ನಮಸ್ತೇ ಪ್ರಿಯ ಸ್ನೇಹಿತರೆ ಈಗಿನ ಆಧುನಿಕ ಕಾಲದಲ್ಲಿ ಉತ್ತಮವಾದ ಜೀವನವನ್ನು ನಡೆಸಲು ಬಹಳ ಕಷ್ಟವಾಗಿದೆ. ಕೆಲಸದ ಒತ್ತಡ ಟೆನ್ಷನ್ ಖಿನ್ನತೆ ಇಂದ ಜೀವನವೂ ಹಾಗೆ ಆರೋಗ್ಯ ಆಹಾರದ ಮೇಲೆ ಕಾಳಜಿ ಇರುವುದಿಲ್ಲ. ಅದರಲ್ಲೂ ಸಸ್ಯಾಹಾರಿ ಜೀವಿಗಳಿಗೆ ಬಹಳ ಕಷ್ಟ ಆಗುತ್ತಿದೆ. ಏಕೆಂದ್ರೆ ಈಗಿನ ಆಹಾರ ಪದ್ಧತಿಯಲ್ಲಿ ಕಲಬೆರಕೆ ಅಧಿಕವಾಗಿದೆ. ಪ್ರತಿ ತುತ್ತು ಭಯಪಟ್ಟು ತಿನ್ನಬೇಕಾದ ಪರಿಸ್ಥಿತಿ ಬಂದಿದೆ ಹಾಗೂ ಪ್ರತಿ ತುತ್ತಿನಲ್ಲಿ ಪೌಷ್ಟಿಕಾಂಶ ಇದೆಯೋ ಇಲ್ಲವೋ ಅಂತ ಹುಡುಕಿ ಪ್ರತಿ ತುತ್ತು ನುಂಗ ಬೇಕಾದ ಹಂತಕ್ಕೆ ನಾವು ಜಾರಿತ್ತಿದ್ದೇವೆ. ಇನ್ನೂ ಪ್ರತಿನಿತ್ಯವೂ ಸೊಪ್ಪು ಹಣ್ಣುಗಳನ್ನು ಮಾತ್ರ ಸೇವನೆ ಮಾಡುವುದಲ್ಲದೆ ಅನೇಕ ಬಗೆಯ ಕಾಳುಗಳನ್ನು ನೀರಿನಲ್ಲಿ ನೆನೆಸಿ ಮೊಳಕೆ ತೆಗೆದು ತಿನ್ನಬೇಕು. ಹೌದು ನಮ್ಮ ಸಂಶೋಧನೆ ಕಾರಕರು ಹೀಗೆ ತಿಳಿಸಿದ್ದಾರೆ ಮೊಳಕೆ ಬರಿಸಿದ ಕಾಳುಗಳನ್ನು ತಿನ್ನುವುದರಿಂದ ಕಲ್ಪನೆಗೂ ಮೀರಿದ ಲಾಭಗಳು ಸಿಗುತ್ತವೆ ಅಂತ ಸಾಬೀತು ಪಡಿಸಿದ್ದಾರೆ. ಮೊಳಕೆ ಬಂದಿರುವ ಕಾಳುಗಳಲ್ಲಿ ಅಧಿಕವಾದ ಪೌಷ್ಟಿಕತೆ ಪ್ರೊಟೀನ್ ಅಡಗಿದೆ.
ಮೊಳಕೆ ಬಂದ ಕಾಳು ಗಳನ್ನು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಅಗತ್ಯವಾದ ಪ್ರೊಟೀನ್ ಖನಿಜಗಳು ಲವಣಗಳು ಕ್ಯಾಲ್ಷಿಯಂ ಪೊಟ್ಯಾಶಿಯಂ ಎಲ್ಲವೂ ಆಹಾರದ ಮೂಲಕ ಸಿಗುತ್ತದೆ. ಮೊಳಕೆ ಅನ್ನು ನೀವು ಯಾವುದಾದರೂ ಕಾಳುಗಳವುಗಳನ್ನು ಕಟ್ಟಬಹುದು. ಇನ್ನೂ ಮೊಳಕೆ ಬಂದ ಕಾಳುಗಳನ್ನು ಯಾವ ಸಮಯದಲ್ಲಿ ಸೇವನೆ ಮಾಡುವುದು ಸೂಕ್ತ ಅಂತ ಹೇಳುವುದಾದರೆ, ಬೆಳಿಗ್ಗೆ ಉಪಹಾರದ ಮುನ್ನವೇ ಇವುಗಳನ್ನು ಸೇವನೆ ಮಾಡಿದರೆ ಉತ್ತಮ. ಇನ್ನೂ ಈ ಮೊಳಕೆ ಕಟ್ಟಿದ ಕಾಳುಗಳುನ್ನು ಏಕೆ ಸೇವನೆ ಮಾಡಬೇಕು ಅಂತ ವೈದ್ಯರು ಸಲಹೆಯನ್ನು ನೀಡುತ್ತಾರೆ ಅಂದರೆ, ದೇಹಕ್ಕೆ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಹಾಗೂ ಸ್ನಾಯುಗಳನ್ನು ಮೂಳೆ ಮಾಂಸ ಖಂಡಗಳನ್ನು ಬಲ ಪಡಿಸುತ್ತದೆ. ಹಾಗೂ ದಷ್ಟ ಪುಷ್ಟವಾಗಿ ಬೆಳೆಯಲು ಸಹಾಯ ಮಾಡುತ್ತದೆ ಅಂತ ಇಂತಹ ಕಾಳುಗಳನ್ನು ನಾವು ಸೇವನೆ ಮಾಡುವುದು ಬಹಳ ಒಳ್ಳೆಯದು. ತೂಕವನ್ನು ಇಳಿಸಿಕೊಳ್ಳಲು ಬಯಸುವ ಜನರಿಗೆ ಇಂತಹ ಕಾಳುಗಳು ಬಹಳ ಉಪಯುಕ್ತವಾಗಿದೆ.
ಮೊಳಕೆ ಕಟ್ಟಿದ ಕಾಳುಗಳನ್ನು ತಿನ್ನುವುದರಿಂದ ದೇಹಕ್ಕೆ ವಿಟಮಿನ್ ಸಿ ಕೆ ಸಿಕ್ಕಿ ದೇಹದಲ್ಲಿ ಶಕ್ತಿಯು ದುಪ್ಪಟ್ಟು ಆಗುತ್ತದೆ. ಮತ್ತು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮತ್ತು ಚಿಕ್ಕ ಮಕ್ಕಳಿಗೆ ಮೊಳಕೆ ಕಟ್ಟಿದ ಕಾಳುಗಳನ್ನು ತಿನ್ನಿಸುವುದರಿಂದ ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ. ಕಣ್ಣಿನ ಆರೋಗ್ಯಕ್ಕೆ ಹಾಗೂ ಆರೈಕೆಗೆ ಮೊಳಕೆ ಕಟ್ಟಿದ ಕಾಳುಗಳು ಸೂಪರ್ ಫುಡ್ ಅಂತ ಹೇಳಬಹುದು. ಹಾಗೂ ಕಣ್ಣುಗಳನ್ನು ಫ್ರೀ ರಾಡಿಕಲ್ ನಿಂದ ಬಚಾವ್ ಮಾಡುತ್ತದೆ. ಹೌದು ನಾವೆಲ್ಲರೂ ಮೊಳಕೆ ಕಟ್ಟಿದ ಕಾಳುಗಳನ್ನು ಪಲ್ಯ ಮಾಡಿ ಸೇವನೆ ಮಾಡುತ್ತೇವೆ ಆದರೆ ಇವುಗಳನ್ನು ಪಲ್ಯ ಮಾಡಿ ಅಥವಾ ಬೇಯಿಸಿ ತಿನ್ನುವ ಬದಲು ಹಾಗೆ ಹಸಿಯಾಗಿ ಜಗಿದು ತಿನ್ನುವುದರಿಂದ ದೇಹಕ್ಕೆ ದುಪ್ಪಟ್ಟು ಪೌಷ್ಟಿಕತೆ ಸಿಗುತ್ತದೆ. ಈಗಿನ ಕಾಲದಲ್ಲಿ ಹಣ್ಣುಗಳಿಗೆ ತರಕಾರಿಗಳಿಗೆ ರಾಸಾಯನಿಕವನ್ನು ಸಿಂಪಡಣೆ ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಇಂತಹ ವಾತಾವರಣದಲ್ಲಿ ನಾವು ಇರುವಾಗ ಆರೋಗ್ಯದಲ್ಲಿ ಏರುಪೇರು ಆಗುವುದು ಸಹಜವಾದ ಮಾತು. ಅದಕ್ಕಾಗಿ ನಾವು ಮೊಳಕೆ ಕಟ್ಟಿದ ಕಾಳುಗಳಲ್ಲಿ ಪೌಷ್ಟಿಕತೆ ಹಾಳಾಗುವ ಮುನ್ನವೇ ಅವು ತಾಜಾ ಫ್ರೆಶ್ ಆಗಿ ಇರುವಾಗಲೇ ಸೇವನೆ ಮಾಡಬೇಕು. ನೋಡಿದ್ರಲಾ, ಮೊಳಕೆ ಕಟ್ಟಿದ ಕಾಳುಗಳನ್ನು ಸೇವನೆ ಮಾಡುವುದರಿಂದ ಏನೆಲ್ಲ ಲಾಭಗಳು ಉಂಟಾಗುತ್ತವೆ ಎಂದು ಮಾಹಿತಿ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಶುಭದಿನ.