ನಮಸ್ತೆ ಪ್ರಿಯ ಓದುಗರೇ, ಸಾಕಷ್ಟು ಊರಿನಲ್ಲಿ ಆದಿಶಕ್ತಿ ಜಗನ್ಮಾತೆಯು ಬೇರೆ ಬೇರೆ ಹೆಸರುಗಳಿಂದ ಪೂಜಿಸಲ್ಪಡುತ್ತಾಳೆ. ಅದ್ರಲ್ಲೂ ಭಕ್ತರ ಸಂಕಷ್ಟಗಳನ್ನು ಪರಿಹರಿಸುತ್ತಿರುವಾ ಈ ದುರ್ಗಾ ದೇವಿಯ ಮಹಿಮೆಯನ್ನು ಕಣ್ಣು ತುಂಬಿಕೊಳ್ಳಬೇಕು ಎಂದ್ರೆ ವಿದ್ಯಾ ಕಾಶಿಗೆ ಒಮ್ಮೆ ಪ್ರಯಾಣ ಬೇಳೆಸಲೇ ಬೇಕು. ಬನ್ನಿ ಇವತ್ತಿನ ಲೇಖನದಲ್ಲಿ ಬದುಕಿನಲ್ಲಿ ನೊಂದು ಬೆಂದು ತನ್ನ ಬಳಿ ಬರುವ ಭಕ್ತರನ್ನು ಕರುಣೆಯ ಕೈಗಳಿಂದ ಆಶೀರ್ವದಿಸುವ ದುರ್ಗಾ ದೇವಿಯ ಪುರಾತನವಾದ ಆಲಯವೊಂದನ್ನು ದರ್ಶನ ಮಾಡಿ ಪುನೀತರಾಗೋಣ. ವಿದ್ಯಾ ಕಾಶಿ ಎಂದೇ ಖ್ಯಾತವಾಗಿರುವ ಧಾರವಾಡದಲ್ಲಿ ದುರ್ಗಾ ದೇವಿಯ ಪುರಾತನವಾದ ಆಲಯ ಇದ್ದು, ಈ ದೇಗುಲ ಸುಮಾರು 1000 ವರ್ಷಗಳಷ್ಟು ಪುರಾತನವಾದದ್ದು ಎಂದು ಹೇಳಲಾಗುತ್ತದೆ. ಇಲ್ಲಿ ನೆಲೆಸಿರುವ ದುರ್ಗಾ ದೇವಿಯನ್ನು ಧಾರವಾಡದ ಗ್ರಾಮ ದೇವತೆ ಎಂದು ಕರೆಯಲಾಗುತ್ತದೆ. ಪ್ರಾಂಗಣ, ಗರ್ಭ ಗೃಹ, ಗೋಪುರ,ಪ್ರದಕ್ಷಿಣಾ ಪಥವನ್ನಾ ಹೊಂದಿರುವ ಈ ಆಲಯದಲ್ಲಿ ದುರ್ಗಾ ದೇವಿಯು ದಕ್ಷಿಣ ದಿಕ್ಕಿಗೆ ಮುಖ ಮಾಡಿ ಚತುರ್ಭುಜ ಧಾರಿಣಿ ಆಗಿ ಭಕ್ತರಿಗೆ ದರ್ಶನವನ್ನು ನೀಡುತ್ತಿ ದ್ದಳೆ. ಈ ಕ್ಷೇತ್ರದಲ್ಲಿ ದುರ್ಗಾ ದೇವಿಯ ಮುಂದೆ ಇರುವ ಗೋಲ ಮೂಲ ಸ್ವರೂಪ ಆಗಿದೆ. ಹೀಗಾಗಿ ಅತ್ಯಂತ ಜಾಗೃತ ಸ್ಥಳ ಆಗಿದ್ದು, ಇಲ್ಲಿಗೆ ಬಂದು ತಾಯಿಯ ಬಳಿ ಭಕ್ತರು ಏನನ್ನೇ ಬೇಡಿದರೂ ಅವು ಫಲಿಸುತ್ತದೆ ಎನ್ನಲಾಗುತ್ತದೆ. ಹೀಗಾಗಿಯೇ ನಿತ್ಯ ನೂರಾರು ಮಂದಿ ಈ ತಾಯಿಯ ದರ್ಶನ ಪಡೆದು ಕೃತಾರ್ಥರಾಗುತ್ತಾರೆ. ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಹೀಗೆ ಎಲ್ಲಾ ಧರ್ಮದವರೂ ಕೂಡ ಈ ದೇವಿಗೆ ನಡೆದುಕೊಳ್ಳುತ್ತಾರೆ. ಇಲ್ಲಿಗೆ ಬಂದು ದೇವಿಗೆ ಪ್ರಿಯವಾದ ನಿಂಬೆ ಹಣ್ಣಿನ ದೀಪವನ್ನು ಬೇಳಗುತ್ತಿವಿ ಎಂದು ಪ್ರಾರ್ಥನೆ ಮಾಡಿಕೊಂಡರೆ, ಎಷ್ಟೇ ಕಷ್ಟಕರ ಸಮಸ್ಯೆ ಇದ್ರೂ ಅವು ಪರಿಹಾರ ಆಗುತ್ತಂತೆ.
ನಿಂಬೆ ಹಣ್ಣಿನ ದೀಪವನ್ನು ಐದು, ಹನ್ನೊಂದು, ಹದಿನಾರು, ಇಪ್ಪತ್ತೊಂದು ಸಂಖ್ಯೆಗಳಲ್ಲಿ ಬೇಳಗಳಾಗುತ್ತದೆ. ಸಮಸ್ಯೆಗಳ ಪರಿಹಾರಕ್ಕೆ ಕನಿಷ್ಟ ಮೂರು ವಾರಗಳಾದರೋ ದೇವಿಗೆ ನಿಂಬೆ ಹಣ್ಣಿನ ದೀಪವನ್ನು ಬೆಳಗಬೇಕು ಎಂಬ ಪ್ರತೀತಿ ಇದೆ. ನಿಂಬೆ ಹಣ್ಣಿನ ದೀಪವನ್ನು ಬೆಳಗಲು ಸಾಧ್ಯವಾಗದೆ ಇರುವವರು ಉದು ಬತ್ತಿ ಹಚ್ಚಿ, ತೆಂಗಿನ ಕಾಯಿ ಒಡೆದು ಭಕ್ತಿಯಿಂದ ದೇವಿಗೆ ಪ್ರಾರ್ಥಿಸಿಕೊಂಡು ಹೋದರು ಸಮಸ್ಯೆಗಳು ದೂರ ಆಗುತ್ತವೆ ಎನ್ನುವುದು ಈ ದೇವಿಯನ್ನು ನಂಬಿರುವ ಭಕ್ತರ ಮನದ ಮಾತಾಗಿದೆ. ಇಲ್ಲಿ ದುರ್ಗಾ ದೇವಿಯ ಜೊತೆ ನಾಗ ದೇವರ ಸಾನಿಧ್ಯ ಕೂಡ ಇದೆ. ಹಲವಾರು ಮಹಿಳೆಯರು ಉತ್ತಮ ಸಂತಾನಕ್ಕಾಗಿ ಅರಳಿ ಕಟ್ಟೆಯನ್ನು ಸುತ್ತಿ ನಾಗ ದೇವರ ಪೂಜೆ ಮಾಡುತ್ತಾರೆ. ಇನ್ನೂ ಈ ಕ್ಷೇತ್ರದಲ್ಲಿ ಪ್ರತಿ ವರ್ಷವೂ ನವರಾತ್ರಿ ದಿನಂದಂದು ದೇವಿಗೆ ವಿಶೇಷ ಪೂಜೆ ಪುನಸ್ಕಾರಗಳನ್ನು ಮಾಡಲಾಗುತ್ತೆ. ನವರಾತ್ರಿ ಸಂದರ್ಭದಲ್ಲಿ ದುರ್ಗಾ ದೇವಿಯ ಜಾತ್ರಾ ಮಹೋತ್ಸವವನ್ನಾ ನೆರವೇರಿಸಲಾಗುತ್ತದೆ. ಅಲ್ಲದೆ ಕಾರ ಹುಣ್ಣಿಮೆ ಅಂದು ಇಲ್ಲಿ ಮಹಿಳೆಯರು ವಟ ಸಾವಿತ್ರಿ ವ್ರತವನ್ನು ಆಚರಿಸುತ್ತಾರೆ.
ಮಂಗಳವಾರ ಶುಕ್ರವಾರ ಹುಣ್ಣಿಮೆ ಅಮಾವಾಸ್ಯೆ ದಿನ ದೇವಿಗೆ ವಿಶೇಷ ಪೂಜೆ ನಡೆಯುತ್ತದೆ. ಧಾರವಾಡ ಮಾತ್ರವಲ್ಲದೆ ಗೋವಾ, ಕೊಲ್ಲಾಪುರ, ಮಹಾರಾಷ್ಟ್ರ ಬೆಳಗಾವಿ, ಬೈಲ ಹೊಂಗಲ, ಪುಣೆ ಇಂದ ಭಕ್ತರು ತಾಯಿಯ ದರ್ಶನಕ್ಕೆ ಬರುತ್ತಾರೆ. ಭಕ್ತರ ಅಭೀಶ್ಟೆಗಳನ್ನು ಷೀಗ್ರವಾಗಿ ಪೂರೈಸುವ ಈ ದುರ್ಗಾ ದೇವಿಯನ್ನು ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 8 ಗಂಟೆ ವರೆಗೆ ದರ್ಶನ ಮಾಡಬಹುದಾಗಿದೆ. ಇಲ್ಲಿಗೆ ಬರುವ ಭಕ್ತಾದಿಗಳು ದೇವರಿಗೆ ಎಲೆ ಪೂಜೆ, ಕುಂಕುಮ ಪೂಜೆ, ಅರಿಶಿನ ಪೂಜೆ, ಪಂಚಾಮೃತ ಅಭಿಷೇಕ, ಎಳನೀರು ಅಭಿಷೇಕ, ಗಂಧದ ಪೂಜೆ, ಸೀರೆ ಉಡಿಸುವ ಪೂಜೆ, ಉಡಿ ಸೇವೆ ಇನ್ನೂ ಮುಂತಾದ ಸೇವೆಗಳನ್ನು ಮಾಡಿಸಬಹುದು. ದುರ್ಗಾ ದೇವಿಯು ನೆಲೆಸಿರುವ ಈ ಪುಣ್ಯ ಕ್ಷೇತ್ರವೂ ಧಾರವಾಡ ಜಿಲ್ಲೆಯಲ್ಲಿದೆ. ಈ ಕ್ಷೇತ್ರವು ಬೆಂಗಳೂರಿನಿಂದ 430 ಕಿಮೀ, ಶಿವಮೊಗ್ಗದಿಂದ 231 ಕಿಮೀ, ಹುಬ್ಬಳ್ಳಿಯಿಂದ 18 ಕಿಮೀ, ಹಾಗೂ ಧಾರವಾಡ ಬಸ್ ನಿಲ್ದಾಣದಿಂದ ಕೇವಲ 3.3 ಕಿಮೀ ದೂರದಲ್ಲಿದೆ. ಧಾರವಾಡವೂ ಉತ್ತಮ ರಸ್ತೆ ಹಾಗೂ ರೈಲ್ವೇ ಸಂಪರ್ಕವನ್ನು ಹೊಂದಿದ್ದು, ಬಸ್ ಅಥವ ರೈಲ್ವೇ ನಿಲ್ದಾಣ ದಿಂದ ಆಟೋ ಮಾಡಿಸಿಕೊಂಡು ಸುಲಭವಾಗಿ ಈ ದೇವಾಲಯವನ್ನು ತಲುಪಬಹುದು. ಸಾಧ್ಯವಾದರೆ ಜೀವಮಾನದಲ್ಲಿ ಒಮ್ಮೆ ನೀವೂ ಕೂಡ ಈ ಪುಣ್ಯ ಕ್ಷೇತ್ರ ದರ್ಶನ ಮಾಡಿ ಬನ್ನಿ. ಶುಭದಿನ.