ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ನಾವು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ. ಪ್ರಾಕೃತಿಕ ಅಪಾಯಗಳಿಂದ ರೈತರು ಬೆಳೆದ ಬೆಳೆಗೆ ರಕ್ಷಣೆ ಒದಗಿಸುವ ಸಲುವಾಗಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಹಾಗೆ ಕೃಷಿ ವಲಯದಲ್ಲಿ ಉತ್ಪಾದನೆಯನ್ನು ಬೆಂಬಲಿಸುವ ಕೆಲಸವನ್ನು ಈ ಯೋಜನೆ ಹೊಂದಿದೆ. ಅನಿರೀಕ್ಷಿತ ಘಟನೆಗಳಿಂದ ಅಥವಾ ಬೆಳೆ ಹಾನಿಯಂತ ಸಂಕಷ್ಟಕ್ಕೆ ತುತ್ತಾದ ರೈತರನ್ನು ಆರ್ಥಿಕವಾಗಿ ಶಕ್ತಗೊಳಿಸುವ ನಿಟ್ಟಿನಲ್ಲಿ ಈ ಯೋಜನೆ ಪ್ರಾಮುಖ್ಯತೆ ಪಡೆದಿದೆ. ಹಾಗೆಯೇ ಕೃಷಿಯಲ್ಲಿ ನೂತನ ಮತ್ತು ಆಧುನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ರೈತರನ್ನು ಉತ್ತೇಜಿಸಲು ಈ ಯೋಜನೆ ನೆರವಾಗುತ್ತಾರೆ. ಈ ಯೋಜನೆ ರೈತರಿಗೆ ಆಹಾರ ಭದ್ರತೆ, ಬೆಳೆ ವೈವಿದ್ಯಿಕರಣ, ಕೃಷಿ ಕ್ಷೇತ್ರದ ಸಂಪೂರ್ಣ ಬೆಳವಣಿಗೆ ರೈತರನ್ನು ಉತ್ಪಾದನಾ ಅಪಾಯಗಳಿಂದ ತಪ್ಪಿಸುವ ಉದ್ದೇಶದಿಂದ ಕೆಲಸವನ್ನು ಈ ಯೋಜನೆ ಮಾಡಲಿದೆ.
ಅಭಾವ, ಋತುಮಾನದ ಪ್ರತಿಕೂಲ ಪರಿಸ್ಥಿತಿ ಸಂದರ್ಭದಲ್ಲಿ ರೈತರು ಶೇಕಡಾ 25% ರಷ್ಟು ವಿಮೆ ಮತ್ತು ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ. ರೈತರು ಬಿತ್ತನೆ ಇಂದ ಹಿಡಿದು ಅದಕ್ಕಾಗಿ ವ್ಯಯಿಸಿದ ಎಲ್ಲ ಸಂದರ್ಭಗಳಿಗೆ ಅನ್ವಯವಾಗುವಂತೆ ಈ ಬಿಮಾ ಮೊತ್ತ ಅನ್ವಯವಾಗುತ್ತದೆ. ಈ ಯೋಜನೆಯಲ್ಲಿ ನೊಂದಾಯಿಸಿ ಕೊಳ್ಳಲು www.pmfby.gov.in ವೆಬ್ಸೈಟ್ ಗೆ ಹೋಗಿ. ನಂತರ ರಿಜಿಸ್ಟರ್ ಫಾರ್ ನ್ಯೂ ಫಾರ್ಮರ್ ಮೇಲೆ ಕ್ಲಿಕ್ ಮಾಡಿ. ಅದಾದ ಮೇಲೆ ಫಾರ್ಮರ್ ಡೀಟೇಲ್ಸ್ ಅಥವಾ ರೈತರ ವಿವರಗಳಲ್ಲಿ ತಮ್ಮ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ. ನಂತರ ರೆಸಡೆನ್ಸಿ ಡೀಟೇಲ್ಸ್ ಅಥವಾ ಕನ್ನಡದಲ್ಲಿ ವಸತಿ ವಿವರಗಳಲ್ಲಿ ನಿಮ್ಮ ವಾಸಸ್ಥಾನ ದ ವಿವರಗಳನ್ನು ಎಂಟ್ರಿ ಮಾಡಿ, ಇದಾದ ನಂತರ ಫಾರ್ಮರ್ ಐಡಿ ಹಾಗೆ ಅಕೌಂಟ್ ಡೀಟೇಲ್ಸ್ ಅಲ್ಲಿ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ, ಅದಾದ ನಂತರ ಕಾಪ್ಟರ್ ಕೋಡ್ ಅನ್ನು ಎಂಟ್ರಿ ಮಾಡಿ ನಂತರ ಕೆಳಗಿರುವ ಕ್ರಿಯೇಟ್ ಯೂಸರ್ ಮೇಲೆ ಕ್ಲಿಕ್ ಮಾಡಿ.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಪ್ರಯೋಜನಗಳ ಬಗ್ಗೆ ಹೇಳುವುದಾದರೆ, ಈ ಯೋಜನೆಯಲ್ಲಿ ವಿಮೆಯ ಕಂತಿಗೆ ರೈತರ ಪಾವತಿ ಕಡಿಮೆ ಆಗಿದೆ. ಅಂದ್ರೆ ಮುಂಗಾರು ಬೆಳೆಗಳಿಗೆ 2% ಹಿಂಗಾರು ಬೆಳೆಗಳಿಗೆ 1.5% ಹಾಗೂ ವಾರ್ಷಿಕ ಮತ್ತು ವಾಣಿಜ್ಯ ಬೆಳೆಗಳಿಗೆ 5% ಆಗಿದೆ. ಆಲಿಕಲ್ಲು ಮಳೆ, ಪ್ರವಾಹ, ಮತ್ತು ಭೂಕುಸಿತ ದಂತಹ ಸ್ಥಳೀಯ ಅಪಾಯಗಳ ಸಂದರ್ಭದಲ್ಲಿ ನಷ್ಟವನ್ನು ಪ್ರತ್ಯೇಕವಾಗಿ ನಿರ್ಣಯಿಸಲು ಅವಕಾಶವನ್ನು ಇದು ನೀಡಿದೆ. ಕ್ಲೈಮ್ ಗಳ ಆರಂಭಿಕ ವಹಿವಾಟಿನಲ್ಲಿ ಖಚಿತ ಪಡಿಸಿಕೊಳ್ಳಲು ಬೆಳೆ ನಷ್ಟದ ತ್ವರಿತ ಅಂದಾಜು ಸಲುವಾಗಿ ರೆಮೊಟ್ ಸೆನ್ಸಿಂಗ್ ತಂತ್ರಜ್ಞಾನ ಹಾಗೆ ಸ್ಮಾರ್ಟ್ ಫೋನ್ ಗಳು ಮತ್ತು ಡ್ರೋನ್ ಗಳ ಬಳಕೆ ಮಾಡಲಾಗುತ್ತದೆ. ನೊಡಿದ್ರಲ್ವಾ ಸ್ನೇಹಿತರೆ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಬಗ್ಗೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.