ನಮಸ್ತೆ ಪ್ರಿಯ ಓದುಗರೇ, ಪೋರ್ಟ್ ಪಾರ್ಟಮ್ ಡಿಪ್ರೆಶನ್ ಅಂದ್ರೆ ಹೆರಿಗೆ ನಂತರದ ಖಿನ್ನತೆ. ಇದೀಗ ಹೆಚ್ಚು ಸದ್ದು ಮಾಡ್ತಾ ಇದೇ. ಹಾಗಂದ್ರೆ ಏನು ಎಂದು ನಮ್ಮಲ್ಲಿ ಹಲವರಿಗೆ ಗೊತ್ತೇ ಇಲ್ಲ. ಪೋಸ್ಟ್ ಪಾರ್ಟಮ್ ಡಿಪ್ರೆಶನ್ ಅಂದ್ರೆ ಏನು? ಅದರಿಂದ ಆಗೋ ತೊಂದರೆ ಏನು? ಈ ಸಮಸ್ಯೆಗೆ ಒಳಗಾಗುವರು ಯಾರು? ಈ ಸಮಸ್ಯೆಯಿಂದ ಏನೆಲ್ಲಾ ಅನಾಹುತ ಸಂಭವಿಸುತ್ತದೆ ಎಂದು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಪಿಪಿಡಿ ಅಥವ ಪೋಸ್ಟ್ ಪಾರ್ಟಮ್ ಡಿಪ್ರೆಶನ್ ಕನ್ನಡದಲ್ಲಿ ಹೇಳುವುದಾದರೆ ಹೆರಿಗೆ ನಂತರದ ಖಿನ್ನತೆ ಅನ್ನುವುದು ಮಾನಸಿಕ ಹಾಗೂ ದೈಹಿಕ ನಡವಳಿಕೆಗಳಲ್ಲಿ ಆಗುವಂತಹ ವ್ಯತ್ಯಾಸ. ಇದು ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ ಆಗಿದೆ. ಸಾವಿರಕ್ಕೆ ಒಬ್ಬರಿಗೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೆರಿಗೆ ಬಳಿಕ ಈ ಸಮಸ್ಯೆ ಕೆಲವು ಮಹಿಳೆಯರಲ್ಲಿ ಕಾಣಿಸಿಕೊಳ್ಳಬಹುದು.
ಈ ಸಮಸ್ಯೆ ಹೆರಿಗೆ ಆದ ನಾಲ್ಕು ವಾರಗಳ ಬಳಿಕ ಕಾಣಿಸಿಕೊಳ್ಳುವುದಕ್ಕೆ ಆರಂಭ ಆಗುತ್ತೆ. ಹೊಟ್ಟೆಯೊಳಗೆ ಇದ್ದ ಮಗು ಹೆರಿಗೆ ಬಳಿಕ ಮಡಿಲಿಗೆ ಬಿದ್ದಾಗ ತಾಯಂದಿರು ಅನುಭವಿಸುವ ಖುಷಿ ಅಷ್ಟಿಷ್ಟಲ್ಲ. ಆದ್ರೆ ಕೆಲವು ಪ್ರಸಂಗಗಳಲ್ಲಿ ತಾಯಿಯಾದ ಬಳಿಕ ತನ್ನ ಮಗುವಿನ ಕಾಳಜಿ ವಹಿಸುವ ಭಾವನೆ ಹುಟ್ಟುವುದಿಲ್ಲ. ದಿನ ಪೂರ್ತಿ ಕಿರಿ ಕಿರಿ, ಮಗುವಿನ ಕಾಳಜಿ ವಹಿಸದೇ ಇರುವುದು, ದಿನ ಪೂರ್ತಿ ಮಂಕಾಗಿ ಇರುವುದು. ಇದ್ದಕ್ಕಿದ್ದಂತೆ ಅಳುವುದು, ಮೊದಲಾದ ಮಾನಸಿಕ ಕಿರಿ ಕಿರಿ ಅನುಭವಿಸುತ್ತಾರೆ. ಈ ಸಂದರ್ಭದಲ್ಲಿ ಕೆಲವೊಮ್ಮೆ ವಿನಾ ಕಾರಣ ದುಃಖ ಪಡುವುದು, ಇನ್ನೂ ಕೆಲವೊಮ್ಮೆ ಸಂತಸದಿಂದ ಇರುವುದು ಕಂಡು ಬರುತ್ತದೆ. ಹಸಿವು ನಿದ್ರೆ ಕಡಿಮೆ ಆಗುತ್ತೆ. ಇದು ಹೆರಿಗೆಯ ಕೆಲ ತಿಂಗಳುಗಳವರೆಗೂ ಕಾಡಬಹದು. ಇದನ್ನು ಆಡು ಭಾಷೆಯಲ್ಲಿ ಬಾಣಂತಿ ಸನ್ನೆ ಎಂತಲೋ ಕರೀತಾರೆ. ಹೆರಿಗೆಯ ನಂತರ ಮನಸನ್ನು ಸಮ ಸ್ಥಿತಿಯಲ್ಲಿ ಇಡುವಲ್ಲಿ ವಿಫಲರಾಗಿ ಈ ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ. ಇದು ಕೆಲವು ಬಾಣಂತಿಯರಿಗೆ ಕಾಣಿಸಿಕೊಳ್ಳುವ ಖಾಯಿಲೆ. ಇಂತಹ ಸಮಸ್ಯೆ ಇರುವವರಿಗೆ ಮನೋ ವೈದ್ಯರ ಸಲಹೆ ಜೊತೆಗೆ ಚಿಕಿತ್ಸೆ ನೀಡಬೇಕಾಗುತ್ತದೆ.
ಬಾಣಂತಿ ಮತ್ತು ಕುಟುಂಬದವರಿಗೆ ಆಪ್ತ ಸಮಾಲೋಚನೆ ಅವಶ್ಯಕತೆ ಬೀಳಬಹುದು. ಯಾಕಂದ್ರೆ ಬಾಣಂತಿ ಆರೈಕೆಯಲ್ಲಿ ಕುಟುಂಬದ ಪಾತ್ರ ಬಹಳ ದೊಡ್ಡದು. ಆಕೆಯ ಪರಿಸ್ಥಿತಿ ಅರಿತುಕೊಂಡು ಆಕೆಯಲ್ಲಿ ಆತ್ಮ ವಿಶ್ವಾಸ ತುಂಬಿಸಿ. ಆಕೆಯಲ್ಲಿ ಸಮತೋಲನ ತರಲು ಪ್ರಯತ್ನ ಮಾಡಿ. ಆದಷ್ಟು ಆಕೆಯೊಂದಿಗೆ ಇದ್ದು, ಆಕೆ ಖಿನ್ನತೆಗೆ ಬಾರದಂತೆ ಎಚ್ಚರಿಕೆ ವಹಿಸಬೇಕು. ಆಕೆ ಮಗುವಿನ ಕಾಳಜಿ ವಹಿಸುವಂತೆ ಆಕೆಯ ಮನಸ್ಥಿತಿಯನ್ನು ಸಿದ್ಧಗೊಳಿಸಲೂ ಪ್ರಯತ್ನ ಮಾಡಬೇಕು. ತಾಯಿ ಮತ್ತು ಮಗುವಿನ ಭಾಂದವ್ಯ ಹೆಚ್ಚಿಸುವಂತೆ ಕುಟುಂಬ ವರ್ಗ ಕೆಲಸವನ್ನು ಮಾಡಬೇಕು. ಬಾಣಂತಿಯನ್ನೂ ಖಿನ್ನತೆಗೆ ಜಾರದಂತೆ ಜೀವನದಲ್ಲಿ ಬೇಸರ ಬಾರದಂತೆ ನೋಡಿಕೊಳ್ಳುವುದೇ ಈ ಸಮಸ್ಯೆಗೆ ಇರುವಂತಹ ಏಕೈಕ ಪರಿಹಾರ. ಹೀಗೆ ಮಾಡಿದ್ದಲ್ಲಿ ಬಾಣಂತಿಗೆ ಮಗುವಿನ ಮೇಲೆ ಕಾಳಜಿ ಹುಟ್ಟುವುದು ಸಾಧ್ಯ ಆಗುತ್ತದೆ. ಪೋಸ್ಟ್ ಪಾರ್ಟಮ್ ಡಿಪ್ರೆಶನ್ ಗೇ ಬಾಣಂತಿ ಒಳಗಾಗುವುದನ್ನು ತಡೆಯಬಹುದು. ನೋಡಿದ್ರಲ್ವ ಸ್ನೇಹಿತರೆ ಬಾಣಂತಿ ನಂತರದ ಅವಧಿಯಲ್ಲಿ ಹೇಗೆ ಆಕೆಯನ್ನು ದೈಹಿಕ ಮತ್ತು ಮಾನಸಿಕವಾಗಿ ಬಲಗೊಳಿಸಿ, ಸದೃಢಗೊಳಿಸಬೇಕು ಎಂದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.