೇ, ಕಲ್ಲಂಗಡಿ ಹಣ್ಣನ್ನು ತಿನ್ನುವುದು ಒಂಥರಾ ಖುಷಿ, ಏಕೆಂದರೆ ಹಣ್ಣಿನ ರುಚಿಯ ಜೊತೆಗೆ ಸಿಹಿ ನೀರು ಕುಡಿದ ಅನುಭವ ನಮಗೆ ಆಗುತ್ತೆ. ಬೇಸಿಗೆಯಲ್ಲಿ ಇದು ಅತಿ ಹೆಚ್ಚು ಬಳಸಲ್ಪಡುವ ಹಾಗೂ ಅತಿ ಹೆಚ್ಚು ಮಾರಾಟ ಆಗುವಂತ ಹಣ್ಣು. ಸಾಮಾನ್ಯವಾಗಿ ನಾವು ಕಲ್ಲಗಂಡಿ ಹಣ್ಣನ್ನು ತಿಂದು ಬೀಜವನ್ನು ಬಿಸಾಡಿ ಬಿಡುತ್ತೇವೆ. ಆದರೆ ಈ ಬೀಜಗಳಿಂದ ಏನೇನು ಉಪಯೋಗಗಳು ಇವೆ ಎಂದು ಇಂದಿನ ಲೇಖನದಲ್ಲಿ ತಿಳಿಯೋಣ. ಈ ಬೀಜಗಳಲ್ಲಿ ಇರುವ ಉತ್ತಮ ಪ್ರಮಾಣದ ಮಗ್ನೆಸಿಯಂ ಹೃದಯವು ಸಹಜವಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ ಹಾಗೂ ಈ ಬೀಜದಲ್ಲಿ ಇರುವ ಮಗ್ನೆಸಿಯಮ್ ಉತ್ತಮ ಪ್ರಮಾಣದಲ್ಲಿ ಇರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲಸವನ್ನು ಮಾಡುತ್ತದೆ. ಕಲ್ಲಂಗಡಿ ಹಣ್ಣಿನ ಬೀಜಗಳು ಮುಖದ ಮೇಲಿನ ಮೊಡವೆಗಳಿಗೆ ರಾಮಬಾಣ.
ಹೌದು, ಕಲ್ಲಂಗಡಿ ಹಣ್ಣಿನ ಬೀಜಗಳಿಂದ ಎಣ್ಣೆಯನ್ನು ತೆಗೆಯಬೇಕು, ಇದನ್ನು ಮುಖಕ್ಕೆ ಹಚ್ಚಿಕೊಂಡರೆ ಮೊಡವೆಗಳು, ಸೂಕ್ಷ್ಮ ರಂಧ್ರದಲ್ಲಿ ಇರುವ ಕೊಳೆ ಹಾಗೂ ಸತ್ತ ಜೀವಸತ್ವಗಳನ್ನು ನಿವಾರಿಸಲು ನೆರವಾಗುತ್ತದೆ. ಕಲ್ಲಂಗಡಿ ಹಣ್ಣಿನ ಬೀಜಗಳಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಗಳು ದೇಹದ ವಿಷಕಾರಿ ಅಂಶಗಳನ್ನು ಹೊರ ಹಾಕಲು ನೆರವಾಗುತ್ತದೆ. ಹಾಗೂ ಕಲ್ಲಂಗಡಿ ಬೀಜಗಳು ನಿಮ್ಮ ಜ್ಞಾಪಕ ಶಕ್ತಿಯನ್ನು ವೃದ್ಧಿಸುತ್ತದೆ. ಇತರ ಆರೋಗ್ಯ ಸಮಸ್ಯೆಗಳಿಂದ ದೇಹವು ಬೇಗ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಇನ್ನೂ ಕಲ್ಲಂಗಡಿ ಹಣ್ಣಿನ ಬೀಜಗಳು ನಮ್ಮ ದೇಹದ ಮೂಳೆಗಳು ಬಲಿಷ್ಠವಾಗಿ ಸದೃಢವಾಗಿ ಇರಲು ಸಹಾಯ ಮಾಡುತ್ತದೆ. ಕಲ್ಲಂಗಡಿ ಹಣ್ಣಿನ ಬೀಜಗಳಲ್ಲಿ ತಾಮ್ರ, ಮಾಗ್ನೆಸಿಯಂ ಮತ್ತು ಇತರ ಉತ್ತಮವಾದ ಪೌಷ್ಟಿಕಾಂಶಗಳು ಹಾಗೂ ಖನಿಜಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಈ ಖನಿಜಾಂಶಗಳು ಇತರ ಸೂಕ್ಷ್ಮ ಪೋಷಕಾಂಶಗಳ ಜೊತೆ ಸೇರಿ ನಮ್ಮ ಮೂಳೆಗಳನ್ನು ಆರೋಗ್ಯವಾಗಿ ಇಡಲು ಸಹಾಯವಾಗುತ್ತದೆ.
ಈ ಕಲ್ಲಂಗಡಿ ಹಣ್ಣಿನ ಬೀಜಗಳು ನಮ್ಮ ಎಲುಬನ್ನು ಬಲ ಪಡಿಸುವುದರೊಂದಿಗೆ ಮೂಳೆಯ ಸಾಂದ್ರತೆಯನ್ನು ಹೆಚ್ಚು ಮಾಡಲು ಸಹಾಯ ಮಾಡುತ್ತದೆ. ಇನ್ನೂ ಈ ಕಲ್ಲಂಗಡಿ ಹಣ್ಣಿನ ಬೀಜಗಳು ನಾವು ಯಾವ ರೀತಿ ಉಪಯೋಗ ಮಾಡಬೇಕು ಎಂದು ನೋಡೋಣ ಸ್ನೇಹಿತರೆ. ಕಲ್ಲಂಗಡಿ ಹಣ್ಣಿನ ಬೀಜಗಳನ್ನು ಸಂಗ್ರಹಿಸಿ ಅವನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ, ಒಂದು ಬಾಣಲೆಯಲ್ಲಿ ಅವುಗಳನ್ನು ಚಿಕ್ಕ ಉರಿಯಲ್ಲಿ ಹುರಿದು ಅದನ್ನು ಪುಡಿ ಮಾಡಿ ಇಟ್ಟುಕೊಂಡು ಗಾಳಿ ಆಡದ ಒಂದು ಡಬ್ಬಿಯಲ್ಲಿ ಇಟ್ಟುಕೊಂಡು ಹಲವಾರು ದಿನಗಳ ಕಾಲ ಬಳಸಬಹುದು. ಇದನ್ನು ನೀವು ಸಂಜೆ ನಿಮ್ಮ ಸಲಾಡ್ ಅಥವಾ ಯಾವುದಾದರೂ ಸ್ನಾಕ್ಸ್ ಅಲ್ಲಿ ಹಾಕಿಕೊಂಡು ಸೇವನೆ ಮಾಡಬಹುದು. ನೊಡಿದ್ರಲ್ವಾ ಸ್ನೇಹಿತರೆ ನಾವು ಕಲ್ಲಂಗಡಿ ಹಣ್ಣನ್ನು ತಿಂದು ಬೀಜಗಳನ್ನು ಎಸೆಯುವ ಬದಲು ಈ ರೀತಿ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.