ನಮಸ್ತೇ ಪ್ರಿಯ ಓದುಗರೇ, ಗ್ಯಾಸ್ಟ್ರಿಕ್ ಸಮಸ್ಯೆ ಅಂದರೆ ಹೊಟ್ಟೆಯಲ್ಲಿ ಗಾಳಿ ತುಂಬುವುದು. ಹೌದು ಈ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಪ್ರತಿಯೊಬ್ಬರೂ ಅನುಭವಿಸಿರುತ್ತಾರೆ. ಇದು ಬಹಳ ಮುಜುಗರವನ್ನು ತರುತ್ತದೆ. ಹೌದು ಆದರೆ ನೀವು ಕೂಡ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದರೆ ನಾವು ತಿಳಿಸುವ ಈ ಮನೆಮದ್ದನ್ನು ಪ್ರತಿದಿನವೂ ಮಾಡುತ್ತಾ ಬಂದರೆ ಖಂಡಿತವಾಗಿ ಈ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಪಾರಾಗಬಹುದು. ಹೌದು ಇದು ನಾಲ್ಕು ಜನರ ಮಧ್ಯ ಇದ್ದಾಗ ನಮಗೆ ಬಹಳ ಮುಜುಗರವನ್ನು ತಂದು ಕೊಡುತ್ತದೆ. ಈ ತೊಂದರೆಯನ್ನು ನಿವಾರಿಸಲು ಸಾಮಾನ್ಯವಾದ ಐದು ಮನೆಮದ್ದುಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ. ನಿಮಗೆ ಗ್ಯಾಸ್ಟ್ರಿಕ್ ಜೊತೆಗೆ ಹೊಟ್ಟೆ ಉರಿ ಹೊಟ್ಟೆ ಉಬ್ಬರ ಹೊಟ್ಟೆಯಲ್ಲಿ ನೋವು ಹುಳಿತೇಗು ಅಸಿಡಿಟಿ ಎಲ್ಲವೂ ತಕ್ಷಣವೇ ಮಂಗ ಮಾಯವಾಗುತ್ತದೆ. ಒಂದು ಅಧ್ಯಯನ ಪ್ರಕಾರ, 70% ಜನರು ಈ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅಂತ ತಿಳಿಸು ಬಂದಿದೆ. ಹಾಗೂ ಈ ಸಮಸ್ಯೆಯನ್ನು ಪ್ರತಿಯೊಬ್ಬರೂ ಎದುರಿಸುತ್ತಾರೆ. ಹಾಗೂ ಇದು ಸರ್ವೇ ಸಾಮಾನ್ಯವಾದ ವ್ಯಾಧಿ ಹೇಳಿದರೆ ತಪ್ಪಾಗಲಾರದು.
ಹಾಗಾದರೆ ಇಂತಹ ಸಮಸ್ಯೆಗಳನ್ನು ಯಾವ ರೀತಿಯಾಗಿ ಮನೆಯಲ್ಲಿ ಸಿಗುವಂತಹ ಪದಾರ್ಥಗಳನ್ನು ಬಳಸಿಕೊಂಡು ಪರಿಹಾರವನ್ನು ಕಂಡುಕೊಳ್ಳಬಹುದು. ಅಂತ ತಿಳಿಸಿ ಕೊಡುತ್ತೇವೆ ಬನ್ನಿ.
ಮೊದಲಿಗೆ ಈ ಮನೆಮದ್ದು ತಯಾರಿಸಲು ಬೇಕಾಗುವ ಸಾಮಗ್ರಿಗಳು ಯಾವುವು ಅಂತ ತಿಳಿಯೋಣ ಬನ್ನಿ. ಲವಂಗ, ಸೈಂಧವ ಲವಣ, ನಿಂಬೆ ಹಣ್ಣು ಇಂಗು ಅಜವಾಯಿನ್ ಒಣಶುಂಠಿ ಬೇಕಾಗುತ್ತದೆ. ಮೊದಲಿಗೆ ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಬಿಸಿ ಮಾಡಿಕೊಳ್ಳಿ. ಬಳಿಕ ಅದರಲ್ಲಿ ಇದಕ್ಕೆ ಕಾಲು ಚಮಚದಷ್ಟು ಇಂಗು ಮತ್ತು ಚಿಟಿಕೆ ಸೈಂಧವ ಲವಣ ಹಾಕಿಕೊಳ್ಳಿ. ಸೈಂಧವ ಲವಣ ನಿಮಗೆ ಗ್ರಂಥಿ ಅಥವಾ ಆಯುರ್ವೇದದ ಅಂಗಡಿಯಲ್ಲಿ ಸಿಗುತ್ತದೆ. ನೀವು ಆನ್ಲೈನ್ ನಲ್ಲಿ ಕೂಡ ತರಿಸಿಕೊಳ್ಳಬಹುದು ಮತ್ತು ಜೊತೆಗೆ ಕಡಿಮೆ ಬೆಲೆಗೆ ಸಿಗುತ್ತದೆ. ಹಾಗೂ ಇದನ್ನು ನೀವು ಎಷ್ಟು ವರ್ಷಗಳವರೆಗೂ ಶೇಖರಣೆ ಮಾಡಿ ಇಡಬಹುದು ಮತ್ತು ಇದು ನಾವು ಅಡುಗೆಗೆ ಬಳಕೆ ಮಾಡುವ ಸಾಮಾನ್ಯವಾದ ಉಪ್ಪಿಗಿಂತ ಹೆಚ್ಚು ಆರೋಗ್ಯಕರ ಗುಣಗಳನ್ನು ಹೊಂದಿದೆ ಹಾಗೂ ಅಷ್ಟೇಆರೋಗ್ಯಕ್ಕೆ ಉತ್ತಮ ಅಂತ ಹೇಳಬಹುದು.
ಬಳಿಕ ಇದರಲ್ಲಿ ಅರ್ಧ ಟೇಬಲ್ ಸ್ಪೂನ್ ನಶ್ಟು ನಿಂಬೆ ಹಣ್ಣಿನ ರಸ ಮತ್ತು ಎರಡು ಲವಂಗವನ್ನು ಪುಡಿ ಮಾಡಿ ಹಾಕಿಕೊಳ್ಳಿ.ಈ ಎಲ್ಲ ಸಾಮಗ್ರಿಗಳನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.ಈಗ ಇದು ಸಿದ್ಧವಾಗಿದೆ ಗೆಳೆಯರೇ, ಈಗ ಇದನ್ನು ನೀವು ಯಾವಾಗ ಸೇವನೆ ಮಾಡಬೇಕು ಅಂದರೆ ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆ ಯಾವಾಗ ಇರುತ್ತದೆ ಆಗ ನೀವು ಈ ಒಂದು ಮಿಶ್ರಣವನ್ನು ಸೇವನೆ ಮಾಡಬೇಕು.ಇದರಿಂದ ನಿಮಲ್ಲಿ ಕಾಡುವ ಗ್ಯಾಸ್ಟ್ರಿಕ್ ಸಮಸ್ಯೆ ತಕ್ಷಣವೇ ನಿವಾರಣೆ ಆಗುತ್ತದೆ.ಇದು ಒಂದು ವಿಧಾನವಾಯಿತು. ಗೆಳೆಯರೇ. ಈಗ ಮತ್ತೊಂದು ವಿಧಾನವನ್ನು ತಿಳಿಸಿ ಕೊಡುತ್ತೇವೆ ಬನ್ನಿ ಒಂದು ಪಾತ್ರೆಯಲ್ಲಿ ನಾಲ್ಕು ಚಮಚದಷ್ಟು ಅಜಾವಾಯಿನ್ ಹಾಕಿಕೊಳ್ಳಿ. ಅದನ್ನು ಸ್ವಲ್ಪ ಅಂದ್ರೆ ಸ್ವಲ್ಪ ಹುರಿದುಕೊಳ್ಳಿ ಬಳಿಕ ಅದರಲ್ಲಿ ಒಂದು ಅರ್ಧ ಇಂಚು ಶುಂಠಿ ಹಾಕಿಕೊಳ್ಳಿ. ಇವೆಲ್ಲವನ್ನು ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು. ತದ ನಂತರ ಒಂದು ಬಿಸಿ ನೀರಿನ ಲೋಟದಲ್ಲಿ ಈ ಮಿಶ್ರಣವನ್ನು ಹಾಕಿ ಅದಕ್ಕೆ ಸ್ವಲ್ಪ ಸೈಂಧವ ಲವಣ ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತ್ರ ಸೇವನೆ ಮಾಡಿ. ಹೀಗೂ ಕೂಡ ಮಾಡಿದರೆ ನಿಮಗೆ ಖಂಡಿತವಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಬರುವುದಿಲ್ಲ. ಶುಭದಿನ.